ಗೃಹ ವ್ಯವಹಾರಗಳ ಸಚಿವಾಲಯ

ನಿಗಾ, ನಿಯಂತ್ರಣ  ಮಾರ್ಗಸೂಚಿಗಳನ್ನು ವಿಸ್ತರಿಸಿ, ವಿವಿಧ ಚಟುವಟಿಕೆಗಳಿಗೆ ಕಟ್ಟುನಿಟ್ಟಾಗಿ ಎಸ್‌ಒಪಿ ಅನುಸರಿಸುವಂತೆ ಹಾಗೂ ಕಠಿಣ ನಿಗಾ ಪಾಲಿಸುವಂತೆ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸೂಚನೆ

Posted On: 26 FEB 2021 3:31PM by PIB Bengaluru

ನಿಗಾ, ನಿಯಂತ್ರಣ ಮತ್ತು ಎಚ್ಚರಿಕೆ ಕುರಿತಾದ ಹಾಲಿ ಮಾರ್ಗಸೂಚಿಗಳನ್ನು 31.03.2021ರವರೆಗೂ ವಿಸ್ತರಿಸಿ ಕೇಂದ್ರ ಗೃಹ ಸಚಿವಾಲಯವು (ಎಂಎಚ್‌ಎ) ಇಂದು ಆದೇಶ ಹೊರಡಿಸಿದೆ.

ಹೊಸ ಕೋವಿಡ್-19 ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡು ಬಂದಿದ್ದರೂ, ಸಂಕ್ರಾಮಿಕವನ್ನು ಸಂಪೂರ್ಣವಾಗಿ ಗೆಲ್ಲಲು ನಿಗಾ, ನಿಯಂತ್ರಣ ಮತ್ತು ಎಚ್ಚರಿಕೆ ಕ್ರಮಗಳನ್ನು ಮುಂದುವರಿಸುವ ಅಗತ್ಯವಿದೆ ಎಂದು ಸಚಿವಾಲಯ ಹೇಳಿದೆ.

ಸೋಂಕಿನ ಸರಪಳಿ ತಪ್ಪಿಸಿ, ಸಾಂಕ್ರಾಮಿಕವನ್ನು ಗೆಲ್ಲಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಉದ್ದೇಶಿತ ಫಲಾನುಭವಿಗಳಿಗೆ ಲಸಿಕೆ ನೀಡುವಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಸಲಹೆ ನೀಡಲಾಗಿದೆ.

ಹಾಗೆಯೇ, ಕಂಟೈನ್‌ಮೆಂಟ್ ವಲಯಗಳ ಗುರುತಿಸುವಿಕೆ, ವಲಯಗಳಲ್ಲಿ ನಿಗದಿತ ನಿಯಂತ್ರಣ ಕ್ರಮಗಳ ಕಟ್ಟುನಿಟ್ಟಿನ ಜಾರಿಯನ್ನು ಮುಂದುವರಿಸಬೇಕು. ಕೋವಿಡ್-19 ನಿಯಂತ್ರಣಕ್ಕೆ ಸೂಕ್ತವಾದ ವರ್ತನೆಯನ್ನು ಉತ್ತೇಜಿಸಿ ಕಟ್ಟುನಿಟ್ಟಿನಿಂದ ಜಾರಿಗೊಳಿಸಬೇಕು; ವಿವಿಧ ಚಟುವಟಿಕೆಗಳಿಗೆ ಅನುಮತಿಸಲಾದಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್’ (ಎಸ್‌ಒಪಿ) ಗಳನ್ನು ಎಚ್ಚರಿಕೆಯಿಂದ ಅನುಸರಿಸಬೇಕು.

ಆದ್ದರಿಂದ ನಿಗಾ, ನಿಯಂತ್ರಣ ಕುರಿತಾದ ಕ್ರಮಗಳತ್ತ ವಿಶೇಷ ಗಮನ ಹರಿಸಬೇಕು. 27.01.2021ರಂದು ಹೊರಡಿಸಲಾದ ಮಾರ್ಗಸೂಚಿಗಳ/‘ಎಸ್‌ಒಪಿಗಳ ಮೇಲೆ ಕಠಿಣ ಕಣ್ಗಾವಲು ಇರಿಸಿ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಟ್ಟುನಿಟ್ಟಿನಿಂದ ಜಾರಿಗೊಳಿಸುವ ಅಗತ್ಯವಿದೆ ಎಂದು ಸೂಚಿಸಲಾಗಿದೆ.

***


(Release ID: 1701651) Visitor Counter : 239