ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಕುರಿತಂತೆ ಮಿಥ್ಯೆ ಮತ್ತು ವಾಸ್ತವ


ಲಸಿಕೆಯ ಅಡೆನೋವೆಕ್ಟರ್ ವರ್ತನೆಯ ಕುರಿತು ಮೂಲಭೂತ ವೈಜ್ಞಾನಿಕ ಕಾರಣ ಆಧರಿಸಿ ಕೋವಿಶೀಲ್ಡ್ ಡೋಸ್ ನಡುವಿನ ಅಂತರ ಹೆಚ್ಚಳದ ಬಗ್ಗೆ ತೀರ್ಮಾನ

ಕೋವಿಡ್-19 ಕಾರ್ಯಕಾರಿ ಸಮಿತಿ ಮತ್ತು ಎನ್ ಟಿಎಜಿಐನ ತಾಂತ್ರಿಕ ಸ್ಥಾಯಿ ಉಪ ಸಮಿತಿ(ಎಸ್ ಟಿಎಸ್ ಸಿ) ಸಭೆಯ ನಡಾವಳಿಯಲ್ಲಿ ಕೋವಿಶೀಲ್ಡ್ ಲಸಿಕೆ ನಡುವಿನ ಅಂತರ 12 ರಿಂದ 16 ವಾರಕ್ಕೆ ಹೆಚ್ಚಿಸುವ ಕುರಿತು ಕೈಗೊಂಡ ತೀರ್ಮಾನ ಸರ್ವಸಮ್ಮತ, ಯಾವುದೇ ಸದಸ್ಯರಿಂದ ವಿರೋಧ ವ್ಯಕ್ತವಾಗಿಲ್ಲವೆಂದು ಸ್ಪಷ್ಟ ದಾಖಲು

Posted On: 16 JUN 2021 1:40PM by PIB Bengaluru

ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರವನ್ನು 6 ರಿಂದ 8 ವಾರಗಳ ಬದಲಿಗೆ 12 ರಿಂದ 16 ವಾರಗಳಿಗೆ ಹೆಚ್ಚಿಸುವ ಕುರಿತಂತೆ ನಿರ್ಧಾರ ಕೈಗೊಳ್ಳುವಾಗ ಕೆಲವು ತಾಂತ್ರಿಕ ತಜ್ಞರಿಂದ ಭಿನ್ನ ಸಲಹೆಗಳು ಕೇಳಿಬಂದಿದ್ದವು ಎಂಬ ಕುರಿತು ಕೆಲವು ಮಾಧ್ಯಮಗಳು ವರದಿ ಮಾಡಿವೆ. 

        ಕೋವಿಡ್-19 ಕಾರ್ಯಕಾರಿ ಸಮಿತಿ ಮತ್ತು ಎನ್ ಟಿಎಜಿಐನ ತಾಂತ್ರಿಕ ಸ್ಥಾಯಿ ಉಪ ಸಮಿತಿ(ಎಸ್ ಟಿಎಸ್ ಸಿ)ಯ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಗಿದೆ ಮತ್ತು ಲಸಿಕೆ ನಡುವಿನ ಅಂತರವನ್ನು ಹೆಚ್ಚಿಸಲು ಲಸಿಕೆಯ ಅಡೆನೋವೆಕ್ಟರ್ ವರ್ತನೆಯ ವೈಜ್ಞಾನಿಕ ಕಾರಣ ಆಧರಿಸಿ ನಿರ್ಧಾರ ಕೈಗೊಳ್ಳಲಾಗಿದೆ ಹಾಗೂ ಯಾವುದೇ ಸದಸ್ಯರಿಂದ ಭಿನ್ನಾಭಿಪ್ರಾಯ ವ್ಯಕ್ತವಾಗಿಲ್ಲ ಎಂಬುದು ಇಲ್ಲಿ ಉಲ್ಲೇಖ ಮಾಡಬಹುದಾಗಿದೆ.

ಲಸಿಕೆ ನೀಡಿಕೆ ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ(ಎನ್ ಟಿಎಜಿಐ)ಯ ಕೋವಿಡ್-19 ಕುರಿತ ಕಾರ್ಯಕಾರಿ ಸಮಿತಿಯ ಸಭೆ 2021ರ ಮೇ 10ರಂದು ನಡೆದಿತ್ತು. ಕೋವಿಡ್-19 ಕಾರ್ಯಕಾರಿ ಸಮಿತಿಯ ಈ ಕೆಳಗಿನ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು:

 

ಡಾ. ಎನ್.ಕೆ. ಅರೋರಾ

ಕಾರ್ಯಕಾರಿ ನಿರ್ದೇಶಕರು, ಐಎನ್ ಸಿಎಲ್ ಇಎನ್

ಡಾ. ರಾಕೇಶ್ ಅಗರ್ ವಾಲ್

ಎನ್ ಟಿಎಜಿಐ ಸದಸ್ಯ, ನಿರ್ದೇಶಕರು, ಜೆಐಪಿಎಂಇಆರ್, ಪುದುಚೆರಿ

ಡಾ. ಗಗನ್ ದೀಪ್ ಕಾಂಗ್

ಎನ್ ಟಿಎಜಿಐ ಸದಸ್ಯ, ಪ್ರೊಫೆಸರ್, ಸಿಎಂಸಿ ವೆಲ್ಲೂರು

ಡಾ. ಅಮೂಲ್ಯ ಪಾಂಡ

ಎನ್ ಟಿಎಜಿಐ ಸದಸ್ಯರು, ನಿರ್ದೇಶಕರು, ಎನ್ಐಐ

ಡಾ. ಜೆ.ಪಿ. ಮುಲಿಯಿಲ್

ಎನ್ ಟಿಎಜಿಐ ಸದಸ್ಯರು, ನಿವೃತ್ತ ಪ್ರಾಂಶುಪಾಲರು, ಸಿಎಂಸಿ, ವೆಲ್ಲೂರು

ಡಾ. ನವೀನ್ ಖನ್ನಾ

ತಂಡದ ನಾಯಕ, ಐಸಿಜಿಇಬಿ

ಡಾ. ವಿ.ಜಿ. ಸೋಮನಿ

ಡಿಸಿಜಿಐ, ಸಿಡಿಎಸ್ ಸಿಒ

ಡಾ. ಪ್ರದೀಪ್ ಹಲ್ದಾರ್

ಸಲಹೆಗಾರರು, ಆರ್ ಸಿಎಚ್, ಎಂಒಎಚ್ಎಫ್ ಡಬ್ಲ್ಯೂ

 

ರಾಷ್ಟ್ರೀಯ ಲಸಿಕೆ ಕಾರ್ಯಕ್ರಮದ ನೀತಿ ಅಡಿ ಕೋವಿಶೀಲ್ಡ್ ಬಳಕೆ ನಡುವಿನ ಅಂತರವನ್ನು ಬದಲಾಯಿಸುವ ಪ್ರಸ್ತಾವವನ್ನು ಕೋವಿಡ್-19 ಕಾರ್ಯಕಾರಿ ಸಮಿತಿ ಪರಿಶೀಲಿಸಿತು. ಅದು ವಿಶೇಷವಾಗಿ ಬ್ರಿಟನ್ನಿನ ನೈಜ ಸಾಕ್ಷ್ಯಗಳನ್ನು ಆಧರಿಸಿ ಕೋವಿಡ್-19 ಕಾರ್ಯಕಾರಿ ಸಮಿತಿ ಕೋವಿಶೀಲ್ಡ್ ಎರಡು ಲಸಿಕೆಗಳ ನಡುವಿನ ಅಂತರವನ್ನು 12 ರಿಂದ 16 ವಾರಕ್ಕೆ ಹೆಚ್ಚಿಸಲು ಒಪ್ಪಿಗೆ ನೀಡಿತು.

        ಕೋವಿಡ್-19 ಕಾರ್ಯಕಾರಿ ಸಮಿತಿಯ ಈ ಶಿಫಾರಸ್ಸನ್ನು 2021ರ ಮೇ 13ರಂದು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಮತ್ತು ಆರೋಗ್ಯ ಸಂಶೋಧನಾ ಇಲಾಖೆ ಕಾರ್ಯದರ್ಶಿ ಹಾಗೂ ಐಸಿಎಂಆರ್ ನ ಮಹಾನಿರ್ದೇಶಕರು ಜಂಟಿ ಅಧ್ಯಕ್ಷತೆಯಲ್ಲಿ ನಡೆದ 31ನೇ ತಾಂತ್ರಿಕ ಸ್ಥಾಯಿ ಉಪ ಸಮಿತಿಯ ಸಭೆಯಲ್ಲಿ ಚರ್ಚಿಸಲಾಯಿತು.

ಎಸ್ ಟಿಎಸ್ ಸಿ ಸದ್ಯಸರ ವಿವರ ಈ ಕೆಳಗಿನಂತಿದೆ:

 

ಡಾ. ರೇಣು ಸ್ವರೂಪ್

ಕಾರ್ಯದರ್ಶಿ, ಜೈವಿಕ ತಂತ್ರಜ್ಞಾನ ಇಲಾಖೆ

ಡಾ. ಬಲರಾಮ್ ಭಾರ್ಗವ್

ಕಾರ್ಯದರ್ಶಿ, ಆರೋಗ್ಯ ಸಂಶೋಧನಾ ಇಲಾಖೆ ಮತ್ತು ಮಹಾನಿರ್ದೇಶಕರು, ಐಸಿಎಂಆರ್

ಡಾ. ಜೆ.ಪಿ. ಮುಲಿಯಿಲ್

ಪ್ರೊಫೆಸರ್, ಸಿಎಂಸಿ, ವೆಲ್ಲೂರು

ಡಾ. ಗಗನ್ ದೀಪ್ ಕಾಂಗ್

ಪ್ರೊಫೆಸರ್, ಸಿಎಂಸಿ, ವೆಲ್ಲೂರು

ಡಾ. ಇಂದ್ರಾಣಿ ಗುಪ್ತ

ಪ್ರೊಫೆಸರ್, ಆರ್ಥಿಕ ಬೆಳವಣಿಗೆ ಕುರಿತ ಸಂಸ್ಥೆ, ದೆಹಲಿ

ಡಾ. ರಾಕೇಶ್ ಅಗರ್ ವಾಲ್

ನಿರ್ದೇಶಕರು, ಜೆಐಪಿಎಂಇಆರ್, ಪುದುಚೆರಿ

ಡಾ. ಮ್ಯಾಥ್ಯೂ ವರ್ಗೀಸ್

ಮುಖ್ಯಸ್ಥರು, ಆರ್ಥೋಪೆಡಿಕ್ಸ್ ವಿಭಾಗ, ಸೆಂಟ್ ಸ್ಟೀಫನ್ಸ್ ಆಸ್ಪತ್ರೆ, ನವದೆಹಲಿ

ಡಾ. ಸತಿಂದರ್ ಅನೇಜಾ

ಪ್ರೊಫೆಸರ್, ಶಾರದಾ ವಿಶ್ವವಿದ್ಯಾಲಯ, ನೋಯ್ಡಾ

ಡಾ. ನೀರಜ್ ಭಾಟ್ಲಾ

ಪ್ರೊಫೆಸರ್, ಏಮ್ಸ್, ನವದೆಹಲಿ

ಡಾ. ಎಂ.ಡಿ. ಗುಪ್ತೆ

ಮಾಜಿ ನಿರ್ದೇಶಕರು, ಎನ್ಐಇ, ಚೆನ್ನೈ

ಡಾ. ವೈಕೆ. ಗುಪ್ತಾ

ಪ್ರಧಾನ ಸಲಹೆಗಾರರು, ಟಿಎಚ್ಎಸ್ ಟಿಐ-ಡಿಬಿಟಿ

ಡಾ. ಅರುಣ್ ಅಗರ್ ವಾಲ್

ಪ್ರೊಫೆಸರ್, ಪಿಜಿಐಎಂಇಆರ್, ಚಂಡಿಗಢ

ಡಾ. ಲಲಿತ್ ಧಾರ್

ಪ್ರೊಫೆಸರ್, ವೈರಾಣುಶಾಸ್ತ್ರ, ಏಮ್ಸ್, ನವದೆಹಲಿ

ಎನ್ ಟಿಎಜಿಐನ ಎಸ್ ಟಿಎಸ್ ಸಿ ಈ ಕೆಳಗಿನ ಶಿಫಾರಸ್ಸುಗಳನ್ನು ನೀಡಿತ್ತು: - ‘ಕೋವಿಡ್-19 ಕಾರ್ಯಕಾರಿ ಸಮಿತಿಯ ಶಿಫಾರಸ್ಸಿನಂತೆ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರವನ್ನು ಕನಿಷ್ಠ ಮೂರು ತಿಂಗಳು ಇರಬೇಕು ಎಂದು ಶಿಫಾರಸ್ಸು ಮಾಡಲಾಯಿತು’. ಈ ಎರಡೂ ಸಭೆಗಳಲ್ಲಿ ಅಂದರೆ ಕೋವಿಡ್-19 ಕಾರ್ಯಕಾರಿ ಸಮಿತಿ ಮತ್ತು ಎಸ್ ಟಿಎಸ್ ಸಿ ಸಭೆಗಳಲ್ಲಿ ರಾಯ್ಟರ್ಸ್  ತನ್ನ ವರದಿಯಲ್ಲಿ ಹೆಸರಿಸಿರುವಂತೆ ಡಾ. ಮ್ಯಾಥ್ಯೂ ವರ್ಗೀಸ್, ಡಾ. ಎಂ.ಡಿ. ಗುಪ್ತೆ ಮತ್ತು ಡಾ. ಜೆ.ಪಿ. ಮುಲಿಯಿಲ್ ಈ ಮೂವರು ಸದಸ್ಯರು ಯಾವುದೇ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ಅಲ್ಲದೆ ತಮ್ಮ ಭಿನ್ನಾಭಿಪ್ರಾಯವಿದೆ ಎಂಬ ಕುರಿತ ರಾಯ್ಟರ್ಸ್ ನೊಂದಿಗೆ ಮಾತನಾಡಿಲ್ಲ ಎಂದು ದಾಖಲೆ ಸಮೇತ ಡಾ. ಮ್ಯಾಥ್ಯೂ ವರ್ಗೀಸ್ ಸ್ಪಷ್ಟಪಡಿಸಿದ್ದಾರೆ.

****

 



(Release ID: 1727670) Visitor Counter : 187