ಪ್ರಧಾನ ಮಂತ್ರಿಯವರ ಕಛೇರಿ
ಮಧ್ಯಪ್ರದೇಶದ ಸಿಧಿಯಲ್ಲಿ ಬಸ್ ಅಪಘಾತ; ಮೃತರಿಗೆ ಪ್ರಧಾನಮಂತ್ರಿ ಸಂತಾಪ; ಪರಿಹಾರ ಬಿಡುಗಡೆ
Posted On:
16 FEB 2021 3:34PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಸಿಧಿಯಲ್ಲಿ ನಡೆದ ಬಸ್ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.
ಪ್ರಧಾನಮಂತ್ರಿಗಳ ಕಾರ್ಯಾಲಯ, ಪ್ರಧಾನಮಂತ್ರಿ ಅವರನ್ನುಲ್ಲೇಖಿಸಿ ಮಾಡಿರುವ ಟ್ವೀಟ್ ನಲ್ಲಿ “ಮಧ್ಯಪ್ರದೇಶದ ಸಿಧಿಯಲ್ಲಿನ ಬಸ್ ಅಪಘಾತ ಭಯಾನಕ, ಮೃತಪಟ್ಟ ಕುಟುಂಬದವರಿಗೆ ಸಂತಾಪಗಳು. ಸ್ಥಳೀಯ ಆಡಳಿತ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿದೆ.” ಎಂದು ಹೇಳಿದೆ.
ಪ್ರಧಾನಮಂತ್ರಿ ಅವರು ಮೃತರ ಕುಟುಂಬಗಳಿಗೆ ಪರಿಹಾರ ಬಿಡುಗಡೆ ಮಾಡಿದ್ದಾರೆ. ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರ ಕಾರ್ಯಾಲಯ "ಪ್ರಧಾನಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮಧ್ಯಪ್ರದೇಶದ ಸಿಧಿಯಲ್ಲಿ ಬಸ್ ಅಪಘಾತದಲ್ಲಿ ಮೃತಪಟ್ಟ ಹತ್ತಿರದ ಬಂಧುಗಳಿಗೆ ತಲಾ 2 ಲಕ್ಷ ರೂ. ಮತ್ತು ಗಂಭೀರವಾಗಿ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ನೀಡಲು ಅನುಮೋದಿಸಿದ್ದಾರೆ." ಎಂದು ತಿಳಿಸಿದೆ.
***
(Release ID: 1698474)
Visitor Counter : 183
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam