ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ ಅಡಿಯಲ್ಲಿ ಉತ್ತರ ಪ್ರದೇಶದ 6 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಜನವರಿ 20 ರಂದು ಆರ್ಥಿಕ ನೆರವು  ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ

Posted On: 19 JAN 2021 3:49PM by PIB Bengaluru

ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ (ಪಿಎಂಎವೈ-ಜಿ) ಅಡಿಯಲ್ಲಿ ಉತ್ತರಪ್ರದೇಶದ 6.1 ಲಕ್ಷ ಫಲಾನುಭವಿಗಳಿಗೆ ಸುಮಾರು 2,691 ಕೋಟಿ ರೂ. ಗಳನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಬಿಡುಗಡೆ ಮಾಡಲಿದ್ದಾರೆ. 2021 ಜನವರಿ 20 ರಂದು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕೀ ಕಾರ್ಯಕ್ರಮ ನಡೆಯಲಿದೆ. ಸಂದರ್ಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಉಪಸ್ಥಿತರಿರುತ್ತಾರೆ. ಆರ್ಥಿಕ ಸಹಾಯವು 5.30 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತು ಮತ್ತು ಈಗಾಗಲೇ ಪಿಎಂಎವೈ-ಜಿ ಅಡಿಯಲ್ಲಿ ಮೊದಲ ಕಂತಿನ ನೆರವು ಪಡೆದಿರುವ 80 ಸಾವಿರ ಫಲಾನುಭವಿಗಳ ಎರಡನೇ ಕಂತು ಸೇರಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ

“2022 ವೇಳೆಗೆ ಎಲ್ಲರಿಗೂ ವಸತಿಎಂಬ ಪ್ರಧಾನಮಂತ್ರಿಯವರ ಸ್ಪಷ್ಟ ಕರೆಯ ಅನುಸಾರ ಪ್ರಮುಖ ಕಾರ್ಯಕ್ರಮವಾದ ಪಿಎಂಎವೈ- ಗ್ರಾಮೀಣ ಯೋಜನೆಯನ್ನು ನವೆಂಬರ್ 20, 2016 ರಂದು ಪ್ರಾರಂಭಿಸಲಾಯಿತು. ಯೋಜನೆಯಡಿ ದೇಶಾದ್ಯಂತ ಈಗಾಗಲೇ 1.26 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಪಿಎಂಎವೈ-ಜಿ ಅಡಿಯಲ್ಲಿ, ಪ್ರತಿ ಫಲಾನುಭವಿಗೆ ಸರಳ ಪ್ರದೇಶಗಳಲ್ಲಿ 1.20 ಲಕ್ಷ ರೂ. ಮತ್ತು ಗುಡ್ಡಗಾಡು ರಾಜ್ಯಗಳು/ ಈಶಾನ್ಯ ರಾಜ್ಯಗಳು/ ಕಷ್ಟ ಪ್ರದೇಶಗಳು/ ಜಮ್ಮು & ಕಾಶ್ಮೀರ ಮತ್ತು ಲಡಾಖ್/ ಐಎಪಿ/ ಎಲ್‌ಡಬ್ಲ್ಯೂಇ ಜಿಲ್ಲೆಗಳಲ್ಲಿ 1.30 ಲಕ್ಷ ರೂ.ಗಳ  ಶೇ. 100ರಷ್ಟು ಅನುದಾನ ನೀಡಲಾಗುತ್ತದೆ.

ಪಿಎಂಎವೈ-ಜಿ ಫಲಾನುಭವಿಗಳಿಗೆ, ಘಟಕದ ಸಹಾಯದ ಜೊತೆಗೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್) ಅಡಿಯಲ್ಲಿ ಕೌಶಲ್ಯರಹಿತ ಕಾರ್ಮಿಕ ವೇತನ ಮತ್ತು ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ (ಎಸ್‌ಬಿಎಂ-ಜಿ) ಅಡಿಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 12,000 ರೂ. ನೀಡಲಾಗುತ್ತದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಎಲ್ಪಿಜಿ ಸಂಪರ್ಕ, ವಿದ್ಯುತ್ ಸಂಪರ್ಕ, ಜಲ ಜೀವನ್ ಮಿಷನ್ ಅಡಿಯಲ್ಲಿ ಸುರಕ್ಷಿತ ಕುಡಿಯುವ ನೀರಿನ ಸಂಪರ್ಕ ಮೊದಲಾದ ಕೇಂದ್ರ ಸರ್ಕಾರ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಇತರ ಯೋಜನೆಗಳೊಂದಿಗೆ ಸಮನ್ವಯಗೊಳ್ಳಲು ಯೋಜನೆಯಲ್ಲಿ ಅವಕಾಶವಿದೆ.

***



(Release ID: 1690044) Visitor Counter : 239