ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋ-ವಿನ್ 2.0 ದಲ್ಲಿ ನೋಂದಣಿಗಾಗಿ ವಿಶಿಷ್ಟ ವಿಶೇಷ ಚೇತನರ ಗುರುತಿನ ಚೀಟಿ [ಯುಡಿಐಡಿ] ಇದೀಗ ಸ್ವೀಕಾರಾರ್ಹ: ಕೇಂದ್ರದಿಂದ ರಾಜ್ಯಕ್ಕೆ ಸೂಚನೆ
ಲಸಿಕಾಕರಣದ ಪ್ರಕ್ರಿಯೆಯನ್ನು ಸಾರ್ವತ್ರಿಕವಾಗಿ ಸುಗಮಗೊಳಿಸಲು ಕೇಂದ್ರ ಸರ್ಕಾರದಿಂದ ನಿರಂತರ ಪ್ರಯತ್ನ
Posted On:
07 JUN 2021 3:37PM by PIB Bengaluru
ಈ ವರ್ಷದ ಜನವರಿ 16 ರಿಂದ ಸುಗಮ ಮತ್ತು ಪರಿಣಾಮಕಾರಿ ಲಸಿಕಾಕರಣದ ಪ್ರಕ್ರಿಯೆಯನ್ನು ಖಾತ್ರಿಪಡಿಸಿಕೊಳ್ಳಲು ಸರ್ಕಾರದ ಸಮಗ್ರ ವಿಧಾನದಡಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತ ಸರ್ಕಾರ ಬೆಂಬಲ ನೀಡುತ್ತಿದೆ. ದೇಶಾದ್ಯಂತ ವಿವಿಧ ವರ್ಗಗಳ ಫಲಾನುಭವಿಗಳ ಲಸಿಕಾಕರಣವನ್ನು ಸುಗಮಗೊಳಿಸಲು ಕೇಂದ್ರ ಸರ್ಕಾರ ಕೊವಿನ್ ಡಿಜಿಟಲ್ ವೇದಿಕೆಯನ್ನು ಸಿದ್ಧಪಡಿಸಿದೆ.
ಕೋವಿಡ್ ಲಸಿಕೆ ವಿತರಣಾ ವ್ಯವಸ್ಥೆಗೆ ಯಾಂತ್ರಿಕ ವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸಲು ಮತ್ತು ಅಳೆಯಲು ಕೇಂದ್ರ ಸರ್ಕಾರ ತಾಂತ್ರಿಕ ಬೆಂಬಲವನ್ನು ಒದಗಿಸುತ್ತಿದೆ.
ಲಸಿಕಾಕರಣದ ಪ್ರಕ್ರಿಯೆಯನ್ನು ಸಾರ್ವತ್ರಿಕವಾಗಿ ಸುಗಮಗೊಳಿಸಲು ಕೇಂದ್ರ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಕೋ-ವಿನ್ 2.0 ದಲ್ಲಿ ನೋಂದಣಿಗಾಗಿ ವಿಶಿಷ್ಟ ವಿಶೇಷ ಚೇತನರ ಗುರುತಿನ ಚೀಟಿ [ಯುಡಿಐಡಿ] ಇದೀಗ ಸ್ವೀಕರಿಸಬಹುದು ಎಂದು ಹೇಳಿದೆ. ಮಾರ್ಚ್ 2, 2021 ರಂದು ಹೊರಡಿಸಲಾದ ಮಾರ್ಗಸೂಚಿ ಟಿಪ್ಪಣಿ ಪ್ರಕಾರ ಕೋ-ವಿನ್ 2.0 ದಡಿ ಏಳು ವಿವಿಧ ರೀತಿಯ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಫಲಾನುಭವಿಗಳ ಪರಿಶೀಲನೆಗಾಗಿ ನಿಗದಿಪಡಿಸಲಾಗಿದೆ ಮತ್ತು ಸೂಚಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ. ವಿಶೇಷ ಚೇತನರ ಸಬಲೀಕರಣ ಇಲಾಖೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡಿರುವ ಯುಡಿಐಡಿ ಚೀಟಿಯಲ್ಲಿ ಹೆಸರು, ಹುಟ್ಟಿದ ದಿನಾಂಕ, ಲಿಂಗ ಮತ್ತು ವ್ಯಕ್ತಿಯ ಎಲ್ಲಾ ವಿಶಿಷ್ಟ್ಯ ಮಾಹಿತಿ ಲಭ್ಯವಿದೆ ಮತ್ತು ಕೋವಿಡ್ – 19 ಲಸಿಕೆಗಾಗಿ ಎಲ್ಲಾ ಮಾನದಂಡಗಳನ್ನು ಇದು ಪೂರೈಸುತ್ತದೆ.
ಆದ್ದರಿಂದ ವಿಶೇಷ ಚೇತನ ವ್ಯಕ್ತಿಗಳ ಲಸೀಕರಣ ಪ್ರವೇಶವನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಕೋವಿಡ್ – 19 ಲಸಿಕಾಕರಣಕ್ಕಾಗಿ ನಿಗದಿತ ಭಾವಚಿತ್ರವಿರುವ ಯುಡಿಐಡಿಯನ್ನು ಗುರುತಿನ ಚೀಟಿ ಪಟ್ಟಿಯಲ್ಲಿ ಸೇರಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಅಗತ್ಯವಾದ ನಿಬಂಧನೆಗಳನ್ನು ರಚಿಸಲಾಗಿದೆ ಮತ್ತು ಶೀಘ್ರದಲ್ಲೇ ಕೊ – ವಿನ್ ನಲ್ಲಿ ಇದು ಲಭ್ಯವಾಗಲಿದೆ.
ಕೋವಿಡ್ ಲಸಿಕಾಕರಣದಲ್ಲಿ ಯುಡಿಐಡಿ ಕಾರ್ಡ್ ಅನ್ನು ಭಾವಚಿತ್ರವಿರುವ ಗುರುತಿನ ಚೀಟಿಯಾಗಿ ಬಳಸುವ ಕುರಿತಂತೆ ಪ್ರಚಾರ ಮಾಡುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಯುಡಿಐಡಿಯ ಮಾದರಿ ಈ ಕೆಳಕಂಡಂತೆ ಇದೆ
ಉಲ್ಲೇಖಕ್ಕಾಗಿ ಯುಡಿಐಡಿಯ ಮಾದರಿ
***
(Release ID: 1725112)
Visitor Counter : 182