ಪ್ರಧಾನ ಮಂತ್ರಿಯವರ ಕಛೇರಿ

ಫೆಬ್ರವರಿ 26ರಂದು ತಮಿಳುನಾಡಿನ ಡಾ.ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಭಾಷಣ

प्रविष्टि तिथि: 24 FEB 2021 7:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ಫೆಬ್ರವರಿ 26ರಂದು ಬೆಳಗ್ಗೆ 11 ಗಂಟೆಗೆ ತಮಿಳುನಾಡಿನ ಡಾ. ಎಂ.ಜಿ.ಆರ್. ವೈದ್ಯಕೀಯ ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.  ಘಟಿಕೋತ್ಸವದಲ್ಲಿ ಒಟ್ಟು 17,591 ವಿದ್ಯಾರ್ಥಿಗಳಿಗೆ ಪದವಿ ಮತ್ತು ಡಿಪ್ಲೊಮಾ ಪ್ರದಾನ ಮಾಡಲಾಗುವುದು. ಈ ಸಂದರ್ಭದಲ್ಲಿ ತಮಿಳುನಾಡು ರಾಜ್ಯಪಾಲರು ಸಹ ಉಪಸ್ಥಿತರಿರುವರು.

ವಿಶ್ವವಿದ್ಯಾಲಯದ ಕುರಿತು

ವಿಶ್ವವಿದ್ಯಾಲಯಕ್ಕೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಡಾ. ಎಂ.ಜಿ. ರಾಮಚಂದ್ರನ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಇದರಡಿಯಲ್ಲಿ ಒಟ್ಟು 686 ಮಾನ್ಯತೆ ಪಡೆದ ಸಂಸ್ಥೆಗಳಿದ್ದು, ಅವುಗಳಲ್ಲಿ ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಆಯುಷ್, ಫಿಸಿಯೋಥೆರಪಿ, ಅಕ್ಯುಪೇಷನಲ್ ಥೆರಪಿ ಮತ್ತು ಆರೋಗ್ಯ ವಿಜ್ಞಾನ ಸಂಬಂಧಿ ನಾನಾ ಕೋರ್ಸ್ ಗಳಿವೆ. ಈ ಸಂಸ್ಥೆಗಳು ತಮಿಳುನಾಡು ರಾಜ್ಯದ ಉದ್ದಗಲಕ್ಕೂ ಹರಡಿದ್ದು, ಅವುಗಳಲ್ಲಿ 41 ವೈದ್ಯಕೀಯ ಕಾಲೇಜುಗಳು, 19 ದಂತ ವೈದ್ಯ ಕಾಲೇಜುಗಳು, 48 ಆಯುಷ್ ಕಾಲೇಜುಗಳು, 199 ನರ್ಸಿಂಗ್ ಕಾಲೇಜುಗಳು, 81 ಫಾರ್ಮಸಿ ಕಾಲೇಜುಗಳು ಮತ್ತು ಸ್ನಾತಕೋತ್ತರ ವೈದ್ಯಕೀಯ ಮತ್ತು ಇತರೆ ಆರೋಗ್ಯ ಸಂಬಂಧಿ ಸಂಸ್ಥೆಗಳೂ ಸಹ ಸೇರಿವೆ.

***


(रिलीज़ आईडी: 1700726) आगंतुक पटल : 157
इस विज्ञप्ति को इन भाषाओं में पढ़ें: Odia , Assamese , English , Urdu , Marathi , हिन्दी , Bengali , Manipuri , Punjabi , Gujarati , Tamil , Telugu , Malayalam