ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ರೇಡಿಯೋ ದಿನದಂದು ಕೇಳುಗರಿಗೆ ಶುಭ ಕೋರಿದ ಪ್ರಧಾನಿ

Posted On: 13 FEB 2021 10:00AM by PIB Bengaluru

ವಿಶ್ವ ರೇಡಿಯೋ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲ ರೇಡಿಯೋ ಕೇಳುಗರಿಗೆ ಶುಭ ಕೋರಿದ್ದಾರೆ. ರೇಡಿಯೋ ಒಂದು ಅದ್ಭುತ ಮಾಧ್ಯಮವಾಗಿದ್ದು, ಅದು ಸಮಾಜದೊಂದಿಗೆ ಸಂಪರ್ಕವನ್ನು ಗಾಢವಾಗಿಸುತ್ತದೆ ಎಂದು ಹೇಳಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು  "ಎಲ್ಲ ರೇಡಿಯೋ ಕೇಳುಗರಿಗೆ ಮತ್ತು ನಾವೀನ್ಯಪೂರ್ಣ ವಸ್ತುವಿಷಯ ಮತ್ತು ಸಂಗೀತದೊಂದಿಗೆ ರೇಡಿಯೊವನ್ನು ಆಲಿಸುವವರಿಗೆ ವಿಶ್ವ ರೇಡಿಯೋ ದಿನದ ಶುಭಾಶಯಗಳು!, ಇದೊಂದು ಅದ್ಭುತ ಮಾಧ್ಯಮವಾಗಿದೆ, ಇದು ಸಾಮಾಜಿಕ ಸಂಪರ್ಕವನ್ನು ಗಾಢವಾಗಿಸುತ್ತದೆ. ನಾನು ವೈಯಕ್ತಿಕವಾಗಿ ರೇಡಿಯೋದ ಧನಾತ್ಮಕ ಪರಿಣಾಮವನ್ನು ಅನುಭವಿಸುತ್ತಿದ್ದೇನೆ, #MannKiBaat ಗೆ ಧನ್ಯವಾದಗಳು." ಎಂದು ತಿಳಿಸಿದ್ದಾರೆ.

***



(Release ID: 1698042) Visitor Counter : 119