ಪ್ರಧಾನ ಮಂತ್ರಿಯವರ ಕಛೇರಿ

ನಾಗರಿಕ ಸೇವಾ ದಿನದ ಅಂಗವಾಗಿ ನಾಗರಿಕ ಸೇವಾ ಸಿಬ್ಬಂದಿಗೆ ಶುಭ ಕೋರಿದ ಪ್ರಧಾನಮಂತ್ರಿ

प्रविष्टि तिथि: 21 APR 2021 9:19AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ನಾಗರಿಕ ಸೇವಾ ದಿನದ ಅಂಗವಾಗಿ ಎಲ್ಲ ನಾಗರಿಕ ಸೇವಾ ಸಿಬ್ಬಂದಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಶ್ರೀ ನರೇಂದ್ರ ಮೋದಿ ಅವರು ತಮ್ಮ ಟ್ವೀಟ್ ಸಂದೇಶದಲ್ಲಿ ನಾಗರಿಕ ಸೇವಾ ದಿನದ ಅಂಗವಾಗಿ ಎಲ್ಲ ನಾಗರಿಕ ಸೇವಾ ಸಿಬ್ಬಂದಿಗೆ ನನ್ನ ಶುಭಾಶಯಗಳು. ನಾನಾ ವಲಯಗಳಲ್ಲಿ ಮತ್ತು ನಾನಾ ಪ್ರದೇಶಗಳಲ್ಲಿ ನಾಗರಿಕ ಸೇವಾ ಸಿಬ್ಬಂದಿ ನಮ್ಮ ಪ್ರಜೆಗಳಿಗೆ ಸಹಾಯ ಮಾಡಲು  ಮತ್ತು ರಾಷ್ಟ್ರದ ಪ್ರಗತಿಗೆ ಅಹರ್ನಿಶಿ ದುಡಿಯುತ್ತಿದ್ದಾರೆ. ಅದೇ ಸ್ಫೂರ್ತಿಯೊಂದಿಗೆ ಅವರು ರಾಷ್ಟ್ರಕ್ಕೆ ಸಲ್ಲಿಸುತ್ತಿರುವ ಸೇವೆ ಮುಂದುವರಿಸಲಿಎಂದು ಆಶಿಸಿದ್ದಾರೆ.

***


(रिलीज़ आईडी: 1713220) आगंतुक पटल : 380
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Manipuri , Bengali , Punjabi , Gujarati , Odia , Tamil , Telugu , Malayalam