ಪ್ರಧಾನ ಮಂತ್ರಿಯವರ ಕಛೇರಿ

ಅಮೆರಿಕಾ ಅಧ್ಯಕ್ಷ, ಜೋ ಬೈಡನ್ ಅವರಿಗೆ ಪ್ರಧಾನಮಂತ್ರಿ ಅಭಿನಂದನೆ

Posted On: 20 JAN 2021 10:42PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಜೋ ಬೈಡನ್ ಅವರಿಗೆ ಶುಭ ಕೋರಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಪ್ರಧಾನಮಂತ್ರಿಯವರು "ಅಮೆರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷರಾಗಿ @ಜೋ ಬೈಡನ್ ಅವರು ಅಧಿಕಾರ ವಹಿಸಿಕೊಂಡಿದ್ದಕ್ಕಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಭಾರತ-ಅಮೆರಿಕ ವ್ಯೂಹಾತ್ಮಕ ಸಹಭಾಗಿತ್ವವನ್ನು ಬಲಪಡಿಸಲು ಅವರೊಂದಿಗೆ ಒಗ್ಗೂಡಿ ಕೆಲಸ ಮಾಡಲು ನಾನು ಎದಿರು ನೋಡುತ್ತಿದ್ದೇನೆ.

ಸಾಮಾನ್ಯ ಸವಾಲುಗಳನ್ನು ಎದುರಿಸಲು ಮತ್ತು ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಮುನ್ನಡೆಸಲು ನಾವು ಒಗ್ಗಟ್ಟಿನಿಂದ ಮತ್ತು ಸಂಕಲ್ಪದೊಂದಿಗೆ ಮುನ್ನಡೆಯುತ್ತೇವೆ ಮತ್ತು ಯು.ಎಸ್..ಯನ್ನು ಮುನ್ನೆಡೆಸುವ ಅವರ ಯಶಸ್ವಿ ಅವಧಿಗೆ ನನ್ನ ಶುಭಾಶಯಗಳು.

ಭಾರತ-ಅಮೆರಿಕ ಪಾಲುದಾರಿಕೆ ಹಂಚಿಕೆಯ ಮೌಲ್ಯಗಳ ಅಧಾರದಲ್ಲಿದೆ. ನಾವು ಗಣನೀಯ ಮತ್ತು ಬಹುಮುಖಿ ದ್ವಿಪಕ್ಷೀಯ ಕಾರ್ಯಸೂಚಿ, ವೃದ್ಧಿಸುತ್ತಿರುವ ಆರ್ಥಿಕ ಚಟುವಟಿಕೆ ಮತ್ತು ಜನರ ರೋಮಾಂಚಕ ಸಂಪರ್ಕಗಳನ್ನು ನಾವು ಹೊಂದಿದ್ದೇವೆ. ಭಾರತ-ಅಮೆರಿಕ ಸಹಭಾಗಿತ್ವವನ್ನು ಇನ್ನೂ ಉನ್ನತ ಎತ್ತರಕ್ಕೆ ಕೊಂಡೊಯ್ಯಲು ಅಧ್ಯಕ್ಷ @ಜೋ ಬೈಡೆನ್ ಅವರೊಂದಿಗೆ ಕೆಲಸ ಮಾಡಲು ಬದ್ಧವಾಗಿದ್ದೇವೆ." ಎಂದು ತಿಳಿಸಿದ್ದಾರೆ.

***



(Release ID: 1690853) Visitor Counter : 131