ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಮಹಾರಾಷ್ಟ್ರ, ಛತ್ತೀಸಗಢ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಪಂಜಾಬ್ ಮತ್ತು ಮಧ್ಯಪ್ರದೇಶಗಳಲ್ಲಿ ಅಧಿಕ ದೈನಿಕ ಹೊಸ ಪ್ರಕರಣಗಳ ವರದಿ
ದೇಶದಾದ್ಯಂತ 6.3 ಕೋಟಿಗೂ ಅಧಿಕ ಲಸಿಕೆ ನೀಡಿಕೆ
Posted On:
31 MAR 2021 12:12PM by PIB Bengaluru
ಮಹಾರಾಷ್ಟ್ರ, ಛತ್ತೀಸಗಢ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್, ಪಂಜಾಬ್ ಮತ್ತು ಮಧ್ಯಪ್ರದೇಶ ಈ ಎಂಟು ರಾಜ್ಯಗಳಲ್ಲಿ ಕೋವಿಡ್ ದೈನಿಕ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಈ 8 ರಾಜ್ಯಗಳಲ್ಲಿ ಶೇ.84.73ರಷ್ಟು ಹೊಸ ಪ್ರಕರಣಗಳು ವರದಿಯಾಗಿವೆ.
53,480 ಹೊಸ ಪ್ರಕರಣಗಳು ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾಗಿವೆ.
ಮಹಾರಾಷ್ಟ್ರ 27,918 ಅತಿ ಹೆಚ್ಚು ದೈನಿಕ ಹೊಸ ಪ್ರಕರಣಗಳನ್ನು ದಾಖಲಿಸಿದ್ದರೆ, ಛತ್ತೀಸಗಢ 3,,108, ಕರ್ನಾಟಕದಲ್ಲಿ 2,975 ಹೊಸ ಪ್ರಕರಣ ವರದಿಯಾಗಿವೆ.
ಈ ಕೆಳಗಿನ ಹತ್ತು ರಾಜ್ಯಗಳಲ್ಲಿ, ದೈನಂದಿನ ಹೊಸ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದೆ.
ಭಾರತದ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 5,52,566 ತಲುಪಿದೆ. ಇದು ದೇಶದಲ್ಲಿ ಒಟ್ಟು ದಾಖಲಾಗಿರುವ ಸೋಂಕಿನ ಪ್ರಕರಣಗಳ ಶೇ.4.55ರಷ್ಟಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ನಿವ್ವಳ 11,846 ಪ್ರಕರಣಗಳ ಹೆಚ್ಚಳ ದಾಖಲಾಗಿದೆ.
ಐದು ರಾಜ್ಯಗಳು ಅಂದರೆ ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಂಜಾಬ್ ಮತ್ತು ಛತ್ತೀಸಗಢಗಳಲ್ಲಿ ದೇಶದ ಒಟ್ಟಾರೆ ಸಕ್ರಿಯ ಪ್ರಕರಣಗಳ ಶೇ.79.30ಯಷ್ಟು ಪ್ರಕರಣಗಳಿವೆ. ಮಹಾರಾಷ್ಟ್ರ ಶೇ.61ರಷ್ಟು ಸಕ್ರಿಯ ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದೆ.
ಮತ್ತೊಂದೆಡೆ, ಇಂದು ಬೆಳಗ್ಗೆ 7 ಗಂಟೆವರೆಗೆ ಲಭ್ಯವಿರುವ ತಾತ್ಕಾಲಿಕ ಮಾಹಿತಿಯಂತೆ 6.30 ಕೋಟಿಗೂ ಅಧಿಕ (6,30,54,353) ಲಸಿಕೆಯ ಡೋಸ್ ಗಳನ್ನು 10,46,757 ಸೆಷೆನ್ಸ್ ಗಳ ಮೂಲಕ ನೀಡಲಾಗಿದೆ. ಇದರಲ್ಲಿ 82,16,239 ಎಚ್.ಸಿ.ಡಬ್ಲ್ಯು. (ಪ್ರಥಮ ಡೋಸ್), 52,19,525ಎಚ್.ಸಿ.ಡಬ್ಲ್ಯು (2ನೇ ಡೋಸ್) 90,48,417 ಎಫ್.ಎಲ್.ಡಬ್ಲ್ಯು (ಪ್ರಥಮ ಡೋಸ್) ಮತ್ತು 37,90,467 ಎಫ್.ಎಲ್.ಡಬ್ಲ್ಯು (2ನೇ ಡೋಸ್) ಸೇರಿದೆ, 73,52,957 (ಪ್ರಥಮ ಡೋಸ್) ಮತ್ತು 6,824 (2ನೇ ಡೋಸ್) ಅನ್ನು 45 ವರ್ಷ ಮತ್ತು ನಿರ್ದಿಷ್ಟ ಸಹ ಅಸ್ವಸ್ಥತೆ ಇರುವ ಫಲಾನುಭವಿಗಳು ಮತ್ತು 60 ವರ್ಷ ಮೇಲ್ಪಟ್ಟ ವಯಸ್ಸಿನ ಫಲಾನುಭವಗಳಿಗೆ 2,93,71,422 (ಪ್ರಥಮ ಡೋಸ್) ಮತ್ತು 48,502 (ಎರಡನೇ ಡೋಸ್) ನೀಡಲಾಗಿದೆ.
ಎಚ್.ಸಿ.ಡಬ್ಲ್ಯು.ಗಳು
|
ಎಫ್.ಎಲ್.ಡಬ್ಲ್ಯು.ಗಳು
|
45 ರಿಂದ <60 ವಯಸ್ಸಿನ ಸಹ ಅಸ್ವಸ್ಥತೆ ಇರುವವರು
|
60 ವರ್ಷ ಮೇಲ್ಪಟ್ಟವರು
|
ಒಟ್ಟು
|
ಪ್ರಥಮ ಡೋಸ್
|
2ನೇ ಡೋಸ್
|
ಪ್ರಥಮ ಡೋಸ್
|
2ನೇ ಡೋಸ್
|
ಪ್ರಥಮ ಡೋಸ್
|
2ನೇ ಡೋಸ್
|
ಪ್ರಥಮ ಡೋಸ್
|
2ನೇ ಡೋಸ್
|
82,16,239
|
52,19,525
|
90,48,417
|
37,90,467
|
73,52,957
|
6,824
|
2,93,71,422
|
48,502
|
6,30,54,353
|
ಲಸಿಕೆ ಅಭಿಯಾನದ 74ನೇ ದಿನದವರೆಗೆ (2021ರ ಮಾರ್ಚ್ 30), ಒಟ್ಟು 19,40,999 ಲಸಿಕೆಯ ಡೋಸ್ ಗಳನ್ನು ನೀಡಲಾಗಿದೆ. ಈ ಪೈಕಿ 17,77,637 ಫಲಾನುಭವಿಗಳು 39,666 ಸೆಷನ್ ಗಳಲ್ಲಿ 1ನೇ ಡೋಸ್ ಅನ್ನು ಮತ್ತು 1,63,632 ಫಲಾನುಭವಿಗಳು 2ನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.
ದಿನಾಂಕ: 30ನೇ ಮಾರ್ಚ್,2021
|
ಎಚ್.ಸಿ.ಡಬ್ಲ್ಯು ಗಳು
|
ಎಫ್.ಎಲ್.ಡಬ್ಲ್ಯು.ಗಳು
|
45 ರಿಂದ < 60 ವರ್ಷಗಳವರೆಗೆ ಸಹ ಅಸ್ವಸ್ಥತೆ ಇರುವವರು
|
60 ವರ್ಷ ಮೇಲ್ಪಟ್ಟವರು
|
ಒಟ್ಟು ಸಾಧನೆ
|
ಪ್ರಥಮ ಡೋಸ್
|
2ನೇ ಡೋಸ್
|
ಪ್ರಥಮ ಡೋಸ್
|
2ನೇ ಡೋಸ್
|
ಪ್ರಥಮ ಡೋಸ್
|
2ನೇ ಡೋಸ್
|
ಪ್ರಥಮ ಡೋಸ್
|
2ನೇ ಡೋಸ್
|
ಪ್ರಥಮ ಡೋಸ್
|
2ನೇ ಡೋಸ್
|
41,323
|
30,778
|
1,03,675
|
79,246
|
4,80,474
|
6,419
|
11,52,165
|
46,919
|
17,77,637
|
1,63,362
|
ಭಾರತದ ಸಂಚಿತ ಗುಣಮುಖವು ಇಂದು 1,14,34,301 ಆಗಿದೆ. ರಾಷ್ಟ್ರೀಯ ಚೇತರಿಕೆ ದರ ಶೇ. 94.11 ಆಗಿದೆ.
41,280 ಚೇತರಿಕೆ ಕಳೆದ 24 ಗಂಟೆಗಳ ಅವಧಿಯಲ್ಲಿ ದಾಖಲಾಗಿದೆ.
ಕಳೆದ 24 ಗಂಟೆಗಳಲ್ಲಿ 354 ಸಾವಿನ ಪ್ರಕರಣ ವರದಿಯಾಗಿದೆ.
ಆರು ರಾಜ್ಯಗಳಲ್ಲಿ ಶೇ.82.20ಯಷ್ಟು ಹೊಸ ಸಾವು ವರದಿಯಾಗಿದೆ. ಮಹಾರಾಷ್ಟ್ರದಲ್ಲಿ ಗರಿಷ್ಠ 139 ಮಂದಿ ಸಾವಿಗೀಡಾಗಿದ್ದಾರೆ. ಪಂಜಾಬ್ ನಲ್ಲಿ 64 ಜನರು ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಹದಿನಾಲ್ಕು ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಕೋವಿಡ್ 19 ಸಂಬಂಧಿ ಸಾವು ವರದಿಯಾಗಿಲ್ಲ. ಇವು ರಾಜಾಸ್ಥಾನ, ಅಸ್ಸಾಂ. ಒಡಿಶಾ, ಲಡಾಖ್ (ಕೇಂ.ಪ್ರ), ಡಮನ್ ಮತ್ತು ಡಿಯು ಹಾಗೂ ಡಿ ಮತ್ತು ಎನ್, ಮಣಿಪುರ, ತ್ರಿಪುರಾ, ಸಿಕ್ಕಿಂ, ಲಕ್ಷದ್ವೀಪ, ಮೇಘಾಲಯ, ಮಿಜೋರಾಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶ.
***
(Release ID: 1708683)
Visitor Counter : 246
Read this release in:
English
,
Urdu
,
Marathi
,
Hindi
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam