ಪ್ರಧಾನ ಮಂತ್ರಿಯವರ ಕಛೇರಿ

ಸಂತ ಕಬೀರ್ ದಾಸ್ ಜಯಂತಿಯಂದು ನಮನ ಸಲ್ಲಿಸಿದ ಪ್ರಧಾನಮಂತ್ರಿ

प्रविष्टि तिथि: 24 JUN 2021 3:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತ ಕಬೀರ ದಾಸರ ಜಯಂತಿಯಂದು ಅವರಿಗೆ ನಮನ ಸಲ್ಲಿಸಿದ್ದಾರೆ.

ಸಂತ ಕಬೀರ್ ದಾಸ್ ಅವರು ಕೇವಲ ಸಾಮಾಜಿಕ ಪಿಡುಗುಗಳ ವಿರುದ್ಧ ಮಾತ್ರವೇ ಸೆಣಸಲಿಲ್ಲ, ಜೊತೆಗೆ ಮಾನವತೆಯ ಪಾಠ ಮತ್ತು ವಿಶ್ವ ಪ್ರೇಮವನ್ನೂ ಬೋಧಿಸಿದರು. ಅವರು ತೋರಿಸಿದ ಭ್ರಾತೃತ್ವ ಮತ್ತು ಸದ್ಭಾವನೆಯ ಮಾರ್ಗವು ತಲೆಮಾರುಗಳಿಗೆ ಅದೇ ಹಾದಿಯಲ್ಲಿ ಸಾಗಲು ಪ್ರೇರಣೆ ನೀಡುತ್ತದೆ.ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.

ಸಂತ ಕಬೀರ ದಾಸರ ನಿರ್ವಾಣ ಸ್ಥಳ ಮಘರ್ ಗೆ ಕೆಲವು ವರ್ಷಗಳ ಹಿಂದೆ ಭೇಟಿ ನೀಡಿದ್ದ ಚಿತ್ರವನ್ನೂ ಪ್ರಧಾನಮಂತ್ರಿಯವರು ಹಂಚಿಕೊಂಡಿದ್ದಾರೆ.

***

 


(रिलीज़ आईडी: 1730129) आगंतुक पटल : 300
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Bengali , Assamese , Punjabi , Gujarati , Odia , Tamil , Telugu , Malayalam