ಸಂಪುಟ

ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.) 2019-20ರಡಿ ಆಗಿರುವ ಪ್ರಗತಿಯ ಬಗ್ಗೆ ಸಂಪುಟಕ್ಕೆ ವಿವರಣೆ

Posted On: 23 MAR 2021 3:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ತಾಯಂದಿರ ಮರಣ ಅನುಪಾತ (ಎಂಎಂಆರ್), ಶಿಶು ಮರಣ ಪ್ರಮಾಣ (ಐಎಂಆರ್), ಐದು ವರ್ಷದೊಳಗಿನ ಮಕ್ಕಳ ಸಾವಿನ ಪ್ರಮಾಣ (ಯು5ಎಂಆರ್) ಮತ್ತು ಒಟ್ಟು ಸಂತಾನೋತ್ಪತ್ತಿ ದರ (ಟಿಎಫ್‌.ಆರ್)ನಲ್ಲಿನ ತ್ವಿರಿತ ಕುಸಿತ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.) ಅಡಿ 2019-20ನೇ ಸಾಲಿನ ಹಣಕಾಸು ವರ್ಷದಲ್ಲಿ ಆಗಿರುವ ಪ್ರಗತಿಯ ಬಗ್ಗೆ ವಿವರ ನೀಡಲಾಯಿತು. ಟಿ.ಬಿ, ಮಲೇರಿಯಾ, ಕಾಲಾಆಜರ್, ಡೆಂಘಿ, ಕ್ಷಯ, ಕುಷ್ಟ, ಸಾಂಕ್ರಾಮಿಕ ಕಾಮಾಲೆ ಇತ್ಯಾದಿ ರೋಗಗಳ ತಡೆ ಕಾರ್ಯಕ್ರಮಗಳಲ್ಲಿನ ಪ್ರಗತಿಯ ಬಗ್ಗೆಯೂ ಉಲ್ಲೇಖಿಸಲಾಯಿತು.

ವಿವರಗಳು:

2019-20ರಲ್ಲಿ ಎನ್‌.ಎಚ್‌.ಎಂ ಕೆಳಕಂಡ ಹೊಸ ಉಪಕ್ರಮಗಳನ್ನು ರೂಪಿಸಿರುವುದನ್ನೂ ಸಂಪುಟ  ಗಮನಿಸಿತು:

  • ವಿಷಮ ಶೀತ ಜ್ವರವನ್ನು ಯಶಸ್ವಿಯಾಗಿ ತಡೆಯಲು ಸಾಮಾಜಿಕ ಜಾಗೃತಿ ಮತ್ತು ಕ್ರಮಗಳು (ಎಸ್...ಎನ್.ಎಸ್.)ಬಾಲ್ಯದ ವಿಷಮಶೀತ ಜ್ವರದಿಂದ ಉಂಟಾಗುವ ಸಾವುಗಳನ್ನು ತಗ್ಗಿಸುವ ಕ್ರಮವನ್ನು ವೇಗಗೊಳಿಸಲು ಉಪಕ್ರಮವನ್ನು ಪ್ರಾರಂಭಿಸಲಾಗಿದೆ.
  • ಯಾವುದೇ ವೆಚ್ಚವಿಲ್ಲದೆ ಖಾತ್ರಿಯುತ, ಗೌರವಯುತ, ಗೌರವಾನ್ವಿತ ಮತ್ತು ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸಲು ಸುರಕ್ಷಿತ ಮಾತೃತ್ವ ಆಶ್ವಾಸನ್ (ಸುಮನ್) ಉಪಕ್ರಮವನ್ನು ಪ್ರಾರಂಭಿಸಲಾಯಿತು ಮತ್ತು ಸೇವೆಗಳ ನಿರಾಕರಣೆಗೆ ಶೂನ್ಯ ಸಹಿಷ್ಣುತೆ ಮತ್ತು ತಾಯಂದಿರ ಮತ್ತು ನವಜಾತ ಶಿಶುಗಳ ಆರೋಗ್ಯಕ್ಕಾಗಿ ಅಸ್ತಿತ್ವದಲ್ಲಿರುವ ಎಲ್ಲಾ ಯೋಜನೆಗಳನ್ನು ಏಕಛತ್ರಿ ಅಡಿಯಲ್ಲಿ ತರಲಾಯಿತು.
  • ಅಂತಾರಾಷ್ಟ್ರೀಯ ಸೂಲಗಿತ್ತಿಯರ ಸಂಘಟನೆ (.ಸಿ.ಎಂ.) ನಿಗದಿಪಡಿಸಿದ ದಕ್ಷತೆಗೆ ಅನುಗುಣವಾಗಿ ನುರಿತ ವೃತ್ತಿನಿರತ ಸೂಲಗಿತ್ತಿ ಶುಶ್ರೂಷಕಿಯರ ಹಾಗೂ ಮಹಿಳಾ ಕೇಂದ್ರಿತ, ಸಂತಾನೋತ್ಪತ್ತಿ, ತಾಯಿಯ ಮತ್ತು ನವಜಾತ ಶಿಶುಗಳ ಆರೋಗ್ಯ ರಕ್ಷಣೆಯನ್ನು ಒದಗಿಸುವ ಸಾಮರ್ಥ್ಯ ಹೊಂದಿದ್ದಾರೆ ಸೇವೆಗಳ ಅರಿವು ಮತ್ತು ಮತ್ತು ಸಹಾನುಭೂತಿಯುಳ್ಳ ತಂಡವನ್ನು ರಚಿಸುವ ಉದ್ದೇಶವನ್ನು ಸೂಲಗಿತ್ತಿಯರ ಸೇವೆಯ ಉಪಕ್ರಮ ಹೊಂದಿದೆ.
  • ಸಕ್ರಿಯ ಜೀವನಶೈಲಿಯೊಂದಿಗೆ ಶಾಲಾ ಮಕ್ಕಳಲ್ಲಿ ಆರೋಗ್ಯ ಮತ್ತು ಕ್ಷೇಮವನ್ನು ಉತ್ತೇಜಿಸಲು ಶಿಕ್ಷಣ ಸಚಿವಾಲಯದ ಪಾಲುದಾರಿಕೆಯಲ್ಲಿ ಎಬಿ-ಎಚ್.ಡಬ್ಲ್ಯು.ಸಿ. ಕಾರ್ಯಕ್ರಮದ ಅಡಿಯಲ್ಲಿ ಶಾಲಾ ಆರೋಗ್ಯ ಮತ್ತು ಕ್ಷೇಮ ರಾಯಭಾರಿಗಳ ಉಪಕ್ರಮವನ್ನು ಆರಂಭಿಸಲಾಗಿದೆ.

ಅನುಷ್ಠಾನದ ಕಾರ್ಯತಂತ್ರ ಮತ್ತು ಗುರಿಗಳು:

ಅನುಷ್ಠಾನದ ಕಾರ್ಯತಂತ್ರಗಳು:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯಾನುಷ್ಠಾನ ಕಾರ್ಯತಂತ್ರದ ಅಡಿಯಲ್ಲಿ ಎನ್.ಎಚ್.ಎಂ. ಆರ್ಥಿಕ ಮತ್ತು ತಾಂತ್ರಿಕ ಬೆಂಬಲವನ್ನು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ (ಯು.ಟಿ.ಗಳು) ಒದಗಿಸುತ್ತಿದ್ದು, ಅವುಗಳಿಗೆ, ಲಭ್ಯತೆ, ಅಗ್ಗದ ದರದ, ಜವಾಬ್ದಾರಿಯುತ ಮತ್ತು ಸಮರ್ಥ ಆರೋಗ್ಯ ಸೇವೆಯನ್ನು ಜಿಲ್ಲಾ ಆಸ್ಪತ್ರೆಗಳ (ಡಿಎಚ್.ಗಳು)ವರೆಗೆ, ಅದರಲ್ಲೂ ಬಡವರಿಗೆ ಮತ್ತು ದುರ್ಬಲ ವರ್ಗದ ಜನರಿಗೆ ಒದಗಿಸಲು ಅವಕಾಶ ಕಲ್ಪಿಸುತ್ತಿದೆ. ಸುಧಾರಿತ ಆರೋಗ್ಯ ಸುಧಾರಿತ ಮೂಲಸೌಕರ್ಯ, ಮಾನವ ಸಂಪನ್ಮೂಲ ಅಭಿವೃದ್ಧಿ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳಲ್ಲಿನ ಕಂದಕ ನಿವಾರಿಸಲು ಮತ್ತು ಕಾರ್ಯಕ್ರಮಗಳ ವಿಕೇಂದ್ರೀರಣಕ್ಕೆ ಅನುವು ನೀಡಿ ಜಿಲ್ಲಾ ಮಟ್ಟದಲ್ಲಿ ಅಗತ್ಯಕ್ಕೆ ಅನುಗುಣವಾಗಿ ಮಧ್ಯಸ್ಥಿಕೆ, ಮೂಲಸೌಕರ್ಯ ಸುಧಾರಣೆ ಮತ್ತು ಅಂತರ ವಲಯ ಅವಕಾಶ ಮತ್ತು ಸಂಪನ್ಮೂಲದ ಸಮರ್ಥ ಬಳಕೆಯ ಗುರಿಯನ್ನು ಹೊಂದಿದೆ.

ಗುರಿಗಳು:

  • ಜೀವಂತ ಹೆರಿಗೆಯ ಎಂಎಂಆರ್ ಅನ್ನು 1/1000ಕ್ಕೆ ತಗ್ಗಿಸುವುದು.
  • ಜೀವಂತ ಹೆರಿಗೆಯ .ಎಂ.ಆರ್. ಅನ್ನು 25/1000 ಇಳಿಸುವುದು
  • ಟಿಎಫ್.ಆರ್. ಅನ್ನು 2.1ಕ್ಕೆ ತಗ್ಗಿಸುವುದು
  • ಕುಷ್ಟರೋಗದ ಇರುವಿಕೆಯನ್ನು < 1 /10000 ಜನಸಂಖ್ಯೆಗೆ ತರುವುದು ಮತ್ತು ಎಲ್ಲ ಜಿಲ್ಲೆಗಳಲ್ಲಿ ಪ್ರಕರಣವನ್ನು ಶೂನ್ಯಕ್ಕೆ ತರುವುದು.
  • ವಾರ್ಷಿಕ ಮಲೇರಿಯಾ ಪ್ರಕರಣಗಳನ್ನು <I/1000 ತರುವುದು
  • ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ; ಗಾಯ ಮತ್ತು ಹೊರಹೊಮ್ಮುವ ರೋಗಗಳಿಂದಾಗುವ ಮರಣ ಮತ್ತು ಅಸ್ವಸ್ಥತೆಯನ್ನು ತಡೆಯುವುದು ಮತ್ತು ತಗ್ಗಿಸುವುದು.
  • ಒಟ್ಟಾರೆ ಆರೋಗ್ಯ ಆರೈಕೆಗೆ ಆಗುವ ಕೌಟುಂಬಿಕ ವೆಚ್ಚವನ್ನು ಕಡಿಮೆ ಮಾಡುವುದು
  • ದೇಶದಿಂದ 2025 ವೇಳೆಗೆ ಟಿ.ಬಿ ಸಾಂಕ್ರಾಮಿಕ ರೋಗವನ್ನು ನಿರ್ಮೂಲನೆ ಮಾಡುವುದು.
  • ಉದ್ಯೋಗ ಸೃಷ್ಟಿಯ ಸಾಮರ್ಥ್ಯವೂ ಸೇರಿದಂತೆ ಪರಿಣಾಮಗಳು:
  • 2019-20ರಲ್ಲಿ ಎನ್.ಎಚ್.ಎಂ. ಅನುಷ್ಠಾನವು ಜಿಡಿಎಂಓಗಳು, ತಜ್ಞರು, .ಎನ್.ಎಂ.ಗಳು, ಶುಶ್ರೂಷಕ ಸಿಬ್ಬಂದಿ, ಆಯುಷ್ ವೈದ್ಯರು, ಅರೆ ವೈದ್ಯ ಸಿಬ್ಬಂದಿ, ಆಯುಷ್ ಅರೆ ವೈದ್ಯಕೀಯ ಸಿಬ್ಬಂದಿ, ಕಾರ್ಯಕ್ರಮ ನಿರ್ವಹಣಾ ಸಿಬ್ಬಂದಿ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥಾಪಕರುಗಳನ್ನು ಗುತ್ತಿಗೆ ಆಧಾರದಲ್ಲಿ ಬಳಸಿಕೊಳ್ಳುವುದೂ ಸೇರಿದಂತೆ 18,779 ಹೆಚ್ಚುವರಿ ಮಾನವ ಸಂಪನ್ಮೂಲ ತೊಡಗಿಸಿಕೊಳ್ಳಲು ಕಾರಣವಾಯಿತು.
  • 2019-20ರಲ್ಲಿ ಎನ್.ಎಚ್.ಎಂ. ಅನುಷ್ಠಾನವು, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಕಾರಣವಾಯಿತು, ಇದರಿಂದ ಕೋವಿಡ್ -19ಕ್ಕೆ ಸಮರ್ಥ ಮತ್ತು ಸಂಘಟಿತ ರೂಪದಲ್ಲಿ ಸ್ಪಂದಿಸಲು ಸಾಧ್ಯವಾಯಿತು.
  • ಯು5ಎಂಆರ್ ಭಾರತದಲ್ಲಿ 2012ರಲ್ಲಿದ್ದ 52ರಿಂದ 2018ರಲ್ಲಿ 36ಕ್ಕೆ ಇಳಿಕೆಯಾಗಿದೆ ಮತ್ತು ಯು5ಎಂಆರ್ ವಾರ್ಷಿಕ ದರ 2013-2018 ಅವಧಿಯಲ್ಲಿ ಇಳಿಮುಖವಾಗಿದ್ದು, ದರ 1990-2012 ನಡುವೆ ಇದ್ದ ಶೇ.3.9ರಿಂದ ಶೇ.6ಕ್ಕೆ ಹೆಚ್ಚಳವಾಗಿದೆ.
  • ಭಾರತದಲ್ಲಿನ ತಾಯಂದಿರ ಮರಣ ಅನುಪಾತ (ಎಂ.ಎಂ.ಆರ್.) 443 ಅಂಕ ಇಳಿಕೆಯಾಗಿದೆ, 1990ರಲ್ಲಿ ಪ್ರತಿ ಲಕ್ಷ ಜೀವಂತ ಹೆರಿಗೆಗೆ 556 ಇದ್ದದ್ದು, 2016-28ರಲ್ಲಿ 113 ಆಗಿದೆ. 1990ರಿಂದ ಎಂ.ಎಂ.ಆರ್.ನಲ್ಲಿ ಶೇ.80ರಷ್ಟು ಸಾಧನೆ ಮಾಡಲಾಗಿದೆ, ಇದು ಜಾಗತಿಕ ಇಳಿಕೆಯಾದ ಶೇ.45ಕ್ಕಿಂತ ಅಧಿಕವಾಗಿದೆ. ಕಳೆದ ಐದು ವರ್ಷಗಳಲ್ಲಿ, ತಾಯಂದಿರ ಮರಣ ಅನುಪಾತ (ಎಂ.ಎಂ.ಆರ್.) ಇಳಿಕೆಯಾಗಿದೆ. 2011-13ರಲ್ಲಿದ್ದ 167 ಇದ್ದ ಮಾದರಿ ನೋಂದಣಿ ವ್ಯವಸ್ಥೆ (ಎನ್.ಆರ್.ಎಸ್.) 2016-18ರಲ್ಲಿ 113ಕ್ಕೆ ಇಳಿದಿದೆ.  
  • ಎಂ.ಆರ್. ಸಹ 1990ರಲ್ಲಿದ್ದ 80ರಿಂದ 2018 ಸಾಲಿನಲ್ಲಿ 32ಕ್ಕೆ ಇಳಿದಿದೆ. .ಎಂ.ಆರ್. ವಾರ್ಷಿಕ ಸಂಯುಕ್ತ ಶೇಕಡಾವಾರ ದರವೂ ಕಳೆದ ಐದು ವರ್ಷಗಳಲ್ಲಿ ಅಂದರೆ 2013ರಿಂದ 2018 ನಡುವೆ ಇಳಿಕೆಯಾಗಿದೆ, ಇದು 1990-2012 ಅವಧಿಯಲ್ಲಿದ್ದ ಶೇ.2.9ರಿಂದ ಶೇ.4.4ಕ್ಕೆ ಹೆಚ್ಚಳವಾಗಿದೆ.   
  • ಎಸ್.ಆರ್.ಎಸ್. ರೀತ್ಯ, ಭಾರತದಲ್ಲಿ ಟಿಎಫ್.ಆರ್ 2013ರಲ್ಲಿದ್ದ 2.3ರಿಂದ 2018ರಲ್ಲಿ 2.2ಗೆ ಇಳಿದಿದೆ. ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ -4 (ಎನ್.ಎಫ್.ಎಚ್.ಎಸ್. -4) 2015-16) ಸಹ ಟಿಎಫ್.ಆರ್. 2.2 ಎಂದು ದಾಖಲಿಸಿದೆ. 2013-2018 ಅವಧಿಯಲ್ಲಿ ಟಿ.ಎಫ್‌.ಆರ್‌.ನಲ್ಲಿನ ವಾರ್ಷಿಕ ಶೇಕಡಾವಾರು ಸಂಯುಕ್ತ ದರವು ಶೇ.0.89 ಎಂದು ಉಲ್ಲೇಖಿಸಲಾಗಿದೆ.
  • 2018ಕ್ಕೆ ಹೋಲಿಸಿದರೆ, 2019ರಲ್ಲಿ ಮಲೇರಿಯಾ ಪ್ರಕರಣಗಳು ಮತ್ತು ಮರಣ ಪ್ರಮಾಣ ಅನುಕ್ರಮವಾಗಿ ಶೇ.21.27 ಮತ್ತು ಶೇ.20ಕ್ಕೆ ಇಳಿದಿದೆ.
  • ಪ್ರತಿ 1 ಲಕ್ಷ ಜನಸಂಖ್ಯೆಗೆ ಟಿ.ಬಿ. ಪ್ರಕರಣಗಳು 2012ರಲ್ಲಿದ್ದ 234ರಿಂದ 2019ರಲ್ಲಿ 193ಕ್ಕೆ ಇಳಿಕೆಯಾಗಿದೆ. ಟಿ.ಬಿ.ಯಿಂದ ಸಂಭವಿಸುತ್ತಿದ್ದ ಮರಣ ಪ್ರತಿ ಲಕ್ಷ ಜನಸಂಖ್ಯೆಗೆ 2012ರಲ್ಲಿದ್ದ 42ರಿಂದ 2019ರಲ್ಲಿ 33ಕ್ಕೆ ಇಳಿದಿದೆ.
  • 10000 ಜನಸಂಖ್ಯೆಗೆ <1 ಕೆಎ ಪ್ರಕರಣದ ನಿರ್ಮೂಲನೆ ಗುರಿಯನ್ನು ಸಾಧಿಸುವ ಕಲಾ-ಅಜರ್ ಸ್ಥಳೀಯ ವಿಭಾಗಗಳ ಶೇಕಡಾವಾರು ಪ್ರಮಾಣವು 2014 ರಲ್ಲಿದ್ದ ಶೇ. 74.2 ರಿಂದ 2019-20 ರಲ್ಲಿ ಶೇ.94 ಕ್ಕೆ ಏರಿದೆ.
  • ಪ್ರಕರಣದ ಸುಸ್ಥಿರ ಮರಣ ದರ (ಸಿಎಫ್.ಆರ್.) ರಾಷ್ಟ್ರೀಯ ಗುರಿಯನ್ನು ಶೇ.1ಕ್ಕಿಂತ ಕಡಿಮೆಗೆ ತಗ್ಗಿಸಿದ ಸಾಧನೆ ಮಾಡಲಾಗಿದೆ. ಡೆಂಘಿಗೆ ಸಂಬಂಧಿಸಿದ ಪ್ರಕರಣಗಳ ಮರಣ ದರ 2019ರಲ್ಲಿ ಶೇ.0.1 ಆಗಿತ್ತು

ವೆಚ್ಚ: ರೂ. 27,989.00 ಕೋಟಿ (ಕೇಂದ್ರದ ಪಾಲು)

ಫಲಾನುಭವಿಗಳು:

ಎನ್.ಎಚ್.ಎಂ. ಅನ್ನು ಸಾರ್ವತ್ರಿಕ ಉಪಯೋಗಕ್ಕಾಗಿ ಅನುಷ್ಠಾನಗೊಳಿಸಲಾಯಿತುಅಂದರೆ ಇಡೀ ಜನಸಂಖ್ಯೆಗೆ; ಸಮಾಜದ ದುರ್ಬಲ ವರ್ಗದವರ ಮೇಲೆ ಗಮನ ಹರಿಸಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಿಗೆ ಭೇಟಿ ನೀಡುವ ಎಲ್ಲರಿಗೂ ಸೇವೆಯನ್ನು ಒದಗಿಸಲಾಗುತ್ತಿದೆ.

ಎನ್.ಎಚ್.ಎಂ. ಅಡಿಯಲ್ಲ 2019-20 ಸಾಲಿನಲ್ಲಿನ ಪ್ರಗತಿ ಮತ್ತು ವಿವರ ಇಂತಿದೆ:

  • 2020ಮಾರ್ಚ್ 31, ರವರೆಗೆ 63,761 ಆಯುಷ್ಮಾನ್ ಭಾರತ್- ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಅನುಮೋದಿಸಲಾಗಿದೆ, 2020 ಮಾರ್ಚ್ 31 ರವರೆಗೆ 40,000 ಗುರಿಗೆ ಪ್ರತಿಯಾಗಿ 38,595 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಕಾರ್ಯಗತಗೊಳಿಸಲಾಗಿದೆ.2020ಮಾರ್ಚ್ 31 ಅಂತ್ಯದ ವೇಳೆಗೆ ಆಶಾಗಳು, ಬಹುಪಯೋಗಿ ಕಾರ್ಯಕರ್ತರು (ಎಂಪಿಡಬ್ಲ್ಯೂಎಸ್-ಎಫ್)/.ಎನ್‌.ಎಂ, ಶುಶ್ರೂಷಕ ಸಿಬ್ಬಂದಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ.ಎಚ್‌.ಸಿ) ವೈದ್ಯಾಧಿಕಾರಿಗಳು ಸೇರಿದಂತೆ 3,08,410 ಆರೋಗ್ಯ ಕಾರ್ಯಕರ್ತರು.
  • ಎನ್.ಆರ್.ಎಚ್.ಎಂ/ಎನ್.ಎಚ್.ಎಂ. ಪ್ರಾರಂಭವಾದಾಗಿನಿಂದ ತಾಯಂದಿರ ಮರಣ ಅನುಪಾತ (ಎಂ.ಎಂ.ಆರ್.)ಐದುವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ (ಯು5ಎಂ.ಆರ್.) ಮತ್ತು .ಎಂ.ಆರ್. ಕುಸಿತದಲ್ಲಿ ವೇಗವರ್ಧನೆ ಕಂಡುಬಂದಿದೆ. ಪ್ರಸ್ತುತ ಕುಸಿತದ ದರದಲ್ಲಿ, ಭಾರತವು ತನ್ನ ಎಸ್‌.ಡಿ.ಜಿ ಗುರಿಯನ್ನು (ಎಂಎಂಆರ್ -70, ಯು5 ಎಂಆರ್ -25) ನಿಗದಿ ಪಡಿಸಿರುವ ವರ್ಷ ಅಂದರೆ 2030ಕ್ಕಿಂತ ಮುಂಚೆಯೇ ತಲುಪಲು ಶಕ್ತವಾಗಿದೆ.
  • 2019-20ರಲ್ಲಿ, ತಲುಪದವರನ್ನು ತಲುಪಲು ಅದರಲ್ಲೂ ಭಾಗಶಃ ಲಸಿಕೆ ಹಾಕಿಸಿಕೊಂಡವರನ್ನು ತಲುಪಲು 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 381 ಜಿಲ್ಲೆಗಳಲ್ಲಿ ಇಂದ್ರಧನುಷ್ 2.0 ವ್ಯಾಪಕ ಅಭಿಯಾನವನ್ನು ನಡೆಸಲಾಗಿದೆ,
  • 2019-20ರಲ್ಲಿ, ಸುಮಾರು 529.98 ಲಕ್ಷ ಡೋಸ್ ರೋಟಾ ವೈರಾಣು ಲಸಿಕೆ ಮತ್ತು 463.88 ಲಕ್ಷ ಡೋಸಿ ದಡಾರರುಬೆಲ್ಲಾ ಲಸಿಕೆಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಾಕಲಾಗಿದೆ.
  • 2019-20ರಲ್ಲಿ, ಸುಮಾರು 164.18 ಲಕ್ಷ ಡೋಸ್ ನಿಮೋ ಕೋಕಲ್ ಕಾಂಜುಗೇಟೆಡ್ ಲಸಿಕೆಯನ್ನು 6 ರಾಜ್ಯಗಳಾದ ಬಿಹಾರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಾಸ್ಥಾನ, ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ನೀಡಲಾಗಿದೆ.
  • 2019-20ರಲ್ಲಿ, 25.27 ಲಕ್ಷ ವಯಸ್ಕರಿಗೆ ವಯಸ್ಕರ ಜಪಾನೀಸ್ ಮೆದುಳು ಉರಿಯೂತ ಕಾಯಿಲೆಯ ಲಸಿಕೆಯನ್ನು (ಪಶ್ಚಿಮ ಬಂಗಾಳದ 9 ಜಿಲ್ಲೆಗಳ 35 ಜೆ.. ಎಂಡಮಿಕ್ ವಿಭಾಗಗಳಲ್ಲಿ)ನೀಡಲಾಗಿದೆ.
  • 2019-20ರಲ್ಲಿ, 45.45 ಲಕ್ಷ .ಎನ್.ಸಿ. ತಪಾಸಣೆಯನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 16,900 ಆರೋಗ್ಯ ಸೌಲಭ್ಯಗಳಲ್ಲಿ ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ (ಪಿ.ಎಂ.ಎಸ್.ಎಂ..) ಕಾರ್ಯಕ್ರಮದಡಿ ನಡೆಸಲಾಗಿದೆ.
  • ಲಕ್ಷ್ಯ: 2020 ಮಾರ್ಚ್ 31, ರವರೆಗೆ, 543 ಹೆರಿಗೆ ಕೋಣೆಗಳು ಮತ್ತು 491 ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿಗಳು ರಾಜ್ಯ ಲಕ್ಷ್ಯದಿಂದ ಪ್ರಮಾಣೀಕರಿಸಲ್ಪಟ್ಟಿವೆ ಮತ್ತು 220 ಹೆರಿಗೆ ಕೊಠಡಿಗಳು ಮತ್ತು 190 ಹೆರಿಗೆ ಶಸ್ತ್ರಚಿಕಿತ್ಸಾ ಕೊಠಡಿಗಳು ರಾಷ್ಟ್ರೀಯ ಲಕ್ಷ್ಯದಿಂದ ಪ್ರಮಾಣೀಕರಿಸಲ್ಪಟ್ಟಿವೆ.
  • 2019-20ರಲ್ಲಿ ದೇಶದಲ್ಲಿ ಶೈತ್ಯಾಗಾರ ಸರಪಳಿ ವ್ಯವಸ್ಥೆ ಬಲಪಡಿಸಲು, ಶೈತ್ಯಾಗಾರ ಸರಪಳಿ ಸಾಧನಗಳು, ಅಂದರೆ, ಐಎಲ್.ಆರ್. -283, ಡಿ.ಎಫ್187, ಶೈತ್ಯ ಪೆಟ್ಟಿಗೆ (ದೊಡ್ಡದು) 13,609, ಶೈತ್ಯ ಪೆಟ್ಟಿಗೆ (ಸಣ್ಣದು) – 11,010, ಲಸಿಕೆ ರವಾನಿಸುವ ಪೆಟ್ಟಿಗೆ -270,230 ಮತ್ತು ಮಂಜುಗಟ್ಟೆ ಪೊಟ್ಟಣಗಳು10,94,650ಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡಲಾಗಿದೆ
  • 2020 ಮಾರ್ಚ್ 31ರವರೆಗೆ 63,761 ಆಯುಷ್ಮಾನ್ ಭಾರತಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಅನುಮೋದನೆ ನೀಡಲಾಗಿದ್ದು, 40 ಸಾವಿರದ ಗುರಿಗೆ ಪ್ರತಿಯಾಗಿ 38,595 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಕಾರ್ಯಗತಗೊಳಿಸಲಾಗಿದೆ. 2020ಮಾರ್ಚ್ 31 ಅಂತ್ಯದ ವೇಳೆಗೆ ಆಶಾಗಳು, ಬಹುಪಯೋಗಿ ಕಾರ್ಯಕರ್ತರು (ಎಂಪಿಡಬ್ಲ್ಯೂಎಸ್-ಎಫ್)/.ಎನ್‌.ಎಂ, ಶುಶ್ರೂಷಕ ಸಿಬ್ಬಂದಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ (ಪಿ.ಎಚ್‌.ಸಿ) ವೈದ್ಯಾಧಿಕಾರಿಗಳು ಸೇರಿದಂತೆ 3,08,410 ಆರೋಗ್ಯ ಕಾರ್ಯಕರ್ತರಿಗೆ ಅನುಮೋದನೆ ನೀಡಲಾಗಿದೆ.
  • 2019-20ರಲ್ಲಿ ಒಟ್ಟು 16,795 ಆಶಾಗಳನ್ನು ಆಯ್ಕೆ ಮಾಡಲಾಗಿದ್ದು, 2020 ಮಾರ್ಚ್ ವರೆಗೆ ದೇಶದಾದ್ಯಂತ ಆಶಾಗಳ ಒಟ್ಟು ಸಂಖ್ಯೆ 10.56 ಲಕ್ಷ ಆಗಿದೆ.
  • ರಾಷ್ಟ್ರೀಯ ಆಂಬುಲೆನ್ಸ್ ಸೇವೆಗಳು (ಎನ್..ಎಸ್.): 2020 ಮಾರ್ಚ್ ವರೆಗೆ 33 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಂಬುಲೆನ್ಸ್ ಗಾಗಿ 108 ಅಥವಾ 102 ಸಂಖ್ಯೆ ಕರೆ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. 1096, ಹೆಚ್ಚುವರಿ ತುರ್ತು ಸ್ಪಂದನೆ ಸೇವೆ ವಾಹನಗಳನ್ನು 2019-20ರಲ್ಲಿ ಸೇರ್ಪಡೆ ಮಾಡಲಾಗಿದೆ.
  • 2019-20ರಲ್ಲಿ 187 ಹೆಚ್ಚುವರಿ ಸಂಚಾರಿ ವೈದ್ಯಕೀಯ ಘಟಕಗಳು (ಎಂ.ಎಂ.ಯು.ಗಳು)ಗಳನ್ನು ಸೇರ್ಪಡೆ ಮಾಡಲಾಗಿದೆ.
  • 24x7 ಸೇವೆಗಳು ಮತ್ತು ಪ್ರಥಮ ರೆಫರಲ್ ಸೇವೆಗಳು: 2019-20 ಅವಧಿಯಲ್ಲಿ, ಹೆಚ್ಚುವರಿ 53 ಸೌಲಭ್ಯಗಳು ಎಫ್.ಆರ್.ಯು.ಗಳಾಗಿ ಕಾರ್ಯಾಚರಣೆಯಾಗಿವೆ.
  • ಕಾಯಕಲ್ಪ: 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, 293 ಡಿ.ಎಚ್.ಗಳು, 1,201 ಸಿಎಚ್.ಸಿ.ಗಳು/ಎಸ್.ಡಿ.ಎಚ್.ಗಳು, 2,802 ಪಿಎಚ್.ಸಿ.ಗಳು, 668 ಯುಎಚ್.ಸಿ.ಗಳು, ಮತ್ತು 305 ಎಚ್.ಡಬ್ಲ್ಯುಸಿಗಳ ಸಂಖ್ಯೆ 2019-20ರಲ್ಲಿ ಶೇ.70 ಕ್ಕೂ ಹೆಚ್ಚಾಗಿದೆ. 5,269 ಸಾರ್ವಜನಿಕ ಆರೋಗ್ಯ ಸೌಲಭ್ಯಗನ್ನು 2019-20 ಸಾಲಿನಲ್ಲಿ ಯೋಜನೆಯಡಿ ಮಂಜೂರು ಮಾಡಲಾಗಿದೆ.
  • ಮಲೇರಿಯಾ: 2014ರಲ್ಲಿ ವರದಿಯಾದ 11,02,205 ಪ್ರಕರಣಗಳು ಮತ್ತು 561 ಸಾವಿಗೆ ಹೋಲಿಸಿದರೆ, 2018ರಲ್ಲಿ ಒಟ್ಟು 4,29,928 ಮಲೇರಿಯಾ ಪ್ರಕರಣಗಳು ಮತ್ತು 96 ಸಾವು ವರದಿಯಾಗಿದ್ದು. 2014ಕ್ಕೆ ಹೋಲಿಸಿದರೆ ಮಲೇರಿಯಾ ಪ್ರಕರಣಗಳಲ್ಲಿ ಶೇ.61ರಷ್ಟು ಮತ್ತು ಮರಣದಲ್ಲಿ ಶೇ.84ರಷ್ಟು ಇಳಿಕೆಯನ್ನು ತೋರಿಸುತ್ತವೆ.
  • ಕಾಲಾ ಅಜರ್: ಡಿಸೆಂಬರ್ 2019 ಅಂತ್ಯಕ್ಕೆ, ಶೇ.94ರಷ್ಟು ಕಾಲಾಅಜರ್ ಸ್ಥಳೀಯ ವಿಭಾಗಗಳನ್ನು ಸಾಧಿಸಲಾಗಿದ್ದು, ನಿರ್ಮೂಲನೆಯ ಗುರಿ ವಿಭಾಗ ಮಟ್ಟದಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ <1ಕೆ.. ಆಗಿದೆ.
  • ದುಗ್ಧರಸ ಫಿಲೇರಿಯಾಸಿಸ್: 2019ರಲ್ಲಿ 257 ಎಲ್.ಎಫ್. ಸ್ಥಳೀಯ ಜಿಲ್ಲೆಗಳ ಪೈಕಿ, 98 ಜಿಲ್ಲೆಗಳು ಮೈಕ್ರೋಫಿಲೇರಿಯಾ ದರವನ್ನು ಶೇ.<1 ಸಾಧಿಸಿವೆ ಮತ್ತು ಪ್ರಸರಣ ನಿರ್ಧರಣೆ ಸಮೀಕ್ಷೆ (ಟಿ..ಎಸ್. 1) ರಿಂದ ಪರಿಶೀಲಸಲ್ಪಟ್ಟಿವೆ ಮತ್ತು ಸಮೂಹಿಕ ಔಷಧ ತೆಗೆದುಕೊಳ್ಳುವುದನ್ನು (ಎಂ.ಡಿ..) ನಿಲ್ಲಿಸಿದೆ.
  • ಡೆಂಘಿಗೆ ಸಂಬಂಧಿಸಿದಂತೆ, ಪ್ರಕರಣಗಳ ಮಾರಣಾಂತಿಕ ದರವನ್ನು (ಸಿ.ಎಫ್.ಆರ್) ಶೇ. <1 ಉಳಿಸಿಕೊಳ್ಳುವುದು ರಾಷ್ಟ್ರೀಯ ಗುರಿಯಾಗಿದೆ. 2014ರಲ್ಲಿ ಪ್ರಕರಣಗಳ ಸಾವಿನ ಪ್ರಮಾಣ ಶೇ. 0.3 ಆಗಿತ್ತು ಮತ್ತು 2015 ರಿಂದ 2018 ಅವಧಿಯಲ್ಲಿ ಸಿ.ಎಫ್.ಆರ್ ಅನ್ನು ಶೇ.0.2 ರಷ್ಟನ್ನು ಸಾಧಿಸಲಾಗಿದೆ. 2019 ರಲ್ಲಿ ಇದನ್ನು ಶೇ.0.1 ಕ್ಕೆ ಇಳಿಸಲಾಗಿದೆ.
  • ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕಾರ್ಯಕ್ರಮ (ಎನ್.ಟಿ..ಪಿ.): ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಒಟ್ಟು 1,264 ಕಾರ್ಟ್ರಿಡ್ಜ್ ಆಧಾರಿತ ನ್ಯೂಕ್ಲಿಯಿಕ್ ಆಸಿಡ್ ಆಂಪ್ಲಿಫಿಕೇಷನ್ ಪರೀಕ್ಷೆ (ಸಿಬಿ.ಎನ್‌.ಎಎಟಿ) ಯಂತ್ರಗಳು ಮತ್ತು 2,206 ಟ್ರೂನಾಟ್ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. 2019ರಲ್ಲಿ 35.30 ಲಕ್ಷ  ಮಾಲಿಕ್ಯುಲರ್ ಪರೀಕ್ಷೆಗಳನ್ನು ನಡೆಸಲಾಗಿದೆ. ಇದು 2017 7.48 ಲಕ್ಷಕ್ಕೆ ಹೋಲಿಸಿದರೆ 5 ಪಟ್ಟು ಹೆಚ್ಚಾಗಿದೆ. 2018 19,71,685ಕ್ಕೆ ಹೋಲಿಸಿದರೆ 2019 ರಲ್ಲಿ 22,03,895 ಟಿಬಿ ರೋಗಿಗಳು ಡ್ರಗ್ ಸೆನ್ಸಿಟಿವ್ ಟಿಬಿಯ ಚಿಕಿತ್ಸೆಗಾಗಿ ದೈನಿಕ ಕಟ್ಟುಪಾಡು ಪಡೆದಿದ್ದರು. ಹೊಸ ಟಿಬಿ ನಿಗ್ರಹ ಔಷಧಿಗಳ ಪರಿಚಯ: ಕಡಿಮೆ ಔಷಧಿ ಕಟ್ಟುಪಾಡು ಮತ್ತು ಬೆಡ್ ಅಕ್ವಿಲಿನ್ ಆಧಾರಿತ ಕಟ್ಟುಪಾಡು ಎಲ್ಲಾ ರಾಜ್ಯ / ಕೇಂ.ಪ್ರ.ಗಳಲ್ಲಿ ಆರಂಭಗೊಂಡಿದೆ. 2019ರಲ್ಲಿ, 40,397 ಎಂಡಿಆರ್ / ಆರ್.ಆರ್.-ಟಿಬಿ ರೋಗಿಗಳಿಗೆ ಕಡಿಮೆ ಕಟ್ಟುಪಾಡುಗಳ ಆಧಾರದ ಮೇಲೆ ಚಿಕಿತ್ಸೆ ಪ್ರಾರಂಭಿಸಲಾಗಿದೆ.
  • ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಸೌಲಭ್ಯದ ಬೆಂಬಲ ನೀಡಲು ಎನ್.ಎಚ್.ಎಂ. ಅಡಿಯಲ್ಲಿ ಪಿಪಿಪಿ ಮಾದರಿಯಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮ ( ಪಿಎಂಎನ್.ಡಿ.ಪಿ.)ಯನ್ನು 2016ರಲ್ಲಿ ಆರಂಭಿಸಲಾಯಿತು. 2019-20 ಹಣಕಾಸು ವರ್ಷದಲ್ಲಿ, ಪಿಎಂಎನ್.ಡಿ.ಪಿ. ಯನ್ನು 3 ರಾಜ್ಯಗಳು/ಯುಟಿಯ 52 ಜಿಲ್ಲೆಗಳಲ್ಲಿನ 105 ಕೇಂದ್ರಗಳಲ್ಲಿ 885 ಯಂತ್ರಗಳನ್ನು ಅಳವಡಿಸುವ ಮೂಲಕ ಜಾರಿ ಮಾಡಲಾಯಿತು.

ಹಿನ್ನೆಲೆ:

ಲಭ್ಯತೆ, ಅಗ್ಗದ ಮತ್ತು ಗುಣಮಟ್ಟದ ಆರೋಗ್ಯ ಆರೈಕೆಯನ್ನು ಗ್ರಾಮೀಣ ಜನರಿಗೆ ಅದರಲ್ಲೂ ದುರ್ಬಲ ವರ್ಗಗಳಿಗೆ ಒದಗಿಸಲು ಗೌರವಾನ್ವಿತ ಪ್ರಧಾನಮಂತ್ರಿಯವರು 2005 ಏಪ್ರಿಲ್ 12ರಂದು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್.ಆರ್.ಎಚ್.ಎಂ.)ವನ್ನು ಆರಂಭಿಸಿದರು. ಕೇಂದ್ರ ಸಚಿವ ಸಂಪುಟ 2013 ಮೇ 1ರಂದು ನಡೆದ ತನ್ನ ಸಭೆಯಲ್ಲಿ, ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.) ಮತ್ತೊಂದು ಉಪ ಅಭಿಯಾನವಾದ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್.ಆರ್.ಎಚ್.ಎಂ.)ನೊಂದಿಗೆ ಉಪ ಅಭಿಯಾನವಾಗಿ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನ (ಎನ್.ಯು.ಎಚ್.ಎಂ.)ಗೆ ಅನುಮೋದನೆ ನೀಡಿತು

ರಾಷ್ಟ್ರೀಯ ಆರೋಗ್ಯ ಅಭಿಯಾನವನ್ನು, 2017 ಏಪ್ರಿಲ್ 1ರಿಂದ ಅನ್ವಯವಾಗುವಂತೆ 2020 ಮಾರ್ಚ್ 31ರವರೆಗೆ  ಮುಂದುವರಿಸಲು 2018 ಮಾರ್ಚ್ 21 ಸಂಪುಟ ಸಭೆ ಅನುಮೋದನೆ ನೀಡಿತು.

ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ ತನ್ನ ಕಚೇರಿ ಆದೇಶ ಸಂಖ್ಯೆ 42 (02/ಪಿ.ಎಫ್II 2014) ದಿನಾಂಕ 2020 ಜನವರಿ 10ರಂದು ರಾಷ್ಟ್ರೀಯ ಆರೋಗ್ಯ ಅಭಿಯಾನಕ್ಕೆ 2021 ಮಾರ್ಚ್ 31ರವರೆಗೆ ಅಥವಾ 15ನೇ ಹಣಕಾಸು ಆಯೋಗದ ಶಿಫಾರಸಿನ ದಿನಾಂಕದವರೆಗೆ ಯಾವುದೇ ಮೊದಲೋ ಅಲ್ಲಿಯವರೆಗೆ ಜಾರಿಯಾಗುವಂತೆ ಮಧ್ಯಂತರ ವಿಸ್ತರಣೆ ನೀಡಿತು.

ಎನ್.ಎಚ್.ಎಂ. ಚೌಕಟ್ಟಿಗೆ ಸಂಪುಟ ನೀಡಿದ ಅನುಮೋದನೆಯು ನಿಯೋಜಿತ ಅಧಿಕಾರಗಳ ಚಲಾವಣೆಗೆ ಎನ್(ಆರ್)ಎಚ್.ಎಂಗೆ ಸಂಬಂಧಿಸಿದ ಪ್ರಗತಿ ವರದಿಯೊಂದಿಗೆ ಹಣಕಾಸಿನ ಮಾನದಂಡಗಳಲ್ಲಿನ ವಿಷಯಾಂತರಕ್ಕೆ, ಪ್ರಸಕ್ತ ಯೋಜನೆಗಳಲ್ಲಿನ ಮಾರ್ಪಾಡುಗಳು ಮತ್ತು ಹೊಸ ಯೋಜನೆಗಳ ವಿವರಗಳನ್ನು ವಾರ್ಷಿಕ ಆಧಾರದ ಮೇಲೆ ಸಚಿವ ಸಂಪುಟದ ಸಭೆಯ ಮುಂದೆ ಮೊದಲು ಇಡಬೇಕು ಎಂಬ ಷರತ್ತಿಗೆ ಒಳಪಟ್ಟಿರುತ್ತದೆ ಎಂಬ ಷರತ್ತು ವಿಧಿಸುತ್ತದೆ.

***



(Release ID: 1707458) Visitor Counter : 254