ಪ್ರಧಾನ ಮಂತ್ರಿಯವರ ಕಛೇರಿ

ನ್ಯಾಯಮೂರ್ತಿ (ನಿವೃತ್ತ) ಎಂ. ರಾಮ ಜೋಯಿಸ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

प्रविष्टि तिथि: 16 FEB 2021 12:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನ್ಯಾಯಮೂರ್ತಿ (ನಿವೃತ್ತ) ಎಂ. ರಾಮ ಜೋಯಿಸ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಧಾನಮಂತ್ರಿಯವರು ಟ್ವೀಟ್ ನಲ್ಲಿ, "ನ್ಯಾಯಮೂರ್ತಿ (ನಿವೃತ್ತ) ಎಂ. ರಾಮ ಜೋಯಿಸ್ ಅವರು ಬುದ್ಧಿಜೀವಿ ಮತ್ತು ನ್ಯಾಯಶಾಸ್ತ್ರದ ಶಿಖರವಾಗಿದ್ದರು. ಭಾರತದ ಪ್ರಜಾಪ್ರಭುತ್ವ ಎಳೆಯನ್ನು ಬಲಪಡಿಸುವಲ್ಲಿ ಅವರು ತಮ್ಮ ಶ್ರೀಮಂತ ಜ್ಞಾನಶಕ್ತಿ ಮತ್ತು ಕೊಡುಗೆಗಳಿಂದಾಗಿ  ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರ ನಿಧನದಿಂದ ದುಃಖಿತನಾಗಿದ್ದೇನೆ. ದುಃಖದ ಸಮಯದಲ್ಲಿ ಅವರ ಕುಟುಂಬ ಮತ್ತು ಅನುಯಾಯಿಗಳಿಗೆ ನನ್ನ ಸಂವೇದನೆ ಇದೆ. ಓಂ ಶಾಂತಿ." ಎಂದು ತಿಳಿಸಿದ್ದಾರೆ.

***


(रिलीज़ आईडी: 1698404) आगंतुक पटल : 257
इस विज्ञप्ति को इन भाषाओं में पढ़ें: English , Urdu , Marathi , हिन्दी , Bengali , Assamese , Manipuri , Punjabi , Gujarati , Odia , Tamil , Telugu , Malayalam