ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ದೇಶದಲ್ಲಿ ಎಥೆನಾಲ್ ಶುದ್ಧೀಕರಣ ಸಾಮರ್ಥ್ಯ ಹೆಚ್ಚಳಕ್ಕೆ ಪರಿಷ್ಕೃತ ಯೋಜನೆಗೆ ಅನುಮೋದನೆ ನೀಡಿದ ಕೇಂದ್ರ ಸಚಿವ ಸಂಪುಟ


ಇದರಿಂದ ರೈತರ ಆದಾಯ ಹೆಚ್ಚಳ; ಧಾನ್ಯಗಳ ಮೇವು (ಭತ್ತ, ಗೋಧಿ, ಬಾರ್ಲಿ, ಜೋಳ ಮತ್ತು ಸೋರ್ಗಂ) ಕಬ್ಬು ಮತ್ತು ಕಬ್ಬಿನ ಸಿಪ್ಪೆ ಎಥೆನಾಲ್ ಉತ್ಪಾದನೆಗೆ ಬಳಕೆ

ಅತಿ ಹೆಚ್ಚಿನ ಸಂಖ್ಯೆಯ ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಡಿಸ್ಟಿಲರೀಸ್ ಗೆ ಎಫ್ ಸಿಐನಲ್ಲಿ ಲಭ್ಯವಿರುವ ಜೋಳ ಮತ್ತು ಭತ್ತದಿಂದ ಎಥೆನಾಲ್ ಉತ್ಪಾದನೆಗೆ ಉತ್ತೇಜನ

2022ರ ವೇಳೆಗೆ ಶೇ.10ರಷ್ಟು ಮಿಶ್ರಣ ಗುರಿ ಸಾಧನೆಯ ನಿಟ್ಟಿನಲ್ಲಿ ಭಾರತ; ಇದರಿಂದ ರೈತರ ಆದಾಯ ಹೆಚ್ಚಳ ಮಾತ್ರವಲ್ಲದೆ ಅವರ ಜೀವನೋಪಾಯ ಸುಧಾರಣೆ

2022ರ ವೇಳೆಗೆ ಪೆಟ್ರೋಲ್ ಜೊತೆ ಶೇ.10ರಷ್ಟು ಎಥೆನಾಲ್ ಇಂಧನ ಮಿಶ್ರಣ ಮಾಡಲು ಭಾರತ ಸರ್ಕಾರ ಗುರಿ; 2026ರ ವೇಳೆಗೆ ಶೇ.15 ಮತ್ತು 2030ರ ವೇಳೆಗೆ ಶೇ.20ರ ಗುರಿ; ಶೇ.20ರ ಗುರಿಯನ್ನು ಸಾಧಿಸುವ ಅವಧಿಯನ್ನು 2025ಕ್ಕೆ ನಿಗದಿಪಡಿಸಲು ಸರ್ಕಾರ ಚಿಂತನೆ

ಹೆಚ್ಚುವರಿ ಕಬ್ಬು ಮತ್ತು ಸಕ್ಕರೆಯನ್ನು ಎಥೆನಾಲ್ ಗೆ ಬಳಕೆ ಮಾಡುವುದರಿಂದ ರೈತರಿಗೆ ಬರಬೇಕಾದ ಕಬ್ಬು ಬಾಕಿ ಪಾವತಿಗೆ ಅನುಕೂಲ

ಕಬ್ಬಿನ ರಸ ಆಧಾರಿತ ಡಿಸ್ಟಿಲರಿಗಳ ಸಾಮರ್ಥ್ಯ ದುಪ್ಪಟ್ಟುಗೊಂಡಿರುವುದರಿಂದ  ಕಳೆದ ಆರು ವರ್ಷಗಳಿಂದೀಚೆಗೆ ಕಬ್ಬು ಬೆಳೆಯುವ ರೈತರಿಗೆ ಅನುಕೂಲ ಮತ್ತು ಸದ್ಯ ಆ ಪ್ರಮಾಣ 426 ಕೋಟಿ ಲೀಟರ್ ಗೆ ಏರಿಕೆ 

Posted On: 30 DEC 2020 3:44PM by PIB Bengaluru

2010-11ನೇ ಸಕ್ಕರೆ ಹಂಗಾಮಿನಿಂದ ದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚುವರಿಯಾಗಿ ಆಗುತ್ತಿದೆ (ಬರದಿಂದಾಗಿ 2016-17ನೇ ಸಕ್ಕರೆ ಹಂಗಾಮು ಹೊರತುಪಡಿಸಿ) ಮತ್ತು ಕಬ್ಬು ಬೆಳೆಯಲ್ಲಿ ನಾನಾ ರೀತಿಯ ಸುಧಾರಿತ ತಳಿಗಳನ್ನು ಪರಿಚಯಿಸಿರುವುದರಿಂದ ಮುಂಬರುವ ವರ್ಷಗಳಲ್ಲೂ ಸಹ ದೇಶದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚುವರಿಯಾಗಿಯೇ ಮುಂದುವರಿಯುವ ಸಾಧ್ಯತೆ ಇದೆ. ಸಾಮಾನ್ಯ ಸಕ್ಕರೆ ಹಂಗಾಮಿನಲ್ಲಿ(ಅಕ್ಟೋಬರ್-ಸೆಪ್ಟೆಂಬರ್) ಸುಮಾರು 320 ಲಕ್ಷ ಮೆಟ್ರಿಕ್ ಟನ್(ಎಲ್ ಎಂಟಿ) ಸಕ್ಕರೆಯನ್ನು ಉತ್ಪಾದಿಸಲಾಗಿದೆ. ಆದರೆ ನಮ್ಮ ದೇಶೀಯ ಬಳಕೆ ಸುಮಾರು 260 ಲಕ್ಷ ಮೆಟ್ರಿಕ್ ಟನ್ ಮಾತ್ರ. ಹೆಚ್ಚುವರಿ 60 ಲಕ್ಷ ಮೆಟ್ರಿಕ್ ಟನ್ ಸಕ್ಕರೆ, ಸಾಮನ್ಯ ಸಕ್ಕರೆ ಋತುವಿನಲ್ಲಿ ದೇಶೀಯ ಸಕ್ಕರೆ ಉತ್ಪಾದಕರ ಮೇಲೆ ಒತ್ತಡ ಸೃಷ್ಟಿಯಗಿದೆ. ಹೆಚ್ಚುವರಿ ದಾಸ್ತಾನು ಮಾಡಲಾಗಿರುವ 60 ಲಕ್ಷ ಮೆಟ್ರಿಕ್ ಟನ್ ಮಾರಾಟವಾಗದೇ ಉಳಿದಿದೆ. ಅಲ್ಲದೆ ಸಕ್ಕರೆ ಕಾರ್ಖಾನೆಗಳಿಗೆ ಸುಮಾರು 19,000 ಕೋಟಿ ರೂ.ಗಳಷ್ಟು ನಿಧಿಯನ್ನು ತಡೆಹಿಡಿದಿದೆ. ಇದರಿಂದ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಪಾವತಿಸಬೇಕಾಗಿರುವ ಬಾಕಿ ಮೊತ್ತ ಏರಿಕೆಯಾಗಿದೆ. ಹೆಚ್ಚುವರಿ ಸಕ್ಕರೆ ದಾಸ್ತಾನು ನಿರ್ವಹಣೆಗೆ ಸಕ್ಕರೆ ಕಾರ್ಖಾನೆಗಳು ಸಕ್ಕರೆಯನ್ನು ರಫ್ತು ಮಾಡುತ್ತಿವೆ. ಅದಕ್ಕೆ ಸರ್ಕಾರ ಆರ್ಥಿಕ ನೆರವನ್ನು ವಿಸ್ತರಣೆ ಮಾಡಿದೆ. ಅಲ್ಲದೆ ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿರುವುದರಿಂದ ಡಬ್ಲ್ಯೂಟಿಒ ಒಪ್ಪಂದದ ಪ್ರಕಾರ ಸಕ್ಕರೆ ರಫ್ತಿಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು 2023ನೇ ಇಸವಿ ವರೆಗೆ ಮಾತ್ರ ವಿಸ್ತರಣೆ ಮಾಡಬಹುದಾಗಿದೆ.

ಹಾಗಾಗಿ ಹೆಚ್ಚುವರಿ ಕಬ್ಬು ಮತ್ತು ಸಕ್ಕರೆಯನ್ನು ಎಥೆನಾಲ್ ಅನ್ನಾಗಿ ಪರಿವರ್ತಿಸುವುದು ಅತ್ಯಂತ ಸೂಕ್ತ ಮಾರ್ಗವಾಗಿದ್ದು, ಮೂಲಕ ಹೆಚ್ಚುವರಿ ದಾಸ್ತಾನನ್ನು ನಿರ್ವಹಿಸಬಹುದಾಗಿದೆ. ಹೆಚ್ಚುವರಿ ಸಕ್ಕರೆ ರೀತಿ ಬಳಕೆ ಮಾಡುವುದರಿಂದ ಕಾರ್ಖಾನೆಗಳ ಹೊರಗೆ ದೇಶೀಯ ಸಕ್ಕರೆಯ ಬೆಲೆ ಸ್ಥಿರವಾಗುವುದಲ್ಲದೆ, ಸಕ್ಕರೆ ಕಾರ್ಖಾನೆಗಳಿಗೆ ದಾಸ್ತಾನು ಸಮಸ್ಯೆಯಿಂದ ಬಿಡುಗಡೆ ಹೊಂದಲು ಸಹಾಯಕವಾಗಲಿದೆ. ಜೊತೆಗೆ ಕಾರ್ಖಾನೆಗಳಿಗೆ ನಗದು ಹರಿವು ಸುಧಾರಿಸಲಿದ್ದು, ಅವು ಬಾಕಿ ಇರುವ ರೈತರ ಕಬ್ಬು ದರ ಪಾವತಿಗೆ ಅನುಕೂಲವಾಗಲಿದೆ ಮತ್ತು ಕಾರ್ಖಾನೆಗಳು ಮುಂಬರುವ ವರ್ಷಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಹಾಯಕವಾಗಲಿದೆ.

ಸರ್ಕಾರ 2022 ವೇಳೆಗೆ ಶೇ.10, 2026 ವೇಳೆಗೆ ಶೇ.15, 2030 ವೇಳೆಗೆ ಶೇ.20ರಷ್ಟು ಎಥೆನಾಲ್ ಅನ್ನು ಪೆಟ್ರೋಲ್ ಜೊತೆ ಮಿಶ್ರಣ ಮಾಡುವ ನಿರ್ದಿಷ್ಟ ಗುರಿಯನ್ನು ಹೊಂದಿದೆ. ಸಕ್ಕರೆ ವಲಯವನ್ನು ಬೆಂಬಲಿಸುವ ಸಲುವಾಗಿ ಮತ್ತು ಕಬ್ಬು ಬೆಳೆಗಾರರ ಹಿತರಕ್ಷಣೆ ಉದ್ದೇಶದಿಂದ ಸರ್ಕಾರ ಭಾರೀ ಪ್ರಮಾಣದ, ಮೊಲಾಸ್ಸಿಸ್ (ಕಬ್ಬಿನ ರಸ), ಕಾಂಕಬಿ ಅಥವಾ ಜೋನಿಬೆಲ್ಲ ಮತ್ತು ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿದೆ ಮತ್ತು ಸಿ-ದರ್ಜೆಯ ಮೊಲಾಸ್ಸಿಸ್, ಬಿ-ದರ್ಜೆಯ ಮೊಲಾಸ್ಸಿಸ್ ನಿಂದ ಉತ್ಪಾದಿಸುವ ಎಥೆನಾಲ್ ಗೆ ಆಕರ್ಷಕ ಬೆಲೆಯನ್ನು ನಿಗದಿಪಡಿಸಿದೆ ಮತ್ತು ಕಬ್ಬಿನ ಹಾಲು, ಸಕ್ಕರೆ ಮತ್ತು ದ್ರವರೂಪದ ಸಕ್ಕರೆಯಿಂದ ಎಥೆನಾಲ್ ಹಂಗಾಮಿನಲ್ಲಿ ಎಥೆನಾಲ್ ಉತ್ಪಾದಿಸಲಾಗುವುದು. 2020-21ನೇ ಸಾಲಿಗೆ ಎಥೆನಾಲ್ ಪೂರೈಕೆಗಾಗಿ ಸರ್ಕಾರ ಕಾರ್ಖಾನೆಯ ಹೊರಗೆ ಎಥೆನಾಲ್ ಗೆ ಬೆಲೆ ನಿಗದಿಪಡಿಸಿದೆ ಮತ್ತು ನಾನಾ ರೀತಿಯ ಮೇವಿನಿಂದ ಎಥೆನಾಲ್ ಉತ್ಪಾದಿಸಲು ಉತ್ತೇಜಿಸುತ್ತಿದೆ.

ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಹೆಚ್ಚಳ ಮಾಡುವ ಸಲುವಾಗಿ ಸರ್ಕಾರ ಎಫ್ ಸಿಐನಲ್ಲಿ ಲಭ್ಯವಿರುವ ಜೋಳ ಮತ್ತು ಅಕ್ಕಿಯಿಂದ ಎಥೆನಾಲ್ ಉತ್ಪಾದಿಸಲು ಡಿಸ್ಟಿಲರಿಗಳಿಗೆ ಉತ್ತೇಜನ ನೀಡುತ್ತಿದೆ. ಜೋಳ ಮತ್ತು ಅಕ್ಕಿಯಿಂದ ಉತ್ಪಾದಿಸುವ ಎಥೆನಾಲ್ ಗೆ ಸರ್ಕಾರ ಆಕರ್ಷಕ ಬೆಲೆಯನ್ನು ನಿಗದಿಪಡಿಸಿದೆ.

ಸರ್ಕಾರ ಪೆಟ್ರೋಲ್ ಜೊತೆ ಶೇ.20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿ ಸಾಧನೆಯನ್ನು ಅವಧಿಗೆ ಮುನ್ನವೇ ಅಂದರೆ 2025ಕ್ಕೆ ನಿಗದಿಪಡಿಸುವ ಚಿಂತನೆ ನಡೆಸಿದೆ. ಆದರೆ ಸದ್ಯ ದೇಶದಲ್ಲಿರುವ ಎಥೆನಾಲ್ ಶುದ್ಧೀಕರಣ ಸಾಮರ್ಥ್ಯ ಲಭ್ಯವಿರುವ ಸಕ್ಕರೆ ದಾಸ್ತಾನನ್ನು ಅದಕ್ಕೆ ಬಳಸಲು ಸಾಧ್ಯವಿಲ್ಲ.ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಹೆಚ್ಚುವರಿ ಎಥೆನಾಲ್ ಉತ್ಪಾದಿಸಲು ಸಾಧ್ಯವಿಲ್ಲ. ಏಕೆಂದರೆ ಪೆಟ್ರೋಲ್ ಜೊತೆ ಎಥೆನಾಲ್ ಮಿಶ್ರಣಕ್ಕೆ ಭಾರತ ಸರ್ಕಾರ ಮಿಶ್ರಣದ ಗುರಿಯನ್ನು ನಿಗದಿಪಡಿಸಿದೆ

ಮಿಶ್ರಣದ ಗುರಿಗಳನ್ನು ಸಾಧಿಸಲು ಕಬ್ಬು ಮತ್ತು ಸಕ್ಕರೆಯನ್ನು ಎಥೆನಾಲ್ ಉತ್ಪಾದನೆಗೆ ಬಳಕೆ ಮಾಡುವುದರಿಂದ ಮಾತ್ರ ಸಾಧಿಸಲು ಸಾಧ್ಯ ಮತ್ತು ಒಂದನೇ ಪೀಳಿಗೆ(1 ಜಿ) ಎಥೆನಾಲ್ ಅನ್ನು ಮೇವು ಅಂದರೆ ಆಹಾರ ಧಾನ್ಯಗಳು ಮತ್ತು ಕಬ್ಬಿನ ಸಿಪ್ಪೆಯಿಂದ ಮಾತ್ರ ಉತ್ಪಾದಿಸಲು ಸಾಧ್ಯ. ಇದಕ್ಕಾಗಿ ಸದ್ಯ ಇರುವ ಶುದ್ಧೀಕರಣ ಸಾಮರ್ಥ್ಯ ಸಾಕಾಗುವುದಿಲ್ಲ. ಆದ್ದರಿಂದ ದೇಶದಲ್ಲಿ ಒಂದನೇ ತಲೆಮಾರಿನ(1 ಜಿ) ಆಹಾರಧಾನ್ಯಗಳ ಮೇವು(ಭತ್ತ, ಗೋಧಿ, ಬಾರ್ಲಿ, ಜೋಳ ಮತ್ತು _ಸೋರ್ಗಂ ) ಕಬ್ಬು, ಕಬ್ಬಿನ ಸಿಪ್ಪೆ ಇತ್ಯಾದಿಗಳಿಂದ ಎಥೆನಾಲ್ ಶುದ್ಧೀಕರಣ ಸಾಮರ್ಥ್ಯವನ್ನು ಹೆಚ್ಚಳ ಮಾಡುವ ಅಗತ್ಯವಿದೆ

ಆದ್ದರಿಂದ ಸರ್ಕಾರ ಕೆಳಗಿನ ನಿರ್ಧಾರಗಳನ್ನು ಕೈಗೊಂಡಿದೆ:

1.         ಕೆಳಗಿನ ವಲಯಗಳಲ್ಲಿ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ವೃದ್ಧಿಗೆ ಬಡ್ಡಿ ವಿನಾಯಿತಿ ವಿಸ್ತರಣೆಗೆ ಪರಿಷ್ಕೃತ ಯೋಜನೆ ತರುವುದು.

.        ಧಾನ್ಯ ಆಧಾರಿತ ಡಿಸ್ಟಿಲರಿಗಳ ಸ್ಥಾಪನೆ/ ಹಾಲಿ ಇರುವ ಧಾನ್ಯ ಆಧಾರಿತ ಡಿಸ್ಟಿಲರಿಗಳು ಎಥೆನಾಲ್ ಉತ್ಪಾದನೆಗೆ ವಿಸ್ತರಣೆ. ಆದರೆ ಬಡ್ಡಿ ವಿನಾಯಿತಿ ಯೋಜನೆಯ ಪ್ರಯೋಜನ ಯಾವ ಡಿಸ್ಟಿಲರಿಗಳು ಒಣ ಮಿಲ್ಲಿಂಗ್ ಪ್ರಕ್ರಿಯೆ ಅನುಸರಿಸುತ್ತಿದ್ದಾವೋ ಅಂತಹವುಗಳಿಗೆ ಮಾತ್ರ ಅನ್ವಯವಾಗುತ್ತದೆ.

ಬಿ.        ಹೊಸ ಮೊಲಾಸ್ಸಿಸ್ ಆಧಾರಿತ ಡಿಸ್ಟಿಲರಿಗಳ ಸ್ಥಾಪನೆ/ ಎಥೆನಾಲ್ ಉತ್ಪಾದನೆಗೆ ಹಾಲಿ ಇರುವ ಡಿಸ್ಟಿಲರಿಗಳ ವಿಸ್ತರಣೆ(ಅವುಗಳು ಸಕ್ಕರೆ ಕಾರ್ಖಾನೆಗಳ ಜೊತೆಗಿರಬಹುದು ಅಥವಾ ಸ್ವತಂತ್ರ ಡಿಸ್ಟಿಲರಿಗಳಾಗಿರಬಹುದು). ಅವುಗಳು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದಿಸಿರುವಂತೆ ಶೂನ್ಯ ದ್ರವ ತ್ಯಾಜ್ಯ ವಿಲೇವಾರಿ(ಝೆಡ್ ಎಲ್ ಡಿ) ಅಳವಡಿಸಿಕೊಂಡಿರಬೇಕು.

ಸಿ.        ಹೊಸ ಬಗೆಯ ಮೇವು ಆಧಾರಿತ ಡಿಸ್ಟಿಲರಿಗಳ ಸ್ಥಾಪನೆ ಅಥವಾ ಹಾಲಿ ಇರುವ ಫೀಡ್ ಡಿಸ್ಟಿಲರಿಗಳ ವಿಸ್ತರಣೆ

ಡಿ.        ಹಾಲಿ ಇರುವ ಮೊಲಾಸ್ಸಿಸ್ (ಜೋನಿಬೆಲ್ಲ) ಆಧಾರಿತ ಡಿಸ್ಟಿಲರಿಗಳನ್ನು(ಅವುಗಳು ಸಕ್ಕರೆ ಕಾರ್ಖಾನೆ ಜೊತೆಗೆ ಸಂಯೋಜನೆಗೊಂಡಿರಬಹುದು ಅಥವಾ ಸ್ವತಂತ್ರ ಡಿಸ್ಟಿಲರಿಗಳಾಗಿರಬಹುದು) ಅವುಗಳನ್ನು ಮೇವು ಆಧಾರಿತ ಡಿಸ್ಟಿಲರಿಗಳು(ಮೊಲಾಸ್ಸಿಸ್ ಮತ್ತು ಆಹಾರಧಾನ್ಯಗಳ ಮೇವು ಅಥವಾ 1 ಜಿ ಎಥೆನಾಲ್ ಉತ್ಪಾದನೆಗೆ ಇತರೆ ಮೇವು ಬಳಕೆ) ಮತ್ತು ಆಹಾರಧಾನ್ಯ ಆಧಾರಿತ ಡಿಸ್ಟಿಲರಿಗಳನ್ನು ಮೇವು ಆಧಾರಿತ ಡಿಸ್ಟಿಲರಿಗಳನ್ನಾಗಿ ಪರಿವರ್ತಿಸುವುದು.

. ಕಬ್ಬಿನ ಸಿಪ್ಪೆ , ಸಿಹಿ ಸೋರ್ಗಂ, ಧಾನ್ಯಗಳು ಮತ್ತಿತರ ಮೇವು ದಾಸ್ತಾನು ಬಳಸಿ 1 ಜಿ ಎಥೆನಾಲ್ ಉತ್ಪಾದನೆಗೆ ಹೊಸ ಡಿಸ್ಟಿಲರಿಗಳ ಸ್ಥಾಪನೆ/ಹಾಲಿ ಇರುವ ಡಿಸ್ಟಿಲರಿಗಳ ವಿಸ್ತರಣೆ ಮಾಡುವುದು.

ಎಫ್. ಹಾಲಿ ಇರುವ ಡಿಸ್ಟಿಲರಿಗಳಲ್ಲಿ ಮಾಲಿಕ್ಯೂಲರ್ ಸೀವಬ್ ಡಿಹ್ರೈಡ್ರೇಷನ್ (ಎಂಎಸ್ ಡಿಎಚ್) ಆಧರಿತದಿಂದ ಎಥೆನಾಲ್ ಆಧಾರಿತ ಸಾರದ ಡಿಸ್ಡಿಲರಿಗಳು.

2.         ಕಾರ್ಖಾನೆಗಳಿಗೆ ಬ್ಯಾಂಕುಗಳಿಂದ ಶೇ.6 ಬಡ್ಡಿ ದರದಲ್ಲಿ ಪಡೆದಿರುವ ಸಾಲಕ್ಕೆ ಒಂದು ವರ್ಷದ ಮಟ್ಟಿಗೆ ಸಾಲ ಮರು ಪಾವತಿ ಮುಂದೂಡಿಕೆ ಸೇರಿದಂತೆ ಐದು ವರ್ಷಗಳ ವರೆಗೆ ಬಡ್ಡಿ ವಿನಾಯಿತಿ ಹೊರೆಯನ್ನು ಅಥವಾ ಬ್ಯಾಂಕುಗಳು ವಿಧಿಸುವ ಬಡ್ಡಿ ದರದ ಶೇ.50ರಷ್ಟು, ಯಾವುದು ಕಡಿಮೆಯೋ ಅದನ್ನು ಸರ್ಕಾರ ಭರಿಸಲಿದೆ

3.         ಯಾವ ಡಿಸ್ಟಿಲರಿಗಳು ಪೆಟ್ರೋಲ್ ಜೊತೆ ಮಿಶ್ರಣ ಮಾಡಲು ಓಎಂಸಿಎಸ್ ನಿಂದ ಶುದ್ಧೀಕರಣ ಸಾಮರ್ಥ್ಯವನ್ನು ಸೇರ್ಪಡೆ ಮಾಡಿಕೊಂಡು ಕನಿಷ್ಠ ಶೇ.75ರಷ್ಟು ಎಥೆನಾಲ್ ಪೂರೈಸುತ್ತವೆಯೋ ಅಂತಹ ಡಿಸ್ಟಿಲರಿಗಳಿಗೆ ಮಾತ್ರ ಬಡ್ಡಿ ವಿನಾಯಿತಿ ಪ್ರಯೋಜನ ದೊರಕಲಿದೆ.  

ಉದ್ದೇಶಿತ ಮಧ್ಯಪ್ರವೇಶದಿಂದಾಗಿ ನಾನಾ ಬಗೆಯ ಮೇವು ದಾಸ್ತಾನಿನಿಂದ 1 ಜಿ ಎಥೆನಾಲ್ ಉತ್ಪಾದನೆ ವೃದ್ಧಿಯಾಗಲಿದೆ. ಮೂಲಕ ಎಥೆನಾಲ್ ಜೊತೆ ಪೆಟ್ರೋಲ್ ಮಿಶ್ರಣ ಮಾಡುವ ಗುರಿ ಸಾಧನೆಗೆ ನೆರವಾಗಲಿದೆ ಮತ್ತು ಎಥೆನಾಲ್ ಅನ್ನು ದೇಶೀಯ ಮಾಲಿನ್ಯ ರಹಿತ ಇಂಧನವಾಗಿ ಉತ್ತೇಜಿಸಬಹುದು. ಅದು ವರ್ಚುವಲ್ ರೂಪದಲ್ಲಿ ಮುಗಿದು ಹೋಗುವುದಂತಹುದಲ್ಲ ಮತ್ತು ಪರಿಸರವನ್ನು ಸುಧಾರಿಸುತ್ತದೆ ಹಾಗೂ ಜೈವಿಕ ವ್ಯವಸ್ಥೆಯನ್ನು ರಕ್ಷಿಸುತ್ತದೆ. ಎಲ್ಲಕ್ಕೂ ಮಿಗಿಲಾಗಿ ತೈಲ ಆಮದು ಬಿಲ್ ಅನ್ನು ಉಳಿತಾಯ ಮಾಡುತ್ತದೆ. ಜೊತೆಗೆ ಇದು ರೈತರಿಗೆ ನೀಡಬೇಕಾಗಿರುವ ಬಾಕಿಯನ್ನು ಸಕಾಲದಲ್ಲಿ ಪಾವತಿಸಲು ನೆರವಾಗುತ್ತದೆ.

ಕಳೆದ ಆರು ವರ್ಷಗಳಿಂದೀಚೆಗೆ ಶುದ್ಧೀಕರಣ ಸಾಮರ್ಥ್ಯ ಹೆಚ್ಚಳ ಮತ್ತು ಮಿಶ್ರಣ ಹಂತದಲ್ಲಿ ಸರ್ಕಾರದ ಸಾಧನೆಗಳು

ಸರ್ಕಾರ 2022ಕ್ಕೆ ಎಥೆನಾಲ್ ಜೊತೆ ಶೇ.10ರಷ್ಟು ಇಂಧನವನ್ನು ಮಿಶ್ರಣ ಮಾಡುವ ಗುರಿ ಹೊಂದಿದೆ. 2030ಕ್ಕೆ ಶೇ.20 ಗುರಿ ಹೊಂದಿದೆ. 2014 ವರೆಗೆ ದೇಶದಲ್ಲಿ ಎಥೆನಾಲ್ ಶುದ್ಧೀಕರಣ ಸಾಮರ್ಥ್ಯ ಮೊಲಾಸ್ಸಿಸ್ ಆಧಾರಿತ ಡಿಸ್ಟಿಲರಿಗಳಲ್ಲಿ 200 ಕೋಟಿ ಲೀಟರ್ ಗೂ ಕಡಿಮೆ ಇತ್ತು. ಆದರೆ ಕಳೆದ ಆರು ವರ್ಷಗಳಲ್ಲಿ ಮೊಲಾಸ್ಸಿಸ್ ಆಧಾರಿತ ಡಿಸ್ಟಿಲರಿಗಳ ಸಾಮರ್ಥ್ಯ ಎರಡು ಪಟ್ಟು ಹೆಚ್ಚಾಗಿದೆ ಮತ್ತು ಸದ್ಯ 426 ಕೋಟಿ ಲೀಟರ್ ಗಳಿಗೆ ಏರಿದೆ. ಮಿಶ್ರಣ ಗುರಿಯನ್ನು ಸಾಧಿಸುವ ಸಲುವಾಗಿ ಸರ್ಕಾರ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದ್ದು, 2024 ವೇಳೆಗೆ ದೇಶದಲ್ಲಿ ಎಥೆನಾಲ್ ಶುದ್ಧೀಕರಣ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಲು ಮುಂದಾಗಿದೆ.

2013-14 ಎಥೆನಾಲ್ ಪೂರೈಕೆ ವರ್ಷದಲ್ಲಿ ಒಎಂಸಿಗಳಿಗೆ ಎಥೆನಾಲ್ ಪೂರೈಕೆ 40 ಕೋಟಿ ಲೀಟರ್ ಗೂ ಕಡಿಮೆ ಇತ್ತು ಮತ್ತು ಮಿಶ್ರಣ ಮಟ್ಟ ಕೇವಲ ಶೇ.1.53ರಷ್ಟಿತ್ತು. ಆದರೆ ಕೇಂದ್ರ ಸರ್ಕಾರದ ನಿರಂತರ ಪ್ರಯತ್ನಗಳಿಂದಾಗಿ ಇಂಧನ ದರ್ಜೆಯ ಎಥೆನಾಲ್ ಉತ್ಪಾದನೆ ಹೆಚ್ಚಾಗಿದೆ ಮತ್ತು ತೈಲ ಕಂಪನಿಗಳಿಗೆ ಅದರ ಪೂರೈಕೆ ಕಳೆದ ಆರು ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. 2018-19ನೇ ಸಾಲಿನ ಎಥೆನಾಲ್ ಪೂರೈಕೆ ವರ್ಷದಲ್ಲಿ ನಾವು ಪೂರೈಕೆ ಪ್ರಮಾಣವನ್ನು 189 ಕೋಟಿ ಲೀಟರ್ ಗಳಷ್ಟು ಐತಿಹಾಸಿಕವಾಗಿ ಹೆಚ್ಚಳ ಮಾಡುವ ಮೂಲಕ ಶೇ.5 ಮಿಶ್ರಣ ಗುರಿಯನ್ನು ಸಾಧಿಸಲಾಗಿದೆ. ಆದರೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಬರಪರಿಸ್ಥಿತಿಯಿಂದಾಗಿ ಸಕ್ಕರೆ ಉತ್ಪಾದನೆ ಮತ್ತು ಆನಂತರ 2019-20ನೇ ಸಕ್ಕರೆ ಹಂಗಾಮಿನಲ್ಲಿ ಮೊಲಾಸ್ಸಿಸ್ ಉತ್ಪಾದನೆ ಕುಸಿತವಾಗಿತ್ತು. ಆದ್ದರಿಂದಾಗಿ 2019-20ನೇ ಎಸ್ ವೈನಲ್ಲಿ ತೈಲ ಕಂಪನಿಗಳಿಗೆ ಡಿಸ್ಟಿಲರಿಗಳಿಂದ 172.50 ಕೋಟಿ ಲೀಟರ್ ಎಥೆನಾಲ್ ಪೂರೈಕೆಯಾಗಿದ್ದು, ಶೇ.5 ಮಿಶ್ರಣ ಗುರಿ ಸಾಧಿಸಲಾಗಿದೆ. 2020-21ನೇ ಸಾಲಿನ ಪ್ರಸಕ್ತ ವರ್ಷ ಒಎಂಸಿಗಳಿಗೆ ಎಥೆನಾಲ್ ಪೂರೈಕೆ ಸುಮಾರು 325 ಕೋಟಿ ಲೀಟರ್ ಗೆ ಏರಿಕೆಯಾಗುವ ಸಾಧ್ಯತೆಗಳಿದ್ದು, ಮೂಲಕ ಶೇ.8.5 ಮಿಶ್ರಣ ಮಟ್ಟ ಸಾಧಿಸುವ ಸಾಧ್ಯತೆ ಇದೆ. 2022 ವೇಳೆಗೆ ಶೇ.10 ಮಿಶ್ರಣ ಗುರಿ ಸಾಧಿಸುವ ನಿರೀಕ್ಷೆ ಇದೆ

ಮಿಶ್ರಣ ಮಟ್ಟ ಏರಿಕೆಯಾಗುತ್ತಿರುವುದರಿಂದ ಬರಿದಾಗುವ ಇಂಧನದ ಆಮದು ಅವಲಂಬನೆ ತಗ್ಗಲಿದೆ ಮತ್ತು ವಾಯುಮಾಲಿನ್ಯವೂ ಇಳಿಕೆಯಾಗಲಿದೆ. ಮುಂಬರುವ ದಿನಗಳಲ್ಲಿ ಸಾಮರ್ಥ್ಯವೃದ್ಧಿ ಮತ್ತು ಹೊಸ ಡಿಸ್ಟಿಲರಿಗಳಿಗೆ ಹೂಡಿಕೆ ಹೆಚ್ಚಾಗಲಿರುವುದರಿಂದ ಗ್ರಾಮೀಣ ಭಾಗದಲ್ಲಿ ಹೊಸ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಮೂಲಕ ಆತ್ಮನಿರ್ಭರ ಭಾರತದ ಕನಸು ಸಾಕಾರವಾಗಲಿದೆ.

***



(Release ID: 1685043) Visitor Counter : 291