ಹಣಕಾಸು ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಭಾರತೀಯ ಕೃಷಿ ವಲಯ ದೇಶದ ಆರ್ಥಿಕತೆಗೆ ಶೇ 3.4 ರಷ್ಟು ಕೊಡುಗೆ

ಇತ್ತೀಚಿನ ಕೃಷಿ ಸುಧಾರಣೆಗಳು ಪರಿಹಾರ, ಆದರೆ ವ್ಯಾದಿ ಅಲ್ಲ: ಆರ್ಥಿಕ ಸಮೀಕ್ಷೆ

Posted On: 29 JAN 2021 3:39PM by PIB Bengaluru

ಕೋವಿಡ್ -19 ಪ್ರೇರಿತ ಲಾಕ್ ಡೌನ್ ನಡುವೆಯೂ ದೇಶದ ಕೃಷಿ ಕ್ಷೇತ್ರ ತನ್ನ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸಿದೆಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳ ಪ್ರಗತಿ ಶೇ 3.4 ರಷ್ಟು ಸ್ಥಿರ ದರಗಳ ಬೆಳವಣಿಗೆಯನ್ನು 2020-21 [ಮೊದಲ ಮುಂಗಡ ಅಂದಾಜು] ದಾಖಲಿಸಿದೆ ಎಂದು ಹಣಕಾಸು ಸಮೀ್ಕ್ಷೆ ಹೇಳಿದೆ

ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ 2020-21 ನೇ ಸಾಲಿನ ಆರ್ಥೀಕ ಸಮೀಕ್ಷೆ ಮಂಡಿಸಿದರು.

2020, ಮೇ 29 ರಂದು ರಾಷ್ಟ್ರೀಯ ಆದಾಯ ತಾತ್ಕಾಲಿಕ ಅಂದಾಜು ವರದಿ ಸಿಎಸ್ಒನಿಂದ ಬಿಡುಗಡೆಯಾಗಿದ್ದು, ಇದರ ಪ್ರಕಾರ ದೇಶದ ಕೃಷಿ ಮತ್ತು ಕೃಷಿ ಸಂಬಂಧಿತ ನಿವ್ವಳ ಮೌಲ್ಯ ವರ್ಧನೆ [ಜಿವಿಎ] ಪ್ರಸ್ತುತ ದರ 2019 – 20 ಸಾಲಿನಲ್ಲಿ ಶೇ 17.8 ರಷ್ಟಿದೆ.  

ದಾಖಲೆ ಪ್ರಮಾಣದಲ್ಲಿ ಆಹಾರ ಉತ್ಪಾದನೆ

2019-20 ನೇ ಕೃಷಿ ಸಾಲಿನಲ್ಲಿ [ ನಾಲ್ಕನೇ ಮುಂಗಡ ಅಂದಾಜು] ಒಟ್ಟಾರೆ ದೇಶದ ಆಹಾರ ಉತ್ಪಾದನೆ ಅಂದಾಜು 296.65 ದಶಲಕ್ಷ ಟನ್ ನಷ್ಟಿದ್ದು, ಇದು ಹಿಂದಿನ ಸಾಲಿಗೆ ಹೋಲಿಕೆ ಮಾಡಿದರೆ ಶೇ 11.4 ರಷ್ಟು ಅತ್ಯಧಿಕ.  2018-19 ನೇ ಸಾಲಿನಲ್ಲಿ 285.21 ದಶಲಕ್ಷ ಟನ್ ನಷ್ಟಿತ್ತು.

ಕೃಷಿ ರಫ್ತು

2019-20 ನೇ ಸಾಲಿನಲ್ಲಿ ದೇಶದ ಕೃಷಿ ಮತ್ತು ಸಂಬಂಧಿತ ರಫ್ತು ಒಟ್ಟು 252 ಸಾವಿರ ಕೋಟಿ ರೂಪಾಯಿಯಾಗಿದೆ. ಅಮೆರಿಕ, ಸೌದಿ ಅರೆಬಿಯಾ, ಇರಾನ್, ನೇಪಾಳ ಮತ್ತು ಬಾಂಗ್ಲಾದೇಶ ರಾಷ್ಟ್ರಗಳು ಹೆಚ್ಚು ರಫ್ತು ಮಾಡುವ ತಾಣಗಳಾಗಿವೆ.  ದೇಶದಿಂದ ಹೆಚ್ಚಾಗಿ ಸಾಗರ ಉತ್ಪನ್ನಗಳು, ಬಾಸ್ಮತಿ ಅಕ್ಕಿ, ಎಮ್ಮೆ ಮಾಂಸ, ಮಸಾಲೆ ಪದಾರ್ಥಗಳು, ಬಾಸ್ಮತಿಯಲ್ಲದ ಅಕ್ಕಿ, ಕಚ್ಚಾ ಹತ್ತಿ, ಎಣ್ಣೆ, ಸಕ್ಕರೆ, ಎಳ್ಳೆಣ್ಣೆ ಮತ್ತು ಚಹಾ ಇದರಲ್ಲಿ ಸೇರಿದೆ. ಕೃಷಿ ಉತ್ಪನ್ನಗಳ ವ್ಯಾಪಾರದಲ್ಲಿ ಭಾರತ ಮುಂಚೂಣಿ ಸ್ಥಾನವನ್ನು ಆಕ್ರಮಿಸಿಕೊಂಡಿದ್ದು, ಒಟ್ಟಾರೆ ದೇಶದ ಕೃಷಿ ವ್ಯಾಪಾರದಲ್ಲಿ ಶೇ 2.5 ರಷ್ಟು ಕೊಡುಗೆ ಭಾರತದ್ದಾಗಿದೆ.

ಕನಿಷ್ಠ ಬೆಂಬಲ ಬೆಲೆ

2018-19 ರಲ್ಲಿ ಕೇಂದ್ರ ಸರ್ಕಾರ ತನ್ನ ಬಜೆಟ್ ನಲ್ಲಿ ಒಟ್ಟಾರೆ ಕೃಷಿ ವೆಚ್ಚದ 1.5 ರಷ್ಟು ಅಂದರೆ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ಪ್ರಕಟಿಸಿತ್ತು. ಇದೇ ಆಧಾರದ ತತ್ವಗಳ ಮೇಲೆ ಇತ್ತೀಚೆಗೆ ಕೇಂದ್ರ ಸರ್ಕಾರ 2020-21 ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಋತುಮಾನದಲ್ಲಿ ಬೆಲೆಗಳನ್ನು ಹೆಚ್ಚಿಸಿರುವುದನ್ನು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.

ಕೃಷಿ ಸುಧಾರಣೆಗಳು

ಇತ್ತೀಚಿನ ಕೃಷಿ ಸುಧಾರಣೆಗಳ ಕುರಿತು ಆರ್ಥಿಕ ಸಮೀಕ್ಷೆ ತನ್ನ ವರದಿಯಲ್ಲಿಮೂರು ಪ್ರಮುಖ ಕೃಷಿ ಸುಧಾರಣಾ ಕಾನೂನುಗಳಿಂದ ದೇಶದ ಶೇ 85 ರಷ್ಟು ಸಣ್ಣ ಮತ್ತು ಮಧ್ಯಮ ವಲಯದ ರೈತರಿಗೆ ಅನುಕೂಲವಾಗಲಿದ್ದು, ಅತಿ ಹೆಚ್ಚು ತೊಂದರೆಗೆ ಒಳಗಾಗುವವರು ಎಪಿಎಂಸಿ ಸಂಬಂಧಿತ ಮಾರುಕಟ್ಟೆ ವ್ಯವಸ್ಥೆ ಹೊಂದಿರುವವರುಎಂದು ಹೇಳಿದೆ. ಹೊಸ ಕೃಷಿ ಕಾನೂನುಗಳು ಮಾರುಕಟ್ಟೆ ಸ್ವಾತಂತ್ರ್ಯದಲ್ಲಿ ಹೊಸ ಯುಗ ಆಋಂಭವಾಗಲಿದ್ದು, ದೀರ್ಘಕಾಲದಲ್ಲಿ ದೇಶದಲ್ಲಿ ರೈತರ ಕಲ್ಯಾಣದಲ್ಲಿ ಸುಧಾರಣೆ ಕಂಡು ಬರಲಿದೆ ಎಂದು ಹೇಳಿದೆ.

ಆತ್ಮ ನಿರ್ಭರ್ ಭಾರತ್ ಅಭಿಯಾನ

ಆತ್ಮ ನಿರ್ಭರ್ ಭಾರತ್ ನಡಿ ಘೋಷಿಸಲಾದ ಒಂದು ಲಕ್ಷ ಕೋಟಿ ರೂಪಾಯಿ ಮೂಲ ಸೌಕರ್ಯ ನಿಧಿ, ಸೂಕ್ಷ್ಮ ಆಹಾರ ಉದ್ಯಮ ವಲಯದ ಸ್ಥಾಪನಗಾಗಿ 10,000 ಕೋಟಿ ರೂಪಾಯಿ [ಎಂಎಫ್ಇ], ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ [ಪಿಎಂ.ಎಂ..ಎಸ್.ವೈ] ಮೀನುಗಾರರಿಗಾಗಿ 20 ಸಾವಿರ ಕೋಟಿ ರೂಪಾಯಿ ಯೋಜನೆ, ಪಶುಸಂಗೋಪನೆ ಮೂಲ ಸೌಲಭ್ಯ ಅಭಿವೃದ್ಧಿ ನಿಧಿಯಡಿ ಪ್ರಾಣಿಗಳ ರಾಷ್ಟ್ರೀಯ ರೋಗ ನಿಯಂತ್ರಣಕ್ಕಾಗಿ 15,000 ಸಾವಿರ ಕೋಟಿ ರೂಪಾಯಿಅಗತ್ಯ ವಸ್ತುಗಳ ಕಾಯ್ದೆಯಡಿ ಸುಧಾರಣೆಗಳು, ಕೃಷಿ ಮಾರುಕಟ್ಟೆ ಮತ್ತು ಕೃಷಿ ಉತ್ಪನ್ನ ದರ ಮತ್ತು ಗುಣಮಟ್ಟ ಖಾತರಿ ಕಾರ್ಯಕ್ರಮ, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಒಂದು ದೇಶಒಂದು ಪಡಿತರ ಚೀಟಿ ಕಾರ್ಯಕ್ರಮಗಳ ಅನುಕೂಲಗಳನ್ನು ಆರ್ಥಿಕ ಸಮೀಕ್ಷೆ ಪಟ್ಟಿ ಮಾಡಿದೆ.

ಕೃಷಿ ಸಾಲ

ದೇಶದ ಸಣ್ಣ ಮತ್ತು ಮಧ್ಯಮ ಕೃಷಿ ಕ್ಷೇತ್ರದ ಕೃಷಿಕರಿಗೆ ಸಕಾಲಕ್ಕೆ ಮೂಲಭೂತ ಅಗತ್ಯವಾದ ಸಾಲ ಸೌಲಭ್ಯಗಳು ದೊರೆಯುವಂತೆ ಮಾಡಲು ಹೆಚ್ಚಿನ ಪ್ರಮಾಣದ ಸಂಪನ್ಮೂಲವನ್ನು ನಿಗದಿಪಡಿಸಲಾಗಿದೆ. 2019-20 ನೇ ಸಾಲಿನಲ್ಲಿ ಕೃಷಿ ಸಾಲ 13,50,000 ಕೋಟಿ ರೂಪಾಯಿ ಆಗಿದ್ದು, 13,92,469,81 ಕೋಟಿ ರೂಪಾಯಿ ಸಾಲ ನೀಡುವ ಗುರಿ ಹೊಂದಲಾಗಿತ್ತು. 2020-21 ನೇ ಸಾಲಿಗೆ 15,00,000 ಕೋಟಿ ರೂ ರೂಪಾಯಿ ಸಾಲ ನೀಡುವ ಗುರಿ ಹೊಂದಲಾಗಿದೆ. 2020 ನವೆಂಬರ್ ವೇಳೆಗೆ 9,73,517.80 ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ. ಆತ್ಮ ನಿರ್ಭರ್ ಭಾರತ್ ಭಾಗವಾಗಿ ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ನಿಧಿ ಸ್ಥಾಪಿಸುವುದಾಗಿ ಪ್ರಕಟಿಸಿದ್ದು, ಇದರಿಂದ ಕೃಷಿ ಕ್ಷೇತ್ರದಲ್ಲಿ ಸಾಲ ಸೌಲಭ್ಯದ ಹರಿವು ಸುಗಮವಾಗಲಿದೆ ಎಂಬುದನ್ನು ಆರ್ಥಿಕ ಸಮೀಕ್ಷೆ ಗಮನಿಸಿದೆ.

ಬಜೆಟ್ ಕಾರ್ಯಕ್ರಮಗಳ ಘೋಷಣೆ ಜೊತೆಜೊತೆಗೆ ಜಾನುವಾರುಗಳನ್ನು ಸಹ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. 2020, ಫೆಬ್ರವರಿಯಲ್ಲಿ ಹಾಲು ಒಕ್ಕೂಟ ಮತ್ತು ಹಾಲು ಉತ್ಪಾದಕರಿಗೆ 1,5 ಕೋಟಿ ಕಿಸಾನ್ ಕ್ರಿಡಿಟ್ ಕಾರ್ಡ್ ಗಳನ್ನು ನೀಡುವುದಾಗಿ ಪ್ರಕಟಿಸಿತ್ತು. ಬಳಿಕ ಪ್ರಧಾನಮಂತ್ರಿ ಆತ್ಮನಿರ್ಭರ್ ಭಾರತ್ ಭಾಗವಾಗಿ ಕಿಸಾನ್ ಕ್ರಿಡಿಟ್ ಕಾರ್ಡ್ ಒದಗಿಸುವುದಾಗಿ ಪ್ರಕಟಿಸಲಾಗಿದೆ. 2021 ಜನವರಿ ಮಧ್ಯಭಾಗದ ವೇಳೆಗೆ ಮೀನುಗಾರರು ಮತ್ತು ಮೀನುಗಾರರ ಕುಟುಂಬಗಳಿಗೆ ಒಟ್ಟು 44,673 ಕಿಸಾನ್ ಕ್ರಿಡಿಟ್ ಕಾರ್ಡ್ [ಕೆಸಿಸಿ] ಗಳನ್ನು ಒದಗಿಸಿದ್ದು, ಹೆಚ್ಚುವರಿಯಾಗಿ 4.04 ಲಕ್ಷ ಅರ್ಜಿಗಳು ಮೀನುಗಾರರು ಮತ್ತು ಮೀನುಗಾರರ ಕುಟುಂಬಗಳಿಂದ ಬಂದಿದ್ದು, ಇವು ಬ್ಯಾಂಕ್ ಗಳಲ್ಲಿ ವಿವಿಧ ಹಂತಗಳಲ್ಲಿವೆ ಎಂದು ಆರ್ಥಿಕ ಸಮೀಕ್ಷೆ ವರದಿ ತಿಳಿಸಿದೆ.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ [ಪಿ.ಎಂ.ಎಫ್.ಬಿ.ವೈ] ಪ್ರಮುಖ ಮೈಲುಗಲ್ಲಾಗಿದ್ದು, ಸಮಗ್ರವಾಗಿ ಕೃಷಿಕರಿಗೆ ಅಪಾಯದಿಂದ ಪರಿಹಾರ ದೊರಕಿಸಲಿದೆ. ಪಿ.ಎಂ.ಎಫ್..ಬಿ.ವೈನಲ್ಲಿ 5.5 ಕೋಟಿ ರೈತರಿಗೆ ಪ್ರತಿವರ್ಷ ಸೌಲಭ್ಯ ದೊರೆಯುತ್ತಿದೆ. 2021 ಜನವರಿ 12 ವೇಳೆಗೆ 90,000 ಕೋಟಿ ರೂಪಾಯಿ ಮೊತ್ತವನ್ನು ಕ್ಲೈಮ್ ಮಾಡಲಾಗಿದೆ. ಆಧಾರ್ ಸಂಪರ್ಕವನ್ನು ರೈತರ ಖಾತೆಗಳಿಗೆ ಜೋಡಿಸಲಾಗಿದ್ದು, ಇದರಿಂದ ಕ್ಲೈಮ್ ಗಳು ತ್ವರಿತವಾಗಿ ಇತ್ಯರ್ಥವಾಗುತ್ತಿವೆ ಮತ್ತು ರೈತರ ಖಾತೆಗಳಿಗೆ ನೇರವಾಗಿ ಹಣ ಪಾವತಿಯಾಗುತ್ತಿದೆ. ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿಯೂ ಸಹ 70 ಲಕ್ಷ ರೈತರಿಗೆ ಯೋಜನೆಯಿಂದ ಅನುಕೂಲವಾಗಿದ್ದು, 8741.30 ಕೋಟಿ ರೂಪಾಯಿ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ ಎಂಬುದನ್ನು ಆರ್ಥಿಕ ಸಮೀಕ್ಷೆ ವರದಿಯಲ್ಲಿ ನಮೂದಿಸಲಾಗಿದೆ.

ಪಿಎಂ ಕಿಸಾನ್

2020 ಡಿಸೆಂಬರ್ ನಲ್ಲಿ ದೇಶದ 9 ಕೋಟಿ ರೈತರಿಗೆ 7 ನೇ ಕಂತಿನಲ್ಲಿ ಪಿಎಂ ಕಿಸಾನ್ ಯೋಜನೆಯಡಿ 18,000 ಕೋಟಿ ರೂಪಾಯಿ ನೆರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಹೇಳಿದೆ.

ಜಾನುವಾರು ವಲಯ

2014-15 ರಿಂದ 2018-19 ಅವಧಿಯಲ್ಲಿ ಜಾನುವಾರು ವಲಯ ಸಿ..ಜಿ.ಆರ್ ಶೇ 8.24 ರಷ್ಟು ಬೆಳವಣಿಗೆ ದಾಖಲಿಸಿದೆ. ರಾಷ್ಟ್ರೀಯ ಅಂಕಿ ಅಂಶಗಳ ಮಾಹಿತಿ [ಎನ್..ಎಸ್.] ನಡಿ ಕೃಷಿ ಮತ್ತು ಕೃಷಿ ಸಂಬಂಧಿತ ವಲಯದಲ್ಲಿ ವಲಯವಾರು ನಿವ್ವಳ ಅಂದಾಜುಗಳನ್ನು ದಾಖಲಿಸಲಾಗಿದ್ದು, ಜಿವಿಎ [ಸ್ಥಿರ ದರಗಳು] ದರಗಳು 24.32 [2014-15] ರಿಂದ ಶೇ 26.63 [2018-19]  ರಷ್ಟು ಏರಿಕೆಯಾಗಿದೆಜಿವಿಎಗೆ 2018-19 ರಲ್ಲಿ ಜಿವಿಎ ವಲಯದಲ್ಲಿ ಒಟ್ಟು ಕೊಡುಗೆ ಶೇ 4.19 ರಷ್ಟಿದೆ.

ಮೀನುಗಾರಿಕೆ

ದೇಶದಲ್ಲಿ ಮೀನು ಉತ್ಪಾದನೆ 2019-20 ರಲ್ಲಿ 14.16 ದಶಲಕ್ಷ ಟನ್ ನಷ್ಟು ಆಗಿದ್ದು, ಸರ್ವಕಾಲಿಕ ದಾಖಲೆ ನಿರ್ಮಿಸಲಾಗಿದೆ. ಇದರಿಂದ ಒಟ್ಟು ನಿವ್ವಳ ಆದಾಯ 2,12,915 ಕೋಟಿ ರೂಪಾಯಿ ಆಗಿದ್ದು, ಇದರಿಂದ ರಾಷ್ಟ್ರೀಯ ವಿಜಿಎಗೆ ಶೇ 1.24 ರಷ್ಟು ಮತ್ತು ಕೃಷಿ ಜಿವಿಎಗೆ 7.28 ರಷ್ಟು ಕೊಡುಗೆ ನೀಡಲಾಗಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ.

ಪ್ರಧಾನಮಂತ್ರಿ ಗರೀಬ್ ಕಲ್ಯಾ ಣ್ ಅನ್ನ ಯೋಜನೆ

2020-21 ನೇ ಹಣಕಾಸು ವರ್ಷದಲ್ಲಿ ಆಹಾರ ಧಾನ್ಯಗಳನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನಾ ಯೋಜನೆಯಡಿ ಆಹಾರ ಧಾನ್ಯಗಳನ್ನು ಮಂಜೂರು ಮಾಡಲಾಗಿದೆ. ಪ್ರಸ್ತುತ ಎನ್.ಎಫ್.ಎಸ್. ದೇಶದ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅನುಷ್ಠಾನಗೊಂಡಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಕೋವಿಡ್-19 ಸಂಕಷ್ಟ ಸಂದರ್ಭದಲ್ಲಿ ಸರ್ಕಾರ ಪ್ರಧಾನಮಂತ್ರಿ ಗರೀಬ್  ಕಲ್ಯಾಣ್ ಅನ್ನ ಯೋಜನೆಯನ್ನು ಜಾರಿಗೊಳಿಸಿ ಹೆಚ್ಚುವರಿಯಾಗಿ ಪಡಿತರ ಪೂರೈಕೆ ವ್ಯವಸ್ಥೆಯಡಿ ಪ್ರತಿಯೊಬ್ಬ  ಫಲಾನುಭವಿಗಳಿಗೆ ತಲಾ 5 ಕೆ..ಜಿ ಆಹಾರ ಧಾನ್ಯ ವಿತರಿಸಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಒಟ್ಟು 80.96 ಕೋಟಿ ಫಲಾನುಭವಿಗಳಿಗೆ ಹೆಚ್ಚುವರಿಯಾಗಿ ಆಹಾರ ಧಾನ್ಯಗಳನ್ನು ವಿತರಿಸಲಾಗಿದೆ. 2020 ನವೆಂಬರ್ ಅಂತ್ಯದೊಳಗೆ ಎನ್.ಎಫ್.ಎಸ್. ಯೋಜನೆಯಡಿ ಪ್ರತಿಯೊಬ್ಬರಿಗೆ ತಲಾ ಐದು ಕೆ.ಜಿ. ಆಹಾರ ಧಾನ್ಯ ವಿತರಿಸುವುದು ಕಡ್ಡಾಯವಾಗಿದೆ. ಒಟ್ಟು 75,000 ಕೋಟಿ ರೂಪಾಯಿ ಮೊತ್ತದಲ್ಲಿ  200 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯವನ್ನು ಒದಗಿಸಲಾಗಿತ್ತು. ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್  ನಡಿ ನಾಲ್ಕು ತಿಂಗಳ ಕಾಲ [ಮೇನಿಂದ ಆಗಸ್ಟ್ ವರೆಗೆ] ಪ್ರತಿ ವ್ಯಕ್ತಿಗೆ ತಲಾಕೆ.ಜಿ. ಆಹಾರ ಧಾನ್ಯ ಒದಗಿಸಲಾಗಿತ್ತು. ಎನ್.ಎಫ್..ಎಸ್.ಎನಡಿ ಅಥವಾ ರಾಜ್ಯದ ಪಡಿತರ ಚೀಟಿಗಳ ಮೂಲ  ಸುಮಾರು 8 ಕೋಟಿ ಕುಟುಂಬಗಳಿಗೆ 3,109 ಕೋಟಿ ರೂಪಾಯಿ ಮೌಲ್ಯದ ಆಹಾರ ಧಾನ್ಯ ಒದಗಿಸಲಾಗಿದೆ ಎಂದು ಆರ್ಥಿಕ ಸಮೀಕ್ಷೆ ತನ್ನ ವರದಿಯಲ್ಲಿ ತಿಳಿಸಿದೆ.

ಆಹಾರ ಸಂಸ್ಕರಣೆ ಕೈಗಾರಿಕೆ

2018-19 ಕ್ಕೆ ಕೊನೆಗೊಂಡ ಐದು ವರ್ಷಗಳಲ್ಲಿ ಆಹಾರ ಸಂಸ್ಕರಣೆ ಕೈಗಾರಿಕೆ [ಎಫ್..ಪಿ.] ವಲಯವಾರು ವಾರ್ಷಿಕ ಸರಾಸರಿ ಬೆಳವಣಿಗೆ ದರ [ಎಎಜಿಆರ್]  9.99 ರಷ್ಟು ಪ್ರಗತಿ ಸಾಧಿಸಿದೆ.  2011-12 ರಲ್ಲಿನ ದರಗಳಿಗೆ ಹೋಲಿಸಿದರೆ ಕೃಷಿ ಕ್ಷೇತ್ರದಲ್ಲಿ ಶೇ 3.12 ರಷ್ಟು ಮತ್ತು ಉತ್ಪಾದನಾ ವಲಯದಲ್ಲಿ ಶೇ 8.25 ರಷ್ಟು ದಾಖಲಾಗಿದೆ ಎಂದು ಆರ್ಥಿಕ ಸಮೀಕ್ಷಾ ವರದಿ ತಿಳಿಸಿದೆ.

***(Release ID: 1693852) Visitor Counter : 113