ಸಂಪುಟ

ಜಲ ಸಂಪನ್ಮೂಲ ವಲಯದಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಕುರಿತ ಜ್ಞಾಪನಾ ಪತ್ರಕ್ಕೆ ಸಹಿ ಮಾಡಿದ ಪ್ರಸ್ತಾವನೆಗೆ ಕೇಂದ್ರ ಸಂಪುಟ ಅನುಮೋದನೆ

Posted On: 23 MAR 2021 3:21PM by PIB Bengaluru

ಜಲ ಸಂಪನ್ಮೂಲ ವಲಯದಲ್ಲಿ ಭಾರತ ಮತ್ತು ಜಪಾನ್ ನಡುವೆ ಸಹಕಾರ ಸಾಧಿಸುವ ಕುರಿತು ಸಹಿ ಮಾಡಿದ ಜ್ಞಾಪನಾ ಪತ್ರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಕೇಂದ್ರ ಸರ್ಕಾರದ ಜಲ ಸಂಪನ್ಮೂಲ ಇಲಾಖೆ. ನದಿ ಅಭಿವೃದ್ಧಿ ಮತ್ತು ಗಂಗಾ ಪುನಜರುಜ್ಜೀವ, ಜಲ ಶಕ್ತಿ ಸಚಿವಾಲಯ ಹಾಗೂ ಜಪಾನ್ ಜಲ ಸಂಪನ್ಮೂಲ ಮತ್ತು ವಿಪತ್ತು ನಿರ್ವಹಣಾ ದಳ, ಭೂಮಿ, ಮೂಲ ಸೌಕರ್ಯ, ಸಾರಿಗೆ ಮತ್ತು ಪ್ರವಾಸೋದ್ಯಮ ಸಚಿವಾಲಯಗಳ ನಡುವೆ ಜ್ಞಾಪನಾ ಪತ್ರಕ್ಕೆ ಸಹಿ ಹಾಕಲಾಗಿದ್ದು, ಇದಕ್ಕೆ ಸಂಪುಟ ಅನುಮೋದನೆ ನೀಡಿದೆ

ಲಾಭಗಳು:

ಎರಡೂ ದೇಶಗಳ ನಡುವೆ ಜಂಟಿ ಯೋಜನೆಗಳ ಅನುಷ್ಠಾನ, ಮಾಹಿತಿ, ಜ್ಞಾನ, ತಂತ್ರಜ್ಞಾನ ಮತ್ತು ವೈಜ್ಞಾನಿಕ ವಲಯಗಳಿಗೆ ಸಂಬಂಧಿಸಿದ ಅನುಭವಗಳ ವಿನಿಯಮವನ್ನು ಹೆಚ್ಚಿಸುವ, ನೀರು ಮತ್ತು ನದಿ ಪಾತ್ರದ ನಿರ್ವಹಣೆ, ನೀರಿನ ತಂತ್ರಜ್ಞಾನ ಕ್ಷೇತ್ರದಲ್ಲಿ ದೀರ್ಘಕಾಲೀನ ಸಹಕಾರವನ್ನು ಅಭಿವೃದ್ಧಿಪಡಿಸಲು ಜ್ಞಾಪನಾ ಪತ್ರ[ಎಂಒಸಿ]ಕ್ಕೆ ಸಹಿಮಾಡಲಾಗಿದೆ.

ಎಂಒಸಿಯಿಂದ ನೀರಿನ ಭದ್ರತೆ, ನೀರಿನ ಸೌಲಭ್ಯದಲ್ಲಿ ಸುಧಾರಣೆ ಮತ್ತು ಜಲ ಸಂಪನ್ಮೂಲದಲ್ಲಿ ಸುಸ್ಥಿರತೆ ಸಾಧಿಸಲು ಸಹಾಯವಾಗಲಿದೆ.

***(Release ID: 1706962) Visitor Counter : 189