ಹಣಕಾಸು ಸಚಿವಾಲಯ

75 ವರ್ಷ ಮೀರಿದ ಹಿರಿಯ ನಾಗರಿಕರು ಪಿಂಚಣಿ ಪಡೆಯುತ್ತಿದ್ದರೆ ಅಂತಹವರಿಗೆ ಟ್ಯಾಕ್ಸ್ ರಿಟರ್ನ್ಸ್ ನಿಂದ ವಿನಾಯ್ತಿ


ಕೈಗೆಟುಕುವ/ ಬಾಡಿಗೆ ವಸತಿಗೆ ಮತ್ತಷ್ಟು ಪುಷ್ಠಿ

ಮುಖರಹಿತ ವಿವಾದ ಇತ್ಯರ್ಥಕ್ಕಾಗಿ ಸಮಿತಿ

ಮೂಲ ಸೌಕರ್ಯ ವಲಯದಲ್ಲಿ ವಿದೇಶಿ ಹೂಡಿಕೆ ಆಕರ್ಷಿಸಲು ತೆರಿಗೆ ವಿನಾಯಿತಿ

ಬಜೆಟ್ ನಲ್ಲಿ ನವೋದ್ಯಮಗಳಿಗೆ ತೆರಿಗೆ ಸಹಾಯಧನ ಪ್ರಕಟ

ಕಳೆದ ಆರು ವರ್ಷಗಳಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಕೆ ಪ್ರಮಾಣ 3.31 ಕೋಟಿಯಿಂದ 6.48 ಕೋಟಿಗೆ ಏರಿಕೆ

Posted On: 01 FEB 2021 1:37PM by PIB Bengaluru

ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ 2021-22 ನೇ ಸಾಲಿನ ಆಯವ್ಯಯವನ್ನು ಸಂಸತ್ತಿನಲ್ಲಿಂದು ಮಂಡಿಸಿದರು. ತೆರಿಗೆ ಆಡಳಿತವನ್ನು ಮತ್ತಷ್ಟು ಸರಳಗೊಳಿಸಿ ವ್ಯಾಜ್ಯ ನಿರ್ವಹಣೆ, ನೇರ ತೆರಿಗೆ ಆಡಳಿತದ ಅನುಸರಣೆ ಮಾಡುವುದಾಗಿ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ತಮ್ಮ ಬಜೆಟ್ ಭಾಷಣದಲ್ಲಿ ಕೇಂದ್ರ ಹಣಕಾಸು ಸಚಿವರು ಹಿರಿಯ ನಾಗರಿಕರಿಗೆ ಆದಾಯತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದ್ದು, ಆದಾಯ ತೆರಿಗೆ ಪ್ರಕ್ರಿಯೆಯ ಕಾಲ ಮಿತಿಯನ್ನು ತಗ್ಗಿಸಿದ್ದಾರೆ. ಮುಖರಹಿತ ಐಟಿಎಟಿ ವಿವಾದ ಇತ್ಯರ್ಥ ಸಮಿತಿ ರಚಿಸುವ, ಅನಿವಾಸಿ ಭಾರತೀಯರಿಗೆ ವಿನಾಯಿತಿ ನೀಡುವ, ಲೆಕ್ಕ ಪರಿಶೋಧನೆಯ ಮಿತಿ ಏರಿಕೆ ಮತ್ತು ಡಿವಿಡೆಂಟ್ ಆದಾಯದಲ್ಲೂ ಪರಿಹಾರ ಪ್ರಕಟಿಸಿದ್ದಾರೆ. ದೇಶದ ಮೂಲ ಸೌಕರ್ಯ ವಲಯದಲ್ಲಿ ವಿದೇಶಿ ಹೂಡಿಕೆ ಹೆಚ್ಚಿಸಲು, ಕೈಗೆಟಕುವ ಮನೆ ಮತ್ತು ಬಾಡಿಗೆ ವಸತಿ, .ಎಫ್..ಎಸ್.ಸಿಗೆ ತೆರಿಗೆ ಪ್ರೋತ್ಸಾಹ, ಸಣ್ಣ ಚಾರಿಟಬಲ್ ಟ್ರಸ್ಟ್ ಗಳು ಮತ್ತು ನವೋದ್ಯಮಗಳಿಗೆ ತೆರಿಗೆ ಉತ್ತೇಜನ ನೀಡುವುದಾಗಿ ಪ್ರಕಟಿಸಿದ್ದಾರೆ.

ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ತಮ್ಮ ಬಜೆಟ್ ಭಾಷಣದಲ್ಲಿ, ಕೋವಿಡ್19 ನಂತರ ವಿಶ್ವ ಹೊಸ ಕ್ರಮಾಂಕದಲ್ಲಿ ಹೊರ ಹೊಮ್ಮುತ್ತಿದೆ ಮತ್ತು ಭಾರತ ಇದರ ನಾಯಕತ್ವವಹಿಸಲಿದೆ. ಪರಿಸ್ಥಿತಿಯಲ್ಲಿ ನಮ್ಮ ತೆರಿಗೆ ವ್ಯವಸ್ಥೆ ಪಾರದರ್ಶಕವಾಗಲಿದ್ದು, ಇದರಿಂದ ದೇಶದಲ್ಲಿ ಹೂಡಿಕೆ ಉತ್ತೇಜಿಸಿ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿದೆ. ಇದೇ ಕಾಲಕ್ಕೆ ನಮ್ಮ ತೆರಿಗೆಪಾವತಿದಾರರಿಗೆ ಕಡಿಮೆ ಹೊರೆಯಾಗಲಿದೆ. ಸರ್ಕಾರ ತೆರಿಗೆ ಪಾವತಿದಾರರು ಮತ್ತು ಆರ್ಥಿಕತೆಗೆ ಲಾಭ ತರಲು ಸರಣಿ ರೂಪದಲ್ಲಿ ತೆರಿಗೆ ಸುಧಾರಣೆಯನ್ನು ತಂದಿದ್ದು, ಇದರಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆಗೊಳಿಸಿರುವುದು, ತೆರಿಗೆಯಲ್ಲಿ ಡಿವಿಡೆಂಟ್ ವಿತರಣೆಯನ್ನು ರದ್ದುಮಾಡಿರುವುದು, ಸಣ್ಣ ತೆರಿಗೆಪಾವತಿದಾರರಿಗೆ ರಿಯಾಯಿತಿ ಹೆಚ್ಚಿಸಿರುವುದು ಸೇರಿದೆ.  2020   ವರ್ಷದಲ್ಲಿ ಆದಾಯ ತೆರಿಗೆ ಪಾವತಿ 6.48 ಕೋಟಿಗೆ ಹೆಚ್ಚಾಗಿರುವುದು ಇದರ ದ್ಯೋತಕವಾಗಿದ್ದು, 2014 ರಲ್ಲಿ ಪ್ರಮಾಣ 3.31 ಕೋಟಿಯಷ್ಟಿತ್ತು.

DIRECT TAX.jpg

ಹಿರಿಯ ನಾಗರಿಕರಿಗೆ ಪರಿಹಾರ

ದೇಶ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದು, ಹಿನ್ನೆಲೆಯಲ್ಲಿ 75 ವರ್ಷ ಮತ್ತು ವಯೋಜಿತಿ ದಾಟಿದ ಹಿರಿಯ ನಾಗರಿಕರಿಗೆ ಬಜೆಟ್ ತೆರಿಗೆ ಹೊರೆ ಕಡಿಮೆ ಮಾಡಲು ಬಯಸುತ್ತೇವೆ. ಇಂತಹ ನಾಗರಿಕರಿರು ಪಿಂಚಣಿ ಮತ್ತು ಬಡ್ಡಿ ಆದಾಯ ಹೊಂದಿರುವವರಿಗೆ ಐಟಿ ರಿಟರ್ನ್ಸ್ ಸಲ್ಲಿಕೆಯಿಂದ ವಿನಾಯಿತಿ ನೀಡಲಾಗಿದೆ. ಸಂಬಂಧಪಟ್ಟ ಬ್ಯಾಂಕ್ ಗಳು ಅವರ ಆದಾಯಕ್ಕೆ ತಕ್ಕಂತೆ ತೆರಿಗೆಯನ್ನು ಕಡಿತಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಅನಿವಾಸಿ ಭಾರತೀಯರುಎನ್.ಆರ್.ಐಗಳಿಗೆ ರಿಯಾಯಿತಿ, ಲಾಭಾಂಶ ಪರಿಹಾರ

ವಿದೇಶಗಳಲ್ಲಿ ನಿವೃತ್ತಿ ಖಾತೆಯಲ್ಲಿ ನಿರ್ದಿಷ್ಟ ಆದಾಯ ದೊಂದಿರುವ, ಭಾರತಕ್ಕೆ ಮರಳಿರುವ ಅನಿವಾಸಿ ಭಾರತೀಯರಿಗೆ ನಿಯಮಗಳನ್ನು ಅಧಿಸೂಚನೆ ಮಾಡಲು ಬಜೆಟ್ ಪ್ರಸ್ತಾಪಿಸುತ್ತದೆಟಿಡಿಎಸ್ ನಿಂದ ವಿನಾಯಿತಿ ಪಡೆದ ಆರ್..ಟಿ/ಎನ್.ಎನ್.ವಿ..ಟಿ ನಲ್ಲಿ  ಲಾಭಾಂಶ ಪಾವತಿಸಲು ಪ್ರಸ್ತಾಪಿಸಿದೆ. ಲಾಭಾಂಶದ ಆದಾಯದ ಮೇಲಿನ ಸುಧಾರಿತ ತೆರಿಗೆ ಹೊಣೆಗಾರಿಕೆ ಲಾಭಾಂಶದ ಘೋಷಣೆ ಅಥವಾ ಪಾವತಿಯ ನಂತರವೇ ಉದ್ಭವಿಸುತ್ತದೆ. ಮುಂಗಡ ತೆರಿಗೆ ಪಾವತಿಸಲು ಷೇರುದಾರರಿಂದ ಲಾಭಾಂಶದ ಆದಾಯದ ಪ್ರಮಾಣವನ್ನು ಸರಿಯಾಗಿ ಅಂದಾಜು ಮಾಡಲಾಗದ ಕಾರಣ ಕ್ರಮ ಅನುಸರಿಸಲಾಗುವುದು ಎಂದು ಹೇಳಿದ್ದಾರೆ.

ಕೈಗೆಟುವ ಮನೆಗಳು/ ಬಾಡಿಗೆ ವಸತಿ

ಕೈಗೆಟುಕುವ ಮನೆ ಖರೀದಿಸಲು ತೆಗೆದುಕೊಂಡ ಸಾಲಕ್ಕೆ 1.5 ಲಕ್ಷ ಬಡ್ಡಿ ಕ್ಲೈಮ್ ಮಾಡಲು ಅರ್ಹತಾ ಅವಧಿಯನ್ನು 2022  ಮಾರ್ಚ್ ವರೆಗೆ ವಿಸ್ತರಿಸಲಾಗುವುದು. ಕೈಗೆಟುವ ಮನೆಗಳ ಪೂರೈಕೆಯನ್ನು ಹೆಚ್ಚಿಸಲು ತೆರಿಗೆ ರಜೆ ಸೌಲಭ್ಯ ಪಡೆಯುವ ಯೋಜನೆಯನ್ನು 2022 ಮಾರ್ಚ್ ಅಂತ್ಯದವರೆಗೆ ಮತ್ತೊಂದು ವರ್ಷ ವಿಸ್ತರಿಸಲಾಗಿದೆ. ವಲಸೆ ಕಾರ್ಮಿಕರಿಗೆ ಅಗತ್ಯ ಪ್ರಮಾಣದಲ್ಲಿ ಬಾಡಿಗೆ ಆಧಾರಿತ ವಸತಿ ಸೌಲಭ್ಯ ಕಲ್ಪಿಸಲು ಅಧಿಸೂಚಿತ ಸುಲಭದರದ, ಕೈಗೆಟುವ ವಸತಿ ಯೋಜನೆಗೆ ತೆರಿಗೆ ವಿನಾಯಿತಿಯನ್ನು ಕೇಂದ್ರ ಹಣಕಾಸು ಸಚಿವರು ಘೋಷಿಸಿದ್ದಾರೆ.

ನವೋದ್ಯಮಗಳಿಗೆ ತೆರಿಗೆ ಲಾಭಗಳು

ನವೋದ್ಯಮಗಳಿಗೆ ತೆರಿಗೆ ವಿನಾಯಿತಿ ನೀಡುವ ಉದ್ದೇಶದಿಂದ ತೆರಿಗೆ ರಜೆ ಅವಧಿಯನ್ನು 2022 ಮಾರ್ಚ್ ವರೆಗೆ ಮತ್ತೊಂದು ವರ್ಷದವರೆಗೆ ವಿಸ್ತರಿಸುವುದಾಗಿ ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು. ನವೋದ್ಯಮಗಳಿಗೆ ಧನ ಸಹಾಯವನ್ನು ಉತ್ತೇಜಿಸುವ ಸಲುವಾಗಿ ಸ್ಟಾರ್ಟ್ ಅಪ್ ಗಳಲ್ಲಿನ ಹೂಡಿಕೆಗಾಗಿ ಕ್ಯಾಪಿಟಲ್ ಗೇನ್ಸ್ ವಿನಾಯಿತಿಯನ್ನು 2022 ಮಾರ್ಚ್ 31 ವರೆಗೆ ಮತ್ತೊಂದು ವರ್ಷದ ಅವಧಿಗೆ ವಿಸ್ತರಿಸಲು ಪ್ರಸ್ತಾಪಿಸಲಾಗಿದೆ ಎಂದರು.

ಕಾರ್ಮಿಕರ ಕಲ್ಯಾಣ ನಿಧಿಗೆ ಉದ್ಯೋಗಿಗಳ ಕೊಡುಗೆಯನ್ನು ಸಮಯೋಚಿತವಾಗಿ ಠೇವಣಿ ಇಡುವುದು

ಕಾರ್ಮಿಕರ ಕಲ್ಯಾಣ ನಿಧಿಗೆ ಉದ್ಯೋಗಿಗಳ ಕೊಡುಗೆಯನ್ನು ಠೇವಣಿ ಇಡುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬಡ್ಡಿ/ಆದಾಯ ಶಾಶ್ವತವಾಗಿ ನಷ್ಟವಾಗುತ್ತಿದೆ. ಹಿನ್ನೆಲೆಯಲ್ಲಿ ಉದ್ಯೋಗಿಗಳ ಕೊಡುಗೆಯನ್ನು ಸಕಾಲದಲ್ಲಿ ಠೇವಣಿ ಇಡಬೇಕು. ತಡವಾಗಿ ಠೇವಣಿ ಇಡುವುದನ್ನು, ಉದ್ಯೋಗದಾತರಿಗೆ ಕಡಿತಗೊಳಿಸುವುದಕ್ಕೆ ಎಂದಿಗೂ ಅವಕಾಶ ಕಲ್ಪಿಸುವುದಿಲ್ಲ.

ಆದಾಯ ತೆರಿಗೆ ಪ್ರಕ್ರಿಯೆಯಲ್ಲಿ ಪುನಃ ತೆರೆಯುವ ಸಮಯದಲ್ಲಿ ಕಡಿತ

ಅನುಸರಣೆ ಹೊರೆ ಕಡಿಮೆ ಮಾಡುವ ಸಲುವಾಗಿ ಬಜೆಟ್ ಆದಾಯ ತೆರಿಗೆ ಪ್ರಕ್ರಿಯೆಗಳನ್ನು ಪುನಃ ತೆರೆಯುವ ಸಮಯದ ಮಿತಿಯನ್ನು ಪ್ರಸ್ತುತ ಇರುವ ಆರು ವರ್ಷದಿಂದ ಮೂರು ವರ್ಷಕ್ಕೆ ಇಳಿಕೆ ಕಡಿಮೆ ಮಾಡಲಾಗುವುದು. ಗಂಭೀರ ತೆರಿಗೆ ತಪ್ಪಿಸುವ ವಂಚನೆ ಪ್ರಕ್ರಿಯೆಯಲ್ಲಿ ಒಂದು ವರ್ಷದಲ್ಲಿ 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯಮಾಪನವನ್ನು 10 ವರ್ಷಗಳ ವರೆಗೆ ಮತ್ತೆ ತೆರೆಯಬಹುದು. ಪ್ರಕ್ರಿಯೆ ಪ್ರಧಾನ ಮುಖ್ಯ ಆಯುಕ್ತರ ಅನುಮೋದನೆ ನಂತರವೇ ನಡೆಯಲಿದೆ ಎಂದು ಹೇಳಿದರು.

ವಿವಾದ ನಿರ್ಣಯ ಸಮಿತಿ ಮತ್ತು ಮುಖರಹಿತ ರಾಷ್ಟ್ರೀಯ ತೆರಿಗೆ ಮೇಲ್ಮನವಿ ನ್ಯಾಯಾಧೀಕರಣ ಕೇಂದ್ರ

ತೆರಿಗೆ ವ್ಯವಸ್ಥೆಯಲ್ಲಿ ವ್ಯಾಜ್ಯಗಳನ್ನು ಕಡಿಮೆ ಮಾಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಹಿನ್ನೆಲೆಯಲ್ಲಿ ಜಾರಿಗೆ ತರಲಾದ ನೇರ ತೆರಿಗೆ ವಲಯದವಿವಾದ್ ಸೆ ವಿಶ್ವಾಸ್ಕಾರ್ಯಕ್ರಮಕ್ಕೆ ಎಲ್ಲೆಡೆಯಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. 2021   ಜನವರಿ 30 ವರೆಗೆ ಒಂದು ಲಕ್ಷದ ಹತ್ತು ಸಾವಿರ ತೆರಿಗೆ ಪಾವತಿದಾರರು ಯೋಜನೆಯನ್ನು ಆಯ್ಕೆಮಾಡಿಕೊಂಡಿದ್ದು, 85 ಸಾವಿರ ಕೋಟಿ ರೂ ಮೊತ್ತದ ವಿವಾದ ಇತ್ಯರ್ಥಗೊಂಡಿದೆ. ಸಣ್ಣ ತೆರಿಗೆ ಪಾವತಿದಾರರ ವ್ಯಾಜ್ಯ ಇತ್ಯರ್ಥಪಡಿಸುವ ಸಲುವಾಗಿ ವಿವಾದ ಇತ್ಯರ್ಥಪಡಿಸುವ ಸಮಿತಿ ಮುಂದುವರೆಯಲಿದೆ. 50 ಲಕ್ಷ ರೂಪಾಯಿ ಮೊತ್ತದ ತೆರಿಗೆ ಮೊತ್ತ ಮತ್ತು ಪಾವತಿಸಬೇಕಾದ 10 ಲಕ್ಷ ರೂ ಮೊತ್ತದ ವರೆಗಿನ ಪ್ರಕರಣಗಳು ಸಮಿತಿ ಬರಲಿವೆಇದು ಮುಖ ರಹಿತ ಸಮಿತಿಯಾಗಿದ್ದು, ಸಮರ್ಥ, ಪಾರದರ್ಶಕ ಮತ್ತು ಜವಾಬ್ದಾರಿತನವನ್ನು ತರಲಿದೆ. ಮುಖ ರಹಿತ ಆದಾಯ ತೆರಿಗೆ ರಾಷ್ಟ್ರೀಯ ಮೇಲ್ಮನವಿ ಪ್ರಾಧಿಕಾರ ರಚಿಸುವುದಾಗಿ ಕೇಂದ್ರ ಹಣಕಾಸು ಸಚಿವರು ಪ್ರಕಟಿಸಿದರು.  

ಡಿಜಿಟಿಲ್ ವಹಿವಾಟಿಗೆ ತೆರಿಗೆ ಲೆಕ್ಕ ಪರಿಶೋಧನೆ ಮಿತಿ ಏರಿಕೆ

ಡಿಜಿಟಲ್ ವಹಿವಾಟು ಉತ್ತೇಜಿಸಲು ಮತ್ತು ಎಲ್ಲಾ ವಹಿವಾಟುಗಳನ್ನು ಡಿಜಿಟಲ್ ಮೂಲಕ ನಡೆಸುವವರ ಹೊರೆ ಕಡಿಮೆ ಮಾಡಲು, ಶೇ 95 ರಷ್ಟು ಡಿಜಿಟಲ್ ರೂಪದಲ್ಲಿ ವಹಿವಾಟು ನಡೆಸುವ ವ್ಯಕ್ತಿಗಳ ಲೆಕ್ಕ ಪರಿಶೋಧನೆ ಮಿತಿಯನ್ನು 5 ಕೋಟಿ ರೂಪಾಯಿಯಿಂದ 10 ಕೋಟಿ  ರೂಪಾಯಿಗೆ ಏರಿಕೆ ಮಾಡಲಾಗುವುದು ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.

ವಿದೇಶಿ ಹೂಡಿಕೆಗೆ ಪ್ರೋತ್ಸಾಹ

ಮೂಲ ಸೌಕರ್ಯ ವಲಯದಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಕೆಲವು ನಿರ್ಬಂಧಗಳನ್ನು ವಿಧಿಸಿ ಕೆಲವು ರಿಯಾಯಿತಿಗಳನ್ನು ಬಜೆಟ್ ಪ್ರಸ್ತಾಪಿಸುತ್ತದೆ. ಖಾಸಗಿ ಹೂಡಿಕೆ ನಿಷೇಧ, ವಾಣಿಜ್ಯ ಚಟುವಟಿಕೆ ನಿಯಂತ್ರಣದ ಮೂಲಕ ಮೂಲ ಸೌಕರ್ಯ ವಲಯದಲ್ಲಿ ನೇರ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೂಲ ಸೌಕರ್ಯ ವಲಯಕ್ಕೆ ಶೂನ್ಯ ಬಾಂಡ್ ಕೂಪನ್ ಗಳನ್ನು ನೀಡುವ ಮೂಲಕ ಅಧಿಸೂಚಿತ ಮೂಲ ಸೌಕರ್ಯ ನಿಧಿಗಳಲ್ಲಿ ಹಣ ಸಂಗ್ರಹಿಸಲು ಅರ್ಹರನ್ನಾಗಿ ಮಾಡಲು ಪ್ರಸ್ತಾಪಿಸಲಾಗಿದೆ.

.ಎಸ್.ಎಸ್.ಸಿಗೆ ತೆರಿಗೆ ಪ್ರೋತ್ಸಾಹ

ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ [.ಎಫ್.ಎಸ್.ಸಿ]ಯನ್ನು ಉತ್ತೇಜಿಸಲು ವಿಮಾರ್ಣ ಗುತ್ತಿಗೆ ಕಂಪೆನಿಗಳು, ವಿದೇಶಿ ಗುತ್ತಿಗೆದಾರರಿಗೆ ವಿಮಾನ ಬಾಡಿಗೆ ಗುತ್ತಿಗೆ ಪಾವತಿ, .ಎಫ‍್.ಎಸ್.ಸಿ ಮೂಲಕ ವಿದೇಶಿ ನಿದಿಯನ್ನು ಮರು ಹಂಚಿಕೆ ಮಾಡುವ ಮತ್ತು .ಎಫ್.ಎಸ್.ಸಿ ಇರುವ ಕಡೆಗಳಲ್ಲಿ ಬ್ಯಾಂಕ್ ಹೂಡಿಕೆಗಳಿಗೆ ಕ್ಯಾಪಿಟಲ್ ಗೇನ್ ಗೆ ತೆರಿಗೆ ರಜೆ ಘೋಷಿಸಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಬಜೆಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.

ಸಣ್ಣ ಟ್ರಸ್ಟ್ ಗಳಿಗೆ ಪರಿಹಾರ

ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು ನಡೆಸುವ ಸಣ್ಣ ಚಾರಿಟಬಲ್ ಟ್ರಸ್ಟ್ ಗಳ ಅನುಸರಣೆ ಹೊರೆಯನ್ನು ಕಡಿಮೆ ಮಾಡಲು ಟ್ರಸ್ಟ್ ಗಳಿಗೆ ವಾರ್ಷಿಕ ರಶೀದಿಗಳ ಮಿತಿಯನ್ನು 1 ಕೋಟಿ ರೂಪಾಯಿಯಿಂದ ವಿವಿಧ ಅನುಸರಣೆಗಳ ಅನ್ವಯ 5 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ.

ಮುಖರಹಿತ .ಟಿ..ಟಿ

ಮುಂದುವರೆದು ಪ್ರಸ್ತಾಪಿಸಿದ ಶ್ರೀಮತಿ ನಿರ್ಮಲ ಸೀತಾರಾಮನ್, ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರ ಮುಖರಹಿತವಾಗಿರಬೇಕು ಎಂದು ಹೇಳಿದರು. ಇದಕ್ಕಾಗಿ ಮುಖರಹಿತ ರಾಷ್ಟ್ರೀಯ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರ ಸ್ಥಾಪಿಸುವುದಾಗಿ ಪ್ರಸ್ತಾಪಿಸಿದ್ದಾರೆ. ಕೇಂದ್ರದೊಂದಿಗೆ ಎಲ್ಲಾ ನ್ಯಾಯಾಧೀಕರಣ ಮತ್ತು ಮೇಲ್ಮನವಿ ಪ್ರಾಧಿಕಾರಗಳು ವಿದ್ಯುನ್ಮಾನ ತಂತ್ರಜ್ಞಾನದ ಮೂಲಕ ಜೋಡಣೆಯಾಗಲಿವೆ ಎಂದು ಹೇಳಿದರು.

ರಿಟರ್ನ್ಸ್ ಗಳ ಪೂರ್ವಪಾವತಿ

ಆದಾಯ ತೆರಿಗೆ ರಿಟರ್ನ್ಸ್ ಗಳನ್ನು ಸುಲಲಿತಗೊಳಿಸಲು ಪಟ್ಟಿಮಾಡಲಾದ ಭದ್ರತೆ, ಬಂಡವಾಳದ ಲಾಭಗಳು, ಲಾಭಾಂಶದ ಆದಾಯ ಮತ್ತು ಬ್ಯಾಂಕುಗಳು, ಅಂಚೆ ಕಚೇರಿ ಇತ್ಯಾದಿಗಳಿಂದ ಬರುವ ಬಡ್ಡಿ ವಿವರಗಳನ್ನು ಪೂರ್ವಭಾವಿಯಾಗಿ ಭರ್ತಿಮಾಡಲು ಬಜೆಟ್ ಪ್ರಸ್ತಾಪಿಸುತ್ತದೆ. ವೇತನ ಆದಾಯ, ತೆರಿಗೆ ಪಾವತಿ, ಟಿಡಿಎಸ್ ಇತ್ಯಾದಿ ವಿವರಗಳ ರಿಟರ್ನ್ಸ್ ಗಳನ್ನು ಮೊದಲೇ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

***(Release ID: 1694443) Visitor Counter : 260