ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಸತತ 3ನೇ ದಿನವೂ ಭಾರತವು 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡಿದೆ


ಭಾರತದ ಸಕ್ರಿಯ ಪ್ರಕರಣಗಳ ಹೊರೆಯು 60 ದಿನಗಳ ನಂತರ ಮತ್ತಷ್ಟು 12ಲಕ್ಷಕ್ಕಿಂತ ಕಡಿಮೆಯಾಗಿದೆ

 ಚೇತರಿಕೆಯ ದರ 94.77% ರಷ್ಟು ಹೆಚ್ಚಾಗಿದೆ

ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಮತ್ತಷ್ಟು 4.69% ಕ್ಕೆ ಇಳಿದಿದೆ, ನಿರಂತರವಾಗಿ 17 ದಿನಗಳವರೆಗೆ ದೃಢಪಟ್ಟ ಪ್ರಕರಣಗಳ ದರ 10% ಕ್ಕಿಂತ ಕಡಿಮೆಯಿದೆ

ಭಾರತದ ಒಟ್ಟು ಲಸಿಕಾಕರಣವು 24 ಕೋಟಿಯನ್ನು ದಾಟಿದೆ

Posted On: 10 JUN 2021 10:28AM by PIB Bengaluru

ಭಾರತವು ಕಳೆದ 24 ಗಂಟೆಗಳಲ್ಲಿ   94,052  ದೈನಂದಿನ ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ದೇಶವು ಈಗ  ನಿರಂತರ 3 ದಿನಗಳವರೆಗೆ 1 ಲಕ್ಷಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳನ್ನು ದಾಖಲಿಸಿದೆ.  ಇದು ಕೇಂದ್ರ ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲಿತಾಂಶವಾಗಿದೆ.

https://static.pib.gov.in/WriteReadData/userfiles/image/image001F3FC.jpg

ಸಕ್ರಿಯ  ಪ್ರಕರಣಗಳ ಹೊರೆಯು  ಭಾರತದಲ್ಲಿ  ನಿರಂತರವಾಗಿ ಕುಸಿತ ಕಂಡುಬರುತ್ತಿದೆ. ದೇಶದ ಸಕ್ರಿಯ ಪ್ರಕರಣಗಳ ಹೊರೆಯು  ಇಂದು  11,67,952ರಷ್ಟಿದೆ. ಸತತ ಹತ್ತು ದಿನಗಳವರೆಗೆ ಪ್ರಕರಣಗಳ ಹೊರೆಯು  20 ಲಕ್ಷಕ್ಕಿಂತ ಕಡಿಮೆಯಿದೆ.

ಕಳೆದ 24 ಗಂಟೆಗಳಲ್ಲಿ 63,463 ನಿವ್ವಳ ಕುಸಿತ ಕಂಡುಬಂದಿದೆ ಮತ್ತು ಸಕ್ರಿಯ ಪ್ರಕರಣಗಳು ಈಗ ದೇಶದ ಒಟ್ಟು ದೃಢಪಟ್ಟ ಪ್ರಕರಣಗಳ ಕೇವಲ 4%ರಷ್ಟು ಮಾತ್ರ ಇದೆ.

https://static.pib.gov.in/WriteReadData/userfiles/image/image002VBJ3.jpg

ಕೋವಿಡ್ ಸೋಂಕಿನಿಂದ ಹೆಚ್ಚಿನ ಜನರು ಚೇತರಿಸಿಕೊಳ್ಳುತ್ತಿರುವ ಕಾರಣ, ಭಾರತದ ದೈನಂದಿನ ಚೇತರಿಕೆಗಳ ಪ್ರಮಾಣವು  ಸತತ 28ನೇ ದಿನವೂ ದೈನಂದಿನ ಹೊಸ ಪ್ರಕರಣಗಳನ್ನು ಮೀರಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 1,51,367   ಗುಣಮುಖರಾದ ಪ್ರಕರಣಗಳು ವರದಿಯಾಗಿವೆ.

ದೈನಂದಿನ ಹೊಸ ಪ್ರಕರಣಗಳಿಗೆ ಹೋಲಿಸಿದರೆ ಕಳೆದ 24 ಗಂಟೆಗಳಲ್ಲಿ 57,315 ಹೆಚ್ಚಿನ ಚೇತರಿಕೆಯ ಪ್ರಕರಣಗಳು ವರದಿಯಾಗಿದೆ.

 https://static.pib.gov.in/WriteReadData/userfiles/image/image003L0MS.jpg

ಸಾಂಕ್ರಾಮಿಕ ರೋಗದ ಆರಂಭದಿಂದಲೂ ಸೋಂಕಿತರಲ್ಲಿ  2,76,55,493 ಜನರು ಈಗಾಗಲೇ ಕೋವಿಡ್-19 ರಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ   1,51,367   ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರವು 94.77% ಆಗಿದ್ದು, ಇದು ಚೇತರಿಕೆಯ ಪ್ರಮಾಣವು ನಿರಂತರವಾಗಿ ಹೆಚ್ಚುತ್ತಿರುವುದನ್ನು ತೋರಿಸುತ್ತಿದೆ.

https://static.pib.gov.in/WriteReadData/userfiles/image/image004IKB5.jpg

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು ಕಳೆದ 24 ಗಂಟೆಗಳಲ್ಲಿ ಒಟ್ಟು  20,04,690 ಪರೀಕ್ಷೆಗಳನ್ನು ನಡೆಸಲಾಗಿದ್ದುಇಲ್ಲಿಯವರೆಗೆ ಭಾರತದಲ್ಲಿ 37.21 ಕೋಟಿ (37,21,98,253) ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ, ಸಾಪ್ತಾಹಿಕ   ದೃಢಪಟ್ಟ ಪ್ರಕರಣಗಳಲ್ಲಿ ನಿರಂತರ ಕುಸಿತವು ಕಂಡುಬರುತ್ತಿದೆ. ಸಾಪ್ತಾಹಿಕ ಸಕಾರಾತ್ಮಕ ದೃಢಪಟ್ಟ ಪ್ರಕರಣಗಳ ದರವು ಪ್ರಸ್ತುತ 5.43%ರಷ್ಟಿದ್ದರೆ, ದೈನಂದಿನ ದೃಢಪಟ್ಟ ಪ್ರಕರಣಗಳ ದರವು ಇಂದು 4.69% ರಷ್ಟಿದೆ.  ಈಗ ಇದು ಸತತ ಹದಿನೇಳು ದಿನಗಳವರೆಗೆ 10% ಕ್ಕಿಂತ ಕಡಿಮೆಯಿದೆ.

https://static.pib.gov.in/WriteReadData/userfiles/image/image005VAPS.jpg

ದೇಶಾದ್ಯಂತ ನೀಡಲಾಗುವ ಕೋವಿಡ್ -19 ಲಸಿಕೆ ಪ್ರಮಾಣಗಳ ಒಟ್ಟು ಸಂಖ್ಯೆ ಇಂದು ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದಲ್ಲಿ 24ಕೋಟಿಯನ್ನು ಮೀರಿದೆಕಳೆದ 24 ಗಂಟೆಗಳಲ್ಲಿ 33,79,261 ಲಸಿಕೆ ಡೋಸ್ ಗಳನ್ನು ನೀಡಲಾಯಿತು.

ತಾತ್ಕಾಲಿಕ ವರದಿಯ ಪ್ರಕಾರ ಇಂದು ಬೆಳಿಗ್ಗೆ 7 ಗಂಟೆಯವರೆಗೆ ಒಟ್ಟು 24,27,26,693 ಲಸಿಕೆ ಡೋಸ್ ಗಳನ್ನು 33,82,775 ಸೆಷನ್ಗಳ ಮೂಲಕ ನೀಡಲಾಗಿದೆ.

ಅವುಗಳ ವಿವರ ಹೀಗಿವೆ:

ಎಚ್ಸಿಡಬ್ಲ್ಯೂ

1 ನೇ ಡೋಸ್

1,00,13,434

2 ನೇ ಡೋಸ್

69,13,017

ಎಫ್ಎಲ್ಡಬ್ಲ್ಯೂ

1 ನೇ ಡೋಸ್

1,64,77,374

2 ನೇ ಡೋಸ್

87,55,586

 18 - 44 ವರ್ಷದವರು

1 ನೇ ಡೋಸ್

3,39,45,647

2 ನೇ ಡೋಸ್

4,07,151

 45 ರಿಂದ 60 ವರ್ಷದವರು

1 ನೇ ಡೋಸ್

7,33,84,090

2 ನೇ ಡೋಸ್

1,16,28,092

 60 ವರ್ಷಕ್ಕಿಂತ ಮೇಲ್ಪಟ್ಟವರು

1 ನೇ ಡೋಸ್

6,16,62,400

2 ನೇ ಡೋಸ್

1,95,39,902

ಒಟ್ಟು

24,27,26,693

***


(Release ID: 1725903) Visitor Counter : 256