ಹಣಕಾಸು ಸಚಿವಾಲಯ

ಕೇಂದ್ರ ಸರ್ಕಾರದಿಂದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 12,351 ಕೋಟಿ ರೂ. ಅನುದಾನ ಬಿಡುಗಡೆ


2020-21ರಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ, ಒಟ್ಟು 45,738 ಕೋಟಿ ರೂ. ಅನುದಾನ ಬಿಡುಗಡೆ

ಕರ್ನಾಟಕಕ್ಕೆ 2412.75 ಕೋಟಿ ರೂ. ಅನುದಾನ

Posted On: 27 JAN 2021 1:16PM by PIB Bengaluru

ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ (ಆರ್ಎಲ್ಬಿ) ಅನುದಾನವಾಗಿ 18 ರಾಜ್ಯಗಳಿಗೆ 12,351.5 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಮೊತ್ತವು 2020-21 ಆರ್ಥಿಕ ವರ್ಷದಲ್ಲಿ ಬಿಡುಗಡೆಯಾದ ಮೂಲ ಅನುದಾನದ 2 ನೇ ಕಂತಾಗಿದೆ.

ಮೊದಲ ಕಂತಿನ ಬಳಕೆ ಪ್ರಮಾಣಪತ್ರವನ್ನು ನೀಡಿದ 18 ರಾಜ್ಯಗಳಿಗೆ ಮತ್ತು ಪಂಚಾಯತಿ ರಾಜ್ ಸಚಿವಾಲಯದ ಶಿಫಾರಸಿನ ಮೇರೆಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಸಮುದಾಯ ಸ್ವತ್ತುಗಳನ್ನು ನಿರ್ಮಿಸಲು ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಆರ್ಥಿಕ ಕಾರ್ಯಸಾಧ್ಯತೆಯನ್ನು ಸುಧಾರಿಸಲು 15 ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ  ಅನುದಾನವನ್ನು ಬಿಡುಗಡೆ ಮಾಡಲಾಗುತ್ತದೆ. ಹಳ್ಳಿಗಳು ಮತ್ತು ತಾಲ್ಲೂಕುಗಳಾದ್ಯಂತ ಸಂಪನ್ಮೂಲಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡಲು ಪಂಚಾಯತಿ ರಾಜ್ ವ್ಯವಸ್ಥೆಯ ಎಲ್ಲಾ ಮೂರು ಹಂತಗಳಿಗೆ - ಗ್ರಾಮ, ತಾಲ್ಲೂಕು ಮತ್ತು ಜಿಲ್ಲೆ- ಅನುದಾನವನ್ನು ನೀಡಲಾಗುತ್ತದೆ.

15 ನೇ ಹಣಕಾಸು ಆಯೋಗವು ಆರ್ಎಲ್ಬಿಗಳಿಗೆ ಮೂಲ ಮತ್ತು ಷರತ್ತಿನ ಅನುದಾನ ಎಂದು ಎರಡು ರೀತಿಯ ಅನುದಾನವನ್ನು ಶಿಫಾರಸು ಮಾಡಿದೆ. ಮೂಲ ಅನುದಾನವನ್ನು ಸ್ಥಳೀಯ ಸಂಸ್ಥೆಗಳು ಸಂಬಳ ಅಥವಾ ಇತರ ವೆಚ್ಚಗಳನ್ನು ಹೊರತುಪಡಿಸಿ ಸ್ಥಳ ನಿರ್ದಿಷ್ಟವಾದ ಕೆಲಸಗಳಿಗೆ ಬಳಸಬಹುದು. ಷರತ್ತಿನ ಅನುದಾನವನ್ನು () ಬಯಲು ಮಲವಿಸರ್ಜನೆ ಮುಕ್ತ (ಒಡಿಎಫ್) ಸ್ಥಿತಿಯ ನೈರ್ಮಲ್ಯ ಮತ್ತು ನಿರ್ವಹಣೆ ಮತ್ತು (ಬಿ) ಕುಡಿಯುವ ನೀರು ಸರಬರಾಜು, ಮಳೆ ನೀರು ಕೊಯ್ಲು ಮತ್ತು ನೀರಿನ ಮರುಬಳಕೆಗಾಗಿ ಬಳಸಬಹುದು.

ಕೇಂದ್ರ ಸರ್ಕಾರ ಪ್ರಾಯೋಜಿತ ಯೋಜನೆಗಳಾದ ಸ್ವಚ್ಛ ಭಾರತ ಮತ್ತು ಜಲ ಜೀವನ್ ಮಿಷನ್ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯವು ನೈರ್ಮಲ್ಯ ಮತ್ತು ಕುಡಿಯುವ ನೀರಿಗಾಗಿ ಮೀಸಲಿಟ್ಟಿರುವ ಹಣಕ್ಕೆ ಹೆಚ್ಚುವರಿಯಾಗಿ ಈ ಅನುದಾನ ನೀಡಲಾಗುತ್ತದೆ.

ಕೇಂದ್ರ ಸರ್ಕಾರದಿಂದ ಪಡೆದ 10 ದಿನಗಳಲ್ಲಿ ರಾಜ್ಯಗಳು ಆರ್‌ಎಲ್‌ಬಿಗಳಿಗೆ ಅನುದಾನವನ್ನು ವರ್ಗಾಯಿಸಬೇಕಾಗುತ್ತದೆ. 10 ಕೆಲಸದ ದಿನಗಳನ್ನು ಮೀರಿದರೆ, ರಾಜ್ಯ ಸರ್ಕಾರಗಳು ಅನುದಾನವನ್ನು ವಿಳಂಬದ ಅವಧಿಯ ಬಡ್ಡಿಯೊಂದಿಗೆ ಬಿಡುಗಡೆ ಮಾಡಬೇಕಾಗುತ್ತದೆ.

ಇದಕ್ಕೂ ಮೊದಲು 2020 ರ ಜೂನ್‌ನಲ್ಲಿ, ಆರ್‌ಎಲ್‌ಬಿಗಳಿಗೆ ಮೂಲ ಅನುದಾನದ ಮೊದಲ ಕಂತು ಮತ್ತು 14 ನೇ ಹಣಕಾಸು ಆಯೋಗದ ಬಾಕಿ 18,199 ಕೋಟಿ ರೂ.ಗಳನ್ನು ಎಲ್ಲಾ ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿತ್ತು. ನಂತರ, 1 ನೇ ಕಂತಿನ ಷರತ್ತಿನ ಅನುದಾನ 15,187.50 ಕೋಟಿ ರೂ.ಗಳನ್ನು ಎಲ್ಲಾ ರಾಜ್ಯಗಳಿಗೆಬಿಡುಗಡೆ ಮಾಡಲಾಗಯಿತು. ಹೀಗಾಗಿ, ವೆಚ್ಚ ಇಲಾಖೆ ಈವರೆಗೆ ಆರ್‌ಎಲ್‌ಬಿಗಳಿಗಾಗಿ ರಾಜ್ಯಗಳಿಗೆ ಒಟ್ಟು 45,738 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. ಇದುವರೆಗೆ ಬಿಡುಗಡೆಯಾದ ರಾಜ್ಯವಾರು ಅನುದಾನದ ವಿವರ ಹೀಗಿದೆ:

2020-21 ರಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆಯಾದ ರಾಜ್ಯವಾರು ಅನುದಾನ

ಕೋ.ರೂ.ಗಳಲ್ಲಿ

ಕ್ರ.ಸಂ.

ರಾಜ್ಯ

ಬಿಡುಗಡೆ ಮಾಡಲಾಗಿರುವ ಒಟ್ಟು ಆರ್‌ಎಲ್‌ಬಿ ಅನುದಾನ

1

ಆಂಧ್ರಪ್ರದೇಶ

3137.03

2

ಅರುಣಾಚಲ ಪ್ರದೇಶ

418.80

3

ಅಸ್ಸಾಂ

802.00

4

ಬಿಹಾರ

3763.50

5

ಚತ್ತೀಸಗಢ

1090.50

6

ಗೋವಾ

37.50

7

ಗುಜರಾತ್

2396.25

8

ಹರಿಯಾಣ

948.00

9

ಹಿಮಾಚಲ ಪ್ರದೇಶ

321.75

10

ಜಾರ್ಖಂಡ್

1266.75

11

ಕರ್ನಾಟಕ

2412.75

12

ಕೇರಳ

1221.00

13

ಮಧ್ಯಪ್ರದೇಶ

2988.00

14

ಮಹಾರಾಷ್ಟ್ರ

4370.25

15

ಮಣಿಪುರ

88.50

16

ಮೇಘಾಲಯ

91.00

17

ಮಿಜೋರಾಂ

46.50

18

ನಾಗಾಲ್ಯಾಂಡ್

62.50

19

ಒಡಿಶಾ

1693.50

20

ಪಂಜಾಬ್

2233.91

21

ರಾಜಸ್ಥಾನ

1931.00

22

ಸಿಕ್ಕಿಂ

31.50

23

ತಮಿಳುನಾಡು

1803.50

24

ತೆಲಂಗಾಣ

1385.25

25

ತ್ರಿಪುರ

143.25

26

ಉತ್ತರ ಪ್ರದೇಶ

7314.00

27

ಉತ್ತರಾಖಂಡ

430.50

28

ಪಶ್ಚಿಮ ಬಂಗಾಳ

3309.00

 

ಒಟ್ಟು

45737.99

***


(Release ID: 1692654) Visitor Counter : 288