ಹಣಕಾಸು ಸಚಿವಾಲಯ

ಜಿಎಸ್‌ಟಿ ಆದಾಯ ಸಂಗ್ರಹ ಡಿಸೆಂಬರ್ 2020 ರಲ್ಲಿ ಸಾರ್ವಕಾಲಿಕ ಹೆಚ್ಚಳ; 1,15,174 ಕೋಟಿ ರೂ. ಸಂಗ್ರಹ


ಕಳೆದ ವರ್ಷದ ಇದೇ ತಿಂಗಳ ಆದಾಯಕ್ಕಿಂತ 2020 ರ ಡಿಸೆಂಬರ್‌ನ ಜಿಎಸ್‌ಟಿ ಶೇ.12 ರಷ್ಟು ಹೆಚ್ಚಳ

Posted On: 01 JAN 2021 1:21PM by PIB Bengaluru

2020 ಡಿಸೆಂಬರ್ತಿಂಗಳಲ್ಲಿ ಒಟ್ಟಾರೆಯಾಗಿ 1,15,174 ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ.ಇದರಲ್ಲಿ ಕೇಂದ್ರ ಜಿಎಸ್ಟಿ 21,365 ಕೋಟಿ ರೂ., ರಾಜ್ಯ ಜಿಎಸ್ಟಿ 27,804 ಕೋಟಿ ರೂ., ಐಜಿಎಸ್ಟಿ 57,426 ಕೋಟಿ (ಸರಕುಗಳ ಆಮದಿನಿಂದ ಸಂಗ್ರಹಿಸಿದ 27,050 ಕೋಟಿ ರೂ.ಸೇರಿದಂತೆ) ಮತ್ತು ಸೆಸ್, 8,579  ಕೋಟಿ ರೂ. (ಸರಕುಗಳ ಆಮದಿನ ಮೇಲೆ ಸಂಗ್ರಹಿಸಿದ 971 ಕೋಟಿ ಸೇರಿದಂತೆ) ಗಳಾಗಿದೆ. 2020 ಡಿಸೆಂಬರ್ 30 ರವರೆಗೆ ನವೆಂಬರ್ ತಿಂಗಳಿಗೆ ಸಲ್ಲಿಸಲಾದ ಒಟ್ಟು ಜಿಎಸ್ಟಿಆರ್ -3 ಬಿ ರಿಟರ್ನ್ಸ್ ಸಂಖ್ಯೆ 87 ಲಕ್ಷವಾಗಿದೆ.

ಕೇಂದ್ರ ಜಿಎಸ್ಟಿಗೆ 23,276 ಕೋಟಿ ರೂ. ಮತ್ತು ರಾಜ್ಯ ಜಿಎಸ್ಟಿಗೆ 17,681 ಕೋಟಿ ರೂ.ಗಳನ್ನು ಐಜಿಎಸ್ಟಿಯಿಂದ ಸರ್ಕಾರ ಇತ್ಯರ್ಥಪಡಿಸಿದೆ. 2020 ಡಿಸೆಂಬರ್ ತಿಂಗಳಲ್ಲಿ ನಿಯಮಿತ ಇತ್ಯರ್ಥದ ನಂತರ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಗಳಿಸಿದ ಒಟ್ಟು ಆದಾಯ ಕೇಂದ್ರ ಜಿಎಸ್ಟಿಗೆ 44,641 ಕೋಟಿ ಕೋಟಿ ರೂ. ಮತ್ತು ರಾಜ್ಯ ಜಿಎಸ್ಟಿಗೆ 45,485 ಕೋಟಿ ರೂ. ಗಳಾಗಿದೆ.

ಜಿಎಸ್ಟಿ ಆದಾಯದಲ್ಲಿನ ಇತ್ತೀಚಿನ ಚೇತರಿಕೆಯ ಪ್ರವೃತ್ತಿಗೆ ಅನುಗುಣವಾಗಿ, 2020 ಡಿಸೆಂಬರ್ ತಿಂಗಳ ಆದಾಯವು ಕಳೆದ ವರ್ಷದ ಇದೇ ತಿಂಗಳಲ್ಲಿದ್ದ ಜಿಎಸ್ಟಿ ಆದಾಯಕ್ಕಿಂತ ಶೇ.12 ರಷ್ಟು ರಷ್ಟು ಹೆಚ್ಚಾಗಿದೆ. ಕಳೆದ ವರ್ಷದ ಇದೇ ತಿಂಗಳಲ್ಲಿ ಬಂದ ಆದಾಯಕ್ಕೆ ಹೋಲಿಸಿದರೆ ತಿಂಗಳಲ್ಲಿ, ಸರಕುಗಳ ಆಮದಿನ ಆದಾಯವು ಶೇ. 27 ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನಿಂದ (ಸೇವೆಗಳ ಆಮದು ಸೇರಿದಂತೆ) ಆದಾಯವು ಶೇ. 8 ರಷ್ಟು ಹೆಚ್ಚಾಗಿದೆ.  

2020 ಡಿಸೆಂಬರ್ನಲ್ಲಿ ಜಿಎಸ್ಟಿ ಆದಾಯವು ಜಿಎಸ್ಟಿ ಜಾರಿಗೆ ಬಂದ ನಂತರದಲ್ಲಿ ಅತಿ ಹೆಚ್ಚು ಮತ್ತು ಇದು 1.15 ಲಕ್ಷ ಕೋಟಿ ರೂ.ದಾಟಿರುವುದು ಇದೇ ಮೊದಲು. ಇದುವರೆಗಿನ ಅತಿ ಹೆಚ್ಚು ಜಿಎಸ್ಟಿ ಸಂಗ್ರಹವು 2019 ಏಪ್ರಿಲ್ ತಿಂಗಳಲ್ಲಿ  1,13,866 ಕೋಟಿ ರೂ.ಗಳಷ್ಟಿತ್ತು. ಏಪ್ರಿಲ್ ಆದಾಯವು ಸಾಮಾನ್ಯವಾಗಿ ಮಾರ್ಚ್ ಆದಾಯಕ್ಕೆ ಸಂಬಂಧಿಸಿರುವುದರಿಂದ ಅಧಿಕವಾಗಿರುತ್ತದೆ, ಇದು ಹಣಕಾಸು ವರ್ಷದ ಅಂತ್ಯವನ್ನು ಸೂಚಿಸುತ್ತದೆ. ಡಿಸೆಂಬರ್ 2020 ಆದಾಯವು ಕಳೆದ ತಿಂಗಳ ಆದಾಯಕ್ಕಿಂತ 1,04.963 ಕೋಟಿ ರೂ.ಗಳಷ್ಟು ಗಮನಾರ್ಹ ಹೆಚ್ಚಳ ಕಂಡಿದೆ. ಕಳೆದ 21 ತಿಂಗಳ ನಂತರ ಮಾಸಿಕ ಆದಾಯದಲ್ಲಿ ಇದು ಅತ್ಯಧಿಕ ಬೆಳವಣಿಗೆಯಾಗಿದೆ. ಸಾಂಕ್ರಾಮಿಕ ನಂತರದ ಕ್ಷಿಪ್ರ ಆರ್ಥಿಕ ಚೇತರಿಕೆ ಮತ್ತು ಜಿಎಸ್ಟಿ ತಪ್ಪಿಸಿಕೊಳ್ಳುವವರು ಮತ್ತು ನಕಲಿ ರಶೀದಿಗಳ ವಿರುದ್ಧ ರಾಷ್ಟ್ರವ್ಯಾಪಿ ಕ್ರಮ ಮತ್ತು ಇತ್ತೀಚೆಗೆ ಪರಿಚಯಿಸಲಾದ ಅನೇಕ ವ್ಯವಸ್ಥಿತ ಬದಲಾವಣೆಗಳ ಸಂಯೋಜಿತ ಪರಿಣಾಮದಿಂದಾಗಿ ಹೆಚ್ಚಳ ಕಂಡುಬಂದಿದೆ.

ಜಿಎಸ್ಟಿ ಜಾರಿಗೆ ಬಂದ ನಂತರ ಇದುವರೆಗೂ ಜಿಎಸ್ಟಿ ಆದಾಯ ಮೂರು ಬಾರಿ  1.1 ಲಕ್ಷ ಕೋಟಿ ದಾಟಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸತತ ಮೂರನೇ ತಿಂಗಳು ಜಿಎಸ್ಟಿ ಆದಾಯವು  1 ಲಕ್ಷ ಕೋಟಿಗಿಂತ ಹೆಚ್ಚಳ ಕಂಡಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದ (-)41.0%., ಎರಡನೇ ತ್ರೈಮಾಸಿಕದ (-) 8.2% ಕ್ಕೆ ಹೋಲಿಸಿದರೆ ಕಳೆದ ತ್ರೈಮಾಸಿಕದಲ್ಲಿ ಜಿಎಸ್ಟಿ ಆದಾಯದಲ್ಲಿ ಸರಾಸರಿ ಬೆಳವಣಿಗೆ 7.3% ಆಗಿದೆ.

ಕೆಳಗಿನ ಕೋಷ್ಟಕವು ಪ್ರಸಕ್ತ ವರ್ಷದಲ್ಲಿ ಮಾಸಿಕ ಒಟ್ಟು ಜಿಎಸ್ಟಿ ಆದಾಯದ ಪ್ರವೃತ್ತಿಯನ್ನು ತೋರಿಸುತ್ತದೆ. ಡಿಸೆಂಬರ್‌ 2019 ಕ್ಕೆ ಹೋಲಿಸಿದರೆ 2020 ಡಿಸೆಂಬರ್ತಿಂಗಳಲ್ಲಿ ಪ್ರತಿ ರಾಜ್ಯದಲ್ಲಿ ಸಂಗ್ರಹಿಸಲಾದ ಜಿಎಸ್ಟಿಯ ರಾಜ್ಯವಾರು ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ.

http://static.pib.gov.in/WriteReadData/userfiles/image/image001VX0Z.png

ಡಿಸೆಂಬರ್ 2020 ರಾಜ್ಯವಾರು ಜಿಎಸ್ಟಿ ಸಂಗ್ರಹ [1]

ರಾಜ್ಯ

ಡಿಸೆಂಬರ್ -2019

ಡಿಸೆಂಬರ್ -2020

ಬೆಳವಣಿಗೆ

ಜಮ್ಮು ಮತ್ತು ಕಾಶ್ಮೀರ

409

318

-22%

ಹಿಮಾಚಲ ಪ್ರದೇಶ 

699

670

-4%

ಪಂಜಾಬ್

1,290

1,353

5%

ಚಂಡೀಗಢ

168

158

-6%

ಉತ್ತರಾಖಂಡ

1,213

1,246

3%

ಹರಿಯಾಣ

5,365

5,747

7%

ದೆಹಲಿ

3,698

3,451

-7%

ರಾಜಸ್ಥಾನ

2,713

3,135

16%

ಉತ್ತರ ಪ್ರದೇಶ 

5,489

5,937

8%

ಬಿಹಾರ 

1,016

1,067

5%

ಸಿಕ್ಕಿಂ 

214

225

5%

ಅರುಣಾಚಲ ಪ್ರದೇಶ  

58

46

-22%

ನಾಗಾಲ್ಯಾಂಡ್ 

31

38

23%

ಮಣಿಪುರ

44

41

-8%

ಮಿಜೋರಾಂ 

21

25

21%

ತ್ರಿಪುರ  

59

74

25%

ಮೇಘಾಲಯ

123

106

-14%

ಅಸ್ಸಾಂ 

991

984

-1%

ಪಶ್ಚಿಮ ಬಂಗಾಳ

3,748

4,114

10%

ಜಾರ್ಖಂಡ್

1,943

2,150

11%

ಒಡಿಶಾ

2,383

2,860

20%

ಛತ್ತೀಸ್ಗಢ

2,136

2,349

10%

ಮಧ್ಯಪ್ರದೇಶ

2,434

2,615

7%

ಗುಜರಾತ್

6,621

7,469

13%

ದಮನ್ ಮತ್ತು ದಿಯು

94

4

-96%

ದಾದ್ರಾ ಮತ್ತು ನಗರ ಹವೇಲಿ 

154

259

68%

ಮಹಾರಾಷ್ಟ್ರ

15,530

17,699

7%

ಕರ್ನಾಟಕ

6,972

6,915

-1%

ಗೋವಾ

342

300

-12%

ಲಕ್ಷದ್ವೀಪ  

2

0

-75%

ಕೇರಳ

1,691

1,568

-7%

ತಮಿಳುನಾಡು

6,449

7,084

10%

ಪುದುಚೇರಿ  

157

158

1%

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 

25

23

-7%

ತೆಲಂಗಾಣ

3,349

3,175

-5%

ಆಂಧ್ರಪ್ರದೇಶ

2,230

2,507

12%

ಲಡಾಖ್ 

0

9

 

ಇತರೆ ಪ್ರದೇಶ  

153

79

-48%

ಕೇಂದ್ರ ವ್ಯಾಪ್ತಿ  

95

138

45%

ಒಟ್ಟು

81,674

82,075

0.5%

[1] ಸರಕುಗಳ ಆಮದು ಮೇಲಿನ ಜಿಎಸ್‌ಟಿ ಒಳಗೊಂಡಿಲ್ಲ

***


(Release ID: 1685390) Visitor Counter : 295