ಪ್ರಧಾನ ಮಂತ್ರಿಯವರ ಕಛೇರಿ

ಪರೀಕ್ಷಾ ಯೋಧರ ನವೀಕೃತ ಆವೃತ್ತಿಯನ್ನು ಪ್ರಕಟಿಸಿದ ಪ್ರಧಾನಮಂತ್ರಿ

ಪರೀಕ್ಷೆಗೆ ಹಾಜರಾಗುತ್ತಿರುವ ನಮ್ಮ ಯುವಜನರಿಗೆ ನಾವೆಲ್ಲರೂ ನೆರವಾಗೋಣ: ಪ್ರಧಾನಮಂತ್ರಿ

Posted On: 29 MAR 2021 5:47PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಪರೀಕ್ಷಾ ಯೋಧರ ನವೀಕೃತ ಆವೃತ್ತಿಯನ್ನು ಪ್ರಕಟಿಸಲು ಹರ್ಷ ವ್ಯಕ್ತಪಡಿಸಿದ್ದಾರೆ.

ಪರೀಕ್ಷಾ ಯೋಧರ ಹೊಸ ಆವೃತ್ತಿಯು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಅಮೂಲ್ಯ ಅಭಿಪ್ರಾಯಗಳಿಂದ ಸಮೃದ್ಧವಾಗಿದೆ ಎಂದು ತಿಳಿಸಿದ್ದಾರೆ.

ಪೋಷಕರು ಮತ್ತು ಶಿಕ್ಷಕರಿಗೆ ವಿಶೇಷವಾಗಿ ಆಸಕ್ತಿಯುಂಟು ಮಾಡುವ ಹೊಸ ಭಾಗಗಳನ್ನು ಇದರಲ್ಲಿ ಸೇರಿಸಲಾಗಿದೆ ಎಂದು ಅವರು ಹೇಳಿದರು.

"ಪರೀಕ್ಷೆಗೆ ಹಾಜರಾಗುತ್ತಿರುವ ನಮ್ಮ ಯುವಜನರಿಗೆ ನಾವು ನೆರವಾಗೋಣ!", ಎಂದೂ ಅವರು ಹೇಳಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು, "ಪರೀಕ್ಷಾ ಕಾಲ ಆರಂಭವಾಗಿದ್ದು, ನಾನು ಈಗ ಲಭ್ಯವಿರುವ #ExamWarriors ನವೀಕೃತ ಆವೃತ್ತಿಯನ್ನು ಬಿಡುಗಡೆ ಮಾಡಲು ಹರ್ಷಿತನಾಗಿದ್ದೇನೆ.

ಪುಸ್ತಕ ಹೊಸ ಮಂತ್ರಗಳು ಮತ್ತು ವಿಸ್ತೃತ ಶ್ರೇಣಿಯ ಆಸಕ್ತಿದಾಯಕ ಚಟುವಟಿಕೆಗಳನ್ನು ಒಳಗೊಂಡಿದೆ. ಪರೀಕ್ಷೆಗೆ ಮುನ್ನ ಒತ್ತಡರಹಿತವಾಗಿ ಉಳಿಯುವ ಅಗತ್ಯವನ್ನು ಪುಸ್ತಕ ಪುನರುಚ್ಚರಿಸುತ್ತದೆ.

ಪರೀಕ್ಷಾ ಸಿದ್ಧತೆಯನ್ನು ಒಂದು ವಿನೋದವಾಗಿ ಮಾಡುವುದು ಹೇಗೆ?

ನಾವು ಪರೀಕ್ಷೆಗೆ ಸಿದ್ಧರಾಗುವಾಗ ಮನೆಯಲ್ಲಿ ಕುಳಿತು ನಾವು ಆಸಕ್ತಿದಾಯಕವಾದ್ದನ್ನೇನಾದರೂ ಮಾಡಬಹುದೇ?

ಇದಕ್ಕೆ ಒಂದು ಪರಿಹಾರ ಇದೆ.... ನಮೋ ಆಪ್ ನಲ್ಲಿ ಎಲ್ಲಾ ಹೊಸ #ExamWarriors ಮಾದರಿ ಇದೆ.

ಇದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಅನೇಕ ಸಂವಾದಾತ್ಮಕ ಚಟುವಟಿಕೆಗಳನ್ನು ಹೊಂದಿದೆ.

#ExamWarriors ಹೊಸ ಆವೃತ್ತಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಮೌಲ್ಯಯುತ ಅಭಿಪ್ರಾಯಗಳಿಂದ ಸಮೃದ್ಧವಾಗಿದೆ.

ಪೋಷಕರು ಮತ್ತು ಶಿಕ್ಷಕರಿಗೆ ವಿಶೇಷವಾಗಿ ಆಸಕ್ತಿ ಉಂಟು ಮಾಡುವಂತಹ ಹೊಸ ಭಾಗಗಳನ್ನು ಸೇರಿಸಲಾಗಿದೆ.

ಪರೀಕ್ಷೆಗಳಿಗೆ ಹಾಜರಾಗುತ್ತಿರುವ ನಮ್ಮ ಯುವಜನರಿಗೆ ಸಹಾಯ ಮಾಡೋಣ!"

***(Release ID: 1708449) Visitor Counter : 3