ಗೃಹ ವ್ಯವಹಾರಗಳ ಸಚಿವಾಲಯ

ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಾರಣದಿಂದ ಭಾರತದಲ್ಲಿ ಉಳಿದಿರುವ ವಿದೇಶೀಯರ ಭಾರತೀಯ ವೀಸಾ ಅಥವಾ ವಾಸ್ತವ್ಯ ಷರತ್ತು ಅವಧಿಯನ್ನು 31.08.2021 ರವರೆಗೆ ಊರ್ಜಿತಾವಧಿಯಾಗಿ ಪರಿಗಣನೆ

Posted On: 04 JUN 2021 3:14PM by PIB Bengaluru

ಸಾಮಾನ್ಯ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗಳು ಕೋವಿಡ್ -19  ಜಾಗತಿಕ ಸಾಂಕ್ರಾಮಿಕದ ಕಾರಣದಿಂದ 2020 ಮಾರ್ಚ್ ತಿಂಗಳಿನಿಂದ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ 2020 ಮಾರ್ಚ್ ಗೆ ಮೊದಲು ಮಾನ್ಯತೆ ಇರುವ ಭಾರತದ ವೀಸಾದೊಂದಿಗೆ ಭಾರತಕ್ಕೆ ಬಂದಿರುವ ವಿದೇಶೀಯರು ಭಾರತದಲ್ಲಿ ಸಿಕ್ಕಿಹಾಕಿಕೊಳ್ಳುವಂತಾಗಿದೆ. ಇಂತಹ ವಿದೇಶೀಯರು ಎದುರಿಸುತ್ತಿರುವ ಸಂಕಷ್ಟಗಳನ್ನು ಪರಿಗಣಿಸಿ, ಲಾಕ್ ಡೌನ್ ನಿಂದಾಗಿ ಅವರ ವೀಸಾ ವಿಸ್ತರಣೆ ಪಡೆಯಲು ಉಂಟಾಗಿರುವ ತೊಡಕುಗಳನ್ನು ಗಣನೆಗೆ ತೆಗೆದುಕೊಂಡು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ (ಎಂ.ಎಚ್..)ವು 29.06.2020 ರಂದು ಆದೇಶವೊಂದನ್ನು ಹೊರಡಿಸಿ ವಿದೇಶೀಯರ ಭಾರತೀಯ ವೀಸಾ ಅಥವಾ ವಾಸ್ತವ್ಯ ಷರತ್ತು ಅವಧಿಯು 30.06.2020 ಬಳಿಕ ಕೊನೆಗೊಳ್ಳುವುದಿದ್ದಲ್ಲಿ ಅದನ್ನು ಸಾಮಾನ್ಯ ಅಂತಾರಾಷ್ಟ್ರೀಯ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಂಡ ಬಳಿಕ ಮತ್ತೆ 30 ದಿನಗಳ ಊರ್ಜಿತಾವಧಿಯನ್ನು ಉಚಿತ ಆಧಾರದ ಮೇಲೆ ಪರಿಗಣಿಸಲಾಗುವುದೆಂದು ಹೇಳಿತ್ತುಆದರೆ ಇಂತಹ ವಿದೇಶೀಯರು ಅವರ ವೀಸಾ ವಿಸ್ತರಣೆಗೆ ಅಥವಾ ವಾಸ್ತವ್ಯ ಷರತ್ತು ಅವಧಿಯನ್ನು ತಿಂಗಳ ಆಧಾರದ ಮೇಲೆ ವಿಸ್ತರಿಸುವಂತೆ  ಅರ್ಜಿ ಸಲ್ಲಿಸುತ್ತಿದ್ದಾರೆ.

ವಿಷಯವನ್ನು ಸಾಮಾನ್ಯ ವಾಣಿಜ್ಯ ವಿಮಾನ ಕಾರ್ಯಾಚರಣೆಗಳು ಪುನರಾರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಎಂ.ಎಚ್..ಯು ಈಗ ಮರುಪರಿಶೀಲನೆ ನಡೆಸಿದ್ದು, ಮತ್ತು ಅದರನ್ವಯ ಭಾರತದಲ್ಲಿ ಸಿಕ್ಕಿ ಹಾಕಿಕೊಂಡಿರುವ ಅಂತಹ ವಿದೇಶೀಯರ ಭಾರತೀಯ ವೀಸಾ ಅಥವಾ ವಾಸ್ತವ್ಯ ಷರತ್ತು ಅವಧಿಯನ್ನು ಉಚಿತ ಆಧಾರದಲ್ಲಿ, ಯಾವುದೇ ದಂಡಶುಲ್ಕವಿಲ್ಲದೆ 31.08.2021 ರವರೆಗೆ ಊರ್ಜಿತದಲ್ಲಿರುವುದಾಗಿ ಪರಿಗಣಿಸಲು ನಿರ್ಧರಿಸಿದೆ. ವಿದೇಶೀಯರು ಸಂಬಂಧಿತ ಎಫ್.ಆರ್.ಆರ್../ಎಫ್.ಆರ್..ಅವರಿಗೆ ತಮ್ಮ ವೀಸಾ ವಿಸ್ತರಣೆಗೆ ಯಾವುದೇ ಅರ್ಜಿ ಸಲ್ಲಿಸಬೇಕಾಗಿಲ್ಲ.

ಇಂತಹ ವಿದೇಶೀಯರು ದೇಶ ಬಿಡುವುದಕ್ಕೆ ಮೊದಲು ಸಂಬಂಧಿತ ಎಫ್.ಆರ್.ಆರ್.. /ಎಫ್.ಆರ್..ಗಳಿಗೆ ನಿರ್ಗಮನ ಅನುಮತಿಗಾಗಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅದನ್ನು ಉಚಿತ ಆಧಾರದಲ್ಲಿ ಯಾವುದೇ ಶುಲ್ಕ ಅಥವಾ ಯಾವುದೇ ಅಧಿಕ ವಾಸ್ತವ್ಯ ಅವಧಿಯ ದಂಡ ಶುಲ್ಕವಿಲ್ಲದೆ ನೀಡಲಾಗುತ್ತದೆ.

***


(Release ID: 1724493) Visitor Counter : 279