ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕಳೆದ 24 ಗಂಟೆಗಳಲ್ಲಿ 70,421 ಹೊಸ ಕೊರೋನಾ ಪ್ರಕರಣಗಳು : 74 ದಿನಗಳಲ್ಲಿ ಅತಿ ಕಡಿಮೆ


ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 66 ದಿನಗಳ ನಂತರ 10 ಲಕ್ಷಕ್ಕಿಂತ ಕೆಳಗಡೆ

ಒಂದು ತಿಂಗಳಿಗಿಂತ ಹೆಚ್ಚು ಕಾಲದಿಂದ ದೈನಂದಿನ ಚೇತರಿಕೆ ಪ್ರಮಾಣ ಹೊಸ ಪ್ರಕರಣಗಳಿಗಿಂತ ಹೆಚ್ಚು

ಚೇತರಿಕೆ ದರ ಶೇ 95.43 ರಷ್ಟು

ದೈನಂದಿನ ಪಾಸಿಟಿವಿಟಿ ದರ ಶೇ 4.72 ರಷ್ಟು: 3 ವಾರಗಳಿಂದ ಶೇ 10 ಕ್ಕೂ ಕಡಿಮೆ ಪಾಸಿಟಿವಿಟಿ ದರ

Posted On: 14 JUN 2021 2:09PM by PIB Bengaluru

ಭಾರತದಲ್ಲಿ ಹೊಸ ಕೋವಿಡ್ ವರದಿಯಲ್ಲಿ ಪ್ರಕರಣಗಳ ಸಂಖ್ಯೆ ನಿರಂತರ ಇಳಿಕೆಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 70,421 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಸತತ 7 ದಿನಗಳಿಂದ 1 ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಭಾಗಿತ್ವದ ಫಲಿತಾಂಶವಾಗಿದೆ.

https://static.pib.gov.in/WriteReadData/userfiles/image/image001LWEU.jpg

ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಇಳಿಕೆಯಾಗುತ್ತಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 9,73,158 ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 66 ದಿನಗಳ ನಂತರ 10 ಲಕ್ಷಕ್ಕಿಂತ ಕೆಳಗಿಳಿದಿದೆ.

ಒಟ್ಟಾರೆ 24 ಗಂಟೆಗಳಲ್ಲಿ 53,001 ಪ್ರಕರಣಗಳು ಇಳಿಕೆಯಾಗಿರುವುದು ಕಂಡು ಬಂದಿದೆ ಮತ್ತು ದೇಶದ ಒಟ್ಟಾರೆ ಸೋಂಕು ಪ್ರಕರಣಗಳಲ್ಲಿ ಶೇ 3.30 ರಷ್ಟು ಸಕ್ರಿಯ ಪ್ರಕರಣಗಳಿವೆ. 

https://static.pib.gov.in/WriteReadData/userfiles/image/image002RTHX.jpg

ಕೋವಿಡ್ -19 ಸೋಂಕಿನಿಂದ ಹೆಚ್ಚು ಮಂದಿ ಚೇತರಿಸಿಕೊಳ್ಳುತ್ತಿದ್ದು, ಸತತ 32 ದಿನಗಳಿಂದ ಹೊಸ   ಪ್ರಕರಣಗಳಿಗಿಂತ  ದೈನಂದಿನ ಚೇತರಿಕೆ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 1,19,501 ಮಂದಿ ಚೇತರಿಸಿಕೊಂಡಿದ್ದಾರೆ.

ಸುಮಾರು 50,000 [49,080] ಮಂದಿ ಹೊಸ ಪ್ರಕರಣಗಳಿಗಿಂತ ಹೆಚ್ಚು ಸೋಂಕಿತರು ಚೇತರಿಸಿಕೊಂಡಿದ್ದಾರೆ.

https://static.pib.gov.in/WriteReadData/userfiles/image/image003IB5V.jpg

ಸಾಂಕ್ರಾಮಿಕ ಕಾಣಿಸಿಕೊಂಡ ಆರಂಭದ ನಂತರದಿಂದ ಈ ವರೆಗೆ 2,81,62,947 ಮಂದಿ ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 1,19,501  ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟಾರೆ ಚೇತರಿಕೆ ದರ ಶೇ 95.43 ರಷ್ಟಿದ್ದು, ಇದು ನಿರಂತರವಾಗಿ ಏರಿಕೆಯಾಗುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತದೆ.

https://static.pib.gov.in/WriteReadData/userfiles/image/image004FM2Q.jpg

ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆಯ ಸಾಮರ್ಥ್ಯವನ್ನು ಹೆಚ್ಚಿಸಿದ್ದು, ಕಳೆದ 24 ಗಂಟೆಗಳಲ್ಲಿ ಒಟ್ಟು 14,92,152 ಪರೀಕ್ಷೆಗಳನ್ನು ಮಾಡಲಾಗಿದೆ. ಭಾರತದಲ್ಲಿ ಸುಮಾರು 38 ಕೋಟಿ (37,96,24,626)  ಸೋಂಕು ಪತ್ತೆ ಪರೀಕ್ಷೆಯನ್ನು  ಈತನಕ ಮಾಡಲಾಗಿದೆ.

ಮತ್ತೊಂದೆಡೆ ದೇಶಾದ್ಯಂತ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದರೂ ವಾರದ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗುತ್ತಿದೆ. ವಾರದ ಪಾಸಿಟಿವಿಟಿ ದರ 4.54 ರಷ್ಟಿದ್ದು, ಇಂದು ದೈನಂದಿನ ಪಾಸಿಟಿವಿಟಿ ದರ 4.72 ರಷ್ಟಿದೆ. ನಿರಂತರ 21 ದಿನಗಳ ಅವಧಿಯಲ್ಲಿ ಶೇ 10ಕ್ಕೂ ಕಡಿಮೆ ಪ್ರಮಾಣದಲ್ಲಿ ಪಾಸಿಟಿವಿಟಿ ದರ ದಾಖಲಾಗಿದೆ. 

https://static.pib.gov.in/WriteReadData/userfiles/image/image005DGH7.jpg

ಇಂದು ಬೆಳಗ್ಗೆ 7 ಗಂಟೆಯ ತಾತ್ಕಾಲಿಕ ವರದಿಯಂತೆ ಒಟ್ಟು 35,32,375 ಅವಧಿಯಲ್ಲಿ 25,48,49,301 ಡೋಸ್ ಲಸಿಕೆಯನ್ನು ಹಾಕಲಾಗಿದೆ.

ಇವುಗಳ ಸಹಿತ

ಎಚ್.ಸಿ.ಡಬ್ಲ್ಯೂಗಳು

ಮೊದಲ ಡೋಸ್

1,00,51,785

ಎರಡನೇ ಡೋಸ್

69,67,822

ಎಫ್.ಎಲ್.ಡಬ್ಲ್ಯೂಗಳು

ಮೊದಲ ಡೋಸ್

1,67,57,575

ಎರಡನೇ ಡೋಸ್

88,52,564

18-44 ವಯೋಮಿತಿಯವರು

ಮೊದಲ ಡೋಸ್

4,12,71,166

ಎರಡನೇ ಡೋಸ್

7,69,575

45 ರಿಂದ 60 ವಯೋಮಿತಿಯವರು

ಮೊದಲ ಡೋಸ್

7,57,08,102

ಎರಡನೇ ಡೋಸ್

1,19,77,000

60 ವರ್ಷ ವಯೋಮಿತಿ ಮೀರಿದರು

ಮೊದಲ ಡೋಸ್

6,25,81,044

ಎರಡನೇ ಡೋಸ್

1,99,12,668

ಒಟ್ಟು

25,48,49,301

***



(Release ID: 1726986) Visitor Counter : 176