ಪ್ರಧಾನ ಮಂತ್ರಿಯವರ ಕಛೇರಿ

ಪ್ರೋಫೆಸರ್ ಎಂ.ಎಸ್. ನರಸಿಂಹನ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

Posted On: 16 MAY 2021 11:59AM by PIB Bengaluru

ಪ್ರೊಫೆಸರ್ ಎಂ.ಎಸ್. ನರಸಿಂಹನ್ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಪ್ರಧಾನಮಂತ್ರಿ ಅವರು “ ಪ್ರೊಫೆಸರ್ ಎಂ.ಎಸ್. ನರಸಿಂಹನ್ ಅವರನ್ನು ಆದರ್ಶಪ್ರಾಯ ಗಣಿತಜ್ಞ ಎಂದು ಸ್ಮರಿಸಲಾಗುತ್ತದೆ. ಅವರು ವಿಶ್ವದಾದ್ಯಂತ ಅಸಾಧಾರಣ ಪ್ರಭಾವ ಬೀರಿದ್ದಾರೆ. ಗಣಿತವನ್ನು ಮೀರಿ ಅವರು ತಮ್ಮ ಕೆಲಸದಲ್ಲಿ ಗುರುತು ಮೂಡಿಸಿದ್ದಾರೆ. ಅವರ ನಿಧನದಿಂದ ಬೇಸರವಾಗಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ” ಎಂದು ಹೇಳಿದ್ದಾರೆ.

 

***



(Release ID: 1719141) Visitor Counter : 139