ಹಣಕಾಸು ಸಚಿವಾಲಯ

ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್ ನೆರವಿಗೆ ಕೇಂದ್ರ ಸರ್ಕಾರ ನಿಧಿ ಸ್ಥಾಪನೆ


ಅಭಿವೃದ್ಧಿ ಹಣಕಾಸು ಸಂಸ್ಥೆ(ಡಿಎಫ್ಐ) ಸ್ಥಾಪನೆ ಉದ್ದೇಶ

ಅಭಿವೃದ್ಧಿ ಹಣಕಾಸು ಸಂಸ್ಥೆಗೆ 20,000 ಕೋಟಿ ರೂ. ಬಂಡವಾಳ ನೀಡಲು ಪ್ರಸ್ತಾಪ

ವಿದೇಶಿ ಹೂಡಿಕೆದಾರರಿಂದ ಹಣಕಾಸು ಸಾಲಕ್ಕೆ ಸೂಕ್ತ ಕಾನೂನುಗಳ ತಿದ್ದುಪಡಿ

ಸಾರ್ವಜನಿಕ ಮೂಲಸೌಕರ್ಯ ಸ್ವತ್ತುಗಳ ಕಾರ್ಯಾಚರಣೆ ನಗದಿಗೆ ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಆರಂಭ

Posted On: 01 FEB 2021 1:45PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2021-22ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದರು. ಮುಂಬರುವ ವರ್ಷಗಳಲ್ಲಿ ರಾಷ್ಟ್ರೀಯ ಮೂಲಸೌಕರ್ಯ ಪೈಪ್ ಲೈನ್(ಎನ್ಐಪಿ) ಸಾಧನೆಗೆ ಕೆಳಗಿನ ಮೂರು ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ಪ್ರಕಟಿಸಿದರು:

  1. ಸಾಂಸ್ಥಿಕ ವ್ಯವಸ್ಥೆಗಳ ಸೃಷ್ಟಿ
  2. ಸ್ವತ್ತುಗಳ ನಗದೀಕರಣಕ್ಕೆ ಹೆಚ್ಚಿನ ಆದ್ಯತೆ
  3. ರಾಜ್ಯ ಮತ್ತು ಕೇಂದ್ರ ಬಜೆಟ್ ಗಳ ಬಂಡವಾಳ ವೆಚ್ಚ ಪ್ರಮಾಣ ಹೆಚ್ಚಳ

2019 ಡಿಸೆಂಬರ್ ನಲ್ಲಿ ಆರಂಭಿಸಿದ ಎನ್ಐಪಿ ಅಡಿಯಲ್ಲಿ 6835 ಯೋಜನೆಗಳಿಂದ ಇದೀಗ 7,400 ಯೋಜನೆಗಳಿಗೆ ವಿಸ್ತರಣೆ ಮಾಡಲಾಗಿದೆ ಮತ್ತು ಕೆಲವು ಮೂಲಸೌಕರ್ಯ ಸಚಿವಾಲಯಗಳನ್ನು ಒಳಗೊಂಡಂತೆ 1.10 ಲಕ್ಷ ಕೋಟಿ ರೂ. ಮೌಲ್ಯದ 217 ಯೋಜನೆಗಳು ಪೂರ್ಣಗೊಂಡಿವೆ.

Infrastructure 1.jpg

Infrastructure 2.jpg

ಮೂಲಸೌಕರ್ಯ ಹಣಕಾಸುಅಭಿವೃದ್ಧಿ ಹಣಕಾಸು ಸಂಸ್ಥೆ(ಡಿಎಫ್ಐ)

ಅಭಿವೃದ್ಧಿ ಹಣಕಾಸು ಸಂಸ್ಥೆ(ಡಿಎಫ್ಐ)ಗೆ ಕೇಂದ್ರ ಬಜೆಟ್ ನಲ್ಲಿ 20,000  ಕೋಟಿ ರೂ.ಗಳನ್ನು ನಿಗದಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವರು ಪ್ರಕಟಿಸಿದರು. ಡಿಎಫ್ಐ ಸ್ಥಾಪನೆ ಸಂಬಂಧ ಮಸೂದೆಯನ್ನು ಜಾರಿಗೊಳಿಸಲಾಗುವುದು ಎಂದ ಸಚಿವರು, ಇದು ಮೂಲಸೌಕರ್ಯ ಹಣಕಾಸು ಒದಗಿಸಲು ವೇಗವರ್ಧಕವಾಗಿ ಕಾರ್ಯನಿರ್ವಹಿಸಲಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಡಿಎಫ್ಐ ಮೂಲಕ ಕನಿಷ್ಠ 5 ಲಕ್ಷ ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ವಿದೇಶಿ ಹೂಡಿಕೆ ಕಂಪನಿಗಳಿಂದ ಐಎನ್ ವಿಐಟಿಎಸ್ ಮತ್ತು ಆರ್ ಐಟಿಎಸ್ ಮೂಲಕ ಹಣಕಾಸು ಸಾಲ ಒದಗಿಸಲಾಗುವುದು. ಅದಕ್ಕೆ ಸಂಬಂಧಿಸಿದಂತೆ ಕಾನೂನುಗಳಿಗೆ ಸೂಕ್ತ ತಿದ್ದುಪಡಿಯನ್ನು ತರಲಾಗುವುದು ಎಂದು ಸಚಿವರು ಹೇಳಿದರು. ಕ್ರಮದಿಂದಾಗಿ ಮೂಲಸೌಕರ್ಯ ಮತ್ತು ರಿಯಲ್ ಎಸ್ಟೇಟ್ ವಲಯಗಳಲ್ಲಿ ನಿಧಿ ಹೆಚ್ಚಳಕ್ಕೆ ಸಹಾಯಕವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಸ್ವತ್ತು ನಗದೀಕರಣ

ಸಂಭಾವ್ಯ ಮೂಲಸೌಕರ್ಯ ಸ್ವತ್ತುಗಳನ್ನು ಗುರುತಿಸಿ ನಗದೀಕರಣ ಮಾಡಲುರಾಷ್ಟ್ರೀಯ ನಗದೀಕರಣ ಪೈಪಲ್ ಲೈನ್ಆರಂಭಿಸಲಾಗುವುದು ಎಂದು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವರು, ಹೊಸ ಮೂಲಸೌಕರ್ಯ ನಿರ್ಮಾಣದಲ್ಲಿ ಹಣಕಾಸು ಅತ್ಯಂತ ಪ್ರಮುಖವಾಗಿದ್ದು, ಸಾರ್ವಜನಿಕ ಮೂಲಸೌಕರ್ಯ ಸ್ವತ್ತುಗಳ ಮೂಲಕ ಕಾರ್ಯ ನಿರ್ವಹಿಸಲಾಗುವುದು ಎಂದರು. ಸ್ವತ್ತು ನಗದೀಕರಣ ಡ್ಯಾಶ್ ಬೋರ್ಡ್ ಅನ್ನು ಸೃಷ್ಟಿಸಲಾಗುವುದು. ಅದರಲ್ಲಿ ಸಂಭವನೀಯ ಹೂಡಿಕೆದಾರರು ಮತ್ತು ಯೋಜನೆಗಳ ಪ್ರಗತಿ ಹಾಗೂ ನಿಗಾ ವಹಿಸಲಾಗುವುದು. ನಗದೀಕರಣ ನಿಟ್ಟಿನಲ್ಲಿ ಕೈಗೊಂಡಿರುವ ಕೆಲವು ಪ್ರಮುಖ ಕ್ರಮಗಳು ಕೆಳಗಿನಂತಿವೆ.

  • ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪಿಜಿಸಿಐಎಲ್ ಗೆ ತಲಾ ಓರ್ವ ಅಂತಾರಾಷ್ಟ್ರೀಯ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರನ್ನು ಆಕರ್ಷಿಸಲು ಆಹ್ವಾನ.  ಎನ್ಎಚ್ಎಐ ಅಡಿ, ಆಹ್ವಾನಿಸಲಾಗಿರುವ ಪ್ರಸ್ತಾಪದಲ್ಲಿ 5,000 ಕೋಟಿ ರೂ. ಮೊತ್ತದ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಉದ್ದೇಶಿಸಲಾಗಿದ್ದು, ಅದಕ್ಕಾಗಿ ಹೂಡಿಕೆದಾರರನ್ನು ಆಹ್ವಾನಿಸಲಾಗುವುದು. ಅಂತೆಯೇ 7,000 ಕೋಟಿ ರೂ. ಮೌಲ್ಯದ ವರ್ಗಾವಣೆ ಸ್ವತ್ತುಗಳನ್ನು ಪಿಜಿಸಿಐಎಲ್ ಗೆ ವರ್ಗಾಯಿಸಲಾಗುವುದು.
  • ರೈಲ್ವೆಯಿಂದ ನಿರ್ದಿಷ್ಟ ಸರಕು ಕಾರಿಡಾರ್ ಸ್ವತ್ತುಗಳ ನಗದೀಕರಣಕ್ಕೆ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಕ್ರಮ.
  • ಮುಂದಿನ ಹಂತದಲ್ಲಿ ಬಹುತೇಕ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ವಿನಾಯಿತಿ ನೀಡಲಾಗುವುದು.
  1. ಪ್ರಮುಖ ಮೂಲಸೌಕರ್ಯ ಸ್ವತ್ತುಗಳಲ್ಲದೆ, ಸ್ವತ್ತು ನಗದೀಕರಣ ಕಾರ್ಯಕ್ರಮದಲ್ಲಿ ಇತರೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು. ಅವುಗಳೆಂದರೆ : (i) ಎನ್ಎಚ್ಎಐ ಕಾರ್ಯಾಚರಣೆಯ ಟೋಲ್ ರಸ್ತೆಗಳು (ii) ಪಿಜಿಸಿಐಎಲ್ ವರ್ಗಾವಣೆ ಸ್ವತ್ತುಗಳು (iii) ಜಿಎಐಎಲ್, ಐಒಸಿಎಲ್ ಮತ್ತು ಎಚ್ ಪಿಸಿಎಲ್ ತೈಲ ಮತ್ತು ಅನಿಲ ಕೊಳವೆ ಮಾರ್ಗಗಳು (iv) ಎರಡು ಮತ್ತು ಮೂರನೇ ದರ್ಜೆ ನಗರಗಳ ಭಾರತೀಯ ವೈಮಾನಿಕ ಪ್ರಾಧಿಕಾರದ ವಿಮಾನ ನಿಲ್ದಾಣಗಳು (v) ಇತರೆ ರೈಲ್ವೆ ಮೂಲಸೌಕರ್ಯ ಸ್ವತ್ತುಗಳು (vi) ಕೇಂದ್ರೀಯ ಉಗ್ರಾಣ ನಿಗಮದ ಸಿಪಿಎಸ್ಇಯ ಉಗ್ರಾಣ ಸ್ವತ್ತುಗಳು ಮತ್ತು ನಾಫೆಡ್ ಹಾಗೂ ಇತರ ಸಂಸ್ಥೆಗಳು (vii) ಕ್ರೀಡಾ ಸಂಕೀರ್ಣಗಳು

***


(Release ID: 1693993) Visitor Counter : 342