ಪ್ರಧಾನ ಮಂತ್ರಿಯವರ ಕಛೇರಿ

ಮಹಾರಾಜ ಸುಹೆಲ್‌ದೇವ್ ಸ್ಮಾರಕ ಮತ್ತು ಚಿತ್ತೌರಾ ಸರೋವರದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

Posted On: 14 FEB 2021 11:27AM by PIB Bengaluru

ಪ್ರಧಾನಿಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021 ಫೆಬ್ರವರಿ 16 ರಂದು ಬೆಳಗ್ಗೆ 11:00 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಹಾರಾಜ ಸುಹೆಲ್‌ದೇವ್ ಸ್ಮಾರಕ ಮತ್ತು ಚಿತ್ತೌರ ಸರೋವರದ ಅಭಿವೃದ್ಧಿ ಕಾರ್ಯಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಉತ್ತರ ಪ್ರದೇಶದ ಬಹ್ರೇಚ್‌ ನಲ್ಲಿ ಮಹಾರಾಜ ಸುಹೆಲ್‌ದೇವ್ ಅವರ ಜನ್ಮ ದಿನಾಚರಣೆ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಉಪಸ್ಥಿತರಿರುತ್ತಾರೆ.

ಈ ಸಂಪೂರ್ಣ ಯೋಜನೆಯು ಮಹಾರಾಜ ಸುಹೆಲ್‌ದೇವ್ ಅವರು ಕುದುರೆ ಸವಾರಿ ಮಾಡುತ್ತಿರುವ ಪ್ರತಿಮೆಯ ಸ್ಥಾಪನೆ ಮತ್ತು ಉಪಹಾರಗೃಹ, ಅತಿಥಿ ಗೃಹ ಮತ್ತು ಮಕ್ಕಳ ಉದ್ಯಾನವನದಂತಹ ವಿವಿಧ ಪ್ರವಾಸಿ ಸೌಲಭ್ಯಗಳ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ.

ಮಹಾರಾಜಾ ಸುಹೆಲ್‌ದೇವ್ ಅವರ ದೇಶ ಸೇವೆ ಮತ್ತು ಸಮರ್ಪಣೆ ಎಲ್ಲರಿಗೂ ಸ್ಫೂರ್ತಿಯ ಸೆಲೆಯಾಗಿದೆ ಮತ್ತು ಈ ಸ್ಮಾರಕ ತಾಣದ ಅಭಿವೃದ್ಧಿಯೊಂದಿಗೆ, ಮಹಾರಾಜ ಸುಹೆಲ್‌ದೇವ್ ಅವರ ಶೌರ್ಯ ಸಾಹಸವನ್ನು ದೇಶವು ಉತ್ತಮವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಇದು ಈ ತಾಣದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.

***



(Release ID: 1698050) Visitor Counter : 164