ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ 701 ಒನ್ ಸ್ಟಾಪ್ ಕೇಂದ್ರಗಳ ಮೂಲಕ ನೆರವು

Posted On: 22 MAY 2021 2:04PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಜಾರಿ ಮಾಡಿರುವ ಒನ್ ಸ್ಟಾಪ್ ಕೇಂದ್ರಗಳ (ಓ.ಎಸ್.ಸಿ.ಗಳು) ಯೋಜನೆಯು ಈವರೆಗೆ 3 ಲಕ್ಷ ಮಹಿಳೆಯರಿಗೆ ನೆರವು ಒದಗಿಸಿದೆ.  ಖಾಸಗಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಿಂಸಾಚಾರದಿಂದ ಬಾಧಿತರಾದ ಮತ್ತು ತೊಂದರೆಯಲ್ಲಿರುವ ಮಹಿಳೆಯರಿಗೆ,  ಒಂದೇ ಸೂರಿನಡಿ ಮತ್ತು ತಕ್ಷಣದ ನೆರವು ಕಲ್ಪಿಸಲು, ಪೊಲೀಸ್, ವೈದ್ಯಕೀಯ, ಕಾನೂನು ನೆರವು ಮತ್ತು ಸಮಾಲೋಚನೆ, ಮಹಿಳೆಯರ ವಿರುದ್ಧ ಯಾವುದೇ ಸ್ವರೂಪದ ಹಿಂಸಾಚಾರದ ವಿರುದ್ಧ ಹೋರಾಡಲು ಮಾನಸಿಕ ಸ್ಥೈರ್ಯ ತುಂಬುವುದು ಸೇರಿದಂತೆ  ತುರ್ತು ಮತ್ತು ತುರ್ತಲ್ಲದ ಸೇವೆಗಳನ್ನು ಒದಗಿಸಲು, 2015ರ ಏಪ್ರಿಲ್ 1ರಿಂದ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳ ಆಡಳಿತದ ಮೂಲಕ  ಈ ಯೋಜನೆಯನ್ನು ದೇಶದಾದ್ಯಂತ ಅನುಷ್ಠಾನಗೊಳಿಸಲಾಯಿತು.  ಈ ದಿನಾಂಕದವರೆಗೆ 35 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ 701 ಓ.ಎಸ್.ಸಿ.ಗಳು ಕಾರ್ಯಾಚರಣೆ ಮಾಡುತ್ತಿವೆ.  

ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಪ್ರಚಲಿತ ಪರಿಸ್ಥಿತಿಯಲ್ಲಿ, ತೊಂದರೆಯಲ್ಲಿರುವ ಅಥವಾ ಹಿಂಸಾಚಾರದಿಂದ ಬಳಲುತ್ತಿರುವ ಮಹಿಳೆಯರು ತ್ವರಿತ ಸಹಾಯ ಮತ್ತು ಸೇವೆಗಳಿಗಾಗಿ ಹತ್ತಿರದ ಒ.ಎಸ್.ಸಿ.ಗಳನ್ನು ಸಂಪರ್ಕಿಸಬಹುದು. ಲಾಕ್ ಡೌನ್ ಅವಧಿಯಲ್ಲಿ ಕೂಡ ಸ್ಯಾನಿಟೈಸರ್ ಗಳು, ಸಾಬೂನು, ಮಾಸ್ಕ್ ಇತ್ಯಾದಿ ಸೇರಿದಂತೆ ಕೋವಿಡ್-19 ವಿರುದ್ಧ ಹೋರಾಡಲು ಬೇಕಾದ ಎಲ್ಲಾ ಮೂಲಭೂತ ವಸ್ತುಗಳ ಲಭ್ಯತೆಯೊಂದಿಗೆ ಒನ್ ಸ್ಟಾಪ್ ಕೇಂದ್ರಗಳು ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುವಂತೆ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ/ಆಡಳಿತಗಾರರಿಗೆ ಮತ್ತು ಎಲ್ಲ ಜಿಲ್ಲೆಗಳ ಡಿಸಿ/ಡಿಎಂಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಿರ್ದೇಶನ ನೀಡಿದೆ.  

ಯೋಜನೆಯ ಮಾರ್ಗಸೂಚಿಯ ರೀತ್ಯ, ಕೇಂದ್ರಗಳು ಸುಗಮ ಕಾರ್ಯಾಚರಣೆಗಾಗಿ, ಕಾನೂನು ಸಮಾಲೋಚನೆ/ವೈದ್ಯಕೀಯ ನೆರವು/ಮಾನಸಿಕ - ಸಾಮಾಜಿಕ ಸಮಾಲೋಚನೆ ಒದಗಿಸಲು ಪಟ್ಟಿಯಲ್ಲಿರುವ ಸಂಸ್ಥೆಗಳು / ವ್ಯಕ್ತಿಗಳ ನೇಮಕಾತಿ / ನೇಮಕಾತಿ / ಆಯ್ಕೆಯ ಜವಾಬ್ದಾರಿ ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಆಡಳಿತದ ಮೇಲಿರುತ್ತದೆ. ಅನುಮೋದಿತ ಮತ್ತು ಕಾರ್ಯಾಚರಣೆಯಲ್ಲಿರುವ ಒಎಸ್ಸಿಗಳ ರಾಜ್ಯ/ಕೇಂದ್ರಾಡಳಿತವಾರು ವಿವರಗಳು ಹೀಗಿವೆ: 

ಕಾರ್ಯನಿರ್ವಹಣೆಯಲ್ಲಿರುವ ಒನ್ ಸ್ಟಾಪ್ ಕೇಂದ್ರಗಳು

ಕ್ರ.ಸಂ

ರಾಜ್ಯ /ಕೇಂದ್ರಾಡಳಿತ ಪ್ರದೇಶದ ಹೆಸರು

ಕಾರ್ಯಾಚರಣೆಯಲ್ಲಿರುವ ಓ.ಎಸ್.ಸಿ.ಗಳ ಸಂಖ್ಯೆ

1.

ಅಂಡಮಾನ್ ಮತ್ತು ನಿಕೋಬಾರ್ (ಕೇಂದ್ರಾಡಳಿತ ಪ್ರದೇಶ)

03

2.

ಆಂಧ್ರಪ್ರದೇಶ

13

3.

ಅರುಣಾಚಲ ಪ್ರದೇಶ

24

4.

ಅಸ್ಸಾಂ

33

5.

ಬಿಹಾರ

38

6.

ಚಂಡೀಗಢ (ಕೇಂದ್ರಾಡಳಿತ ಪ್ರದೇಶ)

01

7.

ಛತ್ತೀಸಗಢ

27

8.

ದಾದ್ರಾ ಮತ್ತು ನಗರ್ ಹವೇಲಿ ಹಾಗೂ ಡಮನ್ ಮತ್ತು ಡಿಯು  (ಕೇಂದ್ರಾಡಳಿತ ಪ್ರದೇಶ)

02

9.

ದೆಹಲಿ  (ಕೇಂದ್ರಾಡಳಿತ ಪ್ರದೇಶ)

11

10.

ಗೋವಾ

02

11.

ಗುಜರಾತ್

33

12.

ಹರಿಯಾಣ

22

13.

ಹಿಮಾಚಲ ಪ್ರದೇಶ

12

14.

ಜಮ್ಮು ಮತ್ತು ಕಾಶ್ಮೀರ  (ಕೇಂದ್ರಾಡಳಿತ ಪ್ರದೇಶ)

18

15.

ಜಾರ್ಖಂಡ್

24

16.

ಕರ್ನಾಟಕ

30

17.

ಕೇರಳ

14

18.

ಲಕ್ಷದ್ವೀಪ (ಕೇಂದ್ರಾಡಳಿತ ಪ್ರದೇಶ)

01

19.

ಲಡಾಖ್  (ಕೇಂದ್ರಾಡಳಿತ ಪ್ರದೇಶ)

01

20.

ಮಹಾರಾಷ್ಟ್ರ

37

21.

ಮಧ್ಯಪ್ರದೇಶ

52

22.

ಮಣಿಪುರ

16

23.

ಮೇಘಾಲಯ

11

24.

ಮಿಜೋರಾಂ

08

25.

ನಾಗಾಲ್ಯಾಂಡ್

11

26.

ಒಡಿಶಾ

31

27.

ಪಂಜಾಬ್

22

28.

ಪುದುಚೇರಿ (ಕೇಂದ್ರಾಡಳಿತ ಪ್ರದೇಶ)

04

29.

ರಾಜಾಸ್ಥಾನ್

33

30.

ಸಿಕ್ಕಿಂ

04

31.

ತಮಿಳುನಾಡು

34

32.

ತೆಲಂಗಾಣ

33

33.

ತ್ರಿಪುರಾ

08

34.

ಉತ್ತರ ಪ್ರದೇಶ

75

35.

ಉತ್ತರಾಖಂಡ

13

ಒಟ್ಟು

 

701

 

ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು 701 ಕಾರ್ಯಾಚರಣೆಯಲ್ಲಿರುವ ಒನ್ ಸ್ಟಾಪ್ ಕೇಂದ್ರಗಳ ಡೈರೆಕ್ಟರಿ ಇಲ್ಲಿ ಲಭ್ಯವಿದೆ:  https://wcd.nic.in/schemes/one-stop-centre-scheme-1

****


(Release ID: 1720986) Visitor Counter : 496