ಪ್ರಧಾನ ಮಂತ್ರಿಯವರ ಕಛೇರಿ

ದಾಖಲೆ ಸಂಖ್ಯೆಯ ಲಸಿಕೆ ನೀಡುವಿಕೆಗೆ ಪ್ರಧಾನಮಂತ್ರಿ ಶ್ಲಾಘನೆ

ಪ್ರಕಟಣಾ ದಿನಾಂಕ: 21 JUN 2021 7:58PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಾಖಲೆ ಸಂಖ್ಯೆಯ ಲಸಿಕೆ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಮುಂಚೂಣಿ ಕೊರೊನಾ ಯೋಧರ ಕಠಿಣ ಪರಿಶ್ರಮಕ್ಕಾಗಿ ಅವರನ್ನು ಶ್ಲಾಘಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ ಇಂದು ದಾಖಲೆ ಸಂಖ್ಯೆಯ ಲಸಿಕೆಗಳನ್ನು ನೀಡಿರುವುದಕ್ಕೆ ಹರ್ಷವಾಗುತ್ತಿದೆ. ಕೋವಿಡ್-19 ವಿರುದ್ಧದ ನಮ್ಮ ಹೋರಾಟದಲ್ಲಿ ಲಸಿಕೆ ಬಲಿಷ್ಠ ಅಸ್ತ್ರವಾಗಿದೆ. ಲಸಿಕೆ ಪಡೆದವರಿಗೆ ಎಲ್ಲರಿಗೂ ಮತ್ತು ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಲು ಶ್ರಮವಹಿಸಿದ ಮುಂಚೂಣಿ ಯೋಧರಿಗೆ ಅಭಿನಂದನೆಗಳು. ಭಾರತದಿಂದ ಅತ್ಯುತ್ತಮ ಸಾಧನೆ”  ಎಂದು ಹೇಳಿದ್ದಾರೆ.

***


(ಪ್ರಕಟಣೆ ಐ.ಡಿ.: 1729228) ವಿಸಿಟರ್ ಕೌಂಟರ್ : 322