ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 60,753 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿವೆ


ಸಕ್ರಿಯ ಪ್ರಕರಣಗಳ ಹೊರೆ 7,60,019ಕ್ಕೆ ಇಳಿಕೆ; 74 ದಿನಗಳ ನಂತರ ಅತ್ಯಂತ ಕನಿಷ್ಠ

ಸತತ 37ನೇ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸಿದ ದೈನಂದಿನ ಚೇತರಿಕೆಗಳು

ಚೇತರಿಕೆ ದರ ಸ್ಥಿರವಾಗಿ ಹೆಚ್ಚುತ್ತಿದ್ದು ಶೇ. 96.16ಕ್ಕೆ ತಲುಪಿದೆ

ದೈನಂದಿನ ಪಾಸಿಟಿವಿಟಿ ದರವು 2.98% ರಷ್ಟಿದೆ; ಸತತ 12 ದಿನಗಳಿಂದ 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದ ಪಾಸಿಟಿವಿಟಿ ದರ

Posted On: 19 JUN 2021 10:15AM by PIB Bengaluru

ಭಾರತದ ದೈನಂದಿನ ಹೊಸ ಕೋವಿಡ್ ಪ್ರಕರಣಗಳಲ್ಲಿ ನಿರಂತರ ಕುಸಿತ ಮುಂದುವರಿದಿದ್ದು, ಕಳೆದ  24 ಗಂಟೆಗಳಲ್ಲಿ ದೇಶದಲ್ಲಿ 60,753 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.

ಭಾರತದ ದೈನಂದಿನ ಹೊಸ ಕೋವಿಡ್ ಪ್ರಕರಣಗಳಲ್ಲಿ ನಿರಂತರ ಕುಸಿತ ಮುಂದುವರಿದಿದ್ದು, ಕಳೆದ  24 ಗಂಟೆಗಳಲ್ಲಿ ದೇಶದಲ್ಲಿ 60,753 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.

ಸತತವಾಗಿ ಕಳೆದ 12 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ.  ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಹಾಗೂ ಸಹಯೋಗದ ಪ್ರಯತ್ನಗಳ ಫಲವಾಗಿದೆ.

https://static.pib.gov.in/WriteReadData/userfiles/image/image001UI35.jpg

ಭಾರತವು ಸಕ್ರಿಯ ಪ್ರಕರಣಗಳ ಹೊರೆಯಲ್ಲಿ ನಿರಂತರ ಕುಸಿತಕ್ಕೆ ಸಾಕ್ಷಿಯಾಗಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆ ಇಂದು 7,60,019 ರಷ್ಟಿದೆ. ಇದು 74 ದಿನಗಳ ನಂತರ ಸಕ್ರಿಯ ಪ್ರಕರಣಗಳಲ್ಲಿ ಅತ್ಯಂತ ಕನಿಷ್ಠ ಮಟ್ಟವೆನಿಸಿದೆ.

ಕಳೆದ 24 ಗಂಟೆಗಳಲ್ಲಿ ನಿವ್ವಳ 38,637  ಪ್ರಕರಣಗಳ ಕುಸಿತ ಕಂಡು ಬಂದಿದೆ ಮತ್ತು ಈಗ ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳು ಪ್ರಮಾಣ ಕೇವಲ 2.55% ರಷ್ಟು ಮಾತ್ರ.

https://static.pib.gov.in/WriteReadData/userfiles/image/image0028T04.jpg

ಕೋವಿಡ್-19 ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವುದರಿಂದ, ಭಾರತದ ದೈನಂದಿನ ಚೇತರಿಕೆಗಳು ಈಗ ಸತತ 37 ದಿನಗಳಿಂದ ಹೊಸ ಪ್ರಕರಣಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿವೆ.  ಕಳೆದ 24 ಗಂಟೆಗಳಲ್ಲಿ 97,743  ಚೇತರಿಕೆಗಳು ದಾಖಲಾಗಿವೆ.

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ ಸುಮಾರು 37 ಸಾವಿರ (36,990)  ಚೇತರಿಕೆಗಳು ವರದಿಯಾಗಿವೆ.

https://static.pib.gov.in/WriteReadData/userfiles/image/image003R59X.jpg

 

ಸಾಂಕ್ರಾಮಿಕದ ಆರಂಭದಿಂದ ಕೋವಿಡ್‌-19 ಸೋಂಕಿಗೆ ಒಳಗಾದವರ ಪೈಕಿ ಈಗಾಗಲೇ 2,86,78,390 ಜನರು ಚೇತರಿಸಿಕೊಂಡಿದ್ದಾರೆ  ಮತ್ತು ಕಳೆದ 24 ಗಂಟೆಗಳಲ್ಲಿ 97,743  ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ 96.16% ಚೇತರಿಕೆ ದರವನ್ನು ಸೂಚಿಸುತ್ತದೆ ಮತ್ತು ಈ ಪ್ರಮಾಣದಲ್ಲಿ ನಿರಂತರ ಹೆಚ್ಚಳ ಪ್ರವೃತ್ತಿ ಕಂಡು ಬಂದಿದೆ.

https://static.pib.gov.in/WriteReadData/userfiles/image/image004GZNH.jpg

 

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 19,02,009 ಪರೀಕ್ಷೆಗಳನ್ನು ನಡೆಸಲಾಯಿತು. ಒಟ್ಟಾರೆಯಾಗಿ, ಭಾರತವು ಇಲ್ಲಿಯವರೆಗೆ 38.92 ಕೋಟಿಗೂ ಅಧಿಕ (38,92,07,637) ಪರೀಕ್ಷೆಗಳನ್ನು ನಡೆಸಿದೆ.

ಒಂದು ಕಡೆ ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಿದ್ದರೂ, ಸಾಪ್ತಾಹಿಕವಾಗಿ ಪ್ರಕರಣಗಳ ಪಾಸಿಟಿವಿಟಿಯಲ್ಲಿ(ಕಳೆದ  7 ದಿನಗಳ ಸರಾಸರಿ)  ನಿರಂತರ ಕುಸಿತ ಕಂಡು ಬಂದಿದೆ. ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ 3.58%  ರಷ್ಟಿದ್ದರೆ,  ದೈನಂದಿನ ಪಾಸಿಟಿವಿಟಿ ದರವು ಇಂದು 2.98% ರಷ್ಟಿದೆ. ಇದು ಈಗ ಸತತ 12 ದಿನಗಳಿಂದ 5% ಗಿಂತಲೂ ಕಡಿಮೆ ಮಟ್ಟದಲ್ಲೇ ಉಳಿದಿದೆ.

https://static.pib.gov.in/WriteReadData/userfiles/image/image005ZHWB.jpg

ಭಾರತದ ಒಟ್ಟಾರೆ ಲಸಿಕೆ ವ್ಯಾಪ್ತಿ ಇಂದು 27.23 ಕೋಟಿ ಮೀರಿದೆ. ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ 37,48,147 ಸೆಷನ್‌ಗಳ ಮೂಲಕ ಒಟ್ಟು 27,23,88,783 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 33,00,085 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.  

ಇವುಗಳಲ್ಲಿ ಇವು ಸೇರಿವೆ:

ಆರೋಗ್ಯ ಕಾರ್ಯಕರ್ತರು

1ನೇ  ಡೋಸ್

1,01,03,317

2ನೇ  ಡೋಸ್

70,47,769

ಮುಂಚೂಣಿ ಕಾರ್ಯಕರ್ತರು

1ನೇ  ಡೋಸ್

1,70,41,025

2ನೇ  ಡೋಸ್

89,95,949

18-44 ವರ್ಷ ವಯೋಮಾನದವರು

1ನೇ  ಡೋಸ್

5,17,64,981

2ನೇ  ಡೋಸ್

11,43,777

45 ರಿಂದ 60 ವರ್ಷ ವಯೋಮಾನದವರು

1ನೇ  ಡೋಸ್

7,90,19,144

2ನೇ  ಡೋಸ್

1,25,08,833

ಆರೋಗ್ಯ ಕಾರ್ಯಕರ್ತರು

1ನೇ  ಡೋಸ್

6,39,72,814

2ನೇ  ಡೋಸ್

2,07,91,174

ಒಟ್ಟು

27,23,88,783

 

****


(Release ID: 1728608) Visitor Counter : 189