ಪ್ರಧಾನ ಮಂತ್ರಿಯವರ ಕಛೇರಿ

ಭಾರತ-ಸೆಶೆಲ್ಸ್ ಉನ್ನತ ಮಟ್ಟದ ವರ್ಚುವಲ್ ಕಾರ್ಯಕ್ರಮ (ಏಪ್ರಿಲ್ 08, 2021)ದಲ್ಲಿ ಪ್ರಧಾನ ಮಂತ್ರಿ ಅವರ ಪ್ರತಿಕ್ರಿಯೆ

Posted On: 08 APR 2021 6:53PM by PIB Bengaluru

ಸೆಶೆಲ್ಸ್ ಗಣತಂತ್ರದ ಅಧ್ಯಕ್ಷರಾದ ಗೌರವಾನ್ವಿತ ವಾವೆಲ್ ರಾಮಕಲಾವಾನ್ ಜೀ

ಗೌರವಾನ್ವಿತ ಗಣ್ಯರೇ,

ನಮಸ್ಕಾರ

ಅಧ್ಯಕ್ಷರಾದ ರಾಮಕಲಾವಾನ್ ಜೀ ಅವರಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುವುದರೊಂದಿಗೆ ಆರಂಭ ಮಾಡುತ್ತೇನೆ. ಅವರು ಭಾರತ ಮಾತೆಯ ಪುತ್ರರು, ಅವರ ಬೇರುಗಳು ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿವೆ. ಇಂದು ಅವರ ಗ್ರಾಮವಾದ ಪರಸೌನಿಯ ಜನತೆ ಮಾತ್ರವಲ್ಲ, ಇಡೀ ಭಾರತದ ಜನತೆ ಅವರ ಸಾಧನೆಯ ಬಗ್ಗೆ ಹೆಮ್ಮೆಪಡುತ್ತಾರೆ. ಅಧ್ಯಕ್ಷರಾಗಿ ಅವರ ಆಯ್ಕೆ ಸೆಶೆಲ್ಸ್ ಜನತೆ ಅವರ ಸಾರ್ವಜನಿಕ ಸೇವಾ ಕ್ಷೇತ್ರಕ್ಕೆ ಅರ್ಪಣಾಭಾವದ ದುಡಿಮೆಯಲ್ಲಿ ಇಟ್ಟ ನಂಬಿಕೆಯನ್ನು ತೋರಿಸುತ್ತದೆ.

ಸ್ನೇಹಿತರೇ,

ನಾನು 2015ರಲ್ಲಿ ಸೆಶೆಲ್ಸ್ ಗೆ ನೀಡಿದ ಭೇಟಿಯನ್ನು ಸಂತೋಷದಿಂದ ನೆನಪಿಸಿಕೊಳ್ಳುತ್ತೇನೆ. ಭಾರತೀಯ ಸಾಗರ ವಲಯದ ದೇಶಗಳಿಗೆ ನನ್ನ ಪ್ರವಾಸದ ಮೊದಲ ತಾಣ ಸೆಶೆಲ್ಸ್ ಆಗಿತ್ತು. ಭಾರತ ಮತ್ತು ಸೆಶೆಲ್ಸ್ ಗಳು ಭಾರತೀಯ ಸಾಗರ ನೆರೆ ಹೊರೆಯ ದೇಶಗಳಲ್ಲಿ ಬಲಿಷ್ಟವಾದ ಮತ್ತು ಉಲ್ಲಾಸದ ಸಹಭಾಗಿತ್ವವನ್ನು ಹಂಚಿಕೊಂಡಿವೆ.

ಭಾರತದಸಾಗರಚಿಂತನೆಯಲ್ಲಿ ಸೆಶೆಲ್ಸ್ ಕೇಂದ್ರದಲ್ಲಿದೆ. ಸಾಗರ್ ಅಂದರೆ ಪ್ರಾದೇಶಿಕ ವಲಯದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ”. ಸೆಶೆಲ್ಸ್ ಭದ್ರತಾ ಸಾಮರ್ಥ್ಯ ಅಭಿವೃದ್ಧಿ ಮತ್ತು ಅದರ ಮೂಲಸೌಕರ್ಯ ಹಾಗು ಅಭಿವೃದ್ಧಿ ಆವಶ್ಯಕತೆಗಳನ್ನು ಈಡೇರಿಸಲು ಭಾರತವು ಸಹಭಾಗಿಯಾಗುವ ಮನ್ನಣೆಯನ್ನು ಪಡೆದುಕೊಂಡಿದೆ. ನಮ್ಮ ಬಾಂಧವ್ಯದಲ್ಲಿ ಇಂದಿನ ದಿನ ಮಹತ್ವದ ಮೈಲಿಗಲ್ಲು. ನಮ್ಮ ಅಭಿವೃದ್ಧಿಯ ಸಹಭಾಗಿತ್ವದಲ್ಲಿ ಪೂರ್ಣಗೊಂಡ ಹಲವಾರು  ಹೊಸ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸುವುದಕ್ಕೆ ನಾವು ಜೊತೆಗೂಡಿದ್ದೇವೆ.

ಸ್ನೇಹಿತರೇ,

ಎಲ್ಲಾ ಗಣತಂತ್ರವಾದಿ ರಾಷ್ಟ್ರಗಳಿಗೂ ಮುಕ್ತ, ಸ್ವತಂತ್ರ ಮತ್ತು ದಕ್ಷ ನ್ಯಾಯಾಂಗ ವ್ಯವಸ್ಥೆ ಬಹಳ ಮುಖ್ಯ. ನಾವು ಸೆಶೆಲ್ಸ್ ಹೊಸ ಮ್ಯಾಜಿಸ್ಟ್ರೇಟರ ನ್ಯಾಯಾಲಯದ ಕಟ್ಟಡ ನಿರ್ಮಾಣ ಮಾಡಲು ಕೊಡುಗೆ ನೀಡಿದ್ದೇವೆ ಎಂಬುದು ನಮಗೆ ಸಂತೋಷದ ಸಂಗತಿ. ಅತ್ಯಾಧುನಿಕ ಕಟ್ಟಡ ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ಕಠಿಣ ಪರೀಕ್ಷಾ ಸಮಯದಲ್ಲಿಯೂ ಪೂರ್ಣಗೊಂಡಿದೆ. ನನಗೆ ಖಾತ್ರಿ ಇದೆ, ಇದು ನಮ್ಮ ಆಳವಾದ ಮತ್ತು ಪರಸ್ಪರ ಶಾಶ್ವತವಾದ ಗೆಳೆತನಕ್ಕೆ ಸಂಕೇತವಾಗಿ ಬಹಳ ದೀರ್ಘ ಕಾಲ ನೆನಪಿನಲ್ಲುಳಿಯುತ್ತದೆ ಎಂಬುದಾಗಿ.

ಅಭಿವೃದ್ಧಿ ಸಹಕಾರದಲ್ಲಿ ಭಾರತವು ಸದಾ ಮಾನವ ಕೇಂದ್ರಿತ ಧೋರಣೆಯಲ್ಲಿ ನಂಬಿಕೆ ಇಟ್ಟಿದೆ. ತತ್ವಜ್ಞಾನ ಇಂದು ಉದ್ಘಾಟನೆಯಾಗುತ್ತಿರುವ ಹತ್ತು ಉನ್ನತ ಪರಿಣಾಮ ಬೀರುವ ಸಮುದಾಯ ಅಭಿವೃದ್ಧಿ ಯೋಜನೆಗಳಲ್ಲಿ ಪ್ರತಿಬಿಂಬಿತವಾಗಿದೆ. ಯೋಜನೆಗಳು ಸೆಶೆಲ್ಸ್ ನಾದ್ಯಂತ ಹರಡಿರುವ ಸಮುದಾಯಗಳ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತರಲಿವೆ.

ಸ್ನೇಹಿತರೇ,

ಭಾರತವು ಸೆಶೆಲ್ಸ್ ನಾವಿಕ ಭದ್ರತೆಯನ್ನು ಬಲಪಡಿಸಲು ಬದ್ಧವಾಗಿದೆ. ಇಂದು ನಾವು ಹೊಸ, ಅತ್ಯಾಧುನಿಕ, ಭಾರತೀಯ ನಿರ್ಮಿತ, ತ್ವರಿತ ಗತಿಯ ಗಸ್ತು ನೌಕೆಯನ್ನು ಸೆಶೆಲ್ಸ್ ಕರಾವಳಿ ಗಸ್ತು ಪಡೆಗೆ ಹಸ್ತಾಂತರಿಸುತ್ತಿದ್ದೇವೆ. ನೌಕೆಯು ಸೆಶೆಲ್ಸ್ ಗೆ ತನ್ನ ನಾವಿಕ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

ವಾತಾವರಣ ಬದಲಾವಣೆಯು ದ್ವೀಪ ರಾಷ್ಟ್ರಗಳಿಗೆ ಹೆಚ್ಚಿನ ಬೆದರಿಕೆಯನ್ನು ಒಡ್ಡುತ್ತಿದೆ. ಆದುದರಿಂದ, ನಾವಿಂದು ಸೆಶೆಲ್ಸ್ ಗೆ ಭಾರತದ ಸಹಕಾರದಿಂದ ನಿರ್ಮಿತವಾದ ಒಂದು ಮೆಗಾವಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರವನ್ನು ಹಸ್ತಾಂತರಿಸುತ್ತಿದ್ದೇವೆ. ಎಲ್ಲಾ ಯೋಜನೆಗಳೂ ಸೆಶೆಲ್ಸ್ ಅಭಿವೃದ್ಧಿಯ ಆದ್ಯತೆಗಳನ್ನು ಪ್ರತಿನಿಧಿಸುತ್ತವೆ. ಮತ್ತು ಅವು ಪ್ರಕೃತಿಯ ಬಗ್ಗೆ ಕಾಳಜಿಯೊಂದಿಗೆ ಬೆಳವಣಿಗೆ ಸಾಧಿಸುವ ಗುರಿಯನ್ನು ಹೊಂದಿವೆ.

ಸ್ನೇಹಿತರೇ,

ಕೋವಿಡ್ ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಅದರ ವಿರುದ್ಧದ ಹೋರಾಟದಲ್ಲಿ ಭಾರತವು ಸೆಶೆಲ್ಸ್ ನೊಂದಿಗೆ ಬಲಿಷ್ಟ ಭಾಗೀದಾರನ ಪಾತ್ರದ ಗೌರವವನ್ನು ಹೊಂದಿದೆ. ಅಗತ್ಯದ ಸಂದರ್ಭಗಳಲ್ಲಿ, ನಾವು ಅವಶ್ಯ ಔಷಧಿಗಳನ್ನು ಮತ್ತು 50,000 ಡೋಸಿನಷ್ಟುಭಾರತೀಯ ನಿರ್ಮಿತಲಸಿಕೆಯನ್ನು ಸೆಶೆಲ್ಸ್ ಗೆ ಪೂರೈಸಲು ಸಮರ್ಥರಾಗಿದ್ದೇವೆ. “ಭಾರತ ನಿರ್ಮಿತಕೋವಿಡ್ -19 ಲಸಿಕೆಯನ್ನು ಪಡೆದ ಆಫ್ರಿಕನ್ ದೇಶಗಳಲ್ಲಿ ಸೆಶೆಲ್ಸ್ ರಾಷ್ಟ್ರ ಮೊದಲನೆಯದ್ದು. ಸೆಶೆಲ್ಸ್ ಕೋವಿಡೋತ್ತರ ಆರ್ಥಿಕ ಪುನಶ್ಚೇತನ ಪ್ರಯತ್ನಗಳಲ್ಲಿ ಭಾರತವು ನಿರಂತರವಾಗಿ ಮತ್ತು ದೃಢವಾಗಿ ಅದರೊಂದಿಗಿರುತ್ತದೆ ಎಂಬ ಭರವಸೆಯನ್ನು ನಾನು  ಅಧ್ಯಕ್ಷ ರಾಮಕಲಾವಾನ್ ಜೀ ಅವರಿಗೆ ನೀಡಲು ಬಯಸುತ್ತೇನೆ.

ಸ್ನೇಹಿತರೇ,

ಭಾರತ-ಸೆಶೆಲ್ಸ್ ಗೆಳೆತನ ನಿಜವಾಗಿಯೂ ವಿಶೇಷವಾದುದು. ಮತ್ತು ಭಾರತವು ಬಾಂಧವ್ಯದ ಬಗ್ಗೆ ಭಾರೀ ಹೆಮ್ಮೆಯನ್ನು ಹೊಂದಿದೆ. ಅಧ್ಯಕ್ಷ ರಾಮಕಲಾವಾನ್ ಜೀ ಅವರಿಗೆ ಮತ್ತು ಸೆಶೆಲ್ಸ್ ಜನತೆಗೆ ಮತ್ತೊಮ್ಮೆ ನನ್ನ ಶುಭ ಹಾರೈಕೆಗಳು.

ನಿಮಗೆ ಧನ್ಯವಾದಗಳು

ನಿಮಗೆ ಬಹಳ ಬಹಳ ಧನ್ಯವಾದಗಳು

ನಮಸ್ತೆ.

***


(Release ID: 1710589) Visitor Counter : 207