ಪ್ರಧಾನ ಮಂತ್ರಿಯವರ ಕಛೇರಿ

ಹರಿಪುರ ಕಾರ್ಯಕ್ರಮ, ರಾಷ್ಟ್ರಕ್ಕೆ ಕೊಡುಗೆ ನೀಡಿರುವ ನೇತಾಜಿ ಅವರಿಗೆ ಗೌರವ ನಮನ: ಪ್ರಧಾನಮಂತ್ರಿ  

Posted On: 22 JAN 2021 5:39PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಹಿನ್ನೆಲೆಯಲ್ಲಿ ನೇತಾಜಿ ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಪ್ರಧಾನಮಂತ್ರಿ ಅವರು ತಮ್ಮ ಸರಣಿ ಟ್ವೀಟ್ ಗಳಲ್ಲಿಶ್ರೇಷ್ಠ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ನಾಳೆ ಭಾರತಾದ್ಯಂತ ಪರಾಕ್ರಮ ದಿನವನ್ನಾಗಿ ಆಚರಿಸಲಾಗುವುದು. ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದರಲ್ಲಿ ಗುಜರಾತ್ ಹರಿಪುರದಲ್ಲಿ ಒಂದು ವಿಶೇಷ ಕಾರ್ಯಕ್ರಮವಿದೆ. ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲಿದ್ದೇನೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೂ ಹರಿಪುರಕ್ಕೂ ವಿಶೇಷ ಸಂಬಂಧವಿದೆ. ಹರಿಪುರದಲ್ಲಿ 1938ರಲ್ಲಿ ನಡೆದ ಐತಿಹಾಸಿಕ ಅಧಿವೇಶನದಲ್ಲಿ ನೇತಾಜಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಹುದ್ದೆಯನ್ನು ಅಲಂಕರಿಸಿದ್ದರು. ನಮ್ಮ ರಾಷ್ಟ್ರಕ್ಕೆ ಅಪ್ರತಿಮ ಕೊಡುಗೆ ನೀಡಿರುವ ನೇತಾಜಿ ಬೋಸ್ ಅವರಿಗೆ ಹರಿಪುರದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಗೌರವ ನಮನ ಸಲ್ಲಿಸಲಾಗುವುದು.

ನೇತಾಜಿ ಬೋಸ್ ಜಯಂತಿ ಹಿನ್ನೆಲೆಯಲ್ಲಿ, ನನ್ನ ಮನಸ್ಸು 2009 ಜನವರಿ 23ರಂದು ನಾವು ಹರಿಪುರದಲ್ಲಿ -ಗ್ರಾಮ ವಿಶ್ಚಗ್ರಾಮ ಯೋಜನೆಯನ್ನು ಆರಂಭಿಸಿದ ದಿನಕ್ಕೆ ಮರಳುತ್ತಿದೆ. ಯೋಜನೆ ಗುಜರಾತ್ ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯದಲ್ಲಿ ಕ್ರಾಂತಿಯನ್ನುಂಟು ಮಾಡಿದೆ ಮತ್ತು ತಂತ್ರಜ್ಞಾನದ ಫಲವನ್ನು ರಾಜ್ಯದ ಕುಗ್ರಾಮಗಳಲ್ಲಿ ವಾಸಿಸುತ್ತಿದ್ದ ಬಡಜನರಿಗೆ ತಲುಪಿಸಿದೆ.

ಹರಿಪುರದ ಜನರ ಪ್ರೀತಿಯನ್ನು ನಾನು ಎಂದಿಗೂ ಮರೆಯಲಾರೆ, ನೇತಾಜಿ ಅವರನ್ನು 1938ರಲ್ಲಿ ಯಾವ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗಿತ್ತೋ ಅದೇ ರಸ್ತೆಯಲ್ಲಿ ನನ್ನನ್ನೂ ಮೆರವಣಿಗೆಯಲ್ಲಿ ಕರೆದೊಯ್ದಿದ್ದರು. ಅವರ ಮೆರವಣಿಗೆಯಲ್ಲಿ ಅಲಂಕರಿಸಿದ 51 ಎತ್ತುಗಳ ರಥವೂ ಸೇರಿತ್ತು. ಹರಿಪುರದಲ್ಲಿ ನೇತಾಜಿ ಅವರು ವಾಸ್ತವ್ಯ ಹೂಡಿದ್ದ ಜಾಗಕ್ಕೆ ನಾನೂ ಕೂಡ ಭೇಟಿ ಮಾಡಿದ್ದೆ.

ನೇತಾಜಿ ಅವರು ಬಲಿಷ್ಠ, ವಿಶ್ವಾಸಾರ್ಹ ಮತ್ತು ಸ್ವಾವಲಂಬಿ ಭಾರತ ನಿರ್ಮಾಣ ಮಾಡುವುದು ಹೆಮ್ಮೆ ಎಂದು ಹೇಳಿದ್ದರು, ಅದರಂತೆ ನವಭಾರತವನ್ನು ನಿರ್ಮಿಸಲು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಚಿಂತನೆ ಮತ್ತು ಆದರ್ಶಗಳು ನಮಗೆ ಸದಾ ಸ್ಪೂರ್ತಿಯನ್ನು ನೀಡಲಿ. ಅವರ ಮಾನವ ಕೇಂದ್ರೀತ ಧೋರಣೆಗಳು ಮುಂದಿನ ದಿನಗಳಲ್ಲಿ ಭೂಮಿಯ ಸ್ಥಿತಿ ಸುಧಾರಿಸಲು ನೆರವಾಗಲಿ ‘’ಎಂದು ಹೇಳಿದ್ದಾರೆ.

***



(Release ID: 1692102) Visitor Counter : 162