ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್ ಸಾವಿನ ಪ್ರಮಾಣ ಇಳಿಕೆ; ಕಳೆದ 10 ದಿನಗಳಿಂದ ದೈನಂದಿನ ಸಾವಿನ ಪ್ರಮಾಣ 150ಕ್ಕಿಂತ ಕಡಿಮೆ


ಕಳೆದ 24 ತಾಸುಗಳಲ್ಲಿ 17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಸಾವಿನ ಪ್ರಕರಣವಿಲ್ಲ

33 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 5 ಸಾವಿರ ಮಟ್ಟಕ್ಕಿಂತ ಕಡಿಮೆ

ಗರಿಷ್ಠ ಕೋವಿಡ್ ಲಸಿಕೆ ಕಾರ್ಯದಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ 3ನೇ ಸ್ಥಾನ

ಈವರೆಗೆ 58 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳಿಗೆ ಲಸಿಕೆ

Posted On: 08 FEB 2021 11:06AM by PIB Bengaluru

ಕೋವಿಡ್-19 ಸೋಂಕು ನಿಯಂತ್ರಣಕ್ಕೆ ನಿರಂತರ ಹೋರಾಟ ನಡೆಸುತ್ತಿರುವ ಭಾರತ, ಹಲವು ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಕೋವಿಡ್ ಸೋಂಕಿನಿಂದ ಸಂಭವಿಸುತ್ತಿದ್ದ ಸಾವಿನ ಸಂಖ್ಯೆ ದಿನೇದಿನೆ ನಿಯಂತ್ರಣಕ್ಕೆ ಬರುತ್ತಿದ್ದು, ಕಳೆದ 10 ದಿನಗಳಿಂದ ದೈನಂದಿನ ಮರಣ ಪ್ರಮಾಣ 150 ಮಟ್ಟಕ್ಕಿಂತ ಕೆಳಕ್ಕೆ ತಗ್ಗಿದೆ. ಕಳೆದ 24 ತಾಸುಗಳಲ್ಲಿ 84 ಸಾವುಗಳು ವರದಿಯಾಗಿವೆ.

ಕೋವಿಡ್ ಸೋಂಕಿನ ತ್ವರಿತ ಪತ್ತೆ, ವಿಸ್ತೃತ ಪರೀಕ್ಷಾ ವಿಧಾನ, ಗುಣಮಟ್ಟದ ಚಿಕಿತ್ಸಾ ವಿಧಾನ ಮುಂತಾದ ಪರಿಣಾಮಕಾರಿ ಕಾರ್ಯತಂತ್ರಗಳ ಫಲವಾಗಿ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದು, ಸಾವಿನ ಸಂಖ್ಯೆ ಕಡಿಮೆ ಆಗುತ್ತಿದೆ. ಇದರ ಜತೆಗೆ, ದೈನಂದಿನ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಸ್ಥಿರವಾಗಿ ಇಳಿಕೆ ಕಾಣುತ್ತಿದೆ.

ಕೋವಿಡ್ ನಿರ್ವಹಣೆ ಮತ್ತು ಸ್ಪಂದನಾ ನೀತಿಯ ಭಾಗವಾಗಿ, ಕೇಂದ್ರ ಸರಕಾರ ಕೊರಾನಾ ಸಂಬಂಧಿತ ಸಾವುಗಳನ್ನು ನಿಯಂತ್ರಣಕ್ಕೆ ತರಲು ಆದ್ಯತೆಯ ಗಮನ ನೀಡುವ ಜತೆಗೆ, ಗಂಭೀರ ಕೋವಿಡ್ ಸೋಂಕಿತರಿಗೆ ಗುಣಮಟ್ಟದ ಕ್ಲಿನಿಕಲ್ ಸಂರಕ್ಷಣೆ ಮತ್ತು ಚಿಕಿತ್ಸೆ ಮೂಲಕ ಜೀವಗಳನ್ನು ಉಳಿಸುತ್ತಿದೆ, ಸಾವಿನ ಪ್ರಮಾಣಗಳನ್ನು ನಿಯಂತ್ರಣಕ್ಕೆ ತರುತ್ತಿದೆ.

ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವದ ಪ್ರಯತ್ನಗಳಿಂದಾಗಿ ಕೊರೊನಾ ಸಾವಿನ ಪ್ರಕರಣಗಳು ಗಣನೀಯವಾಗಿ ತಗ್ಗುತ್ತಿವೆ.

17 ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಳೆದ 24 ತಾಸುಗಳಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ. ಅಂಡಮಾನ್-ನಿಕೋಬರ್ ದ್ವೀಪ, ಡಿಯು ಮತ್ತು ಡಾಮನ್, ದಾದ್ರಾ ಮತ್ತು ನಗರ್ ಹವೇಲಿ, ಅರುಣಾಚಲ ಪ್ರದೇಶ, ತ್ರಿಪುರ, ಮಿಜೋರಾಮ್, ನಾಗಾಲ್ಯಾಂಡ್, ಲಕ್ಷದ್ವೀಪ, ಲಡಖ್, ಸಿಕ್ಕಿಂ, ರಾಜಸ್ತಾನ, ಮೇಘಾಲಯ, ಮಧ್ಯ ಪ್ರದೇಶ, ಜಮ್ಮು-ಕಾಶ್ಮೀರ, ಪುದುಚೇರಿ, ಆಂಧ್ರ ಪ್ರದೇಶ, ಒಡಿಶಾ ಮತ್ತು ಅಸ್ಸಾಂನಲ್ಲಿ ಸಾವುಗಳು ವರದಿಯಾಗಿಲ್ಲ.

ಕಳೆದ 24 ತಾಸುಗಳಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 1,48,609ಕ್ಕೆ ಇಳಿಕೆ ಕಂಡಿದೆ. ದೇಶಾದ್ಯಂತ ಸಕ್ರಿಯ ಪ್ರಕರಣಗಳ ಪ್ರಮಾಣ ಪಾಸಿಟಿವ್ ಪ್ರಕರಣಗಳ ಶೇಕಡ 1.37 ರಷ್ಟಿದೆ

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 11,831 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಜತೆಗೆ, 11,904 ಸೋಂಕಿತರು ಒಂದೇ ದಿನದಲ್ಲಿ ಗುಣಮುಖರಾಗಿದ್ದಾರೆ.

ದೇಶಾದ್ಯಂತ ದಾಖಲಾಗಿರುವ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ 5 ರಾಜ್ಯಗಳಲ್ಲೇ 81% ಪ್ರಕರಣಗಳು ಪತ್ತೆಯಾಗಿವೆ. ಕೇರಳ ಮತ್ತು ಮಹಾರಾಷ್ಟ್ರದಲ್ಲಿ 70% ಸಕ್ರಿಯ ಪ್ರಕರಣಗಳು ದಾಖಲಾಗಿವೆ.

33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 5 ಸಾವಿರ ಮಟ್ಟಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳು ವರದಿಯಾಗಿವೆ.

ರಾಷ್ಟ್ರೀಯ ಸರಾಸರಿಯನ್ನು ತಾಳೆ ಹಾಕಿ ನೋಡಿದರೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ತಗ್ಗುತ್ತಾ ಬಂದಿದೆ.

ಮಹಾರಾಷ್ಟ್ರದಲ್ಲಿ ಅತ್ಯಂತ ಗರಿಷ್ಟ ಪ್ರಮಾಣದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡಿದ್ದರೆ, ಉತ್ತರ ಪ್ರದೇಶ ನಂತರದ ಸ್ಥಾನದಲ್ಲಿದೆ.

2021 ಫೆಬ್ರವರಿ 8ರಂದು ಬೆಳಗ್ಗೆ 8 ಗಂಟೆವರೆಗೆ ಅನ್ವಯವಾಗುವಂತೆ, 24ನೇ ದಿನದ ರಾಷ್ಟ್ರವ್ಯಾಪಿ ಲಸಿಕಾ ಆಂದೋಲನದಲ್ಲಿ 58 ಲಕ್ಷಕ್ಕಿಂತ ಅಂದರೆ, 58,12,362 ಫಲಾನುಭವಿಗಳಿಗೆ ಲಸಿಕೆ ಹಾಕಲಾಗಿದೆ.

ಕ್ರಮ ಸಂಖ್ಯೆ

ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು

ಲಸಿಕೆ ಪಡೆದ ಫಲಾನುಭವಿಗಳು

1

ಅಂಡಮಾನ್ ಮತ್ತು ನಿಕೋಬರ್ ದ್ವೀಪ ಪ್ರದೇಶ

3,397

2

ಆಂಧ್ರ ಪ್ರದೇಶ

2,99,649

3

ಅರುಣಾಚಲ ಪ್ರದೇಶ

12,346

4

ಅಸ್ಸಾಂ

88,585

5

ಬಿಹಾರ

3,80,229

6

ಚಂಡೀಗಢ

5,645

7

ಛತ್ತೀಸ್ಗಢ

1,68,881

8

ದಾದ್ರ ಮತ್ತು ನಗರ್ ಹವೇಲಿ

1,504

9

ದಾಮನ್ ಮತ್ತು ಡಿಯು

708

10

ದೆಹಲಿ

1,09,589

11

ಗೋವಾ

8,257

12

ಗುಜರಾತ್

4,51,002

13

ಹರ್ಯಾಣ

1,39,129

14

ಹಿಮಾಚಲ ಪ್ರದೇಶ

54,573

15

ಜಮ್ಮು ಮತ್ತು ಕಾಶ್ಮೀರ

49,419

16

ಜಾರ್ಖಂಡ್

1,06,577

17

ಕರ್ನಾಟಕ

3,88,769

18

ಕೇರಳ

2,92,342

19

ಲಡಖ್

1,987

20

ಲಕ್ಷದ್ವೀಪ

839

21

ಮಧ್ಯಪ್ರದೇಶ

3,42,016

22

ಮಹಾರಾಷ್ಟ್ರ

4,73,480

23

ಮಣಿಪುರ

8,334

24

ಮೇಘಾಲಯ

6,859

25

ಮಿಜೋರಾಮ್

10,937

26

ನಾಗಾಲ್ಯಾಂಡ್

4,535

27

ಒಡಿಶಾ

2,76,323

28

ಪುದುಚೇರಿ

3,532

29

ಪಂಜಾಬ್

76,430

30

ರಾಜಸ್ತಾನ

4,60,994

31

ಸಿಕ್ಕಿಂ

5,372

32

ತಮಿಳುನಾಡು

1,66,408

33

ತೆಲಂಗಾಣ

2,09,104

34

ತ್ರಿಪುರ

40,405

35

ುತ್ತರ ಪ್ರದೇಶ

6,73,542

36

ಉತ್ತರಾಖಂಡ

74,607

37

ಪಶ್ಚಿಮ ಬಂಗಾಳ

3,54,000

38

ಇತರೆ

62,057

ಒಟ್ಟು

58,12,362

 

ಕಳೆದ 24 ತಾಸುಗಳಲ್ಲಿ 36,804 ಫಲಾನುಭವಿಗಳಿಗೆ 1,304 ಕಾರ್ಯಕ್ರಮಗಳಲ್ಲಿ ಲಸಿಕೆ ಹಾಕಲಾಗಿದೆ.

ಇಲ್ಲಿಯ ತನಕ ದೇಶಾದ್ಯಂತ 1,16,487 ಕಾರ್ಯಕ್ರಮಗಳಲ್ಲಿ(ಆಂದೋಲನ) ಲಸಿಕೆ ನೀಡಲಾಗಿದೆ.

ಪ್ರತಿನಿತ್ಯ ಲಸಿಕೆ ಪಡೆಯುತ್ತಿರುವ ಫಲಾನುಭವಿಗಳ ಸಂಖ್ಯೆ ಸ್ಥಿರವಾಗಿ ಏರಿಕೆ ಕಾಣುತ್ತಿದೆ.

ದೇಶಾದ್ಯಂತ ಇಲ್ಲಿಯ ತನಕ ಗುಣಮುಖರಾದವರ ಪ್ರಮಾಣ 1.05 ಕೋಟಿ (1,05,34,505) ದಾಟಿದೆ. ಸಕ್ರಿಯ ಪ್ರಕರಣಗಳು ಮತ್ತು ಚೇತರಿಕೆ ಪ್ರಕರಣಗಳ ನಡುವಿನ ಅಂತರ ದಿನೇದಿನೆ ಏರಿಕೆ ಕಾಣುತ್ತಿದ್ದು, ಅದೀಗ 10,385,896ಕ್ಕೆ ಬಂದು ನಿಂತಿದೆ. ಒಟ್ಟಾರೆ ಚೇತರಿಕೆ ದರವೀಗ 97.20%ಗೆ ಸುಧಾರಣೆ ಕಂಡಿದೆ. 6 ರಾಜ್ಯಗಳಲ್ಲೆ 80.53% ಹೊಸ ಚೇತರಿಕೆ ಪ್ರಕರಣಗಳು ವರದಿಯಾಗಿವೆ. ಕೇರಳದಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಚೇತರಿಕೆ ಪ್ರಕರಣಗಳು ವರದಿಯಾಗಿವೆ. ಅಲ್ಲಿ 5,948 ಸೋಂಕಿತರು ಒಂದೇ ದಿನ ಗುಣಮುಖರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 1,622, ಉತ್ತರ ಪ್ರದೇಶದಲ್ಲಿ 670 ಸೋಂಕಿತರು ಚೇತರಿಸಿಕೊಂಡಿದ್ದಾರೆ.

6 ರಾಜ್ಯಗಳಲ್ಲಿ ಶೇ. 85.85% ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಕೇರಳದಲ್ಲಿ ಒಂದೇ ದಿನ 6,075 ಹೊಸ ಪ್ರಕರಣಗಳು ಪತ್ತೆಯಾದರೆ, ಮಹಾರಾಷ್ಟ್ರದಲ್ಲಿ 2,673 ಮತ್ತು ಕರ್ನಾಟಕದಲ್ಲಿ 487 ಪ್ರಕರಣಗಳು ದೃಢಪಟ್ಟಿವೆ.

ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 84 ಸಾವುಗಳು ಸಂಭವಿಸಿವೆ. ಅದರಲ್ಲಿ 6 ರಾಜ್ಯಗಳಲ್ಲೇ 79.76% ಸಾವುಗಳು ವರದಿಯಾಗಿವೆ.

ಮಹಾರಾಷ್ಟ್ರದಲ್ಲಿ ಗರಿಷ್ಠ 30 ಸಾವುಗಳು ವರದಿಯಾದರೆ, ಕೇರಳದಲ್ಲಿ 19 ಸಾವುಗಳು ಉಂಟಾಗಿವೆ.

***


(Release ID: 1696196) Visitor Counter : 227