ಸಂಸ್ಕೃತಿ ಸಚಿವಾಲಯ
ಜನವರಿ 23, ನೇತಾಜಿ ಸುಭಾಸ್ ಚಂದ್ರ ಬೋಸ್ 125ನೇ ಜನ್ಮ ಜಯಂತಿಯ ಸ್ಮರಣಾರ್ಥ, “ಪರಾಕ್ರಮ ದಿವಸ್” ಘೋಷಣೆ
Posted On:
19 JAN 2021 4:00PM by PIB Bengaluru
2021 ಜನವರಿ 23 ರಿಂದ ಆರಂಭವಾಗುವ ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ 125ನೇ ಜನ್ಮ ವಾರ್ಷಿಕೋತ್ಸವವನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಕಾರ್ಯಕ್ರಮಗಳ ಬಗ್ಗೆ ನಿರ್ಧರಿಸಲು ಮತ್ತು ಸ್ಮರಣಾರ್ಥ ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಮಾಡಲು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.
ರಾಷ್ಟ್ರಕ್ಕಾಗಿ ನೇತಾಜಿಯವರು ನೀಡಿದ ಅದಮ್ಯ ಸ್ಫೂರ್ತಿ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ಸ್ಮರಿಸುವ ಸಲುವಾಗಿ, ಈ ವರ್ಷ ಜನವರಿ 23ನೇ ದಿನವನ್ನು “ಪರಾಕ್ರಮ ದಿವಸ” ಎಂದು ಆಚರಿಸುವ ಮೂಲಕ ದೇಶದ ಜನತೆಗೆ, ವಿಶೇಷವಾಗಿ ಯುವಕರಲ್ಲಿ ದೇಶಭಕ್ತಿಯ ಸ್ಫೂರ್ತಿಯನ್ನು ತುಂಬಲು ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ನೇತಾಜಿಯವರು ತೋರಿದಂತೆ ಧೈರ್ಯದಿಂದ ವರ್ತಿಸುವಂತೆ ಪ್ರೇರೇಪಿಸಲಾಗುವುದು.
ಜನವರಿ 23ರನ್ನು “ಪರಾಕ್ರಮ ದಿವಸ” ಎಂದು ಘೋಷಿಸಲು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ.
***
(Release ID: 1690045)
Visitor Counter : 294
Read this release in:
Telugu
,
English
,
Urdu
,
Marathi
,
Hindi
,
Manipuri
,
Bengali
,
Punjabi
,
Odia
,
Tamil
,
Malayalam