ಪ್ರಧಾನ ಮಂತ್ರಿಯವರ ಕಛೇರಿ

ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯ ತಿಥಿ; ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದ ಗೌರವ ನಮನ


Posted On: 23 JUN 2021 8:41AM by PIB Bengaluru

ಧೀಮಂತ ನಾಯಕ, ಹೋರಾಟಗಾರ, ಸಮಾಜ ಸುಧಾರಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಅಂಗವಾಗಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ, ಧೀಮಂತ ನಾಯಕನ ಪುಣ್ಯತಿಥಿ ಸಂದರ್ಭದಲ್ಲಿ ಅವರ ಸಾರ್ಥಕ ಹೋರಾಟಗಳನ್ನು ನೆನಪು ಮಾಡಿಕೊಂಡಿದ್ದಾರೆ. “ಮುಖರ್ಜಿ ಅವರ ಉದಾತ್ತ ಪರಿಕಲ್ಪನೆಗಳು, ಶ್ರೀಮಂತ ವಿಚಾರಧಾರೆಗಳು, ಜನಸಾಮಾನ್ಯರಿಗೆ ಸೇವೆ ಮಾಡುವ ಅವರ ಬದ್ಧತೆಗಳು ನಮ್ಮೆಲ್ಲರಿಗೂ ಸದಾ ಕಾಲವು ಸ್ಫೂರ್ತಿದಾಯಕವಾಗಿದೆ. ರಾಷ್ಟ್ರೀಯ ಏಕತೆ ಮೂಡಿಸಲು ಅವರು ನಡೆಸುತ್ತಿದ್ದ ನಿರಂತರ ಪ್ರಯತ್ನಗಳನ್ನು ಎಂದಿಗೂ ಮರೆಯುವಂತಿಲ್ಲ.”

 

***
 


(Release ID: 1729699) Visitor Counter : 170