ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಭಾರತ ಅಂತರರಾಷ್ಟ್ರೀಯ ವಿಜ್ಞಾನೋತ್ಸವ -2020ಕ್ಕೆ ನಾಳೆ ಪ್ರಧಾನಿ ಚಾಲನೆ


ಡಿಸೆಂಬರ್ 25 ರಂದು ಐಐಎಸ್ಎಫ್ -2020 ರ ಸಮಾರೋಪ ಸಮಾರಂಭದಲ್ಲಿ ಉಪ ರಾಷ್ಟ್ರಪತಿಯವರ ಭಾಷಣ

"ಯಾವುದೇ ಹೊಸ ಸವಾಲುಗಳನ್ನು ಎದುರಿಸಬಹುದೆಂದು ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ ಮತ್ತು ಮುಂದೆಯೂ ತೋರಿಸುತ್ತಾರೆ": ಡಾ. ಹರ್ಷವರ್ಧನ್

2020 ನೇ ವರ್ಷವನ್ನು ವಿಜ್ಞಾನ ಮತ್ತು ವಿಜ್ಞಾನಿಗಳ ವರ್ಷ ಎಂದು ಕರೆಯುವುದು ಸೂಕ್ತವಾಗಿದೆ: ಡಾ. ಹರ್ಷವರ್ಧನ್

ಐಐಎಸ್ಎಫ್ -2020 ಐದು ವಿಭಾಗಗಳಲ್ಲಿ ಗಿನ್ನೆಸ್ ದಾಖಲೆಗಳಿಗೆ ಪ್ರಯತ್ನಿಸಲಿದೆ

Posted On: 21 DEC 2020 6:12PM by PIB Bengaluru

ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವದ (ಐಐಎಸ್ಎಫ್) 6 ನೇ ಆವೃತ್ತಿಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ವರ್ಷದ ಬೃಹತ್ ವಿಜ್ಞಾನ ಉತ್ಸವವನ್ನು ಡಿಸೆಂಬರ್ 22 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ ಹಾಗೂ ಅವರು ಉದ್ಘಾಟನಾ ಭಾಷಣ ಮಾಡಲಿದ್ದಾರೆ. ಐಐಎಸ್ಎಫ್ನ ಪ್ರಯಾಣ 2015 ರಲ್ಲಿ ಪ್ರಾರಂಭವಾಯಿತು. "ಕೋವಿಡ್ ಹಿನ್ನೆಲೆಯಲ್ಲಿ, ಐಐಎಸ್ಎಫ್ -2020 ಅನ್ನು ಆನ್‌ಲೈನ್‌ನಲ್ಲಿ ಆಯೋಜಿಸಲಾಗುತ್ತಿದೆ ಮತ್ತು ಇದು ಅತಿದೊಡ್ಡ ವರ್ಚುವಲ್ ವಿಜ್ಞಾನ ಉತ್ಸವವಾಗಲಿದೆ" ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಭೂ ವಿಜ್ಞಾನ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. 

ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಉತ್ಸವದ ಉದ್ಘಾಟನಾ ಭಾಷಣವನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಮಾಡಲಿದ್ದರೆ, 2020 ರ ಡಿಸೆಂಬರ್ 25 ರಂದು ನಡೆಯುವ ಉತ್ಸವದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಉಪ ರಾಷ್ಟ್ರಪತಿ ಶ್ರೀ ವೆಂಕಯ್ಯ ನಾಯ್ಡು ಅವರು ಮಾತನಾಡಲಿದ್ದಾರೆ ಎಂದು ತಿಳಿಸಿದರು.
 
ವಿಜ್ಞಾನ ಮತ್ತು ವಿಜ್ಞಾನಿಗಳು ಯಾವುದೇ ಸವಾಲನ್ನು ಸಮರ್ಥವಾಗಿ ಎದುರಿಸಿದ್ದಾರೆ ಮತ್ತು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಭಾರತದ ವಿಜ್ಞಾನಿಗಳು ಈ ಸಂದರ್ಭವನ್ನು ಸಮರ್ಥವಾಗಿ ಎದುರಿಸಿದ್ದಾರೆ. ಅಲ್ಪಾವಧಿಯಲ್ಲಿಯೇ ಸ್ಯಾನಿಟೈಸರ್ಗಳು, ಮುಖಗವಸುಗಳು, ಪಿಪಿಇ ಕಿಟ್‌ಗಳು, ವೆಂಟಿಲೇಟರ್‌ಗಳು ಮತ್ತು ಹೊಸ ಔಷಧಗಳು, ಲಸಿಕೆಗಳು ಮತ್ತು ಕೋವಿಡ್-19 ವೈರಸ್‌ನ ಜೀನೋಮ್ ಅನುಕ್ರಮಗಳನ್ನು ಕಂಡುಹಿಡಿದರು ಎಂದು ಡಾ. ಹರ್ಷವರ್ಧನ್ ಹೇಳಿದರು.
ನಮ್ಮ ದೇಶದಲ್ಲಿ ವಿಜ್ಞಾನವು ಶ್ಲಾಘನೀಯ ದಾಪುಗಾಲಿಟ್ಟಿದೆ. ಆದ್ದರಿಂದ ನಮ್ಮ ದೇಶದ ವೈಜ್ಞಾನಿಕ ಬೆಳವಣಿಗೆಗಳು ಮತ್ತು ಸಾಧನೆಗಳ ಬಗ್ಗೆ ಹೆಚ್ಚಿನ ಜನರು ತಿಳಿದುಕೊಳ್ಳಬೇಕು ಮತ್ತು ಹೆಮ್ಮೆ ಪಡಬೇಕು ಎಂದು ಸಚಿವರು ಹೇಳಿದರು. ಅದಕ್ಕಾಗಿಯೇ, ಭಾರತೀಯ ವಿಜ್ಞಾನ ಮತ್ತು ವಿಜ್ಞಾನಿಗಳ ಬಗ್ಗೆ ತಿಳಿಸಲು, ಭಾರತ ಅಂತರರಾಷ್ಟ್ರೀಯ ವಿಜ್ಞಾನ ಉತ್ಸವವನ್ನು ಪ್ರತಿ ವರ್ಷ ನಡೆಸಬೇಕು ಎಂದು 2015 ರಲ್ಲಿ ತೀರ್ಮಾನಿಸಲಾಯಿತು. ಇದರಲ್ಲಿ ಎಲ್ಲರೂ ಭಾಗವಹಿಸಬಹುದು ಮತ್ತು ವಿಜ್ಞಾನವನ್ನು ಸಂಭ್ರಮಿಸಬಹುದು ಎಂದು ಅವರು ಹೇಳಿದರು.
 
ಕೋವಿಡ್-19 ವೈರಸ್‌ನ ಹೊಸ ಪ್ರಭೇದ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು “ಯಾವುದೇ ಹೊಸ ಸವಾಲುಗಳನ್ನು ಎದುರಿಸಬಹುದೆಂದು ವಿಜ್ಞಾನಿಗಳು ತೋರಿಸಿಕೊಟ್ಟಿದ್ದಾರೆ ಮತ್ತು ಅವರು ಮುಂದೆಯೂ ಅಂತಹ ಸವಾಲುಗಳನ್ನು ಎದುರಿಸುವುದನ್ನು ತೋರಿಸಿಕೊಡುತ್ತಾರೆ ಎಂದು ಭರವಸೆ ನೀಡಿದರು. ಆರೋಗ್ಯ ಸಮಸ್ಯೆಗಳು ಈಗ ಜನಾಂದೋಲನವಾಗಿವೆ. ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತು ಅಂತಹ ಸಂದರ್ಭಗಳಲ್ಲಿ ಸೂಕ್ತ ನಡವಳಿಕೆಯನ್ನು ಅಳವಡಿಸಿಕೊಳ್ಳುವ ಮೂಲಕ ದೇಶದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಬಗ್ಗೆ ತಿಳಿದಿದ್ದಾರೆ ಎಂದು ಅವರು ಹೇಳಿದರು.
ಐಐಎಸ್ಎಫ್ ವಾರ್ಷಿಕ ಕಾರ್ಯಕ್ರಮವಾಗಿದೆ. ಇದು ಸರ್ಕಾರದ ಒಂದು ಉಪಕ್ರಮ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ಆರೋಗ್ಯ ಸಚಿವಾಲಯ ಮತ್ತು ಸಿಎಸ್‌ಐಆರ್ ಜಂಟಿಯಾಗಿ ವಿಜ್ಞಾನ ಭಾರತಿ (ವಿಬಿಎಚ್‌ಎ) ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿವೆ. ಈ ವರ್ಷ, ಐಐಎಸ್ಎಫ್ ವಿಶ್ವಪ್ರಸಿದ್ಧ ಭಾರತೀಯ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವಾದ 2020 ರ ಡಿಸೆಂಬರ್ 22 ರಂದು ಪ್ರಾರಂಭವಾಗುತ್ತಿದೆ ಮತ್ತು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಡಿಸೆಂಬರ್ 25 ರಂದು ಸಮಾರೋಪವಾಗುತ್ತಿದೆ ಎಂದು ಡಾ. ಹರ್ಷವರ್ಧನ್ ತಿಳಿಸಿದರು.
ಈ ವಿಜ್ಞಾನ ಉತ್ಸವವು ವಿಜ್ಞಾನ ಆಂದೋಲನವಾಗಿದೆ, ದೇಶದ ಯುವಜನರಲ್ಲಿ ಮತ್ತು ಜನಸಾಮಾನ್ಯರಲ್ಲಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ವಿಜ್ಞಾನ ಜನಾಂದೋಲನವಾಗಿದೆ ಎಂದು ಅವರು ಹೇಳಿದರು.‘ಸ್ವಾವಲಂಬಿ ಭಾರತ ಹಾಗೂ ಜಾಗತಿಕ ಕಲ್ಯಾಣಕ್ಕೆ ವಿಜ್ಞಾನ’ ಈ ವರ್ಷದ ಉತ್ಸವದ ವಿಷಯವಾಗಿದೆ. ಇದು ಆತ್ಮನಿರ್ಭರ ಭಾರತ ಅಭಿಯಾನದ ಗುರಿಯನ್ನು ಸಾಧಿಸಲು ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಯತ್ನಗಳ ಕೊಡುಗೆಯನ್ನು ತೋರಿಸುತ್ತದೆ. ಈ ವಿಜ್ಞಾನ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಿಗಳು, ಸಂಶೋಧಕರು, ಉದ್ಯಮಿಗಳು, ಕುಶಲಕರ್ಮಿಗಳು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
ಐಐಎಸ್ಎಫ್ -2020 ರಲ್ಲಿ ಭಾರತ ಮತ್ತು ವಿದೇಶಗಳ ವಿಜ್ಞಾನಿಗಳು, ಯುವಕರು, ಜನಸಾಮಾನ್ಯರು ಭಾಗವಹಿಸಲು ಹೊಸ ಮಾರ್ಗಗಳನ್ನು ವರ್ಚುವಲ್ ಪ್ಲಾಟ್‌ಫಾರ್ಮ್ ಒದಗಿಸಿದೆ ಎಂದು ಡಾ.ಹರ್ಷವರ್ಧನ್ ವಿವರಿಸಿದರು. ಹಿಂದಿನ ಐಐಎಸ್ಎಫ್ ಯಶಸ್ಸನ್ನು ಅವರು ನೆನಪಿಸಿಕೊಂಡರು, ಸಾಂಕ್ರಾಮಿಕ ರೋಗದ ಹೊರತಾಗಿಯೂ, ಐಐಎಸ್ಎಫ್ -2020 ಜನರು ಭಾಗವಹಿಸುವಿಕೆ ಮತ್ತು ಹೊಸದಾಗಿ ಸೇರಿಸಲಾದ ಕಾರ್ಯಕ್ರಮಗಳಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಬಹುದು, ಭವಿಷ್ಯದ ಐಐಎಸ್‌ಎಫ್‌ಗಳಲ್ಲಿ ವರ್ಚುವಲ್ ಪ್ಲಾಟ್‌ಫಾರ್ಮ್‌ಗಳನ್ನು ಸೇರಿಸುವ ಬಗ್ಗೆ ನಾವು ಯೋಚಿಸಬಹುದು ಎಂದು ಹೇಳಿದರು. 2020 ನೇ ವರ್ಷವನ್ನು “ವಿಜ್ಞಾನ ಮತ್ತು ವಿಜ್ಞಾನಿಗಳ ವರ್ಷ”ಎಂದು ಕರೆಯುವುದು ಸೂಕ್ತವಾಗಿದೆ ಎಂದು ಅವರು ಹೇಳಿದರು.
ಸಿಎಸ್ಐಆರ್ ಮಹಾ ನಿರ್ದೇಶಕ ಮತ್ತು ಡಿಎಸ್ಐಆರ್ ಕಾರ್ಯದರ್ಶಿ ಡಾ.ಶೇಖರ್ ಸಿ. ಮಾಂಡೆ, ಐಐಎಸ್ಎಫ್ 2020 ರ ಮಹತ್ವದ ಬಗ್ಗೆ ಮಾತನಾಡಿದರು. ಈ ಬೃಹತ್ ವಿಜ್ಞಾನ ಉತ್ಸವದಲ್ಲಿ ಒಟ್ಟು ನೋಂದಣಿಯು ಒಂದು ಲಕ್ಷವನ್ನು ದಾಟಿದೆ ಎಂದು ಅವರು ಹೇಳಿದರು. "ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಭಾಗವಹಿಸುವುದರಿಂದ ನಮಗೆ ತುಂಬಾ ಪ್ರೋತ್ಸಾಹ ಸಿಕ್ಕಿದೆ. ಜನರು ವಿಜ್ಞಾನ ಉತ್ಸವದಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಐಐಎಸ್ಎಫ್ ವಿಜ್ಞಾನವನ್ನು ಸಮಾಜಕ್ಕೆ ಕೊಂಡೊಯ್ಯುವ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿದೆ ಎಂಬುದು ಇದರಿಂದ ಗೊತ್ತಾಗಿದೆ ಎಂದು ಅವರು ಹೇಳಿದರು.
ಮುಖ್ಯ ಸಂಯೋಜಕ ಮತ್ತು ನೋಡಲ್ ಸಂಸ್ಥೆಯ (ಸಿಎಸ್ಐಆರ್-ನಿಸ್ಟಾಡ್ಸ್) ನಿರ್ದೇಶಕಿ ಡಾ. ರಂಜನಾ ಅಗರ್ವಾಲ್ ಮಾತನಾಡಿ, ದೂರ ಪ್ರದೇಶಗಳಲ್ಲಿ ವಾಸಿಸುವ ಜನರೊಂದಿಗೆ ಸಂಪರ್ಕ ಸಾಧಿಸಲು ವರ್ಚುವಲ್ ಪ್ಲಾಟ್‌ಫಾರ್ಮ್ ಸಹಾಯ ಮಾಡುತ್ತದೆ. ಇದು ಸಮಾಜವನ್ನು ವಿಜ್ಞಾನದೊಂದಿಗೆ ಸಂಪರ್ಕಿಸುವ ವಿಶಿಷ್ಟ ಉತ್ಸವವಾಗಿದೆ. ಈ ಉತ್ಸವದಲ್ಲಿ, 41 ವಿಭಿನ್ನ ವಿಭಾಗಗಳಿವೆ, ಇದರಲ್ಲಿ 13 ಹೊಸ ವಿಭಾಗಗಳನ್ನು ಸೇರಿಸಲಾಗಿದೆ ಮತ್ತು ಈ ವಿಜ್ಞಾನ ಉತ್ಸವವು ಸಮಾಜದ ಪ್ರತಿಯೊಂದು ವರ್ಗದ ಜ್ಞಾನಾಜರ್ನೆಗೆ ನೆರವಾಗಲಿದೆ ಎಂದರು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಐಐಎಸ್ಎಫ್ನ ಒಂದು ವಿಶಿಷ್ಟ ಘಟನೆಯಾಗಿದೆ ಮತ್ತು ಈ ವರ್ಷ ನಾವು ಐದು ವಿಭಾಗಗಳಲ್ಲಿ ಗಿನ್ನೆಸ್ ದಾಖಲೆಗಳಿಗಾಗಿ ಪ್ರಯತ್ನಿಸುತ್ತಿದ್ದೇವೆ ಎಂದು ಅವರು ಹೇಳಿದರು. ಐಐಎಸ್ಎಫ್ 2020 ರಲ್ಲಿ, ಜನಸಾಮಾನ್ಯರಿಗೆ ವಿಜ್ಞಾನ, ವಿದ್ಯಾರ್ಥಿಗಳಿಗೆ ವಿಜ್ಞಾನ, ಹೊಸ ಸವಾಲುಗಳು, ಕೈಗಾರಿಕೆ ಮತ್ತು ಎಂಎಸ್ಎಂಇ, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ವಿಜ್ಞಾನ, ಅಂತರ್ಗತ ಅಭಿವೃದ್ಧಿ, ವಿಜ್ಞಾನ ಮತ್ತು ಮಾನವಿಕತೆ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಪರ್ಕಗಳು ಮತ್ತು ಸುಸ್ಥಿರ ಅಭಿವೃದ್ಧಿ ಎಂಬ 9 ವಿಶಾಲ ವಿಷಯಗಳ ಅಡಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಡಾ. ಅಗರ್ವಾಲ್ ಹೇಳಿದರು.
ಇತಿಹಾಸ, ತತ್ವಶಾಸ್ತ್ರ, ಕಲೆ ಮತ್ತು ಶಿಕ್ಷಣದಂತಹ ಮಾನವಿಕ ಶಾಸ್ತ್ರಗಳೊಂದಿಗೆ ಸಂಪರ್ಕ ಕಲ್ಪಿಸಲು ಹೊಸ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ವಿಜ್ಞಾನ ಭಾರತಿ (ವಿಭಾ) ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಶ್ರೀ ಜಯಂತ್ ಸಹಸ್ರಬುದ್ಧೆ ಹೇಳಿದರು. "ಇಂತಹ ಕಾಯ್ರಕ್ರಮಗಳು ಉತ್ಸವಕ್ಕೆ ಮೌಲ್ಯವನ್ನು ಹೆಚ್ಚಿಸುತ್ತವೆ, ಏಕೆಂದರೆ ಇದು ನಮ್ಮ ಪ್ರಾಚೀನ ಗ್ರಂಥಗಳಾದ ವೇದಗಳು ಮತ್ತು ಉಪನಿಷತ್ತುಗಳನ್ನು ಒಳಗೊಂಡಿರುವ ಭಾರತೀಯ ವಿಜ್ಞಾನದ ಶ್ರೀಮಂತ ಸಂಪ್ರದಾಯವನ್ನು ಎತ್ತಿ ತೋರಿಸುತ್ತವೆ. ಇಂತಹ ಕಾರ್ಯಕ್ರಮಗಳು ಪ್ರಾಚೀನ ಭಾರತದ ಶಕ್ತಿಯಾಗಿರುವ ಮಹಾನ್ ವೈಜ್ಞಾನಿಕ ಆವಿಷ್ಕಾರಗಳು ಮತ್ತು ತಾಂತ್ರಿಕ ಸಾಧನೆಗಳ ಮೂಲಕ ಉತ್ತಮ ವಿಜ್ಞಾನದ ಬಗ್ಗೆ ಕುತೂಹಲವನ್ನು ಉಂಟುಮಾಡುತ್ತವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ.ಮಾಧವನ್ ಎನ್.ರಾಜೀವನ್, ಜೈವಿಕ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ರೇಣು ಸ್ವರೂಪ್, ಡಿಎಸ್ಟಿ ವಿಜ್ಞಾನಿ, ಡಾ.ಸಂಜೀವ್ ವರ್ಷಾನಿ ಮತ್ತು ಇತರ ವಿಜ್ಞಾನಿಗಳು ಉಪಸ್ಥಿತರಿದ್ದರು.
ಐಐಎಸ್ಎಫ್ -2020 ಬಗ್ಗೆ ಜಾಗೃತಿ ಮೂಡಿಸಲು ದೇಶಾದ್ಯಂತ ಪಿಐಬಿ ನಡೆಸುತ್ತಿರುವ ವಿವಿಧ ಔಟ್ರೀಚ್ ಕಾರ್ಯಕ್ರಮಗಳ ಬಗ್ಗೆ ಪಿಐಬಿ ಪ್ರಧಾನ ಮಹಾನಿರ್ದೇಶಕ ಶ್ರೀ ಕುಲದೀಪ್ ಧತ್ವಾಲಿಯಾ ಮಾಹಿತಿ ನೀಡಿದರು. ಐಐಎಸ್ಎಫ್ -2020 ರ ಬಗ್ಗೆ ವಿವರವಾದ ಮಾಹಿತಿ ನೀಡಲು ಪಿಐಬಿ ವೆಬ್‌ಸೈಟ್‌ನಲ್ಲಿ ಮೈಕ್ರೋ ಸೈಟ್ ಅನ್ನು ಸಹ ನಿರ್ಮಿಸಲಾಗಿದೆ ಎಂದು ಅವರು ಹೇಳಿದರು.
ಐಐಎಸ್ಎಫ್ 2020 ಅನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್), ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ), ಭೂ ವಿಜ್ಞಾನ ಸಚಿವಾಲಯ, ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಜಂಟಿಯಾಗಿ ಆಯೋಜಿಸುತ್ತಿವೆ. ನವದೆಹಲಿಯ.ಸಿಎಸ್‌ಐಆರ್-ವಿಜ್ಞಾನ, ತಂತ್ರಜ್ಞಾನ ಮತ್ತು ಅಭಿವೃದ್ಧಿ ಅಧ್ಯಯನಗಳ ರಾಷ್ಟ್ರೀಯ ಸಂಸ್ಥೆ(ಎನ್‌ಐಎಸ್‌ಟಿಎಡಿಎಸ್) ಈ ವರ್ಷದ ವಿಜ್ಞಾನ ಉತ್ಸವದ ನೋಡಲ್ ಸಂಸ್ಥೆಯಾಗಿದೆ.
ವಿವರವಾದ ಮಾಹಿತಿಯು ಐಐಎಸ್ಎಫ್ ವೆಬ್‌ಸೈಟ್-www.scienceindiafest.org ಮತ್ತು ಪಿಐಬಿ ವೆಬ್‌ಸೈಟ್: pib.gov.in/iisf ನಲ್ಲಿ ಲಭ್ಯವಿದೆ
Click here for PPT on IISF 2020

***

 



(Release ID: 1682511) Visitor Counter : 403