ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ 10,6300 ವಯಲ್ಸ್ ಅಂಪೋಟೆರಿಸಿನ್ – ಬಿ ಮಂಜೂರು: ಶ್ರೀ ಡಿ.ವಿ. ಸದಾನಂದಗೌಡ


ಸಾಂಪ್ರದಾಯಿಕ ಅಂಪೊಟೆರಿಸಿನ್ -ಬಿ ಯ ಒಟ್ಟು 53,000 ವಯಲ್ಸ್ ಗಳ ಹಂಚಿಕೆ

Posted On: 14 JUN 2021 1:44PM by PIB Bengaluru

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ 106300 ವಯಲ್ಸ್ ಲಿಪೋಸೊಮಲ್ ಅಂಪೊಟೆರಿಸಿನ್ ಬಿ ಔಷಧಿಯ ಲಭ್ಯತೆಯನ್ನು ಖಚಿತಪಡಿಸಿಕೊಂಡು ಮಂಜೂರು ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಶ್ರೀ ಡಿ.ವಿ. ಸದಾನಂದಗೌಡ ಟ್ವಿಟರ್  ಮೂಲಕ ಇಂದು ಪ್ರಕಟಿಸಿದ್ದಾರೆ.

ಇದಲ್ಲದೇ 53,000 ವಯಲ್ಸ್ ಸಾಂಪ್ರದಾಯಿಕ ಅಂಪೊಟೆರಿಸಿನ್ ಬಿ ಔಷಧಿಯನ್ನು ಸಹ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರೀಯ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಸಾಂಪ್ರದಾಯಿಕ ಅಂಪೋಟೆರಿಸಿನ್ ಬಿ ಸುಗಮ ಪೂರೈಕೆ ಮತ್ತು ರೋಗಿಗಳ ಸಮಯೋಚಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಹಂಚಿಕೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


***


(Release ID: 1726941) Visitor Counter : 230