ಹಣಕಾಸು ಸಚಿವಾಲಯ
ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದ ಪ್ರಮುಖ ಉಪಕ್ರಮಗಳು
ಉಜ್ವಲ ಯೋಜನೆಯಡಿ 1 ಕೋಟಿ ಹೆಚ್ಚು ಫಲಾನುಭವಿಗಳ ಒಳಗೊಳ್ಳುವಿಕೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ಯಾಸ್ ಪೈಪ್ ಲೈನ್ ಯೋಜನೆ ಪ್ರಾರಂಭ
ಸ್ವತಂತ್ರ ಅನಿಲ ಸರಬರಾಜು ವ್ಯವಸ್ಥೆ ನಿರ್ವಹಣೆಯ ಸ್ಥಾಪನೆ
Posted On:
01 FEB 2021 1:52PM by PIB Bengaluru
ಕೊವಿಡ್-19 ಲಾಕ್ಡೌನ್ ಅವಧಿಯಲ್ಲೂ, ದೇಶಾದ್ಯಂತ ಇಂಧನ ಸರಬರಾಜನ್ನು ಯಾವುದೇ ಅಡೆ-ತಡೆಯಿಲ್ಲದೇ ಸರ್ಕಾರ ನೀಡಿತ್ತು. ಜನರ ಜೀವನದಲ್ಲಿ ಇಂಧನದ ಅವಶ್ಯಕತೆ ಎಷ್ಟು ನಿರ್ಣಾಯಕ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಸಂಸತ್ತಿನಲ್ಲಿ ಕೇಂದ್ರ ಬಜೆಟ್ 2020-21 ಮಂಡಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆಯಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಲಯದಲ್ಲಿನ ಕೆಲವು ಪ್ರಮುಖ ಉಪಕ್ರಮಗಳನ್ನು ಘೋಷಿಸಿದರು:
- 8 ಕೋಟಿ ಕುಟುಂಬಗಳಿಗೆ ಈಗಾಗಲೇ ಲಾಭ ತಂದಿರುವ ಉಜ್ವಲ ಯೋಜನೆಯನ್ನು, 1 ಕೋಟಿ ಹೆಚ್ಚು ಫಲಾನುಭವಿಗಳಿಗೆ ವಿಸ್ತರಿಸಲಾಗುವುದು
- ಮುಂದಿನ ಮೂರು ವರ್ಷಗಳಲ್ಲಿ ಇನ್ನೂ 100 ಜಿಲ್ಲೆಗಳನ್ನು ನಗರ ಅನಿಲ ವಿತರಣಾ ಜಾಲಕ್ಕೆ ಸೇರ್ಪಡೆ
- ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ಯಾಸ್ ಪೈಪ್ ಲೈನ್ ಯೋಜನೆ ಪ್ರಾರಂಭಿಸಲಾಗುವುದು.
- ತಾರತಮ್ಯರಹಿತ ಮುಕ್ತ ಪ್ರವೇಶದ ಆಧಾರದ ಮೇಲೆ ಎಲ್ಲಾ ನೈಸರ್ಗಿಕ ಅನಿಲಗಳನ್ನು ಪೈಪ್ ಲೈನ್ ಗಳ ಮೂಲಕ ಸಾಮಾನ್ಯವಾಹಕ ಸಾಮರ್ಥ್ಯದ ಬುಕಿಂಗ್ ಸೌಲಭ್ಯ ಮತ್ತು ಸಮನ್ವಯದ ಮೂಲಕ ಸರಬರಾಜು ಮಾಡಲು, ಒಂದು ಸ್ವತಂತ್ರ ಅನಿಲ ಸರಬರಾಜು ವ್ಯವಸ್ಥೆ ನಿರ್ವಹಣೆಯನ್ನು ಸ್ಥಾಪಿಸಲಾಗುವುದು
***
(Release ID: 1694044)
Visitor Counter : 231
Read this release in:
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam