ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಅಂತರರಾಷ್ಟ್ರೀಯ ವ್ಯಾಪಾರ ಸಂಬಂಧಿ ಸಮಸ್ಯೆಗಳಿಗಾಗಿ ಡಿಜಿಎಫ್‌ಟಿ ಯ ‘ಕೋವಿಡ್ -19 ಸಹಾಯವಾಣಿ’ ಕಾರ್ಯಾರಂಭ

Posted On: 26 APR 2021 11:58AM by PIB Bengaluru

ದೇಶದಲ್ಲಿ ಕೋವಿಡ್ -19 ಪ್ರಕರಣಗಳು ಉಲ್ಬಣಿಸುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ರಫ್ತು ಮತ್ತು ಆಮದಿನ ಸ್ಥಿತಿಗತಿಗಳು ಹಾಗೂ ವ್ಯಾಪಾರ ಪಾಲುದಾರರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಕೇಂದ್ರ ವಾಣಿಜ್ಯ ಇಲಾಖೆ ಮತ್ತು ವಿದೇಶಿ ವ್ಯಾಪಾರ ನಿರ್ದೇಶನಾಲಯ (ಡಿಜಿಎಫ್ಟಿ) ಮೇಲ್ವಿಚಾರಣೆ ಮಾಡಲು ನಡೆಸಲಿವೆ. ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಸಮಸ್ಯೆಗಳಿಗೆ ಸೂಕ್ತ ಪರಿಹಾರಗಳನ್ನು ಪತ್ತೆ ಮಾಡಲು  ಮತ್ತು ಒದಗಿಸಲು ಡಿಜಿಎಫ್ಟಿಯುಕೋವಿಡ್ -19 ಸಹಾಯವಾಣಿಯನ್ನು ಆರಂಭಿಸಿದೆ.

ಕೋವಿಡ್ -19 ಸಹಾಯವಾಣಿಯು ವಾಣಿಜ್ಯ ಇಲಾಖೆ / ಡಿಜಿಎಫ್ಟಿ, ಆಮದು ಮತ್ತು ರಫ್ತು ಪರವಾನಗಿ ಸಮಸ್ಯೆಗಳು, ಕಸ್ಟಮ್ಸ್ ಅನುಮತಿಯಲ್ಲಿನ ವಿಳಂಬಗಳು ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳು, ಆಮದು / ರಫ್ತು ದಸ್ತಾವೇಜು ಸಮಸ್ಯೆಗಳು, ಬ್ಯಾಂಕಿಂಗ್ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸುತ್ತದೆ. ಹೆಲ್ಪ್ಡೆಸ್ಕ್ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಇತರ ಸಚಿವಾಲಯಗಳು / ಇಲಾಖೆಗಳು / ಏಜೆನ್ಸಿಗಳ ವ್ಯಾಪಾರಕ್ಕೆ ಸಂಬಧಿಸಿದ ವಿಷಯಗಳಲ್ಲೂ ಅವುಗಳ ಬೆಂಬಲವನ್ನು ಪಡೆಯಲು ಮತ್ತು ಸಂಭಾವ್ಯ ತೀರ್ಮಾನ ಒದಗಿಸಲು ಸಹಕರಿಸುತ್ತದೆ.

ಎಲ್ಲಾ ಪಾಲುದಾರರು, ವಿಶೇಷವಾಗಿ ರಫ್ತು ಮತ್ತು ಆಮದುದಾರರು, ಡಿಜಿಎಫ್ಟಿ ವೆಬ್ಸೈಟ್ನಲ್ಲಿ ಮಾಹಿತಿಯನ್ನು ಸಲ್ಲಿಸಬಹುದು ಮತ್ತು ಕೆಳಗಿನ ಹಂತಗಳನ್ನು ಬಳಸಿಕೊಂಡು ತಮಗೆ ಅಗತ್ಯವಿರುವ ನೆರವು ಕುರಿತು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಲ್ಲಿಸಬಹುದು.

  1. ಡಿಜಿಎಫ್ಟಿ ವೆಬ್ಸೈಟ್ಗೆ ಭೇಟಿ ನೀಡಿ https://ci4.googleusercontent.com/proxy/myQVxACJaXWcWuBNkeCMUVuaGNuMVqFZKQijjwlsCRYU-he_CYm5vIeK3aJAcPLHKflr-GB8n_PKyyHc7Giuajsfy8kMEnDRhKroK9uWktPavSjn76G_7QQqhw=s0-d-e1-ft#https://static.pib.gov.in/WriteReadData/userfiles/image/image001DUDX.png (https://dgft.gov.in) ಸೇವೆಗಳು https://ci4.googleusercontent.com/proxy/myQVxACJaXWcWuBNkeCMUVuaGNuMVqFZKQijjwlsCRYU-he_CYm5vIeK3aJAcPLHKflr-GB8n_PKyyHc7Giuajsfy8kMEnDRhKroK9uWktPavSjn76G_7QQqhw=s0-d-e1-ft#https://static.pib.gov.in/WriteReadData/userfiles/image/image001DUDX.pngಡಿಜಿಎಫ್ಟಿ https://ci4.googleusercontent.com/proxy/myQVxACJaXWcWuBNkeCMUVuaGNuMVqFZKQijjwlsCRYU-he_CYm5vIeK3aJAcPLHKflr-GB8n_PKyyHc7Giuajsfy8kMEnDRhKroK9uWktPavSjn76G_7QQqhw=s0-d-e1-ft#https://static.pib.gov.in/WriteReadData/userfiles/image/image001DUDX.png ಸಹಾಯವಾಣಿ ಸೇವೆ
  2. ಹೊಸ ವಿನಂತಿಯನ್ನು ಸೃಷ್ಟಿಸಿ’  ಮತ್ತುಕೋವಿಡ್ -19’ ಎಂದು ಆಯ್ಕೆ ಮಾಡಿ
  3. ಸೂಕ್ತವಾದ ಉಪ-ವರ್ಗವನ್ನು ಆಯ್ಕೆ ಮಾಡಿ, ಸಂಬಂಧಿತ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ.

ಇದಲ್ಲದೇ, ಸಮಸ್ಯೆಗಳನ್ನು ಕೋವಿಡ್ -19 ಹೆಲ್ಪ್ಡೆಸ್ಕ್ ವಿಷಯ ಶೀರ್ಷಿಕೆಯೊಂದಿಗೆ dgftedi[at]nic[dot]in ಇಮೇಲ್ ಐಡಿಗೂ ಕಳುಹಿಸಬಹುದು ಅಥವಾ ಟೋಲ್ ಫ್ರೀ ಸಂಖ್ಯೆ 1800-111-550ಕ್ಕೆ ಕರೆ ಮಾಡಬಹುದು.

ನಿರ್ಧಾರಗಳು ಮತ್ತು ಫೀಡ್ ಬ್ಯಾಕ್ ಸ್ಥಿತಿಗತಿಯನ್ನು ಡಿಜಿಎಫ್ಟಿ ಸಹಾಯವಾಣಿ ಸೇವೆಗಳ ಅಡಿಯಲ್ಲಿ ಸ್ಥಿತಿಗತಿ ಟ್ರ್ಯಾಕರ್ ಬಳಸಿ ನೋಡಬಹುದು. ಇದಕ್ಕೆ ಸಂಬಂಧಿಸಿದಂತೆ ಇಮೇಲ್ ಮತ್ತು ಎಸ್ಎಂಎಸ್  ಸಹ ಕಳುಹಿಸಲಾಗುತ್ತದೆ.

***



(Release ID: 1714141) Visitor Counter : 270