ಹಣಕಾಸು ಸಚಿವಾಲಯ
ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ 15 ಸಾವಿರ ಶಾಲೆಗಳ ಗುಣಾತ್ಮಕ ಬಲವರ್ಧನೆಗೆ ಬಜೆಟ್ ನಲ್ಲಿ ಪ್ರಸ್ತಾಪ
ಎನ್.ಜಿ.ಓ./ ಖಾಸಗಿ ಶಾಲೆ/ ರಾಜ್ಯಗಳ ಸಹಯೋಗದಲ್ಲಿ 100 ಹೊಸ ಸೈನಿಕ ಶಾಲೆಗಳ ಸ್ಥಾಪನೆ
ಮಾನದಂಡದ ನಿಗದಿ, ಮಾನ್ಯತೆ, ನಿಯಂತ್ರಣ ಮತ್ತು ಆರ್ಥಿಕ ನೆರವಿಗಾಗಿ ಭಾರತೀಯ ಉನ್ನತ ಶಿಕ್ಷಣ ಆಯೋಗದ ಪ್ರಸ್ತಾಪ
ಲಡಾಖ್ ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯದ ಸ್ಥಾಪನೆ
Posted On:
01 FEB 2021 1:43PM by PIB Bengaluru
15 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಗುಣಾತ್ಮಕ ಬಲವರ್ಧನೆ; ಆಯಾ ಪ್ರದೇಶಗಳಲ್ಲಿ ಮಾದರಿಯ ಶಾಲೆಗಳಾಗಿ ಹೊರಹೊಮ್ಮಲು ಅವುಗಳಿಗೆ ಅನುವು ಮಾಡಿಕೊಡುವುದು, ಆದರ್ಶ ನೀತಿಯನ್ನು ಸಾಧಿಸಲು ಇತರ ಶಾಲೆಗಳಿಗೆ ಮಾರ್ಗದರ್ಶನ ಮಾಡಲಾಗುವುದು ಎಂದು ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ 2021-22ನೇ ಸಾಲಿನ ಬಜೆಟ್ ಮಂಡನೆಯ ವೇಳೆ ತಿಳಿಸಿದ್ದಾರೆ. 100 ಸೈನಿಕ ಶಾಲೆಗಳನ್ನು ಎನ್.ಜಿ.ಓ/ ಖಾಸಗಿ ಶಾಲೆ/ ರಾಜ್ಯಗಳ ಸಹಯೋಗದಲ್ಲಿ ಸ್ಥಾಪಿಸಲಾಗುವುದು ಎಂದೂ ಅವರು ಹೇಳಿದರು.
ಉನ್ನತ ಶಿಕ್ಷಣ
ಹಣಕಾಸು ಸಚಿವರು, ಮಾನದಂಡ ನಿಗದಿ, ಮಾನ್ಯತೆ, ನಿಯಂತ್ರಣ ಮತ್ತು ಆರ್ಥಿಕ ನೆರವಿಗಾಗಿ 4 ಪ್ರತ್ಯೇಕ ವಾಹಕಗಳನ್ನು ಒಳಗೊಂಡ ಒಂದೆ ಸೂರಿನಡಿ ಭಾರತೀಯ ಉನ್ನತ ಶಿಕ್ಷಣ ಆಯೋಗ ಸ್ಥಾಪಿಸುವ ಪ್ರಸ್ತಾಪಿಸಿದರು.
“ನಮ್ಮ ಬಹುತೇಕ ನಗರಗಳು ಭಾರತ ಸರ್ಕಾರದ ಬೆಂಬಲದ ವಿವಿಧ ಸಂಶೋಧನಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಹೊಂದಿವೆ. ಉದಾಹರಣೆಗೆ ಹೈದ್ರಾಬಾದ್ ನಲ್ಲಿ 40ಕ್ಕೂ ಹೆಚ್ಚು ಸಂಸ್ಥೆಗಳಿವೆ. 9 ನಗರಗಳಲ್ಲಿ ನಾವು ಒಂದೆ ಸೂರಿನಡಿ ಸ್ವರೂಪ ರೂಪಿಸಿದರೆ, ಈ ಸಂಸ್ಥೆಗಳು ಉತ್ತಮ ಒಮ್ಮತ ಸಾಧಿಸುತ್ತವೆ, ಮತ್ತು ತಮ್ಮ ಸ್ವಾಯತ್ತತೆಯನ್ನೂ ಉಳಿಸಿಕೊಳ್ಳುತ್ತವೆ. ಈ ಉದ್ದೇಶಕ್ಕಾಗಿ ಗ್ಲೂ ಅನುದಾನವನ್ನು ಸ್ಥಾಪಿಸಲಾಗುವುದು”, ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ತಿಳಿಸಿದರು.
ಲೆಹ್ ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ
ಲಡಾಖ್ ನಲ್ಲಿ ಉನ್ನತ ಶಿಕ್ಷಣದ ಲಭ್ಯತೆಗಾಗಿ ಲೆಹ್ ನಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸುವ ಪ್ರಸ್ತಾಪವನ್ನೂ ಅವರು ಮಾಡಿದರು.
***
(Release ID: 1694047)
Visitor Counter : 275
Read this release in:
Punjabi
,
Gujarati
,
Malayalam
,
English
,
Urdu
,
Marathi
,
Hindi
,
Bengali
,
Assamese
,
Odia
,
Tamil
,
Telugu