ಪ್ರಧಾನ ಮಂತ್ರಿಯವರ ಕಛೇರಿ

ಯೋಗ ಗುರು ಸ್ವಾಮಿ ಅಧ್ಯಾತ್ಮಾನಂದ ಜಿ ನಿಧನಕ್ಕೆ ಪ್ರಧಾನಿ ಸಂತಾಪ

Posted On: 08 MAY 2021 3:37PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಯೋಗ ಗುರು ಸ್ವಾಮಿ ಅಧ್ಯಾತ್ಮಾನಂದ ಜಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ, ಗೌರವ ನಮನ ಸಲ್ಲಿಸಿದ್ದಾರೆ ಮತ್ತು  ಆಳವಾದ ಆಧ್ಯಾತ್ಮಿಕ ವಿಷಯಗಳನ್ನು ಸರಳ ರೀತಿಯಲ್ಲಿ ಹೇಳುವ ಅವರ ವ್ಯಕ್ತಿತ್ವವನ್ನು ಸ್ಮರಿಸಿದ್ದಾರೆ. ಯೋಗ ಶಿಕ್ಷಣದ ಜೊತೆಗೆ ಸ್ವಾಮೀಜಿ ಅವರು ಆಹಮದಾಬಾದ್ ಶಿವಾನಂದ ಆಶ್ರಮ ನಡೆಸುವ ಹಲವು ರಚನಾತ್ಮಕ ಚಟುವಟಿಕೆಗಳ ಮೂಲಕ ಹೇಗೆ ಸಮಾಜಕ್ಕೆ ಸೇವೆ ಸಲ್ಲಿಸಿದರು ಎಂದು ಪ್ರಧಾನಮಂತ್ರಿ ಅವರು ನೆನಪು ಮಾಡಿಕೊಂಡಿದ್ದಾರೆ.

***


(Release ID: 1718013) Visitor Counter : 179