ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 22, ಪಶ್ಚಿಮ ಬಂಗಾಳ ಮತ್ತು ಅಸ್ಸಾಂಗೆ ಪ್ರಧಾನಮಂತ್ರಿ ಭೇಟಿ


ಅಸ್ಸಾಂನಲ್ಲಿ ರಾಷ್ಟ್ರದ ಪ್ರಮುಖ ತೈಲ ಮತ್ತು ಅನಿಲ ಯೋಜನೆಗಳ ಸಮರ್ಪಣೆ: ಇಂಜಿನಿಯರಿಂಗ್ ಕಾಲೇಜುಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿರುವ ಪ್ರಧಾನಮಂತ್ರಿಯವರು

ಪಶ್ಚಿಮ ಬಂಗಾಳದಲ್ಲಿ ಹಲವಾರು ರೈಲ್ವೆ ಯೋಜನೆಗಳನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿಯವರು

Posted On: 20 FEB 2021 1:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021, ಫೆಬ್ರವರಿ 22 ರಂದು ಅಸ್ಸಾಂ ಮತ್ತು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿದ್ದಾರೆ. ಅಸ್ಸಾಂ ಧೇಮಜಿಯ ಸಿಲಪಥಾರ್  ನಲ್ಲಿ ಬೆಳಿಗ್ಗೆ 11.30 ಗಂಟೆಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ದೇಶದ ಪ್ರಮುಖ ತೈಲ ಮತ್ತು ಅನಿಲ ವಲಯದ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಎಂಜಿನಿಯರಿಂಗ್ ಕಾಲೇಜುಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಲಿದ್ಧಾರೆ. ಸಂಜೆ 4.30 ಗಂಟೆಗೆ ಪಶ‍್ಚಿಮ ಬಂಗಾಳದ ಹೂಗ್ಲಿಯಲ್ಲಿ ಹಲವಾರು ರೈಲ್ವೆ ಯೋಜನೆಗಳನ್ನು ದೇಶಕ್ಕೆ ಸಮರ್ಪಣೆ ಮಾಡಲಿದ್ದಾರೆ ಮತ್ತು ಉದ್ಘಾಟಿಸಲಿದ್ದಾರೆ.

ಅಸ್ಸಾಂನಲ್ಲಿ ಪ್ರಧಾನಮಂತ್ರಿಯವರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡಿಯನ್ ಆಯಿಲ್ ಸಂಸ್ಥೆಯ ಇಂಡ್ ಮ್ಯಾಕ್ಸ್ ಬೊಂಗಾಯ್ ಗಾವ್ ಸಂಸ್ಕರಣಾ ಘಟಕ, ಆಯಿಲ್ ಇಂಡಿಯಾ ಲಿಮಿಟೆಡ್ , ಮಧುಬನ್, ದಿಬ್ರುಘರ್ ಘಟಕಗಳ ಎರಡನೇಯ ತೈಲಾಗಾರಗಳು ಮತ್ತು ತಿನ್ಸುಕಿಯಾದ ಮಕುಮ್ ಹೆಬೆಡ ಗ್ರಾಮದಲ್ಲಿ ಗ್ಯಾಸ್ ಕಂಪ್ರೆಸರ್ ಘಟಕಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.

ಧೇಮಜಿ ಇಂಜಿನಿಯರಿಂಗ್ ಕಾಲೇಜು ಉದ್ಟಾಟನೆ ಮತ್ತು ಸುವಾಲ್ಕುಚಿ ಇಂಜಿನಿಯರಿಂಗ್ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಯೋಜನೆಗಳು ಇಂಧನ ಸುರಕ್ಷತೆ ಮತ್ತು ಸಮೃದ್ಧತೆಯ ಯುಗಕ್ಕೆ ಕಾರಣವಾಗಿದೆ ಮತ್ತು ಸ್ಥಳೀಯ ಯುವ ಸಮೂಹಕ್ಕೆ ಪ್ರಕಾಶಮಾನವಾದ ಮಾರ್ಗಗಳನ್ನು ತೆರೆಯುತ್ತದೆ. ಇದು ಪ್ರಧಾನಮಂತ್ರಿಯವರ ಪೂರ್ವ ಭಾರತದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಉದ್ದೇಶ ಹೊಂದಿರುವಪೂರ್ವೋದಯದೃಷ್ಟಿಗೆ ಪೂರಕವಾಗಿದೆ. ಸಮಾರಂಭದಲ್ಲಿ ಅಸ್ಸಾಂ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಮಂತ್ರಿಯವರು, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಸಹ ಪಾಲ್ಗೊಳ್ಳಲಿದ್ದಾರೆ.

ಇಂಡಿಯನ್ ಆಯಿಲ್ ಇಂಡ್ ಮ್ಯಾಕ್ಸ್ಬೊಂಗಾಯ್ ಗಾವ್ ಸಂಸ್ಕರಣಾ ಘಟಕವನ್ನು ಇಂಡಿಯನ್ ಆಯಿಲ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ದೇಶೀವಾಗಿ ಅಭಿವೃದ್ಧಿಪಡಿಸಿದ್ದು, ಇಲ್ಲಿನ ಫೀಡ್ ಸ್ಟ್ಯಾಕ್ ಗಳಲ್ಲಿ ಹೆಚ್ಚಿನ ಎಲ್.ಪಿ.ಜಿ ಮತ್ತು ಉನ್ನತ ಅಕ್ಟೇನ್ ಗ್ಯಾಸೋಲಿನ್ ಉತ್ಪಾದನೆ ಮಾಡಲಾಗುತ್ತಿದೆ ಕೇಂದ್ರದಲ್ಲಿ ಕಚ್ಚಾತೈಲ ಸಂಸ್ಕರಣಾ ಸಾಮರ್ಥ್ಯವನ್ನು ವಾರ್ಷಿಕ 2.35 ಎಂ.ಎಂ.ಟಿ..ಪಿ. [ಮಿಲಿಯನ್ ಮೆಟ್ರಿಕ್ ಟನ್ಸ್ ಪರ್ ಆನಮ್] ನಿಂದ 2.7 ಎಂ.ಎಂ.ಟಿ.ಪಿ.ಎಗೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಘಟಕದ ಕಾರ್ಯಾರಂಭದ ಮೂಲಕ ಎಲ್.ಪಿ.ಜಿ ಸಾಮರ್ಥ್ಯವನ್ನು 50 ಟಿ.ಎಂ.ಟಿ [ಥೌಸಂಡ್ ಮೆಟ್ರಿಕ್ ಟನ್] ನಿಂದ 257 ಟಿ.ಎಂ.ಟಿ ಗೆ ಹೆಚ್ಚಳವಾಗಲಿದೆ ಮತ್ತು ಮೋಟಾರ್ ಸ್ಪೀರಿಟ್ [ಪೆಟ್ರೋಲ್] ಉತ್ಪಾದನೆ 210 ಟಿ..ಎಂ.ಟಿಯಿಂದ 533 ಟಿ.ಎಂ.ಟಿ ಗೆ ಏರಿಕೆಯಾಗಲಿದೆ.  

40,000 ಕಿಲೋಲೀಟರ್ ಕಚ್ಚಾತೈಲವನ್ನು ಸುರಕ್ಷಿತವಾಗಿ ಸಂಗ್ರಹಿಸಲು ಆಯಿಲ್ ಇಂಡಿಯಾದ ಎರಡನೇ ಸಂಗ್ರಹಾರವನ್ನು ನಿರ್ಮಿಸಲಾಗಿದೆ ಮತ್ತು ಒದ್ದೆಯಾದ ಕಚ್ಚಾ ತೈಲದ ರಚನೆಯನ್ನು ಇದು ನೀರಿನಿಂದ ಬೇರ್ಪಡಿಸಲಿದೆ. 490 ಕೋಟಿ ರೂಪಾಯಿ ಮೊತ್ತದ ಯೋಜನೆಯಿಂದ ದಿನಕ್ಕೆ 10,000 ಕಿಲೋಲೀಟರ್ ಕಾರ್ಯಾರಚಣೆ ಸಾಮರ್ಥ್ಯ ಹೊಂದಿರುವ ನಿರ್ಜಲೀಕರಣ ಘಟಕವನ್ನು ಇದು ಒಳಗೊಂಡಿದೆ.

ತಿನ್ಸುಕಿಯಾದ ಮಕುಮ್ ಗ್ಯಾಸ್ ಕಂಪ್ರೆಷರ್ ಕೇಂದ್ರದಿಂದ ದೇಶದ ಕಚ್ಚಾತೈಲ ಉತ್ಪಾದನೆ ಸಾಮರ್ಥ್ಯ ವಾರ್ಷಿಕ ಸುಮಾರು 16,500 ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದೆ. ಇದನ್ನು 132 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದರಲ್ಲಿ 3 ಲೋ ಪ್ರಷರ್ ಬೂಸ್ಟರ್ ಕಂಪ್ರೆಷರ್ ಮತ್ತು 3 ಹೈ ಪ್ರೆಷರ್ ಲಿಪ್ಟರ್ ಕಂಪ್ರೆಷರ್ಸ ಗಳನ್ನು ಇದು ಒಳಗೊಂಡಿದೆ.

ಧೇಮಜಿ ಇಂಜಿನಿಯರಿಂಗ್ ಕಾಲೇಜು ಕಟ್ಟಡವನ್ನು 276 ಎಕರೆ ಭೂಮಿಯಲ್ಲಿ 45 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ರಾಜ್ಯದ ಏಳನೇ ಇಂಜಿನಿಯರಿಂಗ್ ಕಾಲೇಜು ಆಗಿದೆ ಮತ್ತು ಸಿವಿಲ್ ಇಂಜಿನಿಯರಿಂಗ್, ಮೆಕಾನಿಕಲ್ ಮತ್ತು ಕಂಪ್ಯೂಟರ್ ಸೈನ್ಸ್   ಬಿ.ಟೆಕ್ ಕೋರ್ಸ್ ಗಳು ಇಲ್ಲಿವೆ. ಸುಲ್ಕೊಚಿ ಇಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸುತ್ತಿದ್ದು, 116 ಎಕರೆ ಪ್ರದೇಶದಲ್ಲಿ 55 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿಯವರು

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿಯವರು ನೊವ್ಪಾರಾ ದಿಂದ ದಕ್ಷಿಣೇಶ್ವರ ನಡುವಿನ ವಿಸ್ತರಣಾ ಮಾರ್ಗವನ್ನು ಉದ್ಘಾಟಿಸಲಿದ್ದಾರೆ ಮತ್ತು ಮೊದಲ ಸೇವೆಗೆ ಹಸಿರು ನಿಶಾನೆ ತೋರಲಿದ್ದಾರೆ. ಪೂರ್ಣ ಪ್ರಮಾಣದ ಕೇಂದ್ರ ಸರ್ಕಾರದ ನೆರವಿನಿಂದ 464 ಕೋಟಿ ರೂಪಾಯಿ ವೆಚ್ಚದಲ್ಲಿ 4.1 ಕಿಲೋಮೀಟರ್ ಮಾರ್ಗವನ್ನು ನಿರ್ಮಿಸಲಾಗಿದೆ. ಇದರಿಂದ ರಸ್ತೆ ಸಂಚಾರದ ಒತ್ತಡ ನಿವಾರಣೆಯಾಗಲಿದೆ ಮತ್ತು ನಗರ ಸಾರಿಗೆಯಲ್ಲಿ ಸುಧಾರಣೆಯಾಗಲಿದೆ. ವಿಸ್ತರಣೆಯಿಂದ ವಿಶ್ವ ಪ್ರಸಿದ್ಧ ಕಾಳಿ ಘಾಟ್ ಮತ್ತು ದಕ್ಷಿಣೇಶ್ವರ ದೇವಸ‍್ಥಾನಗಳ ನಡುವೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಇದರಿಂದ ಲಕ್ಷಾಂತರ ಪ್ರವಾಸಿಗರು ಮತ್ತು ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಹೊಸದಾಗಿ ನಿರ್ಮಿಸಿರುವ ಬಾರಾನಗರ್ ಮತ್ತು ದಕ್ಷೀಣೇಶ‍್ವರ್ ನಿಲ್ದಾಣಗಳು ಪ್ರಯಾಣಿಕರಿಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಮತ್ತು ಇಲ್ಲಿ ಭಿತ್ತಿಚಿತ್ರಗಳು, ಛಾಯಾಚಿತ್ರಿಗಳು, ಶಿಲ್ಪಗಳು ಮತ್ತು ವಿಗ್ರಹಗಳಿಂದ ಕಲಾತ್ಮಕವಾಗಿ ವಿನ್ಯಾಸಗೊಳಿಸಿ ಅಲಂಕರಿಸಲಾಗಿದೆ.

ಆಗ್ನೇಯ ರೈಲ್ವೆಯ 132 ಕಿಲೋಮೀಟರ್ ಉದ್ದದ ಖರಗ್ ಪುರಆದಿತ್ಯಪುರದ ಮೂರನೇ ಯೋಜನೆಯ 30 ಕಿಲೋಮೀಟರ್ ವಿಸ್ತೀರ್ಣದ ಕಲೈಕುಂಡ ಮತ್ತು ಜರ್ಗಾಮ್ ನಡುವಿನ ರೈಲ್ವೆ ಮಾರ್ಗವನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದು, ಇದರ ಅಂದಾಜು ವೆಚ್ಚ 1312 ಕೋಟಿ ರೂಪಾಯಿ ಆಗಿದೆ. ಕಲೈಕುಂಡ ಮತ್ತು ಜಾರ್ಗಮ್ ನಡುವಿನ ಮಾರ್ಗದಲ್ಲಿ ನಾಲ್ಕು ರೈಲ್ವೆ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಮತ್ತು ನಾಲ್ಕು ನಿಲ್ದಾಣಗಳನ್ನು ಮರು ನಿರ್ಮಿಸಲಾಗಿದ್ದು, ಆರು ಪಾದಚಾರಿ ಮೇಲ್ಸೇತುವೆಗಳು, 11 ಹೊಸ ಪ್ಲಾಟ್ ಫಾರಂಗಳು, ಹಾಲಿ ಮೂಲ ಸೌಕರ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಹೌರಾ ಮತ್ತು ಮುಂಬೈ ಟ್ರಂಕ್  ಮಾರ್ಗದಲ್ಲಿ ಪ್ರಯಾಣಿಕ ಮತ್ತು ಸರಕು ರೈಲುಗಳ ತಡೆರಹಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಇದು ಸಹಕಾರಿಯಾಗಿದೆ.

ಪೂರ್ವ ರೈಲ್ವೆ ವಲಯದ ಹೌರಾಬಂಡೆಲ್ಅಜಿಮ್ ಗಂಜ್ ವಲಯದ ಅಜಿಮ್ ಗಂಜ್ ನಿಂದ ಖರಗ್ರಾಘಾಟ್ ರಸ್ತೆ ವಲಯದ ದ್ವಿಪಥ ಮಾರ್ಗವನ್ನು ಪ್ರಧಾನಮಂತ್ರಿಯವರು ದೇಶಕ್ಕೆ ಸಮರ್ಪಿಸಲಿದ್ದಾರೆ. 240 ಕೋಟಿ ರೂಪಾಯಿ ವೆಚ್ಚದಲ್ಲಿ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ

ಪ್ರಧಾನಮಂತ್ರಿಯವರು ಇದೇ ಸಂದರ್ಭದಲ್ಲಿ ದಂಕುಣಿ ಮತ್ತು ಬರೈಪರ [11.28 ಕಿ.ಲೋಮೀಟರ್], ಹೌರಾಬರ್ಧಮನ್ ಚೋರ್ಡ್ ಮಾರ್ಗ ಮತ್ತು ಮೂರನೇ ಮಾರ್ಗ ರಸುಲ್ ಪುರ್ ಮತ್ತು ಮಾರ್ಗ [42.42 ಕಿಲೋಮೀಟರ್]   ಹೌರಾಬರ್ಧಮಾನ್ ಮುಖ್ಯ ಮಾರ್ಗವನ್ನು ಸೇವೆಗೆ ಸಮರ್ಪಿಸಲಿದ್ದು, ಇದು ಕೊಲ್ಕತ್ತಾಗೆ ಪ್ರಧಾನ ಹೆಬ್ಬಾಗಿಲು ಆಗಿದೆ.

ರಸುಲ್ ಪುರ್ ಮತ್ತು ಮಾರ್ಗಾ ನಡುವಿನ ಮೂರನೇ ಮಾರ್ಗವನ್ನು 759 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ದಂಕುಣಿ ಮತ್ತು ಬರೈಪರ ನಡುವಿನ ಮಾರ್ಗವನ್ನು 195 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಯೋಜನೆಗಳು ಉತ್ತಮ ಕಾರ್ಯಾಚರಣೆ ಜತೆಗೆ, ಕಡಿಮೆ ಪ್ರಯಾಣದ ಅವಧಿ, ರೈಲ್ವೆ ಕಾರ್ಯಾಚರಣೆಯ ಹೆಚ್ಚಿನ ಸುರಕ್ಷತೆಯನ್ನು ಖಚಿತಪಡಿಸುತ್ತದೆ. ಜತೆಗೆ ಒಟ್ಟಾರೆ ಪ್ರದೇಶದ ಆರ್ಥಿಕ ಬೆಳವಣಿಗೆಯನ್ನು ಇದು ಹೆಚ್ಚಿಸುತ್ತದೆ.

***



(Release ID: 1699893) Visitor Counter : 180