ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

18-44 ವರ್ಷ ವಯೋಮಾನದವರಿಗೆ ಆನ್‌ಲೈನ್ ನೇಮಕಾತಿಯ ಜೊತೆಗೆ ಸ್ಥಳದಲ್ಲೇ ನೋಂದಣಿ/ ಅನುಕೂಲಕರ ಕೊಹಾರ್ಟ್ ನೋಂದಣಿ ಈಗ ಕೋವಿನ್ನಲ್ಲಿ ಸಕ್ರಿಯಗೊಳಿಸಲಾಗಿದೆ


ಪ್ರಸ್ತುತ ಸರಕಾರಿ ಕೋವಿಡ್ ಲಸಿಕೆ ಕೇಂದ್ರಗಳಿಗೆ (ಸಿವಿಸಿಗಳು) ಮಾತ್ರ ವೈಶಿಷ್ಟ್ಯ ಸಕ್ರಿಯಗೊಳಿಸಲಾಗಿದೆ

Posted On: 24 MAY 2021 1:11PM by PIB Bengaluru

ಕೋವಿಡ್-19 ಸಾಂಕ್ರಾಮಿಕದಿಂದ ದೇಶದ ಅತ್ಯಂತ ದುರ್ಬಲ ಜನಸಮೂಹವನ್ನು ರಕ್ಷಿಸುವ ಸಾಧನವಾಗಿ ಲಸಿಕೆ ಅಭಿಯಾನವನ್ನು ನಡೆಸಲಾಗುತ್ತಿದ್ದು, ಅತ್ಯುನ್ನತ ಮಟ್ಟದಲ್ಲಿ ಪ್ರಕ್ರಿಯೆಯ  ನಿಯಮಿತ ಪರಿಶೀಲನೆ ಮತ್ತು ಮೇಲ್ವಿಚಾರಣೆ ಮುಂದುವರಿದಿದೆ.

ಅಭಿಯಾನಕ್ಕೆ ಸಂಬಂಧಿಸಿದಂತೆ ಅನುಸರಿಸಲಾಗುತ್ತಿರುವ ಶ್ರೇಣೀಕೃತ, ಮುಂಜಾಗ್ರತಾ ಮತ್ತು ಸಕ್ರಿಯಾತ್ಮಕ ವಿಧಾನವು ಸಂಬಂಧಪಟ್ಟ ಎಲ್ಲಾ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆಯೊಂದಿಗೆ ಪ್ರಸ್ತುತ ಸನ್ನಿವೇಶಗಳಿಗೆ ಅನುಗುಣವಾಗಿ ಕಾರ್ಯವಿಧಾನದಲ್ಲಿ ಮಾರ್ಪಡಿಸಲು ಅವಕಾಶ ಮಾಡಿಕೊಟ್ಟಿದೆ.

2021 ಮಾರ್ಚ್ 1ರಂದು ರಾಷ್ಟ್ರೀಯ ಲಸಿಕೆ ಅಭಿಯಾನದ ಎರಡನೇ ಹಂತವನ್ನು ಪ್ರಾರಂಭಿಸಲಾಯಿತು. ಆದರೆ ಸೌಲಭ್ಯವು ಕೋವಿನ್ ಡಿಜಿಟಲ್ ವೇದಿಕೆಯಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡ ಮತ್ತು ಸಂದರ್ಶನ ಗೊತ್ತುಪಡಿಸಿಕೊಂಡ 45 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ನಾಗರಿಕರಿಗೆ ಮಾತ್ರ ಸೀಮಿತವಾಗಿತ್ತು. ಆದ್ಯತಾ ಜನಸಮೂಹಕ್ಕೆ ಸ್ಥಳದಲ್ಲೇ (ಆನ್‌-ಸೈಟ್‌) ನೋಂದಣಿ ಸೌಲಭ್ಯವನ್ನು ನಂತರ ವಿಸ್ತರಿಸಲಾಯಿತು. ನಂತರ, ಉದಾರೀಕೃತ ದರ ಮತ್ತು ವೇಗವರ್ಧಿತ ರಾಷ್ಟ್ರೀಯ ಕೋವಿಡ್‌-19 ಲಸಿಕೆ ಕಾರ್ಯತಂತ್ರದ ಭಾಗವಾಗಿ, ಲಸಿಕೆ ನೀಡಿಕೆ ವ್ಯಾಪ್ತಿಯನ್ನು ಮೇ 1, 2021ರಂದು 18ರಿಂದ 44 ವರ್ಷ ವಯೋಮಾನದವರಿಗೂ ವಿಸ್ತರಿಸಲಾಯಿತು.

ಆರಂಭದಲ್ಲಿ, 18ರಿಂದ 44 ವರ್ಷ ವಯೋಮಾನದವರಿಗೆ ಆನ್-ಲೈನ್ ನೋಂದಣಿ ಮೂಲಕ ಮಾತ್ರ ಲಸಿಕೆ ಲಭ್ಯ ಎಂಬ ನಿಯಮವು ಲಸಿಕೆ ಕೇಂದ್ರಗಳಲ್ಲಿ ಜನದಟ್ಟಣೆಯನ್ನು ತಪ್ಪಿಸಲು ಸಹಾಯ ಮಾಡಿತು.

ನಿಟ್ಟಿನಲ್ಲಿ, ರಾಜ್ಯಗಳು ನೀಡಿದ ವಿವಿಧ ಮನವಿಗಳು ಮತ್ತು 18-44 ವರ್ಷ ವಯಸ್ಸಿನವರ ಲಸಿಕೆಗಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಸ್ವೀಕರಿಸಿದ ಮಾಹಿತಿಗಳ ಆಧಾರದ ಮೇಲೆ, ಕೇಂದ್ರ ಸರಕಾರವು ಕೆಳಗಿನ ಅಂಶಗಳನ್ನು ಪರಿಗಣಿಸಿ 18-44 ವರ್ಷ ವಯಸ್ಸಿನವರಿಗೆ ಸ್ಥಳದಲ್ಲೇ ನೋಂದಣಿ / ಕೋವಿನ್ಡಿಜಿಟಲ್ ವೇದಿಕೆಯಲ್ಲಿ ಕೊಹಾರ್ಟ್ ನೋಂದಣಿಯ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದೆ, ಅಂಶಗಳೆಂದರೆ:

(1) ಒಂದು ವೇಳೆ ಲಸಿಕೆ ಸೆಷೆನ್ಅನ್ನು ಆನ್ಲೈನ್ ಸ್ಲಾಟ್ಗಳಿಗೆ ಮಾತ್ರ ಪ್ರತ್ಯೇಕವಾಗಿ ಆಯೋಜಿಸಿದ್ದರೆ, ದಿನದ ಕೊನೆಯಲ್ಲಿ, ಕಾರಣಾಂತರದಿಂದಾಗಿ ಆನ್ಲೈನ್ನಲ್ಲಿ ನೋಂದಾಯಿಸಿಕೊಂಡ ಫಲಾನುಭವಿಗಳು ಲಸಿಕೆಯ ದಿನದಂದು ಬರದಿದ್ದರೆ ಕೆಲವು ಡೋಸ್ಗಳು ಇನ್ನೂ ಬಳಸದೆ ಉಳಿಯಬಹುದು. ಅಂತಹ ಸಂದರ್ಭಗಳಲ್ಲಿ, ಲಸಿಕೆ ವ್ಯರ್ಥವಾಗುವುದನ್ನು ಕಡಿಮೆ ಮಾಡಲು ಕೆಲವು ಫಲಾನುಭವಿಗಳ ಸ್ಥಳದಲ್ಲೇ ನೋಂದಣಿ ಅಗತ್ಯವಾಗಬಹುದು.

(2) ʻಕೋವಿನ್ʼನಲ್ಲಿ ಒಂದು ಮೊಬೈಲ್ ಸಂಖ್ಯೆಯೊಂದಿಗೆ 4 ಫಲಾನುಭವಿಗಳ ನೋಂದಣಿ ಅವಕಾಶವಿದೆ. ಆದರೆ, ಆರೋಗ್ಯಸೇತು ಮತ್ತು ಉಮಾಂಗ್ ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಅರ್ಜಿಗಳ ಮೂಲಕ ನೋಂದಣಿ ಮಾಡಿಸಿಕೊಳ್ಳುವವರು; ಕೊಹೊರ್ಟ್ಮೂಲಕ ನೋಂದಣಿ ಅಗತ್ಯವಿರುವಂಥವರು ಮತ್ತು ಇಂಟರ್ನೆಟ್ ಅಥವಾ ಸ್ಮಾರ್ಟ್ ಫೋನ್ ಗಳು ಅಥವಾ ಮೊಬೈಲ್ ಫೋನ್ಗಳ ಲಭ್ಯತೆ ಇಲ್ಲದವರಿಗೆ ಲಸಿಕೆ ಪಡೆಯುವ ಅವಕಾಶ ಇನ್ನೂ ಸೀಮಿತವಾಗಿಯೇ ಇದೆ.

ಆದ್ದರಿಂದ, ಕೋವಿನ್ನಲ್ಲಿ 18-44 ವರ್ಷ ವಯಸ್ಸಿನವರಿಗೆ ಸ್ಥಳದಲ್ಲೇ ನೋಂದಣಿ ಮತ್ತು ಸಂದರ್ಶನದ ಸೌಲಭ್ಯವನ್ನು ಈಗ ಸಕ್ರಿಯಗೊಳಿಸಲಾಗುತ್ತಿದೆ.

ಆದಾಗ್ಯೂ, ಸೌಲಭ್ಯವನ್ನು ಪ್ರಸ್ತುತ ಸರಕಾರಿ ಕೋವಿಡ್ ಲಸಿಕೆ ಕೇಂದ್ರಗಳಿಗೆ (ಸಿವಿಸಿಗಳು) ಮಾತ್ರ  ಸೀಮಿತಗೊಳಿಸಲಾಗಿದೆ.

ಸೌಲಭ್ಯವು ಪ್ರಸ್ತುತ ಖಾಸಗಿ ಕೋವಿಡ್ಲಸಿಕಾ ಕೇಂದ್ರಗಳಲ್ಲಿ ಲಭ್ಯವಿರುವುದಿಲ್ಲಖಾಸಗಿ ಲಸಿಕೆ ಕೇಂದ್ರಗಳು ಕೇವಲ ಆನ್ಲೈನ್ಸ್ಲಾಟ್ನಿಗದಿಗಾಗಿ ಲಸಿಕೆ ವೇಳಾಪಟ್ಟಿಗಳನ್ನು ಪ್ರಕಟಿಸಬೇಕಾಗುತ್ತದೆ.

ಆಯಾ ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ನಿರ್ಧಾರದ ನಂತರವೇ ಸೌಲಭ್ಯವನ್ನು ಬಳಸಲಾಗುತ್ತದೆ. ಲಸಿಕೆ ವ್ಯರ್ಥವಾಗುವುದನ್ನು ಕಡಿಮೆ ಮಾಡುವ ಸಲುವಾಗಿ ಮತ್ತು 18-44 ವರ್ಷ ವಯಸ್ಸಿನ ಅರ್ಹ ಫಲಾನುಭವಿಗಳಿಗೆ ಲಸಿಕೆ ಹಾಕಲು ಅನುಕೂಲವಾಗುವಂತೆ ಸ್ಥಳೀಯ ಸಂದರ್ಭದ ಆಧಾರದ ಮೇಲೆ 18-44 ವರ್ಷ ವಯಸ್ಸಿನವರಿಗೆ ಸ್ಥಳದಲ್ಲೇ ನೋಂದಣಿ / ಕೊಹಾರ್ಟ್ನೋಂದಣಿ ಮತ್ತು ಸಂದರ್ಶನಗಳನ್ನು ತೆರೆಯಲು ರಾಜ್ಯ/ಕೇಂದ್ರಾಡಳಿತ  ಪ್ರದೇಶಗಳು ನಿರ್ಧರಿಸಬೇಕು.

18 ರಿಂದ 44 ವರ್ಷ ವಯಸ್ಸಿನವರಿಗೆ ಸ್ಥಳದಲ್ಲೇ ನೋಂದಣಿ ಮತ್ತು ಸಂದರ್ಶನ ಸೌಲಭ್ಯವನ್ನು ಬಳಸುವ ವ್ಯಾಪ್ತಿ ಮತ್ತು ವಿಧಾನದ ಬಗ್ಗೆ ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ನಿರ್ಧಾರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ಜಿಲ್ಲಾ ರೋಗನಿರೋಧಕ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆಗಳನ್ನು ನೀಡುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.

ಕೊಹೊರ್ಟ್ಗೆ ಸೇರಿದ ಫಲಾನುಭವಿಗಳಿಗೆ ಲಸಿಕೆ ಸೇವೆಗಳನ್ನು ಒದಗಿಸಲು ಸಂಪೂರ್ಣವಾಗಿ ಕಾಯ್ದಿರಿಸಿದ ಸೆಷನ್ಗಳನ್ನು ಸಹ ಆಯೋಜಿಸಬಹುದು. ಅಂತಹ ಸಂಪೂರ್ಣ ಕಾಯ್ದಿರಿಸಿದ ಅಧಿವೇಶನಗಳನ್ನು ಆಯೋಜಿಸಿದಲ್ಲೆಲ್ಲಾ, ಅಂತಹ ಫಲಾನುಭವಿಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಒಟ್ಟುಗೂಡಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು.

ಲಸಿಕೆ ಕೇಂದ್ರಗಳಲ್ಲಿ ಜನಸಂದಣಿಯನ್ನು ತಪ್ಪಿಸಲು, 18-44 ವರ್ಷ ವಯಸ್ಸಿನವರಿಗೆ ಸ್ಥಳದಲ್ಲೇ ನೋಂದಣಿ ಮತ್ತು ಸಂದರ್ಶನ ಸೌಲಭ್ಯ ತೆರೆಯುವಾಗ ಸಾಕಷ್ಟು ಎಚ್ಚರಿಕೆಯನ್ನು ವಹಿಸಬೇಕು ಹಾಗೂ ಸೂಕ್ತ ಕಾಳಜಿ ವಹಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.

***(Release ID: 1721249) Visitor Counter : 160