ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಪರಿಹಾರ ನೆರವಿನ ಇತ್ತೀಚಿನ ಮಾಹಿತಿ


ಭಾರತ ಸರ್ಕಾರ ಕೋವಿಡ್ ನಿರ್ವಹಣೆಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತದ ತೃತೀಯ ಆರೈಕೆ ಕೇಂದ್ರಗಳಿಗೆ ಕಾರ್ಯಸಾಧ್ಯವಾಗುವಂತೆ ಹಂಚಿಕೆ ಮಾಡಿ, ತ್ವರಿತವಾಗಿ ತಲುಪಿಸುತ್ತಿದೆ.

9200 ಆಕ್ಸಿಜನ್ ಸಾಂಧ್ರಕಗಳು; 5243 ಆಕ್ಸಿಜನ್ ಸಿಲಿಂಡರ್ ಗಳು; 19 ಆಕ್ಸಿಜನ್ ಉತ್ಪಾದನಾ ಸ್ಥಾವರಗಳು; 5913 ವೆಂಟಿಲೇಟರ್ಗಳು/ಬಿ ಪ್ಯಾಪ್; ~3.44ಎಲ್ ರೆಮಿಡಿಸಿವೀರ್ ವೈಲ್ ಗಳನ್ನು ಈವರೆಗೆ ಪೂರೈಸಲಾಗಿದೆ/ರವಾನಿಸಲಾಗಿದೆ

Posted On: 11 MAY 2021 3:42PM by PIB Bengaluru

ದೇಶದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಹಠಾತ್ ಹೆಚ್ಚಳವಾದ ಕೋವಿಡ್ ಪ್ರಕರಣಗಳ ಹೆಚ್ಚಳದ ವಿರುದ್ಧ ಹೋರಾಡಲು, ಭಾರತ ಸರ್ಕಾರ  2021 ಏಪ್ರಿಲ್ 27ರಿಂದ ವಿವಿಧ ರಾಷ್ಟ್ರಗಳು/ಸಂಸ್ಥೆಗಳಿಂದ ಕೋವಿಡ್ -19 ಪರಿಹಾರ ವೈದ್ಯಕೀಯ ಪೂರೈಕೆ ಮತ್ತು ಸಾಧನಗಳ ಅಂತಾರಾಷ್ಟ್ರೀಯ ದೇಣಿಗೆ ಮತ್ತು ನೆರವನ್ನು ಸ್ವೀಕರಿಸುತ್ತಿದೆಭಾರತ ಸರ್ಕಾರದ ವಿವಿಧ ಸಚಿವಾಲಯಗಳು/ಇಲಾಖೆಗಳು ನಿರಂತರ ಸಹಯೋಗದೊಂದಿಗೆ ಸುವ್ಯವಸ್ಥಿತ ಮತ್ತು ವ್ಯವಸ್ಥಿತ ಕಾರ್ಯವಿಧಾನದ ಮೂಲಕ ಇಡೀ ಸರ್ಕಾರದೃಷ್ಟಿಕೋನದೊಂದಿಗೆ, ಬರುತ್ತಿರುವ ಜಾಗತಿಕ ನೆರವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತ್ವರಿತವಾಗಿ ತಲುಪಿಸುತ್ತಿದೆ. ರಸ್ತೆ ಮತ್ತು ವಾಯು ಮಾರ್ಗದ ಮೂಲಕ 2021 ಏಪ್ರಿಲ್ 27ರಿಂದ 2021 ಮೇ 10ರವರೆಗೆ ಒಟ್ಟಾರೆ 9200 ಆಕ್ಸಿಜನ್ ಸಾಂಧ್ರಕಗಳು; 5243 ಆಕ್ಸಿಜನ್ ಸಿಲಿಂಡರ್ ಗಳು; 19 ಆಕ್ಸಿಜನ್ ಉತ್ಪಾದನಾ ಸ್ಥಾವರಗಳು; ವೆಂಟಿಲೇಟರ್ ಗಳು/ ಬೈ ಪ್ಯಾಪ್; ~3.44ಎಲ್ ರೆಮಿಡಿಸಿವೀರ್ ವೈಲ್ಸ್ ಪೂರೆಸಲಾಗಿದೆ/ರವಾನಿಸಲಾಗಿದೆ.

2021 ಮೇ 10ರಂದು ಯುಎಇ, ಇಸ್ರೇಲ್, ಯು.ಎಸ್.., ನೆದರ್ ಲ್ಯಾಂಡ್ ನಿಂದ ಸ್ವೀಕರಿಸಲಾದ ಪ್ರಮುಖ ಸರಕುಗಳಲ್ಲಿ ಕೆಳಕಂಡವುಗಳು ಸೇರಿವೆ:

  • ವೆಂಟಿಲೇಟರ್ ಗಳು/ಬೈಪ್ಯಾಪ್/ಸಿಪಿಎಪಿ (610)
  • ಆಕ್ಸಿಜನ್ ಸಾಂಧ್ರಕಗಳು (300)
  • ಫೆವಿಪಿರವಿರ್ - 12600 ಸ್ಟ್ರಿಪ್ಸ್ (ಪ್ರತಿ ಸ್ಟ್ರಿಪ್ 40ಮಾತ್ರ ಒಳಗೊಂಡಿದೆ)

ಸ್ವೀಕರಿಸುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಸಂಸ್ಥೆಗಳಿಗೆ ಪರಿಣಾಮಕಾರಿಯಾದ ತಕ್ಷಣದ ಹಂಚಿಕೆ ಮತ್ತು ಸುವ್ಯವಸ್ಥಿತ ವಿತರಣೆಯ ಪ್ರಕ್ರಿಯೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನಿಯಮಿತವಾಗಿ ಸಮಗ್ರ ಮೇಲ್ವಿಚಾರಣೆ ಮಾಡುತ್ತಿದೆ. ವಿದೇಶಗಳಿಂದ ಬರುವ ಅನುದಾನದ ಕೋವಿಡ್ ಪರಿಹಾರ ಸಾಮಗ್ರಿ ಮತ್ತು ನೆರವು ಹಾಗೂ ದೇಣಿಗೆಯನ್ನು ಸ್ವೀಕರಿಸಲು ಮತ್ತು ಹಂಚಿಕೆ ಮಾಡುವ ಸಹಯೋಗಕ್ಕಾಗಿ ಸಮರ್ಪಿತ ಸಮನ್ವಯ ಕೋಶವನ್ನು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ರಚಿಸಲಾಗಿದೆ. ಕೋಶ 2021 ಏಪ್ರಿಲ್ 26ರಿಂದ ಕಾರ್ಯಾರಂಭ ಮಾಡಿದೆ. ಇದಕ್ಕಾಗಿ ಆರೋಗ್ಯ ಸಚಿವಾಲಯದಿಂದ ಕಾರ್ಯಾಚರಣೆಯ ಮಾನದಂಡ ಪ್ರಕ್ರಿಯೆಯನ್ನು (ಎಸ್..ಪಿ.) ರೂಪಿಸಿ, 2021 ಮೇ 2ರಿಂದ ಅನುಷ್ಠಾನಗೊಳಿಸಲಾಗಿದೆ.

ಚಿತ್ರ 1.  ಪ್ರತಿ ನಿಮಿಷಕ್ಕೆ 500 ಲೀಟರ್ ಉತ್ಪಾದಿಸುವ ಸಾಮರ್ಥ್ಯದ ಯುಕೆಯಿಂದ ಬಂದ ಆಕ್ಸಿಜನ್ ಜನರೇಟರ್ ಅನ್ನು ಕಳೆದ ರಾತ್ರಿ ದೆಹಲಿಯಿಂದ ಅಸ್ಸಾಂನ ಚಿರಾಂಗ್ ಗೆ ರೈಲಿನ ಮೂಲಕ ರವಾನಿಸಲಾಯಿತು.

ಚಿತ್ರ.2. ಕುವೇತ್ ನಿಂದ ಬಂದ 50 ಮೆಟ್ರಿಕ್ ಟನ್ ದ್ರವೀಯ ಆಕ್ಸಿಜನ್ ಒಳಗೊಂಡ 2 .ಎಸ್.. ಆಕ್ಸಿಜನ್ ಟ್ಯಾಂಕ್ ಗಳು, 200 ಆಕ್ಸಿಜನ್ ಸಿಲಿಂಡರ್ ಗಳು ಮತ್ತು 4 ಉನ್ನತ  ಹರಿವಿನ ಆಕ್ಸಿಜನ್ ಸಾಂಧ್ರಕಗಳನ್ನು ಕಳೆದ ಸಂಜೆ .ಎನ್.ಎಸ್. ಕೋಲ್ಕತ್ತಾ ಮೂಲಕ ವಿವಿಧ ರಾಜ್ಯಗಳಿಗೆ ವಿತರಿಸಲು ಮಂಗಳೂರು ಬಂದರಿಗೆ ತರಲಾಯಿತು

ಚಿತ್ರ 3. ಸಿಂಗಾಪೂರದಿಂದ .ಎನ್.ಎಸ್. ಐರಾವತದ ಮೂಲಕ ಕಳೆದ ಸಂಜೆ 3600 ಆಕ್ಸಿಜನ್ ಸಿಲಿಂಡರ್ ಗಳನ್ನು ಒಳಗೊಂಡ ವೈದ್ಯಕೀಯ ಪರಿಹಾರಗಳನ್ನು ವಿವಿಧ ರಾಜ್ಯಗಳಿಗೆ ವಿತರಿಸಲು ವಿಶಾಖಪಟ್ಟಣಂ ಬಂದರಿಗೆ ತರಲಾಯಿತು.

***



(Release ID: 1717789) Visitor Counter : 243