ಪ್ರಧಾನ ಮಂತ್ರಿಯವರ ಕಛೇರಿ

ಶಾಂತಿ, ಸಮೃದ್ಧಿ ಮತ್ತು ಜನರಿಗಾಗಿ ಭಾರತ - ವಿಯಟ್ನಾಂ ಜಂಟಿ ದೃಷ್ಟಿಕೋನ

Posted On: 21 DEC 2020 7:51PM by PIB Bengaluru

ಭಾರತ ಗಣರಾಜ್ಯದ ಘನತೆವೆತ್ತ ಪ್ರಧಾನಮಂತ್ರಿ ನರೇಂದ್ರ ಮೋದಿ  ಮತ್ತು ವಿಯಟ್ನಾಂ ಸಮಾಜವಾದಿ ಗಣರಾಜ್ಯದ ಪ್ರಧಾನಮಂತ್ರಿ ಘನತೆವೆತ್ತ ನ್ಗುಯಾನ್ ಕ್ಸುವಾನ್ ಫ್ಯುಕ್ ಅವರು 2020 ಡಿಸೆಂಬರ್ 21ರಂದು ವರ್ಚುವಲ್ ಶೃಂಗಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಅವರು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ತಮ್ಮ ವಿಸ್ತೃತ ಅಭಿಪ್ರಾಯ ಹಂಚಿಕೊಂಡರು. ಭಾರತ- ವಿಯೆಟ್ನಾಂ  ಭವಿಷ್ಯದ ಅಭಿವೃದ್ಧಿಗೆ ಸಮಗ್ರ ವ್ಯೂಹಾತ್ಮಕ ಸಹಭಾಗಿತ್ವದ ಮಾರ್ಗದರ್ಶನ ನೀಡಲು ಶಾಂತಿ, ಸಮೃದ್ಧಿ ಮತ್ತು ಜನರಿಗೆ ಕೆಳಗಿನ ಜಂಟಿ ದೃಷ್ಟಿಕೋನ ರೂಪಿಸಿದರು:

ಶಾಂತಿ

1. ತಮ್ಮ ಸಮಗ್ರ ವ್ಯೂಹಾತ್ಮಕ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ಪರಸ್ಪರ ಇಂಗಿತವನ್ನು ಪುನರುಚ್ಚರಿಸಿದ ನಾಯಕರು, ಆಳವಾಗಿ ಬೇರೂರಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಂಟು, ಹಂಚಿಕೆಯ ಮೌಲ್ಯಗಳು ಮತ್ತು ಆಸಕ್ತಿ, ಪರಸ್ಪರ ವ್ಯೂಹಾತ್ಮ ನಂಬಿಕೆ ಮತ್ತು ತಿಳಿವಳಿಕೆ ಹಾಗೂ ಅಂತರರಾಷ್ಟ್ರೀಯ ಕಾನೂನಿಗೆ ಹಂಚಿಕೆಯ ಬದ್ಧತೆ ಆಧಾರದ ಮೇಲೆ ನಿಯಮಿತವಾಗಿ ಉನ್ನತ ಮಟ್ಟದ ಮತ್ತು ಸಾಂಸ್ಥಿಕ ವಿನಿಮಯ ಹೆಚ್ಚಿಸಲು ಸಮ್ಮತಿಸಿದರು. ಅವರು ಕಾರ್ಯಕ್ರಮಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ವಸ್ತು ಮತ್ತು ಪ್ರಚೋದನೆಯನ್ನು ಸೇರ್ಪಡೆ ಮಾಡಲಿದ್ದಾರೆ, ಪರಸ್ಪರರ ರಾಷ್ಟ್ರೀಯ ಅಭಿವೃದ್ಧಿಯನ್ನು ಬೆಂಬಲಿಸುತ್ತಾರೆ ಮತ್ತು ಶಾಂತಿಯುತ, ಸ್ಥಿರ, ಸುರಕ್ಷಿತ, ಉಚಿತ, ಮುಕ್ತ, ಅಂತರ್ಗತ ಮತ್ತು ನಿಯಮ-ಆಧಾರಿತ ಪ್ರದೇಶವನ್ನು ಸಾಧಿಸುವತ್ತ ಕೆಲಸ ಮಾಡುತ್ತಾರೆ.

2. ಪ್ರದೇಶದಲ್ಲಿ ಮತ್ತು ಅದರಾಚೆ ಹೊರಹೊಮ್ಮುತ್ತಿರುವ ಭೌಗೋಳಿಕ ಮತ್ತು ಭೂ ಆರ್ಥಿಕ ಭೂರಮೆಯ ಮಧ್ಯೆ ತಮ್ಮ ಸಹಕಾರದ ಪ್ರಮುಖ ಪಾತ್ರವನ್ನು ಗುರುತಿಸಿದ ನಾಯಕರು, ಭಾರತ ಮತ್ತು ವಿಯೆಟ್ನಾಂ ನಡುವಿನ ವರ್ಧಿತ ರಕ್ಷಣಾ ಮತ್ತು ಭದ್ರತಾ ಸಹಭಾಗಿತ್ವವು ಭಾರತ - ಪೆಸಿಫಿಕ್ ಪ್ರದೇಶದಲ್ಲಿ ಸ್ಥಿರತೆಯ ಪ್ರಮುಖ ಅಂಶವಾಗಿದೆ ಎಂಬುದನ್ನು ಒಪ್ಪಿಕೊಂಡರು. ನಿಟ್ಟಿನಲ್ಲಿ, ಎರಡೂ ಕಡೆಯವರು ತಮ್ಮ ಮೂರೂ ಸೇನಾ ಪಡೆಗಳಾದ್ಯಂತ ಮಿಲಿಟರಿಯಿಂದ ಮಿಲಿಟರಿಯ ವಿನಿಮಯ, ತರಬೇತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಮತ್ತು ಕರಾವಳಿ ಕಾವಲುಪಡೆಗಳಲ್ಲಿ ಹೆಚ್ಚಿಸಲಿದ್ದಾರೆ ಮತ್ತು ವಿಯೆಟ್ನಾಂಗೆ ವಿಸ್ತರಿಸಿರುವ ಭಾರತದ ರಕ್ಷಣಾ ಸಾಲ ಮಾರ್ಗಗಳಲ್ಲಿ ತಮ್ಮ ರಕ್ಷಣಾ ಉದ್ಯಮದ ಸಹಯೋಗದ ನಿರ್ಮಾಣ ತೀವ್ರಗೊಳಿಸಲಿದ್ದಾರೆ. ಪರಸ್ಪರ ಸಾಗಾಟದ ಬೆಂಬಲ, ನಿಯಮಿತವಾದ ಹಡಗುಗಳ ಭೇಟಿ, ಜಂಟಿ ಸಮರಾಭ್ಯಾಸ, ಮಿಲಿಟರಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ವಿನಿಮಯ, ಮಾಹಿತಿ ಹಂಚಿಕೆ ಮತ್ತು ವಿಶ್ವಸಂಸ್ಥೆಯ ಶಾಂತಿಪಾಲನೆಯಲ್ಲಿ ಸಹಕಾರದ ಮೂಲಕ ರಕ್ಷಣಾ ವಿನಿಮಯವನ್ನು ಮತ್ತಷ್ಟು ಸಾಂಸ್ಥಿಕಗೊಳಿಸಲಿದ್ದಾರೆ. ಸೈಬರ್ ಮತ್ತು ಸಾಗರ ಕ್ಷೇತ್ರ, ಭಯೋತ್ಪಾದನೆ, ನೈಸರ್ಗಿಕ ವಿಕೋಪ, ಆರೋಗ್ಯ ಭದ್ರತೆ, ಜಲ ಸುರಕ್ಷತೆ, ಅಂತಾರಾಷ್ಟ್ರೀಯ ಅಪರಾಧ ಇತ್ಯಾದಿಗಳಲ್ಲಿನ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಭೀತಿಗಳನ್ನು ಎದುರಿಸಲು ಅಗತ್ಯ ಇರುವೆಡೆ ವರ್ಧಿತ ಕಾನೂನು ಮತ್ತು ನ್ಯಾಯಿಕ ಸಹಕಾರ ಸೇರಿದಂತೆ ಸಾಂಸ್ಥಿಕ ಮಾತುಕತೆಯ ಕಾರ್ಯವಿಧಾನಗಳ ಮೂಲಕ ಇನ್ನೂ ಆಪ್ತವಾಗಿ ಕಾರ್ಯನಿರ್ವಹಿಸಲಿದ್ದಾರೆ.

3. ಸಮೃದ್ಧಿ ಮತ್ತು ಸುರಕ್ಷತೆಯ ನಡುವಿನ ನಂಟನ್ನು ಮನಗಂಡ ನಾಯಕರು, ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ವಿವಾದಗಳ ಶಾಂತಿಯುತ ಪರಿಹಾರ, ವಿಶೇಷವಾಗಿ 1982 ವಿಶ್ವಸಂಸ್ಥೆಯ ದಕ್ಷಿಣ ಚೈನಾ ಸಮುದ್ರ ಕಾನೂನು ಕುರಿತ ಸಮಾವೇಶ (ಯು.ಎನ್‌.ಸಿ.ಎಲ್..ಎಸ್) ರೀತ್ಯ ಬೆದರಿಕೆಗೆ ಒಳಪಡದಂತೆ ಅಥವಾ ಬಲದ ಬಳಕೆಯನ್ನು ಆಶ್ರಯಿಸದಿರುವುದನ್ನು ಅನುಸರಿಸುವ ಮೂಲಕ, ದಕ್ಷಿಣ ಚೈನಾ ಸಮುದ್ರದಲ್ಲಿ ಶಾಂತಿ, ಸ್ಥಿರತೆ, ಸುರಕ್ಷತೆ ಮತ್ತು ನೌಕಾ ಸಂಚಾರ ಮತ್ತು ವಿಮಾನ ಹಾರಾಟ ಸ್ವಾತಂತ್ರ್ಯವನ್ನು ಕಾಪಾಡುವ ಮಹತ್ವವನ್ನು ಪುನರುಚ್ಚರಿಸಿದರು. ಇಬ್ಬರೂ ನಾಯಕರು, ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡುವಂಥ ಅಥವಾ ಶಾಂತಿ ಮತ್ತು ಸ್ಥಿರತೆಗೆ ಅಡ್ಡಿಯಾಗಿ ವಿವಾದವನ್ನು ಮತ್ತಷ್ಟು ಹೆಚ್ಚಿಸುವಂಥ ಹಕ್ಕುದಾರರು ಮತ್ತು ಇತರ ಎಲ್ಲ ರಾಜ್ಯಗಳ ಕ್ರಮಗಳನ್ನು ತಪ್ಪಿಸುವ ಮೂಲಕ  ಮಿಲಿಟರೀಕರಣವಲ್ಲದ ಮತ್ತು ಎಲ್ಲ ಚಟುವಟಿಕೆಗಳಲ್ಲಿ ಸ್ವಯಂ ಸಂಯಮದ ಮಹತ್ವವನ್ನು ಒತ್ತಿ ಹೇಳಿದರು. ಯು.ಎನ್.ಸಿ.ಎಲ್..ಎಸ್. ರೂಪಿಸಿರುವ ಕಾನೂನು ಚೌಕಟ್ಟನಿನ ಬಗ್ಗೆ ಒತ್ತಿ ಹೇಳಿದ ಇಬ್ಬರೂ ನಾಯಕರು, ಅದರೊಳಗೆ ಸಾಗರಗಳು ಮತ್ತು ಸಮುದ್ರಗಳಲ್ಲಿನ ಎಲ್ಲಾ ಚಟುವಟಿಕೆಗಳನ್ನು ಕೈಗೊಳ್ಳಬೇಕು ಮತ್ತು ಕಡಲ ವಲಯಗಳ ಮೇಲೆ ಕಡಲ ಹಕ್ಕು, ಸಾರ್ವಭೌಮತೆ, ನ್ಯಾಯವ್ಯಾಪ್ತಿ ಮತ್ತು ನ್ಯಾಯಸಮ್ಮತ ಹಿತಾಸಕ್ತಿಗಳನ್ನು ನಿರ್ಧರಿಸಲು ಯು.ಎನ್‌.ಸಿ.ಎಲ್‌..ಎಸ್ ಆಧಾರವಾಗಿರಬೇಕು ಎಂದು ಪ್ರತಿಪಾದಿಸಿದರು. ಇಬ್ಬರೂ ನಾಯಕರು ದಕ್ಷಿಣ ಚೈನಾ ಸಮುದ್ರ (ಡಿಓಸಿ)ಯಲ್ಲಿ ಪಕ್ಷಕಾರರ ನಡೆ ಕುರಿತ ಘೋಷಣೆಯ ಸಂಪೂರ್ಣ ಮತ್ತು ಸಮರ್ಥ ಜಾರಿಗೆ ಮತ್ತು ಮಾತುಕತೆಗಳಿಗೆ ಪಕ್ಷಕಾರರಲ್ಲದವರೂ ಸೇರಿದಂತೆ ಎಲ್ಲಾ ರಾಷ್ಟ್ರಗಳ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳ ವಿಚಾರದಲ್ಲಿ ಪೂರ್ವಾಗ್ರಹವಿಲ್ಲದ ಅಂತಾರಾಷ್ಟ್ರೀಯ ಕಾನೂನಿಗೆ ಅದರಲ್ಲೂ ವಿಶೇಷವಾಗಿ ಯು.ಎನ್‌.ಸಿ.ಎಲ್‌..ಎಸ್.ಗೆ ಅನುಗುಣವಾಗಿ, ದಕ್ಷಿಣ ಚೈನಾ ಸಮುದ್ರದಲ್ಲಿ ಗಣನೀಯ ಮತ್ತು ಪರಿಣಾಮಕಾರಿ ನೀತಿ ಸಂಹಿತೆಯ ಆರಂಭಿಕ ತೀರ್ಮಾನಕ್ಕೆ ಮಹತ್ವದ ಮಾತುಕತೆಗಳ (ಸಿಒಸಿ)ನ್ನು ನಡೆಸಲು ಕರೆ ನೀಡಿದರು.

4. ವಲಯದಲ್ಲಿ ಶಾಂತಿ, ಭದ್ರತೆ ಮತ್ತು ಸಮೃದ್ಧಿಯನ್ನು ಕಾಪಾಡುವಲ್ಲಿ ಆಸಿಯಾನ್-ಭಾರತ ಸಹಕಾರದ ಮಹತ್ವವನ್ನು ಮನಗಂಡ ನಾಯಕರು, ಆಸಿಯಾನ್ ಅನ್ನು ಕೇಂದ್ರವಾಗಿ ಹಿಂಚಿಕೆಯ ಗಮನಹರಿಸುವುದೂ ಸೇರಿದಂತೆ ಭಾರತಪೆಸಿಫಿಕ್ ವಲಯದಲ್ಲಿ ಪಾಲುದಾರಿಕೆಯನ್ನು ಮತ್ತಷ್ಟು ಹೆಚ್ಚಿಸಲು  ಭಾರತಪೆಸಿಫಿಕ್ ಕುರಿತ ಆಸಿಯಾನ್ ಮುನ್ನೋಟ (ಎಓಐಪಿ) ಮತ್ತು ಭಾರತದ ಭಾರತ  ಪೆಸಿಫಿಕ್ ಸಾಗರ ಉಪಕ್ರಮ (ಐಪಿಓಐ)ನಲ್ಲಿ ಹೇಳಿರುವ ಉದ್ದೇಶಗಳಿಗೆ ಅನುಗುಣವಾಗಿ ಆಸಿಯಾನ್ ಮತ್ತು ಭಾರತ ನಡುವೆ ಪ್ರಮುಖ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಸಹಕಾರ ತ್ವರಿತಗೊಳಿಸುವ ಅವಕಾಶಗಳನ್ನು ಸ್ವಾಗತಿಸಿದರುಎರಡೂ ಕಡೆಯವರು ಪ್ರದೇಶದ ಲ್ಲರಿಗೂ ಸುರಕ್ಷತೆ ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ನೀಲಿ ಆರ್ಥಿಕತೆ, ಕಡಲ ಸುರಕ್ಷತೆ ಮತ್ತು ಭದ್ರತೆ, ಸಮುದ್ರ ಪರಿಸರ ಮತ್ತು ಕಡಲ ಸಂಪನ್ಮೂಲಗಳ ಸುಸ್ಥಿರ ಬಳಕೆ, ಮತ್ತು ಕಡಲ ಸಂಪರ್ಕದಲ್ಲಿ ಸಾಮರ್ಥ್ಯಗಳನ್ನು ನಿರ್ಮಿಸಲು ಹೊಸ ಮತ್ತು ಪ್ರಾಯೋಗಿಕ ಸಹಯೋಗಗಳನ್ನು ಅನ್ವೇಷಿಸಲಿದ್ದಾರೆ.

5. ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗೆಗಿನ ತಮ್ಮ ವಿಧಾನಗಳು ಮತ್ತು ದೃಷ್ಟಿಕೋನಗಳಲ್ಲಿನ ಸಮಾನತೆಗಳಿಂದ ಬಲ ಪಡೆದುಕೊಳ್ಳುವ, ಅಂತಾರಾಷ್ಟ್ರೀಯ ಕಾನೂನು ಮತ್ತು ನಿಯಮ-ಆಧಾರಿತ ಕ್ರಮಗಳ ಬಗ್ಗೆ ತಮ್ಮ ಹಂಚಿಕೆಯ ಗೌರವ, ಮತ್ತು ಜಾಗತಿಕ ಮಾತುಕತೆಗಳಲ್ಲಿ ಒಳಗೊಳ್ಳುವಿಕೆ ಮತ್ತು ಈಕ್ವಿಟಿಲ್ಲಿನ ನಂಬಿಕೆಯೊಂದಿಗೆ ಎರಡೂ ಕಡೆಯವರು ವಿಶ್ವಸಂಸ್ಥೆ, ಆಸಿಯಾನ್ ನೇತೃತ್ವದ ಕಾರ್ಯವಿಧಾನಗಳು ಮತ್ತು ಮೆಕಾಂಗ್ ಉಪ-ಪ್ರಾದೇಶಿಕ ಸಹಕಾರ ಒಳಗೊಂಡಂತೆ ಬಹುಪಕ್ಷೀಯ ಮತ್ತು ಪ್ರಾದೇಶಿಕ ಸಹಕಾರವನ್ನು ಬಲಪಡಿಸಲಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ, ಹೆಚ್ಚು ಪ್ರತಿನಿಧಿ, ಸಮಕಾಲೀನ ಮತ್ತು ಪ್ರಸ್ತುತ ಸವಾಲುಗಳನ್ನು ಎದುರಿಸಲು ಸಮರ್ಥವಾಗಿರುವ ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಮಾಡಲು ಸುಧಾರಿತ ಬಹುಪಕ್ಷೀಯತೆಯನ್ನು ಉಭಯ ಪಕ್ಷಗಳು ಸಕ್ರಿಯವಾಗಿ ಉತ್ತೇಜಿಸುತ್ತವೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ತಮ್ಮ ಅನುಭವ-ವಿನಿಮಯ ಮತ್ತು ಸಹಕಾರವನ್ನು ಅವರು ಪ್ರೋತ್ಸಾಹಿಸುತ್ತಾರೆ, ಆರೋಗ್ಯ ವೃತ್ತಿಪರರ ಆನ್‌ ಲೈನ್ ತರಬೇತಿಯನ್ನು ಬೆಂಬಲಿಸುತ್ತಾರೆ, ಲಸಿಕೆ ಅಭಿವೃದ್ಧಿಯಲ್ಲಿ ಸಾಂಸ್ಥಿಕ ಸಹಕಾರವನ್ನು ರೂಪಿಸುತ್ತಾರೆ, ಮುಕ್ತ ಪೂರೈಕೆ ಸರಪಳಿಗಳನ್ನು ಉತ್ತೇಜಿಸುತ್ತಾರೆ, ಜನರ ಅಗತ್ಯ ಗಡಿಯಾಚೆಗಿನ ಚಲನೆಯನ್ನು ಸುಗಮಗೊಳಿಸುತ್ತಾರೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಂತಹ ಬಹುಪಕ್ಷೀಯ ದೇಹಗಳಲ್ಲಿ ಸಂಪರ್ಕ ಮತ್ತು ಸಮನ್ವಯವನ್ನು ನಿಕಟವಾಗಿ ನಿರ್ವಹಿಸುತ್ತಾರೆ

6. ಭಯೋತ್ಪಾದನೆ, ಹಿಂಸಾತ್ಮಕ ವಿಧ್ವಂಸಕತೆ ಮತ್ತು ಮೂಲಭೂತವಾದದಿಂದ ಜಾಗತಿ ಶಾಂತಿ ಮತ್ತು ಮಾನವತೆಗೆ ಎದುರಾಗಿರುವ ಭೀತಿಯನ್ನು ಮನಗಂಡುಗಡಿಯಾಚೆಗಿನ ಭಯೋತ್ಪಾದನೆ, ಭಯೋತ್ಪಾದಕ ಹಣಕಾಸು ಜಾಲಗಳು ಮತ್ತು ಸುರಕ್ಷಿತ ತಾಣಗಳು ಸೇರಿದಂತೆ ಎಲ್ಲಾ ರೀತಿಯ ಮತ್ತು ಸ್ವರೂಪದ ಭಯೋತ್ಪಾದನೆಯನ್ನು ಎದುರಿಸುವ ತಮ್ಮ ಸಂಕಲ್ಪವನ್ನು ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಪ್ರಯತ್ನಗಳಲ್ಲಿ ಹೆಚ್ಚಿನ ಸಮನ್ವಯದ ಮೂಲಕ ಕಾರ್ಯರೂಪಕ್ಕೆ ತರಲಾಗುವುದು. ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಗ್ರ ಸಮಾವೇಶವನ್ನು (ಸಿಸಿಐಟಿ) ಶೀಘ್ರವೇ ಅಳವಡಿಸಿಕೊಳ್ಳಲು ಬಲವಾದ ಒಮ್ಮತ ಮೂಡಿಸಲು ಉಭಯ ಪಕ್ಷಗಳು ಜಂಟಿ ಪ್ರಯತ್ನಗಳನ್ನು ಹೆಚ್ಚಿಸಲಿವೆ.

ಸಮೃದ್ಧಿ

7. ಕೋವಿಡ್ 19 ಸಾಂಕ್ರಾಮಿಕದಿಂದ ಎದುರಾಗಿರುವ ಹೊಸ ಸವಾಲುಗಳು ಮತ್ತು ಅದರಿಂದ ದೊರೆತಿರುವ ಅವಕಾಶಗಳನ್ನು ಗುರುತಿಸಿದ ಇಬ್ಬರೂ ನಾಯಕರು, ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಸಮರ್ಪಕ ಪೂರೈಕೆ ಸರಪಳಿಗಳತ್ತ ಶ್ರಮಿಸುತ್ತವೆ ಮತ್ತು ಮಾನವ ಕೇಂದ್ರಿತ ಜಾಗತೀಕರಣವನ್ನು ಉತ್ತೇಜಿಸುತ್ತವೆ. ಅವರು ಶೀಘ್ರ 15 ಶತಕೋಟಿ ಅಮೆರಿಕನ್ ಡಾಲರ್ ವ್ಯಾಪಾರ ವಹಿವಾಟಿನ ಗುರಿಯನ್ನು ಸಾಧಿಸಲು ಶ್ರಮಿಸಲಿದ್ದಾರೆ ಮತ್ತು ಒಂದು ಸಮಗ್ರ ಯೋಜನೆ ಮತ್ತು ಪರಸ್ಪರರ ದೇಶದಲ್ಲಿ ಇರುವ ಹೊಸ ಪೂರೈಕೆ ಸರಪಳಿಗಳ ಆಧಾರದ ಮೇಲೆ.ದ್ವಿಪಕ್ಷೀಯ ವ್ಯಾಪಾರಕ್ಕಾಗಿ ಉನ್ನತ ಮಟ್ಟದ ಮಹತ್ವಾಕಾಂಕ್ಷೆಯನ್ನು ರೂಪಿಸಲಿದ್ದಾರೆ.

8. ಭಾರತದ ದೊಡ್ಡ ದೇಶೀಯ ಮಾರುಕಟ್ಟೆ ಮತ್ತು ಒಂದೆಡೆ ಸ್ವಾವಲಂಬನೆಯ ದೃಷ್ಟಿ ಮತ್ತು ಇನ್ನೊಂದೆಡೆ ವಿಯೆಟ್ನಾಂನ ಬೆಳೆಯುತ್ತಿರುವ ಆರ್ಥಿಕ ಚೈತನ್ಯ ಹಾಗೂ ಸಾಮರ್ಥ್ಯಗಳ ನಡುವಿನ ಬಲವಾದ ಪೂರಕತೆಗಳನ್ನು ಗುರುತಿಸಿ, ಎರಡೂ ಕಡೆಯವರು ಪರಸ್ಪರರ ಆರ್ಥಿಕತೆಯಲ್ಲಿ ದೀರ್ಘಕಾಲೀನ ಹೂಡಿಕೆಗೆ ಅನುಕೂಲ ಕಲ್ಪಿಸುವಜಂಟಿ ಉದ್ಯಮಗಳನ್ನು ಉತ್ತೇಜಿಸುವುದು, ಹೊಸ ಜಾಗತಿಕ ಮೌಲ್ಯ ಸರಪಳಿಗಳಲ್ಲಿ ತೊಡಗುವುದು, ಭೌತಿಕ ಮತ್ತು ಡಿಜಿಟಲ್ ಸಂಪರ್ಕವನ್ನು ಹೆಚ್ಚಿಸುವುದು, -ಕಾಮರ್ಸ್ ಅನ್ನು ಉತ್ತೇಜಿಸುವುದು, ವ್ಯಾಪಾರ ಪ್ರಯಾಣವನ್ನು ಸುಗಮಗೊಳಿಸುವುದು, ಪ್ರಾದೇಶಿಕ ವ್ಯಾಪಾರ ವಾಸ್ತುಶಿಲ್ಪವನ್ನು ನವೀಕರಿಸುವುದು ಮತ್ತು ಪರಸ್ಪರ ಹೆಚ್ಚಿನ ಮಾರುಕಟ್ಟೆ ಪ್ರವೇಶವನ್ನು ಒದಗಿಸುವ.ಮೂಲಕ ತಮ್ಮ ದ್ವಿಪಕ್ಷೀಯ ಆರ್ಥಿಕ ಕಾರ್ಯಕ್ರಮವನ್ನು ನಿರಂತರವಾಗಿ ನವೀಕರಿಸಲಿದ್ದಾರೆ. 2024 ವೇಳೆಗೆ 5 ಟ್ರಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ರಾಷ್ಟ್ರವಾಗುವ ಭಾರತದ ಗುರಿ ಮತ್ತು 2045 ವೇಳೆಗೆ ಹೆಚ್ಚಿನ ಆದಾಯದ ಆರ್ಥಿಕತೆಯಾಗಬೇಕೆಂಬ ವಿಯೆಟ್ನಾಂನ ಮಹತ್ವಾಕಾಂಕ್ಷೆಯಿಂದ ರಚಿಸಲ್ಪಟ್ಟ ಪಾಲುದಾರಿಕೆಯ ಹೊಸ ಅವಕಾಶಗಳನ್ನು ಎಂ.ಎಸ್.ಎಂ..ಗಳು ಮತ್ತು ಉಭಯ ದೇಶಗಳ ಕೃಷಿ ಸಮುದಾಯಗಳು ಸೇರಿದಂತೆ ಆರ್ಥಿಕತೆಯ ಎಲ್ಲಾ ವಿಭಾಗಗಳಿಂದ ಸಂಪೂರ್ಣವಾಗಿ ಪರಿಶೋಧಿಸಲ್ಪಡುತ್ತವೆ.

9. ಯುವ ಜನಸಂಖ್ಯೆಯೊಂದಿಗೆ ಎರಡು ಉದಯೋನ್ಮುಖ ಆರ್ಥಿಕತೆಯ ರಾಷ್ಟ್ರಗಳಲ್ಲಿ ಪ್ರಗತಿ ಮತ್ತು ಸಮೃದ್ಧಿಯ ಹಂಚಿಕೆಯ ಅನ್ವೇಷಣೆಯನ್ನು ಒತ್ತಿ ಹೇಳುತ್ತಾ, ಹೊಸ ತಂತ್ರಜ್ಞಾನ, ನಾವೀನ್ಯತೆ ಮತ್ತು ಡಿಜಿಟಲೀಕರಣದ ಭರವಸೆಯಿಂದ ಹೆಚ್ಚು ಪ್ರಚೋದಿಸಲ್ಪಟ್ಟ ಮತ್ತು ಅಂತರ್ಗತ ಅಭಿವೃದ್ಧಿಯೊಂದಿಗೆ ಭಾರತ ಮತ್ತು ವಿಯೆಟ್ನಾಂ ನಡುವಿನ ಆರ್ಥಿಕ ಮತ್ತು ಅಭಿವೃದ್ಧಿ ಸಹಭಾಗಿತ್ವವು ಉತ್ತಮ ಆಡಳಿತ, ಜನರ ಸಬಲೀಕರಣ ಮತ್ತು ಸುಸ್ಥಿರತೆಯನ್ನು ತಲುಪಲಿದೆ. ನಿಟ್ಟಿನಲ್ಲಿ ಎರಡೂ ಕಡೆಯವರು ಭಾರತದ ಡಿಜಿಟಲ್ ಇಂಡಿಯಾ ಅಭಿಯಾನ ಮತ್ತು ವಿಯಟ್ನಾಂನ ಡಿಜಿಟಲ್ ಸೊಸೈಟಿ ಮುನ್ನೋಟವನ್ನು ಬಳಸಿಕೊಳ್ಳಲಿದ್ದಾರೆ ಮತ್ತು ಪರಮಾಣುವಿನ ಶಾಂತಿಯುತ ಬಳಕೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದಲ್ಲಿ ಪರಿವರ್ತನಾತ್ಮಕ ತಂತ್ರಜ್ಞಾನ, ಸಾಗರ ವಿಜ್ಞಾನ, ಸುಸ್ಥಿರ ಕೃಷಿ, ಜಲ ಸಂಪನ್ಮೂಲ ನಿರ್ವಹಣೆ, ಸಮಗ್ರ ಆರೋಗ್ಯ ಆರೈಕೆ, ಲಸಿಕೆ ಮತ್ತು ಔಷಧ, ಸ್ಮಾರ್ಟ್ ನಗರ ಮತ್ತು ನವೋದ್ಯಂಗಳಲ್ಲಿ ಸಹಕಾರವನ್ನು ಆಳಗೊಳಿಸಲಿದ್ದಾರೆ.

10.  ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಕ್ರಿಯೆಗೆ ತಮ್ಮ ಹಂಚಿಕೆಯ ಬದ್ಧತೆಯನ್ನು ಪುನರುಚ್ಚರಿಸಿ, ಅಭಿವೃದ್ಧಿಶೀಲ ರಾಷ್ಟ್ರಗಳಾಗಿ ತಮ್ಮ ಇಂಧನ ಸುರಕ್ಷತೆಯನ್ನು ತಿಳಿಸಿದ, ಎರಡೂ ಕಡೆಯವರು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳು, ಇಂಧನ ಸಂರಕ್ಷಣೆ ಮತ್ತು ಇತರ ಹವಾಮಾನ-ಸ್ಥಿತಿಸ್ಥಾಪಕ ತಂತ್ರಜ್ಞಾನಗಳಲ್ಲಿ ಪಾಲುದಾರರಾಗುತ್ತಾರೆ. ಅಂತಾರಾಷ್ಟ್ರೀಯ ಸೌರ ಒಕ್ಕೂಟದಲ್ಲಿ ವಿಯೆಟ್ನಾಂನ ಭವಿಷ್ಯದ ಭಾಗವಹಿಸುವಿಕೆಯು ಸೌರಶಕ್ತಿಯ ದೊಡ್ಡ ಪ್ರಮಾಣದಲ್ಲಿ ನಿಯೋಜನೆಯಲ್ಲಿ ಸಹಕಾರಕ್ಕಾಗಿ ಹೊಸ ಅವಕಾಶಗಳನ್ನು ತರಲಿದೆ. ಅದೇ ವೇಳೆ ಎರಡೂ ಕಡೆಯವರು ಮೂರನೇ ದೇಶಗಳಲ್ಲಿ ಸಂಭವನೀಯ ಪರಿಶೋಧನೆ ಯೋಜನೆಗಳು ಮತ್ತು ಕಚ್ಚಾತೈಲ ಸಂಸ್ಕರಣೆ ಯೋಜನೆಗಳಲ್ಲಿ ಸಹಯೋಗ ಸೇರಿದಂತೆ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ತಮ್ಮ ದೀರ್ಘ ಕಾಲೀನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದ್ದಾರೆ. ಎರಡೂ ಕಡೆಯವರು ಹವಾಮಾನ ಬದಲಾವಣೆ ಅಳವಡಿಕೆ ಸಹಕಾರ ಬಲಪಡಿಸಲಿದ್ದಾರೆ ಮತ್ತು  ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ವಿಯೆಟ್ನಾಂ ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯ ಒಕ್ಕೂಟಕ್ಕೆ ಸೇರುವುದನ್ನು ಭಾರತ ಎದುರು ನೋಡುತ್ತಿದೆ.

11. ಸ್ಥಳೀಯ ಸಮುದಾಯಗಳಿಗೆ ಸಮಗ್ರ ಮತ್ತು ವೈವಿಧ್ಯಮಯ ಪ್ರಯೋಜನಗಳನ್ನು ತಲುಪಿಸುವಲ್ಲಿ ತಮ್ಮ ಅಭಿವೃದ್ಧಿ ಸಹಭಾಗಿತ್ವವು ವಹಿಸಿರುವ ಪ್ರಮುಖ ಪಾತ್ರವನ್ನು ಗುರುತಿಸಿಮೆಕಾಂಗ್ - ಗಂಗಾ ತ್ವರಿತ ಪರಿಣಾಮ ಯೋಜನೆಗಳನ್ನು ವಿಸ್ತರಿಸುವುದು ಮತ್ತು ಐಟಿಇಸಿ ಮತ್ತು -ಐಟಿಇಸಿ ಕಾರ್ಯಕ್ರಮಗಳು ವೈವಿಧ್ಯಮಯ ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಕೊಡುಗೆ ನೀಡುವುದರಿಂದ, ವಿಯೆಟ್ನಾಂನಲ್ಲಿ ಭಾರತದ ಅಭಿವೃದ್ಧಿ ನೆರವು ಮತ್ತು ಸಾಮರ್ಥ್ಯ ವೃದ್ಧಿಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ

ಜನರು

12. ಭಾರತ ಮತ್ತು ವಿಯೆಟ್ನಾಂ ನಡುವಿನ ಆಳವಾದ ಸಾಂಸ್ಕೃತಿಕ ಮತ್ತು ಐತಿಹಾಸಿಕ ಬಾಂಧವ್ಯಕ್ಕೆ ಒತ್ತುನೀಡಿ, ಎರಡೂ ಕಡೆಯವರು ಬೌದ್ಧ ಮತ್ತು ಚಮ್ ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಪ್ರಾಚೀನ ಗ್ರಂಥಗಳನ್ನು ಒಳಗೊಂಡಂತೆ ತಮ್ಮ ಹಂಚಿಕೆಯ ಸಾಂಸ್ಕೃತಿಕ ಮತ್ತು ನಾಗರಿಕ ಪರಂಪರೆಯ ತಿಳಿವಳಿಕೆ ಮತ್ತು ಸಂಶೋಧನೆಯನ್ನು ಸ್ಮರಿಸಿ, ಉತ್ತೇಜಿಸಲಿದ್ದಾರೆ. ಹಂಚಿಕೆಯ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯಲ್ಲಿ ಸಹಕಾರವನ್ನು ತಮ್ಮ ಅಭಿವೃದ್ಧಿ ಸಹಭಾಗಿತ್ವದ ಪ್ರಮುಖ ಆಧಾರಸ್ತಂಭವಾಗಿ ಅನುಸರಿಸಲಾಗುವುದು. ಔಷಧದ ಸಾಂಪ್ರದಾಯಿಕ ವ್ಯವಸ್ಥೆಗಳು ಸುಸ್ಥಿರ ಅಭಿವೃದ್ಧಿ ಗುರಿ 2 ಮತ್ತು 3ನ್ನು ಸಾಧಿಸುವುದು ಎರಡೂ ದೇಶಗಳಿಗೆ ತುಂಬಾ ಮಹತ್ವದ್ದಾಗಿದೆ. ಕಳೆದ ಸಾವಿರಾರು ವರ್ಷಗಳಿಂದ ಎರಡೂ ದೇಶಗಳ ನಡುವಿನ ಸಾಂಸ್ಕತಿಕ ವಿನಿಮಯದ ಕಾರಣದಿಂದಾಗಿ ಸಾಂಪ್ರದಾಯಿಕ ವೈದ್ಯ ಪದ್ಧತಿಗಳಾದ ಆಯುರ್ವೇದ ಮತ್ತು ವಿಯೆಟ್ನಾಂ-ಸಾಂಪ್ರದಾಯಿಕ ಔಷಧದಂತಹ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳು ಆರೋಗ್ಯದ ಸಮೃದ್ಧ ಜ್ಞಾನದ ಅನೇಕ ಸಾಮಾನ್ಯ ಎಳೆಗಳನ್ನು ಹಂಚಿಕೊಳ್ಳುತ್ತಿವೆ. ಯೋಗವು ಶಾಂತಿ ಮತ್ತು ಸಾಮರಸ್ಯದ ಸಂಕೇತವಾಗಿ ಹೊರಹೊಮ್ಮಿದೆ ಮತ್ತು ಆಧ್ಯಾತ್ಮಿಕ ಯೋಗಕ್ಷೇಮ ಮತ್ತು ಸಂತೋಷದ ಹಂಚಿಕೆಯ ಅನ್ವೇಷಣೆಯಾಗಿದೆ. ಸಾಂಪ್ರದಾಯಿಕ ಔಷಧ ಪದ್ಧತಿಗಳನ್ನು ಬಲಪಡಿಸಲು ಮತ್ತು ಜನರ ಯೋಗಕ್ಷೇಮಕ್ಕಾಗಿ ಅವುಗಳ ಪುರಾವೆ ಆಧಾರಿತ ಏಕೀಕರಣಕ್ಕೆ ಎರಡೂ ದೇಶಗಳು ಸಹಕರಿಸಲು ಬದ್ಧವಾಗಿವೆ. 2022 ರಲ್ಲಿ ಭಾರತದ - ವಿಯೆಟ್ನಾಂ ರಾಜತಾಂತ್ರಿಕ ಸಂಬಂಧಗಳ 50ನೇ ವಾರ್ಷಿಕೋತ್ಸವದ ಅಂಗವಾಗಿ ಭಾರತ- ವಿಯೆಟ್ನಾಂ ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳ ವಿಶ್ವಕೋಶವನ್ನು ಪ್ರಕಟಿಸಲು ಎರಡೂ ಕಡೆಯವರು ಸಕ್ರಿಯವಾಗಿ ಸಹಕರಿಸಲಿದ್ದಾರೆ.

13. ಉಭಯ ದೇಶಗಳ ಜನರ ಪರಸ್ಪರ ಸ್ನೇಹ ಭಾವನೆಗಳಿಂದ ಪಡೆದ ಸಾಮರ್ಥ್ಯವನ್ನು ಗುರುತಿಸಿ ಮತ್ತು ಬೆಂಬಲಿಸುವ, ನೇರ ವಿಮಾನಗಳ ಸಂಚಾರವನ್ನು ಹೆಚ್ಚಿಸುವ, ಸರಳೀಕೃತ ವೀಸಾ ಕಾರ್ಯವಿಧಾನಗಳ ಮೂಲಕ ಪ್ರಯಾಣ ಸುಲಭವಾಗುವ ಮತ್ತು ಪ್ರವಾಸೋದ್ಯಮ ಸುಗಮಗೊಳಿಸುವ ಮೂಲಕ ಉಭಯ ರಾಷ್ಟ್ರಗಳ ಜನರ ಆಪ್ತವಾದ ವಿನಿಮಯವನ್ನು ಉತ್ತೇಜಿಸುವ ಪ್ರಯತ್ನಗಳನ್ನು ತೀವ್ರಗೊಳಿಸುತ್ತದೆ. ತಮ್ಮ ಸಂಸದೀಯ ವಿನಿಮಯದಂತಹ ಸಂಪರ್ಕಗಳನ್ನು ಮತ್ತಷ್ಟು ಬಲಪಡಿಸಿ ಮತ್ತು ಸಾಂಸ್ಥಿಕಗೊಳಿಸಲು; ಭಾರತೀಯ ರಾಜ್ಯಗಳು ಮತ್ತು ವಿಯೆಟ್ನಾಂ ಪ್ರಾಂತ್ಯಗಳ ನಡುವಿನ ಸಂಬಂಧಗಳು; ರಾಜಕೀಯ ಪಕ್ಷಗಳು, ಸಾಮಾಜಿಕ ಸಂಸ್ಥೆಗಳು, ಸ್ನೇಹ ಪರ ಗುಂಪುಗಳು ಮತ್ತು ಯುವ ಸಂಘಟನೆಗಳ ನಡುವಿನ ವಿನಿಮಯ; ಶೈಕ್ಷಣಿಕ ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಸಹಯೋಗ; ಚಿಂತಕರ ಚಾವಡಿ ನಡುವೆ ಮಾತುಕತೆ; ಜಂಟಿ ಸಂಶೋಧನಾ ಕಾರ್ಯಕ್ರಮಗಳು; ಶೈಕ್ಷಣಿಕ ವಿದ್ಯಾರ್ಥಿವೇತನ; ಮತ್ತು ಮಾಧ್ಯಮ, ಚಲನಚಿತ್ರ, ಟಿವಿ ಕಾರ್ಯಕ್ರಮಗಳು ಮತ್ತು ಕ್ರೀಡಾ ವಿನಿಮಯದಿಂದ ಬಲಗೊಳಿಸುತ್ತವೆ. ಭಾರತವಿಯಟ್ನಾಂ ಬಾಂಧನ್ಯಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಪರಸ್ಪರರ ಶಾಲಾ ಪಠ್ಯಪುಸ್ತಕಗಳಲ್ಲಿ ಅವುಗಳ ಐತಿಹಾಸಿಕ ಸಂಪರ್ಕಗಳನ್ನು ಉತ್ತೇಜಿಸಲು ಎರಡು ಕಡೆಯವರು ಸಂಬಂಧಿತ ಸಂಸ್ಥೆಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಸಹಕರಿಸುತ್ತಾರೆ.

14. ತಮ್ಮ ಮೇಲಿನ ಹಂಚಿಕೆಯ ದೃಷ್ಟಿ ಭಾರತದ ಹೊಸ ಯುಗದ - ವಿಯೆಟ್ನಾಂ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವಕ್ಕೆ ಮೂಲಾಧಾರವಾಗಿ ಕಾರ್ಯಕ್ಕೆನಿರ್ವಹಿಸುತ್ತದೆ ಎಂಬ ವಿಶ್ವಾಸವನ್ನು ಇಬ್ಬರೂ ಪ್ರಧಾನಮಂತ್ರಿಗಳು ವ್ಯಕ್ತಪಡಿಸಿದರು ದೃಷ್ಟಿಯನ್ನು ಸಾಕಾರಗೊಳಿಸುವ ಸಲುವಾಗಿ, 2021-2023ರವರೆಗೆ ಪ್ರಾರಂಭಿಸಿ, ಸಮಗ್ರ ಕಾರ್ಯ ಯೋಜನೆಯನ್ನು ನಿಯಮಿತವಾಗಿ ಎರಡೂ ಕಡೆಯಿಂದ ಕಾರ್ಯರೂಪಕ್ಕೆ ತರಲಿದ್ದಾರೆ.

ಫಲಶ್ರುತಿಗಳು:

() ಜಂಟಿ ದೃಷ್ಟಿಕೋನದ ಹೇಳಿಕೆಯನ್ನು ಅಳವಡಿಸಿಕೊಳ್ಳುವಾಗ, ಇಬ್ಬರೂ ನಾಯಕರು 2021-2023 ಅವಧಿಯ ಯೋಜನೆಗೆ ಸಹಿ ಹಾಕುವುದನ್ನು ಸ್ವಾಗತಿಸಿದರು.

(ಬಿ) ವಿಯಟ್ನಾಂಗೆ ಭಾರತ ಸರ್ಕಾರ ನೀಡಿರುವ 100 ದಶಲಕ್ಷ ಅಮೆರಿಕನ್ ಡಾಲರ್ ರಕ್ಷಣಾ ಸಾಲದ ಅಡಿಯಲ್ಲಿ ವಿಯೆಟ್ನಾಂ ಗಡಿ ಕಾವಲು ಕಮಾಂಡ್ ಗಾಗಿ ಅತಿ ವೇಗದ ಕಾವಲು ದೋಣಿ (ಎಚ್‌.ಎಸ್‌.ಜಿ.ಬಿ) ಉತ್ಪಾದನಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಮತ್ತು ಪೂರ್ಣಗೊಂಡ ಎಚ್.ಎಸ್.ಜಿ.ಬಿ. ಯನ್ನು ವಿಯಟ್ನಾಂಗೆ ಹಸ್ತಾಂತರಿಸಿದ, ಎಚ್.ಎಸ್.ಜಿ.ಬಿ.ಗಳನ್ನು ಉತ್ಪಾದಿಸಲು ಭಾರತದಲ್ಲಿ ಚಾಲನೆ ನೀಡಿದ ಮತ್ತು ವಿಯಟ್ನಾಂನಲ್ಲಿ ಎಚ್.ಎಸ್.ಜಿ.ಬಿ.ಗಳ ಉತ್ಪಾದನೆಗೆ ಅಡಿಗಲ್ಲು ಹಾಕಿದ ಬಗ್ಗೆ ಇಬ್ಬರೂ ಪ್ರಧಾನ ಮಂತ್ರಿಗಳು ಸಂತೃಪ್ತಿ ವ್ಯಕ್ತಪಡಿಸಿದರು.

(ಸಿ) ವಿಯಟ್ನಾಂನ ನಿಹ್ ಥೂನ್ ಪ್ರಾಂತ್ಯದ ಸ್ಥಳೀಯ ಸಮುದಾಯದ ಪ್ರಯೋಜನಕ್ಕಾಗಿ 1.5 ದಶಲಕ್ಷ ಅಮೆರಿಕನ್ ಡಾಲರ್ ನೆರವಿನ ಭಾರತೀಯಧನ ಸಹಾಯದೊಂದಿಗೆ ಏಳು ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಿರುವುದಕ್ಕೆ ಇಬ್ಬರೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.

(ಡಿ) ತಿಳಿವಳಿಕೆ ಒಪ್ಪಂದ/ಒಪ್ಪಂದ/ಜಾರಿ ಒಪ್ಪಂದಗಳಿಗೆ ಅಂಕಿತ ಹಾಕಿದ ಬಗ್ಗೆ ಇಬ್ಬರೂ ಪ್ರಧಾನಮಂತ್ರಿಗಳು ಸಂತೃಪ್ತಿ ವ್ಯಕ್ತಪಡಿಸಿದರು ಮತ್ತು ಕೆಳಕಂಡ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವುದಾಗಿ ಪ್ರಕಟಿಸಿದರು:

ಅಂಕಿತ ಹಾಕಲಾದ ಎಂಓಯುಗಳು/ ಒಪ್ಪಂದಗಳು:

1. ರಕ್ಷಣಾ ಉದ್ಯಮದ ಸಹಕಾರ ಕುರಿತ ವ್ಯವಸ್ಥೆಯನ್ನು ಜಾರಿಗೊಳಿಸುವುದು.

2. ನಾ ಟ್ರಾಂಗ್‌ ರಾಷ್ಟ್ರೀಯ ದೂರಸಂಪರ್ಕ ವಿಶ್ವವಿದ್ಯಾಲಯದಲ್ಲಿ ಸೇನಾ ತಂತ್ರಾಂಶ  ಪಾರ್ಕ್‌ ಗಾಗಿ 5ದಶಲಕ್ಷ ಅಮೆರಿಕನಾ ಡಾಲರ್ ಗಳ ಭಾರತೀಯ ಧನ ಸಹಾಯಕ್ಕಾಗಿ ಒಪ್ಪಂದ.

3. ವಿಶ್ವ ಸಂಸ್ಥೆಯ ಶಾಂತಿಪಾಲನೆಯಲ್ಲಿ ಸಹಕಾರಕ್ಕಾಗಿ ಕುನ್ಪ್ಕೋ-ವಿ.ಎನ್.ಡಿ.ಪಿ.ಕೆ.. ನಡುವೆ ವ್ಯವಸ್ಥೆಯನ್ನು ಜಾರಿಗೊಳಿಸುವುದು.

4. ಭಾರತದ ಪರಮಾಣು ಇಂಧನ ನಿಯಂತ್ರಣ ಮಂಡಳಿ ಮತ್ತು ವಿಕಿರಣ ಮತ್ತು ಪರಮಾಣು ಸುರಕ್ಷತೆಗಾಗಿ ವಿಯೆಟ್ನಾಂ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ

5. ಸಿ.ಎಸ್..ಆರ್- ಭಾರತೀಯ ಪೆಟ್ರೋಲಿಯಂ ಸಂಸ್ಥೆ ಮತ್ತು ವಿಯೆಟ್ನಾಂ ಪೆಟ್ರೋಲಿಯಂ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ.

6. ಭಾರತೀಯ ರಾಷ್ಟ್ರೀಯ ಸೌರ ಒಕ್ಕೂಟ ಮತ್ತು ವಿಯೆಟ್ನಾಂ ಶುದ್ಧ ಇಂಧನ ಸಂಸ್ಥೆ ನಡುವಿನ ತಿಳಿವಳಿಕೆ ಒಪ್ಪಂದ.

7. ಟಾಟಾ ಸ್ಮಾರಕ ಕೇಂದ್ರ ಮತ್ತು ವಿಯೆಟ್ನಾಂ ರಾಷ್ಟ್ರೀಯ ಕ್ಯಾನ್ಸರ್ ಆಸ್ಪತ್ರೆ ನಡುವೆ ತಿಳಿವಳಿಕೆ ಒಪ್ಪಂದ.

ಪ್ರಕಟಣೆಗಳು:

1. 2021-2022 ಆರ್ಥಿಕ ವರ್ಷದಿಂದ ಪ್ರಾರಂಭವಾಗುವಂತೆ ತ್ವರಿತ ಪರಿಣಾಮ ಯೋಜನೆಗಳ ಸಂಖ್ಯೆಯನ್ನು ವರ್ಷಕ್ಕೆ 5 ರಿಂದ 10 ಕ್ಕೆ ಹೆಚ್ಚಿಸುವುದು.

2. ವಿಯೆಟ್ನಾಂನಲ್ಲಿನ ಪಾರಂಪರಿಕ ಸಂರಕ್ಷಣೆಯಲ್ಲಿ ಹೊಸ ಅಭಿವೃದ್ಧಿ ಸಹಭಾಗಿತ್ವ ಯೋಜನೆಗಳು (ಮೈ ಸನ್ ನಲ್ಲಿ ದೇವಾಲಯದ ಎಫ್-ಬ್ಲಾಕ್; ಕ್ವಾಂಗ್ ನಾಮ್‌ ಡಾಂಗ್ ಡುವಾಂಗ್ ಬೌದ್ಧ ವಿಹಾರ ಮತ್ತು ಫು ಯೆನ್‌ ನನ್ ಚಾಮ್ ಗೋಪುರ).

3. ಭಾರತ - ವಿಯೆಟ್ನಾಂ ನಾಗರಿಕ ಮತ್ತು ಸಾಂಸ್ಕೃತಿಕ ಸಂವಹನ ಕುರಿತ ವಿಶ್ವಕೋಶದ ದ್ವಿಪಕ್ಷೀಯ ಯೋಜನೆಗೆ ಚಾಲನೆ.

***


(Release ID: 1682621) Visitor Counter : 626