ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಐರೋಪ್ಯ ಒಕ್ಕೂಟ ನಾಯಕರ ಸಭೆ(ಮೇ 08,2021)

Posted On: 06 MAY 2021 6:11PM by PIB Bengaluru

      ಐರೋಪ್ಯ ಒಕ್ಕೂಟ ಮಂಡಳಿಯ ಅಧ್ಯಕ್ಷರಾದ ಶ್ರೀ ಚಾರ್ಲ್ಸ್ ಮೈಕೆಲ್ ಅವರ ಆಹ್ವಾನದ ಮೇರೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಮೇ 08ರಂದು ನಡೆಯಲಿರುವ ಐರೋಪ್ಯ ಮಂಡಳಿಯ ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಭಾರತ – ಐರೋಪ್ಯ ಒಕ್ಕೂಟ ನಾಯಕರ ಸಭೆಯನ್ನು ಪೋರ್ಚುಗಲ್ ನ ಪ್ರಧಾನಮಂತ್ರಿ ಶ್ರೀ ಆಂಟೋನಿಯೋ ಕೋಸ್ಟಾ ಅವರು ಆಯೋಜಿಸಿದ್ದಾರೆ. ಪೋರ್ಚುಗಲ್ ಸದ್ಯ ಐರೋಪ್ಯ ಒಕ್ಕೂಟ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ.

          ಪ್ರಧಾನಮಂತ್ರಿ ಅವರು ಐರೋಪ್ಯ ಒಕ್ಕೂಟದ ಎಲ್ಲಾ 27 ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ಅಥವಾ ಸರ್ಕಾರದ ಪ್ರತಿನಿಧಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ವರ್ಷದ ಮಾರ್ಚ್ ವರೆಗೆ ಅಮೆರಿಕ ಅಧ್ಯಕ್ಷತೆ ವಹಿಸಿದ್ದಾಗ, ಇಯು + 27 ಮಾದರಿಯಲ್ಲಿ ಒಮ್ಮೆ ಮಾತ್ರ ಭೇಟಿ ಮಾಡಲಾಗಿತ್ತು. ನಾಯಕರು ಕೋವಿಡ್-19 ಸಾಂಕ್ರಾಮಿಕ ಸ್ಥಿತಿಗತಿ ಮತ್ತು ಆರೋಗ್ಯ ರಕ್ಷಣೆಯ ಸಹಕಾರ; ಸುಸ್ಥಿರ ಮತ್ತು ಸಮಗ್ರ ಪ್ರಗತಿ; ಭಾರತ – ಐರೋಪ್ಯ ಒಕ್ಕೂಟದ ಪಾಲುದಾರಿಕೆ ಬಲವರ್ಧನೆ ಸೇರಿದಂತೆ ಪರಸ್ಪರ ಹಿತಾಸಕ್ತಿಯ ಹಲವು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತಂತೆ ವಿಚಾರ ವಿನಿಮಯ ನಡೆಸಲಿದ್ದಾರೆ.

ಭಾರತ – ಐರೋಪ್ಯ ಒಕ್ಕೂಟದ ನಾಯಕರ ಈ ಸಭೆ ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳ ನಡುವಿನ ಸಮಾಲೋಚನೆಗೆ ಒಂದು ಅನಿರೀಕ್ಷಿತ ಅವಕಾಶವಾಗಿದೆ. ಇದು ರಾಜಕೀಯವಾಗಿ ಅತ್ಯಂತ ಮಹತ್ವದ ಮೈಲಿಗಲ್ಲಾಗಲಿದೆ ಮತ್ತು 2020ರ ಜುಲೈನಲ್ಲಿ ನಡೆದ 15ನೇ ಭಾರತ – ಐರೋಪ್ಯ ಒಕ್ಕೂಟದ ಶೃಂಗಸಭೆಯ ನಂತರ ಸಂಬಂಧವೃದ್ಧಿಗೆ ಇದು ವೇಗಕ್ಕೆ ಇದು ಸಾಕ್ಷಿಯಾಗಲಿದೆ.  

****
 


(Release ID: 1716648) Visitor Counter : 194