ಪ್ರಧಾನ ಮಂತ್ರಿಯವರ ಕಛೇರಿ
ಜನವರಿ 18ರಂದು ಅಹ್ಮದಾಬಾದ್ ಮೆಟ್ರೋ ರೈಲು ಯೋಜನೆ ಹಂತ-II ಮತ್ತು ಸೂರತ್ ಮೆಟ್ರೋ ರೈಲು ಯೋಜನೆಗೆ ಭೂಮಿ ಪೂಜೆ ನೇರವೇರಿಸಲಿರುವ ಪ್ರಧಾನಮಂತ್ರಿ
प्रविष्टि तिथि:
16 JAN 2021 8:22PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಹ್ಮದಾಬಾದ್ ಮೆಟ್ರ್ ರೈಲು ಯೋಜನೆ ಹಂತ-II ಮತ್ತು ಸೂರತ್ ಮೆಟ್ರೋ ರೈಲು ಯೋಜನೆಗಳಿಗೆ ಜನವರಿ 18ರಂದು ಬೆಳಗ್ಗೆ 10.30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಗುಜರಾತ್ ರಾಜ್ಯಪಾಲರು, ಕೇಂದ್ರ ಸಚಿವರು, ಗುಜರಾತ್ ಮುಖ್ಯಮಂತ್ರಿ ಮತ್ತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರು ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಮೆಟ್ರೋ ಯೋಜನೆಗಳು ಪರಿಸರ ಸ್ನೇಹಿ ಸಮೂಹ ತ್ವರಿತ ಸಾರಿಗೆ ವ್ಯವಸ್ಥೆಯನ್ನು ಈ ನಗರಗಳಿಗೆ ಒದಗಿಸಲಿವೆ.
ಅಹಮದಾಬಾದ್ ಮೆಟ್ರೋ ರೈಲು ಯೋಜನೆ ಹಂತ -II ಬಗ್ಗೆ
ಅಹ್ಮದಾಬಾದ್ ಮೆಟ್ರೋ ರೈಲು ಯೋಜನೆ ಹಂತ –II ಎರಡು ಕಾರಿಡಾರ್ ಗಳೊಂದಿಗೆ 28.25 ಕಿ.ಮೀ ಉದ್ದದ್ದಾಗಿದೆ. ಕಾರಿಡಾರ್ –Iರಲ್ಲ 22.8 ಕಿ.ಮೀ. ಉದ್ದದ ಮಾರ್ಗ ಮೊಟೇರಾ ಕ್ರೀಡಾಂಗಣದಿಂದ ಮಹಾತ್ಮಾ ಮಂದಿರದವರೆಗೆ ಇರುತ್ತದೆ. ಕಾರಿಡಾರ್ –II 5.4 ಕಿ.ಮೀ. ಉದ್ದದ್ದಾಗಿದ್ದು, ಜಿಎನ್.ಎಲ್.ಯುನಿಂದ ಜಿ.ಐ.ಎಫ್.ಟಿ. ನಗರದವರೆಗೆ ಇರುತ್ತದೆ. ಹಂತ –II ಯೋಜನೆಯ ಪೂರ್ಣವೆಚ್ಚ 5,384 ಕೋಟಿ ರೂ.ಗಳಾಗಿದೆ.
ಸೂರತ್ ಮೆಟ್ರೋ ರೈಲು ಯೋಜನೆ ಬಗ್ಗೆ
ಸೂರತ್ ಮೆಟ್ರೋ ರೈಲು ಯೋಜನೆ 40.35 ಕಿ.ಮೀ. ಉದ್ದದ್ದಾಗಿದ್ದು ಎರಡು ಕಾರಿಡಾರ್ ಒಳಗೊಂಡಿದೆ. ಕಾರಿಡಾರ್-I 21.61 ಕಿ.ಮೀ. ಉದ್ದದ್ದಾಗಿದ್ದು, ಸರ್ಥಾನಾದಿಂದ ಡ್ರೀಮ್ ನಗರವರೆಗಿನದಾಗಿದೆ. ಕಾರಿಡಾರ್ –II 18.74 ಕಿಮೀ ಉದ್ದದ್ದಾಗಿದ್ದು, ಭೇಸನ್ ನಿಂದ ಸರೋಲಿವರೆಗಿನದಾಗಿದೆ. ಯೋಜನೆಯ ಒಟ್ಟು ವೆಚ್ಚ 12,020 ಆಗಿದೆ.
***
(रिलीज़ आईडी: 1689444)
आगंतुक पटल : 301
इस विज्ञप्ति को इन भाषाओं में पढ़ें:
Assamese
,
English
,
Urdu
,
Marathi
,
हिन्दी
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam