ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕಾ ಅಭಿಯಾನ
ನಾಳೆ ರಾಷ್ಟ್ರವ್ಯಾಪಿ ಆರಂಭವಾಗುವ ಲಸಿಕಾ ಅಭಿಯಾನದ ಸಿದ್ಧತೆ ಪರಿಶೀಲಿಸಿದ ಕೇಂದ್ರ ಸಚಿವ ಡಾ. ಹರ್ಷವರ್ಧನ್
ಕೇಂದ್ರ ಆರೋಗ್ಯ ಸಚಿವಾಲಯದ ಕೋವಿಡ್ ನಿಯಂತ್ರಣ ಕೊಠಡಿಗೆ ಭೇಟಿ.
ಕೋವಿಡ್-19 ಲಸಿಕೆಗಳ ಕುರಿತ ವದಂತಿಗಳನ್ನು ತಳ್ಳಿಹಾಕಿದ ಸಚಿವರು, ದೇಶೀಯವಾಗಿ ತಯಾರಿಸಿದ ಲಸಿಕೆಗಳ ಪರಿಣಾಮದ ಬಗ್ಗೆ ದೇಶಕ್ಕೆ ಭರವಸೆ
Posted On:
15 JAN 2021 5:23PM by PIB Bengaluru
ನಾಳೆ ರಾಷ್ಟ್ರವ್ಯಾಪಿ ಆರಂಭವಾಗಲಿರುವ ಕೋವಿಡ್-19 ಲಸಿಕಾ ಅಭಿಯಾನದ ಸಿದ್ಧತೆಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಇಂದು ಪರಿಶೀಲಿಸಿದರು. ನಿರ್ಮಾಣ ಭವನದಲ್ಲಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆವರಣದಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ನಿಯಂತ್ರಣ ಕೊಠಡಿಗೆ ಕೇಂದ್ರ ಸಚಿವರು ಭೇಟಿ ನೀಡಿದರು.
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರವ್ಯಾಪಿ ಕೋವಿಡ್-19 ಲಸಿಕಾ ಅಭಿಯಾನದ ಮೊದಲ ಹಂತಕ್ಕೆ ನಾಳೆ, ಜನವರಿ 16, 2021 ರಂದು ಬೆಳಿಗ್ಗೆ 10. 30 ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಲಸಿಕಾ ಕಾರ್ಯಕ್ರಮವು ದೇಶದ ಉದ್ದಗಲಕ್ಕೂ ನಡೆಯುತ್ತದೆ. ಚಾಲನೆಯ ಸಮಯದಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 3006 ಸ್ಥಳಗಳನ್ನು ಸಂಪರ್ಕಿಸಲಾಗುವುದು. ನಾಳೆ ಪ್ರತಿ ಸ್ಥಳದಲ್ಲಿ ಸುಮಾರು 100 ಫಲಾನುಭವಿಗಳಿಗೆ ಲಸಿಕೆ ನೀಡಲಾಗುವುದು.
ಲಸಿಕಾ ಅಭಿಯಾನವನ್ನು ಹಂತ ಹಂತವಾಗಿ ಯೋಜಿಸಲಾಗಿದೆ, ಆದ್ಯತೆಯ ಗುಂಪುಗಳನ್ನು ಗುರುತಿಸಲಾಗಿದೆ. ಐಸಿಡಿಎಸ್ (ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು) ಕಾರ್ಯಕರ್ತರು ಸೇರಿದಂತೆ ಸರ್ಕಾರಿ ಮತ್ತು ಖಾಸಗಿ ವಲಯದ ಆರೋಗ್ಯ ಕಾರ್ಯಕರ್ತರು ಈ ಹಂತದಲ್ಲಿ ಲಸಿಕೆ ಪಡೆಯಲಿದ್ದಾರೆ.
ಕೋವಿಡ್ ನಿಯಂತ್ರಣ ಕೊಠಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಾ. ಹರ್ಷವರ್ಧನ್ ಅವರು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಭಿವೃದ್ಧಿಪಡಿಸಿದ ಆನ್‌ಲೈನ್ ಡಿಜಿಟಲ್ ಪ್ಲಾಟ್‌ಫಾರ್ಮ್ ಕೋ-ವಿನ್‌ನ ಕಾರ್ಯವೈಖರಿಯ ಪ್ರತಿಯೊಂದು ಅಂಶಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು, ಇದು ಲಸಿಕೆಯ ದಾಸ್ತಾನುಗಳ ನೈಜ ಸಮಯದ ಮಾಹಿತಿ, ಶೇಖರಣಾ ತಾಪಮಾನ ಮತ್ತು ಕೋವಿಡ್-19 ಲಸಿಕೆ ಪಡೆಯುವ ಫಲಾನುಭವಿಗಳ ಟ್ರ್ಯಾಕಿಂಗ್ ಅನ್ನು ಸುಗಮಗೊಳಿಸುತ್ತದೆ. ಈ ಡಿಜಿಟಲ್ ಪ್ಲಾಟ್‌ಫಾರ್ಮ್, ಲಸಿಕೆ ನೀಡುವ ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳ ಕಾರ್ಯಕ್ರಮ ನಿರ್ವಾಹಕರಿಗೆ ನೆರವಾಗುತ್ತದೆ. ಫಲಾನುಭವಿಗಳು, ಹೊರಗುಳಿದ ಫಲಾನುಭವಿಗಳು, ಯೋಜಿತ ಲಸಿಕಾ ಸಮಯಗಳು ಮತ್ತು ಕೈಗೊಂಡ ಲಸಿಕಾ ಸಮಯಗಳು ಹಾಗೂ ಲಸಿಕೆಯ ಬಳಕೆಯನ್ನು ಟ್ರ್ಯಾಕ್ ಮಾಡಲು ಇದು ಅವರಿಗೆ ಸಹಾಯ ಮಾಡುತ್ತದೆ.
ಕೋ-ವಿನ್ ಪ್ಲಾಟ್‌ಫಾರ್ಮ್ ರಾಷ್ಟ್ರೀಯ ಮತ್ತು ರಾಜ್ಯ ನಿರ್ವಾಹಕರಿಗೆ ಫಲಾನುಭವಿಗಳ ಲಿಂಗ, ವಯಸ್ಸು ಮತ್ತು ಸಹ-ಅಸ್ವಸ್ಥತೆಗೆ ಸಂಬಂಧಿಸಿದ ಡೇಟಾವನ್ನು ವೀಕ್ಷಿಸಲು ಮತ್ತು ವಿಂಗಡಿಸಲು ಅನುವು ಮಾಡಿಕೊಡುತ್ತದೆ. ಲಸಿಕೆಗಳ ಮೆಟಾಡೇಟಾ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತದ ಎಲ್ಲಾ ಜಿಲ್ಲೆಗಳಿಂದ ವರದಿಯಾದ ಲಸಿಕಾ ನಂತರದ ಪ್ರತಿಕೂಲ ಘಟನೆಗಳನ್ನು (ಎಇಎಫ್‌ಐ) ಸಹ ಅವರು ವೀಕ್ಷಿಸಬಹುದು. ಜಿಲ್ಲೆಯ ನಿರ್ವಾಹಕರು ಪಿನ್-ಕೋಡ್ ಅನ್ನು ನಮೂದಿಸುವ ಮೂಲಕ ಹೆಚ್ಚುವರಿಯಾಗಿ ಯಾವುದೇ ಸ್ಥಳದಲ್ಲಿ ಲಸಿಕಾ ಸ್ಥಳಗಳನ್ನು ಆರಂಭಿಸಬಹುದು. ನಂತರ ಪ್ರದೇಶ ಅಥವಾ ಗ್ರಾಮಗಳನ್ನು ನಿರ್ದಿಷ್ಟಪಡಿಸಬಹುದು ಮತ್ತು ತರುವಾಯ ಲಸಿಕೆ ಹಾಕುವವರನ್ನು ನಿಯೋಜಿಸಬಹುದು. ಡಾ. ಹರ್ಷವರ್ಧನ್ ಅವರು ಅತ್ಯಾಧುನಿಕ ಕೋ-ವಿನ್ ಪ್ಲಾಟ್‌ಫಾರ್ಮ್ ಬಳಸುವಾಗ ಕಲಿತ ಸಾಫ್ಟ್‌ವೇರ್ ಮಾರ್ಪಾಡುಗಳು ಮತ್ತು ಅನುಭವಗಳನ್ನು ಭಾರತದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮಕ್ಕೆ ಸೇರಿಸಬೇಕು ಎಂದು ಡಾ. ಹರ್ಷವರ್ಧನ್ ಸೂಚಿಸಿದರು.
ಕೋ-ವಿನ್‌ನಲ್ಲಿರುವ ಆದ್ಯತೆಯೇತರ ಗುಂಪುಗಳ ಫಲಾನುಭವಿಗಳ ನೋಂದಣಿ ಪುಟವನ್ನು ಕೇಂದ್ರ ಸಚಿವರು ಪರಿಶೀಲಿಸಿದರು. ಫಲಾನುಭವಿಗಳು ನೋಂದಣಿಗಾಗಿ ನೀಡುವ ಇತರ ದಾಖಲೆಗಳ ಜೊತೆಗೆ, ಚುನಾವಣಾ ದತ್ತಾಂಶವನ್ನು ಸಾಫ್ಟ್‌ವೇರ್ ನಲ್ಲಿ ಜೋಡಿಸುವಂತೆ ಅವರು ಸಲಹೆ ನೀಡಿದರು.
ಕೋವಿಡ್ ನಿಯಂತ್ರಣ ಕೊಠಡಿಯು ದೇಶಾದ್ಯಂತದ ಜಿಲ್ಲಾವಾರು ಕೋವಿಡ್-19 ದತ್ತಾಂಶವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸಾಂಕ್ರಾಮಿಕ ರೋಗದ ಸ್ಥಿತಿಯನ್ನು ವ್ಯಾಖ್ಯಾನಿಸಲು ಮತ್ತು ಮೌಲ್ಯಮಾಪನ ಮಾಡಲು ದತ್ತಾಂಶದ ವಿಶ್ಲೇಷಣೆಯಲ್ಲಿ ತೊಡಗಿದೆ. ಕಳೆದ ಹಲವಾರು ತಿಂಗಳುಗಳಿಂದ, ಈ ನಿಯಂತ್ರಣ ಕೊಠಡಿಯ ಮೂಲಕ, ಪ್ರಕರಣಗಳ ಮಾರಣಾಂತಿಕ ದರ, ಸೋಂಕಿನ ಪ್ರಮಾಣ, ಸಾವಿನ ಪ್ರಮಾಣ ಮತ್ತು ಇತರ ನಿಯತಾಂಕಗಳನ್ನು ಸರ್ಕಾರವು ನಿಕಟವಾಗಿ ಗಮನಿಸುತ್ತಿದೆ. ವಿವಿಧ ದೇಶಗಳು ತಮ್ಮ ಸ್ಪಂದನಾ ವ್ಯವಸ್ಥೆಯ ಭಾಗವಾಗಿ ಅಳವಡಿಸಿಕೊಂಡಿರುವ ಅತ್ಯುತ್ತಮ ತಂತ್ರಗಳನ್ನು ಪತ್ತೆಹಚ್ಚಲು ಮತ್ತು ದಾಖಲಿಸಲು ನಿಯಂತ್ರಣ ಕೊಠಡಿಯು ಸಹಾಯ ಮಾಡುತ್ತಿದೆ ಮತ್ತು ಅವುಗಳನ್ನು ಭಾರತಕ್ಕೆ ಪ್ರಮುಖ ಕಲಿಕೆಗಳಾಗಿ ಪರಿವರ್ತಿಸಲಾಗುತ್ತಿದೆ.
ಕೋವಿಡ್-19 ಲಸಿಕೆಗಳ ಬಗೆಗಿನ ಸುಳ್ಳು ಮಾಹಿತಿ ಮತ್ತು ವದಂತಿಗಳ ಬಗ್ಗೆ ನಿಗಾ ವಹಿಸುತ್ತಿರುವ ‘ಸಂವಹನ ನಿಯಂತ್ರಣ ಕೊಠಡಿ’ ಯ ಕಾರ್ಯವನ್ನೂ ಕೇಂದ್ರ ಸಚಿವರು ಪರಿಶೀಲಿಸಿದರು. ಪಟ್ಟಭದ್ರ ಹಿತಾಸಕ್ತಿಗಳು ಹರಡುತ್ತಿರುವ ತಪ್ಪು ಮಾಹಿತಿಯನ್ನು ಎದುರಿಸಲು ಆಡಳಿತವು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಕೋವಿಡ್-19ರ ವಿರುದ್ಧ ತನ್ನ ಜನರಿಗೆ ಲಸಿಕೆ ಹಾಕುವ ಭಾರತದ ಕಾರ್ಯಕ್ರಮವು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವಾಗಿದೆ ಎಂದು ಡಾ. ಹರ್ಷವರ್ಧನ್ ಹೇಳಿದರು. ದೇಶೀಯವಾಗಿ ತಯಾರಿಸಿದ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಸುರಕ್ಷತೆ ಮತ್ತು ರೋಗನಿರೋಧಕತೆಯನ್ನು ಸಾಬೀತುಪಡಿಸಿವೆ ಮತ್ತು ಸಾಂಕ್ರಾಮಿಕವನ್ನು ನಿಗ್ರಹಿಸಲು ಪ್ರಮುಖ ಸಾಧನಗಳಾಗಿವೆ ಎಂದು ಕೇಂದ್ರ ಸಚಿವರು ಪುನರುಚ್ಚರಿಸಿದರು.
***
(Release ID: 1689648)
Visitor Counter : 204
Read this release in:
English
,
Urdu
,
Marathi
,
Hindi
,
Assamese
,
Punjabi
,
Gujarati
,
Odia
,
Tamil
,
Telugu
,
Malayalam