ಪ್ರಧಾನ ಮಂತ್ರಿಯವರ ಕಛೇರಿ

ಫೆಬ್ರವರಿ 4, “ಚೌರಿ ಚೌರ” ಶತಮಾನೋತ್ಸವ ಸಮಾರಂಭ ಉದ್ಘಾಟಿಸಲಿರುವ ಪ್ರಧಾನಮಂತ್ರಿ

Posted On: 02 FEB 2021 11:15AM by PIB Bengaluru

ಉತ್ತರ ಪ್ರದೇಶದ ಗೋರಖ್ ಪುರ್ ದ ಚೌರಿ ಚೌರಾದಲ್ಲಿ “ಚೌರಿ ಚೌರ” ಶತಮಾನೋತ್ಸವ ಸಮಾರಂಭವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 4 ರಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.

ಈ ಘಟನೆ ಸ್ವಾತಂತ್ರ್ಯ ಹೋರಾಟದ ಹೆಗ್ಗುರಾತಾಗಿದ್ದು, “ಚೌರಿ ಚೌರ” ಗೆ 100 ವರ್ಷಗಳು ತುಂಬುತ್ತಿದೆ. “ಚೌರಿ ಚೌರ” ಘಟನೆಯ ಶತಮಾನೋತ್ಸವ ಸಮಾರಂಭದ ಸ್ಮರಣಾರ್ಥ  ಪ್ರಧಾನಮಂತ್ರಿ ಅವರು ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ.  ಈ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅವರು ಸಹ ಪಾಲ್ಗೊಳ್ಳುತ್ತಿದ್ದಾರೆ.

ಶತಮಾನೋತ್ಸವ ಸಮಾರಂಭವನ್ನು ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ವರ್ಷಪೂರ್ತಿ ಆಚರಿಸುತ್ತಿದ್ದು, 2021ರ ಫೆಬ್ರವರಿ 4 ರಂದು ಪ್ರಾರಂಭವಾಗಿ 2022ರ ಫೆಬ್ರವರಿ 4 ರಂದು ಸಂಪನ್ನಗೊಳ್ಳಲಿದೆ.

***



(Release ID: 1694432) Visitor Counter : 222