ಹಣಕಾಸು ಸಚಿವಾಲಯ

ಜಿ ಎಸ್ ಟಿ ಪರಿಹಾರ ಕೊರತೆ ಸರಿದೂಗಿಸಲು ರಾಜ್ಯಗಳಿಗೆ ಸಾಲದ 8ನೇ ಕಂತು 6 ಸಾವಿರ ಕೋಟಿ ರೂ. ಬಿಡುಗಡೆ


ರಾಜ್ಯಗಳು ಮತ್ತು ಶಾಸನಸಭೆ, ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು ಮೊತ್ತ 48 ಸಾವಿರ ಕೋಟಿ ರೂ. ಬಿಡುಗಡೆ

ಹೆಚ್ಚುವರಿಯಾಗಿ ಸಾಲ ಪಡೆಯಲು ನೀಡಿರುವ ಅನುಮತಿ 1,06,830 ಕೋಟಿ ರೂ. ಗಳಿಗೆ ಹೆಚ್ಚಳ

Posted On: 21 DEC 2020 1:48PM by PIB Bengaluru

ಜಿಎಸ್ಟಿ ಕೊರತೆಯನ್ನು ಸರಿದೂಗಿಸಲು ರಾಜ್ಯಗಳಿಗೆ ಕೇಂದ್ರ ಹಣಕಾಸು ಸಚಿವಾಲಯ 8ನೇ ಸಾಪ್ತಾಹಿಕ ಕಂತು 6 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಪೈಕಿ 5516.60 ಕೋಟಿ ರೂ. ಗಳನ್ನು ಜಿಎಸ್ಟಿ ಮಂಡಳಿ ಸದಸ್ಯರಾಗಿರುವ 23 ರಾಜ್ಯಗಳಿಗೆ ಮತ್ತು 483.40 ಕೋಟಿ ರೂ. ಮೊತ್ತವನ್ನು ಶಾಸನ ಸಭೆ ಇರುವ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ (ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹಾಗೂ ಪುದುಚೇರಿ) ಬಿಡುಗಡೆ ಮಾಡಲಾಗಿದೆ. ಉಳಿದ ಐದು ರಾಜ್ಯಗಳಾದ ಅರುಣಾಚಲ ಪ್ರದೇಸ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ರಾಜ್ಯಗಳಿಗೆ ಜಿಎಸ್ಟಿ ಅನುಷ್ಠಾನದ ಕಾರಣದಿಂದ ಆದಾಯದ ಕಂದಕ ನಿರ್ಮಾಣವಾಗಿಲ್ಲ.

ಭಾರತ ಸರ್ಕಾರ ಜಿಎಸ್ಟಿ ಜಾರಿಯ ಕಾರಣದಿಂದಾಗಿ ತಲೆದೋರಿರುವ ಅಂದಾಜು 1.10 ಲಕ್ಷ ಕೋಟಿ ರೂಪಾಯಿಗಳ ಕೊರತೆಯನ್ನು ಸರಿದೂಗಿಸಲು 2020 ಅಕ್ಟೋಬರ್ ನಲ್ಲಿ ವಿಶೇಷ ಸಾಲ ಪಡೆಯಲು ಗವಾಕ್ಷಿಯನ್ನು ಸ್ಥಾಪಿಸಿತ್ತು. ಗವಾಕ್ಷಿಯ ಮೂಲಕ ರಾಜ್ಯ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪರವಾಗಿ ಸಾಲ ಪಡೆದಿದೆ, ಸಾಲವನ್ನು 7 ಸುತ್ತುಗಳಲ್ಲಿ ಮಾಡಲಾಗಿದೆ. ಇಲ್ಲಿಯವರೆಗೆ ಪಡೆದ ಸಾಲದ ಮೊತ್ತವನ್ನು 2020 ಅಕ್ಟೋಬರ್ 23, 2020 ನವೆಂಬರ್ 2, 2020 ನವೆಂಬರ್ 9, 2020 ನವೆಂಬರ್ 23, 2020 ಡಿಸೆಂಬರ್ 1, 2020 ಡಿಸೆಂಬರ್ 7, 2020 ಡಿಸೆಂಬರ್ 14, ಮತ್ತು 2020 ಡಿಸೆಂಬರ್ 21 ರಂದು ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ.

ವಾರ ರಾಜ್ಯಗಳಿಗೆ ಒದಗಿಸಲು ಬಿಡುಗಡೆ ಮಾಡಿರುವುದು 8ನೇ ಕಂತಾಗಿದೆ. ವಾರ ಪಡೆಯಲಾದ ಸಾಲದ ಮೇಲಿನ ಬಡ್ಡಿ ದರ ಶೇ. 4.1902 ಆಗಿದೆ. ಈವರೆಗೆ 48,000 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ವಿಶೇಷ ಸಾಲ ಗವಾಕ್ಷಿಯ ಮೂಲಕ ಪಡೆದಿದ್ದು, ಇದರ ಸರಾಸರಿ ಬಡ್ಡಿ ದರ ಶೇ. 4.6986 ಆಗಿದೆ.

ಜಿಎಸ್ಟಿ ಅನುಷ್ಠಾನದಿಂದ ಉಂಟಾಗಿರುವ ಆದಾಯದ ಕೊರತೆ ಸರಿದೂಗಿಸಲು ವಿಶೇಷ ಸಾಲ ಗವಾಕ್ಷಿಯ ಮೂಲಕ ಪಡೆದು ಒದಗಿಸಿದ ನಿಧಿಯ ಜೊತೆಗೆ, ಹೆಚ್ಚುವರಿ ಹಣಕಾಸು ಸಂಪನ್ಮೂಲಗಳನ್ನು ಸಜ್ಜುಗೊಳಿಸಲು ಸಹಾಯ ಮಾಡಲು ಜಿಎಸ್ಟಿ ಪರಿಹಾರದ ಕೊರತೆಯನ್ನು ಪೂರೈಸಲು ಆಯ್ಕೆ -1 ಅನ್ನು ಆಯ್ಕೆ ಮಾಡಿಕೊಂಡಿರುವ ಎಲ್ಲ ರಾಜ್ಯಗಳಿಗೆ, ಭಾರತ ಸರ್ಕಾರ ತಮ್ಮ ರಾಜ್ಯದ ಒಟ್ಟು ದೇಶೀಯ ಉತ್ಪನ್ನ (ಜಿಎಸ್.ಡಿ.ಪಿ.) ಶೇ.0.50ಕ್ಕೆ ಸಮನಾದ ಹೆಚ್ಚುವರಿ ಸಾಲವನ್ನು ಪಡೆದುಕೊಳ್ಳಲು ಅನುಮತಿ ನೀಡಿದೆ. ಎಲ್ಲ ರಾಜ್ಯಗಳೂ ಆಯ್ಕೆ 1ಕ್ಕೆ ತಮ್ಮ ಆದ್ಯತೆಯನ್ನು ನೀಡಿವೆ. ಅವಕಾಶದ ಅಡಿಯಲ್ಲಿ ಎಲ್ಲ 28 ರಾಜ್ಯಗಳಿಗೆ ಹೆಚ್ಚುವರಿ ಸಾಲವಾಗಿ 1,06,830 ಕೋಟಿ ರೂ. (ಶೇ.0.50 ಜಿಎಸ್‌ಡಿಪಿ)ಯನ್ನು ಪಡೆಯಲು ಅನುಮತಿ ಮಂಜೂರು ಮಾಡಲಾಗಿದೆ.

28 ರಾಜ್ಯಗಳಿಗೆ ಹೆಚ್ಚುವರಿ ಸಾಲ ಪಡೆಯಲು ನೀಡಲಾಗಿರುವ ಅನುಮತಿ ಮತ್ತು ವಿಶೇಷ ಗವಾಕ್ಷಿಯ ಮೂಲಕ ಪಡೆದುಕೊಳ್ಳಲಾಗಿರುವ ಹಣ ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬಿಡುಗಡೆ ಮಾಡಲಾಗಿರುವ ಹಣದ ಪರಿವಿಡಿಯಲ್ಲಿದೆ.

21.12.2020 ರವರೆಗೆ ಜಿಎಸ್‌ಡಿಪಿ ಶೇ.0.50ಯಂತೆ ರಾಜ್ಯವಾರು ಹೆಚ್ಚುವರಿ ಸಾಲ ಮತ್ತು ವಿಶೇಷ ಗವಾಕ್ಷಿ ಮೂಲಕ ಸಂಗ್ರಹಿಸಿದ ಹಣ ರಾಜ್ಯಗಳು /ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾಯಿಸಲಾಗಿದೆ

(ರೂ. ಕೋಟಿಗಳಲ್ಲಿ)

ಕ್ರ.ಸಂ

ರಾಜ್ಯ/ ಕೇಂ.ಪ್ರ. ಹೆಸರು

ಶೇ. 0.50ರಷ್ಟು ಹೆಚ್ಚುವರಿ ಸಾಲವನ್ನು ರಾಜ್ಯಗಳಿಗೆ ಅನುಮತಿಸಲಾಗಿದೆ

ವಿಶೇಷ ಗವಾಕ್ಷಿ ಮೂಲಕ ಸಂಗ್ರಹಿಸಿದ ನಿಧಿಯ ಮೊತ್ತವು ರಾಜ್ಯಗಳು/ ಕೇಂ. ಪ್ರ.ಗಳಿಗೆ ವರ್ಗಾಯಿಸಗುತ್ತದೆ

1

ಆಂಧ್ರಪ್ರದೇಶ

5051

1181.61

2

ಅರುಣಾಚಲ ಪ್ರದೇಶ *

143

0.00

3

ಅಸ್ಸಾಂ

1869

508.48

4

ಬಿಹಾರ್

3231

1996.34

5

ಛತ್ತೀಸಗಢ

1792

507.78

6

ಗೋವಾ

446

429.39

7

ಗುಜರಾತ್

8704

4715.01

8

ಹರಿಯಾಣ

4293

2225.19

9

ಹಿಮಾಚಲ ಪ್ರದೇಶ

877

877.91

10

ಜಾರ್ಖಂಡ್

1765

275.85

11

ಕರ್ನಾಟಕ

9018

6343.77

12

ಕೇರಳ

4,522

1269.96

13

ಮಧ್ಯಪ್ರದೇಶ

4746

2322.35

14

ಮಹಾರಾಷ್ಟ್ರ

15394

6124.17

15

ಮಣಿಪುರ*

151

0.00

16

ಮೇಘಾಲಯ

194

57.19

17

ಮಿಜೋರಾಂ*

132

0.00

18

ನಾಗಾಲ್ಯಾಂಡ್*

157

0.00

19

ಒಡಿಶಾ

2858

1954.21

20

ಪಂಜಾಬ್

3033

1841.04

21

ರಾಜಾಸ್ತಾನ

5462

1659.07

22

ಸಿಕ್ಕಿಂ*

156

0.00

23

ತಮಿಳುನಾಡು

9627

3191.24

24

ತೆಲಂಗಾಣ

5017

688.59

25

ತ್ರಿಪುರಾ

297

115.80

26

ಉತ್ತರ ಪ್ರದೇಶ

9703

3071.33

27

ಉತ್ತರಖಂಡ

1405

1184.37

28

ಪಶ್ಚಿಮ ಬಂಗಾಳ

6787

975.91

 

ಒಟ್ಟು ():

106830

43516.56

1

ದೆಹಲಿ

ಅನ್ವಯಿಸುವುದಿಲ್ಲ

2998.70

2

ಜಮ್ಮು ಮತ್ತು ಕಾಶ್ಮೀರ

ಅನ್ವಯಿಸುವುದಿಲ್ಲ

1161.60

3

ಪುದುಚೇರಿ

ಅನ್ವಯಿಸುವುದಿಲ್ಲ

323.14

 

ಒಟ್ಟು (ಬಿ):

ಅನ್ವಯಿಸುವುದಿಲ್ಲ

4483.44

 

(+ಬಿ) ಒಟ್ಟು ಮೊತ್ತ

106830

48000.00

* ರಾಜ್ಯಗಳುಶೂನ್ಯಜಿಎಸ್ಟಿ ಪರಿಹಾರದ ಅಂತರ

***


(Release ID: 1682376) Visitor Counter : 251