ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ದೇಶದಲ್ಲಿ ರೆಮ್‌ಡೆಸಿವಿರ್‌ ಉತ್ಪಾದನೆಯಲ್ಲಿ ಮೂರು ಪಟ್ಟು ಹೆಚ್ಚಳ - ಶ್ರೀ ಮನ್ಸುಖ್ ಮಾಂಡವೀಯ


ರೆಮ್‌ಡೆಸಿವಿರ್ ಉತ್ಪಾದಿಸುವ ಘಟಗಳ ಸಂಖ್ಯೆಯೂ ಮೂರು ಪಟ್ಟು ಹೆಚ್ಚಾಗಿದೆ

Posted On: 04 MAY 2021 1:43PM by PIB Bengaluru

ದೇಶದಲ್ಲಿ ರೆಮ್‌ಡೆಸಿವಿರ್‌ ಉತ್ಪಾದನೆಯನ್ನು ತ್ವರಿತ ಗತಿಯಲ್ಲಿ ಹೆಚ್ಚಿಸಲಾಗುತ್ತಿದೆ.  ಕೆಲವೇ ದಿನಗಳಲ್ಲಿ ಭಾರತವು ರೆಮ್‌ಡೆಸಿವಿರ್‌ ಉತ್ಪಾದನಾ ಸಾಮರ್ಥ್ಯದಲ್ಲಿ 3 ಪಟ್ಟು ಹೆಚ್ಚಳವನ್ನು ಸಾಧಿಸಿದೆ ಮತ್ತು ಶೀಘ್ರದಲ್ಲೇ ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಸಾಧ್ಯವಾಗಲಿದೆ. ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಶ್ರೀ ಮನ್ ಸುಖ್ ಮಾಂಡವಿಯಾ ಅವರು ಇಂದು ಈ ವಿಷಯ ಪ್ರಕಟಿಸಿದ್ದಾರೆ.

 

2021ರ ಏಪ್ರಿಲ್ 12ರಂದು 37 ಲಕ್ಷ  ದಷ್ಟಿದ್ದ ಉತ್ಪಾದನೆಯು 2021ರ ಮೇ 4ರಂದು 1.05 ಕೋಟಿಗೆ ಏರಿದೆ.

ಬೇಡಿಕೆ ಹೆಚ್ಚಳದ ಹಿನ್ನೆಲೆಯಲ್ಲಿ, ರೆಮ್‌ಡೆಸಿವಿರ್‌ ಉತ್ಪಾದಿಸುವ ಘಟಕಗಳ ಸಂಖ್ಯೆಯೂ ಹೆಚ್ಚಾಗಿದ್ದು, 12 ಏಪ್ರಿಲ್ 2021 ರಂದು 20ರಷ್ಟಿದ್ದ ಘಟಕಗಳ ಸಂಖ್ಯೆ 4 ಮೇ 2021 ರಂದು 57ಕ್ಕೆ ಏರಿದೆ.

 

ಕೊರೊನಾ ವಿರುದ್ಧ ಹೋರಾಟದಲ್ಲಿ ಭಾರತ ಸರಕಾರ ತನ್ನ ಅವಿರತ ಪ್ರಯತ್ನಗಳನ್ನು ಮುಂದುವರಿಸಿದೆ.

***


(Release ID: 1715926) Visitor Counter : 262